ಮನೋರಮಾ ಎಂ ಭಟ್ ಇವರು ಕನ್ನಡದ ಲೇಖಕಿ.[೧] ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ 'ಓಲ್ದ್ ಮ್ಯಾನ್ ಆಂಡ್ ದ ಸಿ'-ಇದರ ರೇಡಿಯೋ ನಾಟಕವನ್ನು ಕೇಳಿದ ಮನೋರಮಾರಿಗೆ ಅದೇ ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಈ ನಾಟಕ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ,ನಿರ್ದೇಶಕಿಯಾಗಿ,ರಂಗಕಲಾವಿದೆಯಾಗಿ,ಕತೆಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇವರು ದಕ್ಷಿಣ ಕನ್ನಡದ ಹಿರಿಯ ಲೇಖಕಿ.

ಜೀವನ ಬದಲಾಯಿಸಿ

ಮನೋರಮಾ ತನ್ನ ೨೦ನೇ ವಯಸ್ಸಿನಲ್ಲಿ ಮುಳಿಯ ಮಹಾಬಲ ಭಟ್ಟರನ್ನು ಮದುವೆಯಾದರು.ಮುಳಿಯ ಮಹಾಬಲ ಭಟ್ಟರು ನ್ಯಾಯವಾದಿಯಾಗಿದ್ದರು.ಮಹಾಬಲರಿಗೂ ಈ ಸಾಹಿತ್ಯದ ಒಲವು ಇದ್ದುದರಿಂದ ಹಾಗೂ ಶಾಲಾದಿನಗಳಲ್ಲೇ ಮನೋರಮಾ ಅವರಲ್ಲಿ ಬೇರೂರಿದ್ದ ಅಭಿನಯಕಲೆ, ಬರವಣಿಗೆಯ ಹವ್ಯಾಸ ಮದುವೆಯ ನಂತರ ನಾಟಕ, ಕತೆ ರಚನೆಯ ಮೂಲಕ ಬೆಳಕಿಗೆ ಬಂದಿತು.ಮನೋರಮಾರಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಜಯರಾಮ, ಎರಡನೇ ಮಗ ಮಹೇಶ.

ವಿದ್ಯಾಭ್ಯಾಸ ಬದಲಾಯಿಸಿ

ಮನೋರಮಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಬೊಳುವಾರು ಶಾಲೆಯಲ್ಲಿ ಮುಗಿಸಿದರು.ನಂತರ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಸಂತ ವಿಕ್ಟರ್ ಹುಡುಗಿಯರ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪಡೆದರು.

ಆಸಕ್ತಿ ಬದಲಾಯಿಸಿ

ಸಂಗೀತದಲ್ಲಿ, ನೃತ್ಯದಲ್ಲಿ, ನಾಟಕ ರಚನೆಯಲ್ಲಿ, ಅಭಿನಯದಲ್ಲಿ ತುಂಬ ಆಸಕ್ತಿ ಹೊಂದಿದ್ದರು.ನೃತ್ಯವನ್ನು ಸತ್ಯಸುಂದರರಾಯರ ಮಾರ್ಗದರ್ಶನದಲ್ಲಿ ಕಲಿತರು.ನಲ್ವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ.

ಕಥಾಸಂಕಲನಗಳು ಬದಲಾಯಿಸಿ

  • ಮೊದಲ ಕಥಾಸಂಕಲನ "ಮೋತಿ ಪಾಠ ಕಲಿಸಿತ್ತು"
  • ಎರಡನೆ ಕಥಾಸಂಕಲನ "ಶಬ್ದಗಳಾಗದ ಧ್ವನಿಗಳು"

ನಾಟಕಗಳು ಬದಲಾಯಿಸಿ

  1. ಅಜ್ಜಿ ಹೇಳಿದ ಕಥೆ
  2. ಇಂದಲ್ಲ ನಾಳೆ
  3. ಮರದ ಕಥೆ
  4. ಋಣಾನುಬಂಧ
  5. ಚಂದ್ರಮತಿಯ ಕನಸು[೨]

ನಾಟಕ ಸಂಕಲನಗಳು ಬದಲಾಯಿಸಿ

  1. ಹೊಸಹಾದಿ
  2. ಬಲಿ
  3. ನಿರ್ಧಾರ
  4. ಆಯ್ಕೆ

ಇತರ ಮಾಹಿತಿಗಳು ಬದಲಾಯಿಸಿ

  • ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ "ಗುಲಾಬಿ ಟಾಕೀಸು"ಚಲನಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
  • ೧೯೮೭ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
  • ಇವರು 'ಸಾಧನಾ' ಸಾಹಿತ್ಯಿಕ-ಸಾಂಸ್ಕೃತಿಕ ಬಳಗದ ಸದಸ್ಯೆ,.ಡಾ.ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸಾಧನಾ ವತಿಯಿಂದ ಮಂಗಳೂರು,'ಪುತ್ತೂರು ಮತ್ತು ಕೋಟದಲ್ಲಿ ಕಾರಂತರ ಗೀತನಾಟಕ 'ಕಿಸಾ ಗೋತಮಿ'ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು ಬದಲಾಯಿಸಿ

  • ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ
  • ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ
  • ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಸಂಸ್ಕಾರ ಭಾರತಿ ಪ್ರಶಸ್ತಿ
  • ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


ಉಲ್ಲೇಖ ಬದಲಾಯಿಸಿ

  1. mangaluru-a-writer-and-fighter-84-year-old-manorama-bhat-is-cops-favorite-s-o-s-amma/Nov,18 2015
  2. ಚಂದ್ರಗಿರಿ,ಸಾ.ರಾ.ನಾಡೋಜ ಅಬುಬಕ್ಕರ್ ಅಭಿನಂದನ ಗ್ರಂಥ.ಸಂಪಾದಕರು ಡಾ.ಸಂಬಿಹಾ ಸಿರಿವರ ಪ್ರಕಾಶನ ಬೆಂಗಳೂರು.ಮೊದಲ ಮುಂದ್ರಣ ೨೦೦೯ ಪುಟ ೨೫೦