ಮನಿಶ್ ಘಾಟಾಕ್ (೧೯೦೨-೧೯೭೯) ಒಬ್ಬ ಬೆಂಗಾಳಿ ಕವಿ ಮತ್ತು ಕಾದಂಬರಿಕಾರ. ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು.[]

ಮನಿಷ್ ಘಟಕ್
ಜನನ೧೯೦೨
ಮರಣ೧೯೭೯ (ವಯಸ್ಸು೭೬-೭೭)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುJubanashwa
ಗಮನಾರ್ಹ ಕೆಲಸಗಳುಬರಹಗಾರ
ಸಂಗಾತಿಧರಿತ್ರಿ ದೇವಿ
ಮಕ್ಕಳುಮಹಾಶ್ವೇತಾ ದೇವಿ

ವೈಯಕ್ತಿಕ ಜೀವನ

ಬದಲಾಯಿಸಿ

ಮನಿಷ್ ಘಟಕ್ ಪೋಷಕರು ಸುರೇಶ್ ಚಂದ್ರ ಘಟಕ್ ಮತ್ತು ಇಂದುಬಾಲ ದೇವಿ. ಖ್ಯಾತ ಬಂಗಾಳಿ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ಅವರ ಕಿರಿಯ ಸಹೋದರ. ಘಟಕ್ ಧರಿತ್ರಿದೇವಿಯವರನ್ನು ಮದುವೆಯಾದರು, ಧರಿತ್ರಿದೇವಿಯವರು ಚೌದರಿ ಕುಟುಂಬದವರು. ಮಹಾಶ್ವೇತಾ ದೇವಿ ಅವರ ಹಿರಿಯ ಮಗಳು.[] ಅವರ ಹಿರಿಯ ಮೊಮ್ಮಗ, ಮಹಾಶ್ವೇತಾ ದೇವಿಯವರ ಮಗ, ನಬರುಣ್ ಬಟ್ಟಾಚಾರ್ಯ ಸಹ ಒಂದು ಬಹಳ ಪ್ರಸಿದ್ಧ ಬರಹಗಾರ.[]

ಇವರು ಕಲ್ಲೋಳ್ ಯುಗದ ಸಾಹಿತಿ ಆಗಿದ್ದರು. ಕಲ್ಲೋಳ್ ಯುಗದ ಇತರ ಪ್ರಸಿದ್ಧ ಬರಹಗಾರರು ಪ್ರೇಮೇಂದ್ರ ಮಿತ್ರ, ಅಚಿಂತ್ಯಕುಮಾರ್ ಸೆನ್‌ಗುಪ್ತ, ಬುದ್ಧದೇಬ್ ಬಾಸು ಮತ್ತು ನಜ಼್ರುಲ್ ಇಸ್ಲಾಮ್.

ಪುಸ್ತಕಗಳು

ಬದಲಾಯಿಸಿ
  • ಪಟಲ್ದಂಗರ್ ಪಾಂಚಾಲಿ (ಒಂದು ಪುಸ್ತಕ ಸಣ್ಣ ಕಥೆಗಳು)
  • ಕಂಖಲ್ (ಕಾದಂಬರಿ)
  • ಶಿಲಾಲಿಪಿ(ಪುಸ್ತಕ ಕವಿತೆ)
  • ಸಂಧ್ಯಾ(ಪುಸ್ತಕ ಕವಿತೆ)

ಉಲ್ಲೇಖಗಳು

ಬದಲಾಯಿಸಿ
  1. https://web.archive.org/web/20120204043332/http://murshidabad.nic.in/history2.htm
  2. Sunil Sethi (15 February 2012). The Big Bookshelf: Sunil Sethi in Conversation With 30 Famous Writers. Penguin Books India. pp. 74–. ISBN 978-0-14-341629-6. Retrieved 5 October 2012.
  3. https://www.myheritage.com/research/record-10182-2319155/manish-ghatak-in-biographical-summaries-of-notable-people