ಮನೆವಾರ್ತೆ
ಮನೆವಾರ್ತೆ (ಗೃಹಕೃತ್ಯ ನಿರ್ವಹಣೆ) ಪದವು ಒಂದು ಮನೆಯನ್ನು ನಡೆಸುವಲ್ಲಿ ಸೇರಿರುವ ಕರ್ತವ್ಯಗಳು ಹಾಗೂ ಕೆಲಸಗಳ ನಿರ್ವಹಣೆಯನ್ನು ಸೂಚಿಸುತ್ತದೆ, ಉದಾಹರಣೆಗೆ ಸ್ವಚ್ಛಗೊಳಿಸುವುದು, ಅಡುಗೆ, ಮನೆ ನಿರ್ವಹಣೆ, ಅಂಗಡಿಗಳಿಂದ ಸಾಮಾನು ಖರೀದಿ, ಬಟ್ಟೆ ಒಗೆಯುವುದು ಮತ್ತು ಬಿಲ್ ಪಾವತಿ. ಈ ಕಾರ್ಯಗಳನ್ನು ಮನೆಯ ಸದಸ್ಯರು ಮಾಡಬಹುದು, ಅಥವಾ ಈ ಉದ್ದೇಶಕ್ಕಾಗಿ ನೇಮಿಸಲಾದ ಇತರ ವ್ಯಕ್ತಿಗಳು ಮಾಡಬಹುದು. ಈ ಪದವನ್ನು ವಿಸ್ತರಿಸಿದರೆ ಕಛೇರಿ ಅಥವಾ ಸಂಸ್ಥೆ, ಜೊತೆಗೆ ಕಂಪ್ಯೂಟರ್ ಸಂಗ್ರಹಣಾ ವ್ಯವಸ್ಥೆಗಳ ನಿರ್ವಹಣೆಗೆ ಕೂಡ ಅನ್ವಯಿಸುತ್ತದೆ.[೧]
ಮನೆವಾರ್ತೆಯವನು ಎಂದರೆ ಮನೆ ಮತ್ತು ಮನೆ ಸಿಬ್ಬಂದಿಯನ್ನು ನಿರ್ವಹಿಸಲು ನೇಮಿಸಿಕೊಳ್ಳಲಾದ ವ್ಯಕ್ತಿ. ವಿಕ್ಟೋರಿಯನ್ ಯುಗದ ಪುಸ್ತಕವಾದ ಮಿಸಸ್ ಬೀಟನ್ಸ್ ಬುಕ್ ಆಫ಼್ ಹೌಸ್‍ಹೋಲ್ಡ್ ಮ್ಯಾನೇಜ್‍ಮೆಂಟ್ ಪ್ರಕಾರ, ಮನೆವಾರ್ತೆಯವನು ಮನೆಯಲ್ಲಿ ದ್ವಿತೀಯ ಉಸ್ತುವಾರಿ ವ್ಯಕ್ತಿಯಾಗಿರುತ್ತಾನೆ ಮತ್ತು "ಮನೆ ಮೇಲ್ವಿಚಾರಕನಿರುವ ದೊಡ್ಡ ಮನೆಗಳನ್ನು ಹೊರತುಪಡಿಸಿ, ಮನೆವಾರ್ತೆಯವನು ತನ್ನನ್ನು ತನ್ನ ಯಜಮಾನಿಯ ನೆರೆಯ ಪ್ರತಿನಿಧಿ ಎಂದು ಪರಿಗಣಿಸಿಕೊಳ್ಳಬೇಕು".
ಉಲ್ಲೇಖಗಳು
ಬದಲಾಯಿಸಿ- ↑ "housekeeping" The Collins English Dictionary. Retrieved 2 June 2013.