ಮನೋರಮಾ ಮೊಹಪಾತ್ರ (೧೦ ಜೂನ್ ೧೯೩೪ - ೧೮ ಸೆಪ್ಟೆಂಬರ್ ೨೦೨೧) ಒಬ್ಬ ಭಾರತೀಯ ಬರಹಗಾರ್ತಿ, ಕವಯತ್ರಿ ಮತ್ತು ಸಂಪಾದಕಿ, ಪ್ರಾಥಮಿಕವಾಗಿ ಒಡಿಯಾ ಭಾಷೆಯಲ್ಲಿ ಬರೆಯುತ್ತಿದ್ದರು. ಇವರು ಕಾದಂಬರಿಗಳು ಮತ್ತು ಕವನಗಳನ್ನು ಒಳಗೊಂಡ ನಲವತ್ತು ಪುಸ್ತಕಗಳನ್ನು ಬರೆದರು ಮತ್ತು ಒಡಿಯಾ ಪತ್ರಿಕೆಯನ್ನು ಸಂಪಾದಿಸಿದರು. ಒಡಿಶಾ ರಾಜ್ಯದ ಅತ್ಯುನ್ನತ ಸಾಹಿತ್ಯ ಗೌರವ,೧೯೮೪ ರಲ್ಲಿ ಒಡಿಶಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಒಡಿಶಾ ರಾಜ್ಯದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ.

ಭುವನೇಶ್ವರ ಒಡಿಶಾದಲ್ಲಿ ಮನೋರಮಾ ಮೊಹಾಪಾತ್ರ, 2 ಡಿಸೆಂಬರ್ 2012

ಮೊಹಪಾತ್ರ ಅವರು ೧೯೩೪ ರಲ್ಲಿ ಭಾರತದ ಒಡಿಶಾದಲ್ಲಿ ಜನಿಸಿದರು. ಆಕೆಯ ತಂದೆ, ಡಾ ರಾಧಾನಾಥ್ ರಾತ್ ಅವರು ಒಡಿಯಾ ಭಾಷೆಯ ದಿನಪತ್ರಿಕೆ, "ಸಮಾಜ್‌"ನ ಸಂಪಾದಕರಾಗಿದ್ದರು. ಇವರ ಪದವಿಪೂರ್ವ ಶಿಕ್ಷಣವು ಒಡಿಶಾದ ರಾವೆನ್‌ಶಾ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು .[] ಅವರು ಸಂಕ್ಷಿಪ್ತವಾಗಿ ಅರ್ಥಶಾಸ್ತ್ರವನ್ನು ಕಲಿತರು. [] ಇವರು ೧೮ ಸೆಪ್ಟೆಂಬರ್ ೨೦೨೧ರಲ್ಲಿ ನಿಧನರಾದರು ,ಇವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. []

ವೃತ್ತಿ

ಬದಲಾಯಿಸಿ

ಮೊಹಪಾತ್ರ ತಮ್ಮ ವೃತ್ತಿಜೀವನವನ್ನು ದಿನಪತ್ರಿಕೆ "ದಿ ಸಮಾಜ್‌ಗೆ" ಅಂಕಣಕಾರರಾಗಿ ಪ್ರಾರಂಭಿಸಿದರು, ಇದನ್ನು ಅವರ ತಂದೆ ಸಂಪಾದಿಸುತಿದ್ದರು ,ಇದರಲ್ಲಿ ರಾಜಕೀಯ ಮತ್ತು ಸಮಕಾಲೀನ ವಿಷಯಗಳ ಕುರಿತು ಬರೆಯುತ್ತಿದ್ದರು. ನಂತರ ಮೋಹಪಾತ್ರ ಅವರು ಪತ್ರಿಕೆಯ ಸಂಪಾದಕಿಯಾದರು.೧೯೬೦ರಲ್ಲಿ, ಅವರು ತಮ್ಮ ಮೊದಲ ಕವನ ಪುಸ್ತಕ "ಜುವಾರ್ ಜಿಯುಂತಿ ಉಥೆ" ಯನ್ನು ಪ್ರಕಟಿಸಿದರು, ಇದು ಮಹಿಳೆಯರ ಸಬಲೀಕರಣದ ವಿಷಯಗಳ ಮೇಲೆ ಕೇಂದ್ರೀಕರಿಸಿತು. ಕಾದಂಬರಿಗಳು ಮತ್ತು ಕವನಗಳು ಸೇರಿದಂತೆ ನಲವತ್ತು ಪುಸ್ತಕಗಳನ್ನು ಬರೆದರು:ಪ್ರಾಥಮಿಕವಾಗಿ ಒಡಿಯಾ ಭಾಷೆಯಲ್ಲಿ, ನಂತರ ಬಂಗಾಳಿ ಭಾಷೆಯಲ್ಲಿ. ಅವರ ಕೆಲವು ಉತ್ತಮ ಪುಸ್ತಕಗಳು : ಅರ್ಧನಾರೀಶ್ವರ, ಬೈದೇಹಿ ವಿಸರ್ಜಿತಾ, ಸಂಘಟಿರ್ ಸಂಹಿತಾ, ಎಸ್ ಹಕ್ತಿ ರೂಪೇಣ ಸಂಸ್ಥಿತ, ರೂಪಂ ರೂಪಂ ಪ್ರತಿರೂಪಂ, ಸ್ಮೃತಿ ಚಂದನ್, ಸಮಯ ಪುರುಷ ಮತ್ತು ಸ್ಮೃತಿರ್ ನೈಮಿಶಾರಣ್ಯ .ಇವರು ವಾಗ್ಮಿ ಆಗಿ ಕೂಡ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು. [] ೧೯೮೨ ರಿಂದ ೧೯೦೦ ರವರೆಗೆ, ಸಾಹಿತ್ಯ ಸಮಾಜವಾದ ಉತ್ಕಲ ಸಾಹಿತ್ಯ ಸಮಾಜದ ಅಧ್ಯಕ್ಷರಾಗಿ ಚುನಾಯಿತರಾದರು ಮತ್ತು ೧೯೯೧ ರಿಂದ ೧೯೯೪ ರವರೆಗೆ ಇವರು ರಾಜ್ಯ ಸಾಹಿತ್ಯ ಸಮಾಜವಾದ ಒಡಿಶಾ ಸಾಹಿತ್ಯ ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದರು. [] []

ಮೊಹಾಪಾತ್ರ ಅವರ ಮರಣದ ನಂತರ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಸಾರ್ವಜನಿಕವಾಗಿ ಗುರುತಿಸಲಾಯಿತು, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬರವಣಿಗೆಯ ಕುರಿತು, "... ವಿಭಿನ್ನ ಸಾಮಾಜಿಕ ಸಮಸ್ಯೆಗಳು, ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಜಾಗೃತಿ ಮೂಡಿಸಿದ್ದಾರೆ." ಎಂದು ಹೇಳಿದ್ದಾರೆ . [] [] ಮೊಹಪಾತ್ರ ಅವರ ಬರವಣಿಗೆಯು ಮಹಿಳಾ ಸಬಲೀಕರಣ ವಿಷಯಗಳ ಮೇಲೆ ಕೇಂದ್ರೀಕರಿಸಿದೆ, ಅದರ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ ರಾಜಕೀಯದ ಬಗ್ಗೆ ಕೂಡ ಕಾಣಬಹುದು. [] ರೆಡ್ ಕ್ರಾಸ್ ಸೊಸೈಟಿ, ಒರಿಸ್ಸಾದ ಸಮಾಜ ಸೇವಾ ಗಿಲ್ಡ್, ಮತ್ತು ಲೋಕ ಸೇವಕ ಮಂಡಲ್ ಸೇರಿದಂತೆ ಒಡಿಶಾದ ಹಲವಾರು ದತ್ತಿ ಸಂಸ್ಥೆಗಳೊಂದಿಗೆ ಇವರು ಸ್ವಯಂಸೇವಕರಾಗಿದ್ದರು. []

ಪ್ರಶಸ್ತಿಗಳು

ಬದಲಾಯಿಸಿ

ಮೊಹಾಪಾತ್ರ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಯಾವುದೆಂದರೆ: [] []

  • 1984 - ಒಡಿಶಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1988 - ಸೋವಿಯತ್ ನೆಹರು ಪ್ರಶಸ್ತಿ
  • 1990 - ಕ್ರಿಟಿಕ್ಸ್ ಸರ್ಕಲ್ ಅವಾರ್ಡ್ ಆಫ್ ಇಂಡಿಯಾ
  • 1991 - ಈಶ್ವರ್ ಚಂದ್ರ ವಿದ್ಯಾಸಾಗರ ಸಮ್ಮಾನ್
  • 1994 - ರೂಪಾಂಬರ ಪ್ರಶಸ್ತಿ
  • 2013 - ಸರಳ ಸಮ್ಮಾನ್ []
  • ಉತ್ಕಲ ಸಾಹಿತ್ಯ ಸಮಾಜ ಪ್ರಶಸ್ತಿ
  • ಗಂಗಾಧರ್ ಮೆಹರ್ ಸಮ್ಮಾನ್
  • ಸಾಹಿತ್ಯ ಪ್ರವೀಣ ಪ್ರಶಸ್ತಿ
  • ಸುಚರಿತ ಪ್ರಶಸ್ತಿ

ಗ್ರಂಥಸೂಚಿ

ಬದಲಾಯಿಸಿ

ಮೊಹಪಾತ್ರ ಅವರ ಗಮನಾರ್ಹ ಕೃತಿಗಳಲ್ಲಿ ಜುವಾರ್ ಜೀಯುಂತಿ ಉಥೆ (1960) (ಕವನ), ಬ್ಯಾಂಡ್ ಘರಾರ ಕಬತ್ (ಸಣ್ಣ ಕಥೆಗಳು) , ಹಾಗೆಯೇ ಅರ್ಧನಾರೀಶ್ವರ, ಬೈದೇಹಿ ವಿಸರ್ಜಿತಾ, ಸಂಘಟಿರ್ ಸಂಹಿತಾ, ಶಕ್ತಿ ರೂಪೇಣ ಸಂಸ್ಥಿತ, ರೂಪಂ ರೂಪಂ ಪ್ರತಿರೂಪಂ, ಸ್ಮೃತಿಶ ಚಂದನ್, ಸಮೃತಿ ಚಂದನ್, 151 ಕವಿತೆಗಳು, ಬೆಂಗಾಲಿಯಲ್ಲಿ ಅರೂಪ್ ಆಲೋ, ಯೇ ಪೃಥ್ವಿ ಸರ್ಸಜ್ಜ್ಯಾ, ಮತ್ತು ಉತ್ತರ ನಿರುತ್ತರ. []

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "Odia litterateur, journalist Manorama Mohapatra dies at 87". Deccan Herald (in ಇಂಗ್ಲಿಷ್). 2021-09-19. Retrieved 2021-12-05.
  2. ೨.೦ ೨.೧ "Odisha's Manorama Mohapatra passes away at 87". Utkal Today (in ಅಮೆರಿಕನ್ ಇಂಗ್ಲಿಷ್). 2021-09-18. Archived from the original on 2021-12-05. Retrieved 2021-12-05.
  3. bureau, Odisha Diary (2021-09-19). "Eminent Odia litterateur and journalist Manorama Mohapatra's last rites to be performed with State honours". Odisha News | Odisha Breaking News | Latest Odisha News (in ಅಮೆರಿಕನ್ ಇಂಗ್ಲಿಷ್). Retrieved 2021-12-05. {{cite web}}: |last= has generic name (help)
  4. ೪.೦ ೪.೧ ೪.೨ ೪.೩ ೪.೪ "Noted litterateur Manorama Mohapatra passes away at 87". The New Indian Express. Retrieved 2021-12-05.
  5. "दुखद: ओडिशा की जानीमानी साहित्यकार मनोरमा महापात्रा का निधन, पीएम मोदी ने जताया दुख". Amar Ujala (in ಹಿಂದಿ). Retrieved 2021-12-05.
  6. ೬.೦ ೬.೧ "Sarala Samman for Manorama Mahapatra | Sambad English" (in ಅಮೆರಿಕನ್ ಇಂಗ್ಲಿಷ್). 2013-11-19. Retrieved 2021-12-05.