ಮನಮೋಹನ ಆಚಾರ್ಯರವರು ೧೯೬೭ರಲ್ಲಿ ೨೦ ಅಕ್ಟೋಬರ್ ರಂದು ಒರಿಸ್ಸಾದ ಜಗತ್ ಸಿಂಗ್ ಪುರದ ಲತಂಗ ಎನ್ನುವ ಹಳ್ಳಿಯಲ್ಲಿ ಜನಿಸಿದರು.ಇವರ ತಂದೆ ಪಂಡಿತ ಮಾಯಾಧರ್ ಆಚಾರ್ಯ ಮತ್ತು ತಾಯಿ ಪಾರ್ವತಿ ದೇವಿ. ಇವರ ಕಾವ್ಯ ನಾಮ ವಾಣಿಕವಿ[೧].ಇವರು ಆಧುನಿಕ ಕವಿಗಳು. ಇವರು ಕವಿಗಳು,ನಾಟಕಕಾರರು,ಸಂಶೋಧನಕಾರರು ಮತ್ತು ಪ್ರಬಂಧಕಾರರು ಮತ್ತು ಇವರು ಅನೇಕ ಶೈಲಿಗಳಲ್ಲಿ ತಮ್ಮ ಬರಹಗಳನ್ನು ಬರೆದು ಜನರ ಮನ ಗೆದ್ದಿದ್ದಾರೆ.ಇವರು ಹೆಚ್ಚಾಗಿ ತಮ್ಮ ಬರಹಗಳಲ್ಲಿ: ಆಧುನೀಕರಣದ ಪರಿಣಾಮಗಳು ಮತ್ತು ನಂಬಿಕೆ, ಈ ಎರಡು ವಿಷಯಗಳನ್ನು ಕುರಿತು ಬರೆಯುತ್ತಾರೆ.ಆಧುನೀಕರಣದ ಕಾರಣದಿಂದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳು : ಉಪಯೋಗಗಳು ಮತ್ತು ದುಷ್ಪರಿಣಾಮಗಳು. ಜನರ ಮೇಲೆ ಆಧುನೀಕರಣದ ಪರಿಣಾಮಗಳು, ಜನರ ಆರೋಗ್ಯ, ಜೀವನ ಶೈಲಿ, ಮನುಷ್ಯ ಸಂಬಂಧಗಳ ಮೇಲಾಗುವ ಪರಿಣಾಮಗಳು.. ಹೀಗೆ ಆಧುನೀಕರಣದ ಹಲವಾರು ಒಳಿತು ಕೆಡುಕುಗಳನ್ನು ಕುರಿತು ಮನಮೋಹನ ಆಚಾರ್ಯ ರವರು ತಮ್ಮ ಕೃತಿಗಳಲ್ಲಿ ತಿಳಿಸುತ್ತಿದ್ದರು. ಇವರು ಗೀತ ರಚನಕಾರರೂ ಹೌದು.ಇವರು ಅನೇಕ ಗೀತೆಗಳಿಗೆ ಸಾಹಿತ್ಯ ರಚನೆ ಮಾಡಿ ರಾಗ ಸಂಯೋಜನೆಯನ್ನು ಸಹ ಮಾಡಿದ್ದಾರೆ. ಇವರ ಸಾಹಿತ್ಯಕ್ಕೆ ರಾಗ ಸಂಯೋಜನೆಯನ್ನು ಮಾಡಿ ಒಡಿಸ್ಸಿಯ ನಾಟ್ಯಗಳಲ್ಲೂ ಅಳವಡಿಸಿಕೊಳ್ಳಲಾಗಿದೆ.ಇವರು ಹುಟ್ಟಿಂದಿನಿಂದಲೇ ಬಹಳ ನಾಜೂಕು ಮನುಷ್ಯರಾಗಿದ್ದು ಇವರು ತುಂಬಾ ಮೃದು ಮನಸ್ಸಿನವರಾಗಿದ್ದರು. ಇವರು ತಮ್ಮ ಎಲ್ಲಾ ಕೆಲಸಗಳನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದರು. ಇವರು ಶಿಸ್ತಿನ ಸಿಪಾಯಿಯಾಗಿದ್ದರು. ಇವರು ಸಮಯದ ಗೊಂಬೆಯಂತೆ ಸದಾ ಸಮಯದ ಜೊತೆ ಓಡುತ್ತಿದ್ದರು.ತಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತಿದ್ದರು. ಸಮಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು.ಇವರು ಬಹಳಷ್ಟು ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದರು.ಯಾವಾಗಲು ಪ್ರಶಾಂತವಾಗಿರಲು ಇಚ್ಛಿಸುತ್ತಿದ್ದರು.ಇವರು ತುಂಬಾ ಸರಳ ಜೀವಿಯಾಗಿದ್ದರು.

This is a photo of Vanikavi Manmohan Acharya addressing International Kalidas Samaroha in Ujjain, M.P.,India

ಇವರ ಗೀತಮೋಹನಂ ಎನ್ನುವ ಭಕ್ತಿಗೀತೆಯನ್ನು ೨೦೦೯ರಲ್ಲಿ ತೆರೆಕಂಡ ''ದಿ ಡಿಸೈನರ್'' ಎನ್ನುವ ಚಿತ್ರದಲ್ಲಿ ಉಪಯೋಗಿಸಿಕೊಳ್ಳಲಾಗಿದೆ.ಇವರು ಒಬ್ಬ ಒಳ್ಳೆಯ ಸಂಶೋಧನಕಾರಿಯಾಗಿಯೂ ಹೆಸರುವಾಸಿಯಾಗಿದ್ದಾರೆ.ಇವರು ಅನೇಕ ಕೃತಿಗಳನ್ನು,ಕಥಾಸಂಕಲನಗಳನ್ನು,ನಾಟಕಗಳನ್ನು ಮತ್ತು ಸುಮಧುರ ಗೀತೆಗಳನ್ನು ರಚಿಸಿದ್ದು ಅವುಗಳಲ್ಲಿ ಕೆಲವು ಈ ಕೆಳಕಂಡಂತಿವೆ:

ಕೃತಿಗಳು: ಬದಲಾಯಿಸಿ

  • ಗೀತಮೋಹನಂ : ಇದು ಭಕ್ತಿಗೀತೆಯಾಗಿದ್ದು ಇದನ್ನು ಚಲನಚಿತ್ರದಲ್ಲಿಯೂ ಸಹ ಅಳವಡಿಸಿಕೊಳ್ಳಲಾಗಿದೆ.
  • ಇವರು ಗೀತಭಾರತಂ ಎನ್ನುವ ಒಂದು ಹಾಡಿಗೆ ಸಾಹಿತ್ಯವನ್ನು ರಚಿಸಿದ್ದಾರೆ.
  • ಇವರ ಗೀತಮಿಲಿಂದಂ ಎನ್ನುವ ಕೃತಿಯು ಒಂದು ಹಾಡುಗಳ ಸಂಕಲನವಾಗಿದ್ದು ಹದಿನೈದು ಬೇರೆ ಬೇರೆ ಶೈಲಿಯ ರಾಗ ಸಂಯೋಜನೆ ಮತ್ತು ಬೇರೆ ಬೇರೆ ತಾಳಗಳನ್ನೊಳಗೊಂಡಿರುವ ಒಂದು ಅಮೋಘ ಕೃತಿಯಾಗಿದೆ.
  • ಇವರು ಪಲ್ಲಿ ಪಂಚಾಸಿಕ ಎನ್ನುವ ಒಂದು ಕಂದ ಪದ್ಯವನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದ್ದಾರೆ.
  • ಇವರು ಸುಭನ ಚರಿತಂ ಎನ್ನುವ ಕೃತಿಯನ್ನು ಮಹಾಕಾವ್ಯ ಶೈಲಿಯಲ್ಲಿ ಮತ್ತು ಶ್ರೀ ಶಿವಾನಂದ ಲಹರಿಕ ಎನ್ನುವ ಕೃತಿಯನ್ನು ಕಾವ್ಯ ರೂಪದಲ್ಲಿ ಮತ್ತು ಯತಿ-ಗಿತಿ-ಸತಕಂ ಎನ್ನುವ ಕೃತಿಯನ್ನು ಸತಕ ಕಾವ್ಯ ಶೈಲಿಯಲ್ಲಿ ರಚಿಸಿದ್ದಾರೆ.

ನೃತ್ಯರೂಪಕ: ಬದಲಾಯಿಸಿ

ಇವರು ಅನೇಕ ನೃತ್ಯರೂಪಕ(Dance Drama)ಗಳನ್ನು ರಚಿಸಿದ್ದಾರೆ.ನೃತ್ಯರೂಪಕ ಎಂದರೆ ನಾಟ್ಯ ಮತ್ತು ನಾಟಕದ ಸಂಯೋಜನೆ.ನೃತ್ಯದ ಮೂಲಕ ನಾಟಕವನ್ನು ಅಭಿನಯಿಸುವುದು.ಇಂತಹ ಅನೇಕ ನೃತ್ಯರೂಪಕ[೨]ಗಳನ್ನು ಮನಮೋಹನ್ ಆಚಾರ್ ಅವರು ರಚಿಸಿದ್ದಾರೆ. ಅವುಗಳು ಈ ಕೆಳಕಂಡಂತಿವೆ:

  • ಅರ್ಜುನ ಪ್ರತಿ‍ಜ಼್ನ.
  • ಶ್ರೀತ ಕಮಲಂ.
  • ಪಾದ ಪಲ್ಲವಂ.
  • ದಿವ್ಯ ಜಯದೇವಂ.
  • ರಾವಣ.
  • ಪಿಂಗಾಲ.
  • ಮೃತ್ಯು.
  • ಸ್ಥಿತ ಪ್ರಜ಼್ನ.
  • ತಂತ್ರಂ.
  • ಪೂರ್ವ ಶಾಕುಂತಲಂ.
  • ಉತ್ತರ ಶಾಕುಂತಲಂ. ಮುಂತಾದ ಅನೇಕ ನೃತ್ಯರೂಪಕಗಳು ಇವರ ಬತ್ತಳಿಕೆಯಲ್ಲಿವೆ.

ಅನುವಾದ: ಬದಲಾಯಿಸಿ

ಇವರು ಗೀತಗೋವಿಂದ[೩] ಎನ್ನುವ ಜಯದೇವರ ಕೃತಿಯನ್ನು ಅನುವಾದಿಸಿ ಗೀತಗೋವಿಂದ ರಸಾವಳಿ ಎನ್ನುವ ಕೃತಿಯನ್ನು ತಂದರು.

ಇವರು ಒರಿಸ್ಸಾದ ಕ್ಲ್ಯಾಸಿಕಲ್ ನೃತ್ಯವಾದ ಒಡಿಸ್ಸಿಯನ್ನು ಮೊಟ್ಟಮೊದಲ ಬಾರಿಗೆ ಸಿನಿಮಾ ರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಇದು ಇವರ ಅಮೋಘವಾದ ಕೊಡುಗೆಯಾಗಿದೆ.

ಸಂಶೋಧನೆ: ಬದಲಾಯಿಸಿ

ಇವರು ಬಹುದೊಡ್ಡ ಸಂಶೋಧಕರಾಗಿದ್ದು : " ಅನ್ ಆಲ್ಜ಼ೀಬ್ರಾಇಕ್ ಆಪರೇಷನ್ಸ್ ಇನ್ ವೇದಿಕ್ ಮ್ಯಾತಮೆಟಿಕ್ಸ್, ಷರದಿಂಡು-ಸುಂದರ-ರುಚಿಃ ದೇವಿ, ವಾಣಿ ವಾ ಶಕ್ತಿ ರೂಪಿಣಿ, ವೇದಿಕ್ ಟ್ರೆಂಡ್ ಆಫ್ ಹ್ಯುಮನ್ ರೈಟ್ಸ್ v/s ವರ್ಣ-ಆಶ್ರಮ ಸಿಸ್ಟಮ್, ವೇದಿಕ್ ರಿಸರ್ಚ್ ಇನ್ ಒರಿಸ್ಸಾ ಡ್ಯುರಿಂಗ್ 20th ಸೆಂಚುರಿ, ಮ್ಯಾಪ್ ಆಫ್ ಪೌರಾಣಿಕ್ ಇಂಡಿಯಾ, ಮೈಂಡ್ ಇನ್ ಶಿವ ಸಂಕಲ್ಪ ಹಿಮ್ನ್, ಎ ಸೈಕೊ-ಫಿಲೊಸೊಫಿಕಲ್ ಅನಾಲಿಸಿಸ್, ಶಿಶ್ಟಾಚಾರ, ಮಾಘ ಅಂಡ್ ಭಜನ್ ಇನ್ ಪಿಕ್ಚರ್ ಪೊಎಟ್ರಿ, ಸಿ‍‍‍‌ಕ್ಸ್ಟಿ ಫೋರ್ ಆರ್ಟ್ಸ್, ಎ ಸ್ಟಡಿ,ಕಾಂಟ್ರಿಬ್ಯೂಷನ್ ಆಫ್ ಸ್ಯಾಂಸ್ಕ್ರಿಟ್ ಇನ್ ಅಡ್ವಾನ್ಸ್ಮೆಂಟ್ ಆಫ್ ಒರಿಯಾ ಲಾಂಗ್ವೇಜ್ ಅಂಡ್ ಅನ್ ಎನ್ಸೈಕ್ಲೊಪೆಡಿಕ್ ಡಿಕ್ಷನರಿ ಆಫ್ ಯಜುರ್ವೇದಿಕ್ ಉಪನಿಷದ್ಸ್." ಎನ್ನುವ ಸಂಶೋಧನಾ ಕೃತಿಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಪ್ರಶಸ್ತಿಗಳು ಮತ್ತು ಬಿರುದುಗಳು: ಬದಲಾಯಿಸಿ

ಇವರು ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರಿಗೆ ಅನೇಕ ಪ್ರಶಸ್ತಿಗಳನ್ನು ಪ್ರಧಾನಿಸಿ ಗೌರವ ಸೂಚಿಸಿವೆ.

  • ಇವರಿಗೆ ಶ್ರೀ ಜಗನ್ನಾಥ ಸಂಸ್ಕೃತ ವಿಶ್ವವಿದ್ಯಾಲಯವು ೨೦೦೩ರಲ್ಲಿ ಪಿ.ಹೆಚ್.ಡಿ[೪] ಪದವಿಯನ್ನಿತ್ತು ಗೌರವಿಸಿದೆ.
  • ಇವರಿಗೆ ವಾಣಿವಿನೋದಿ ಪರಿಷತ್ ವಾಣಿ ಕವಿ ಪ್ರಶಸ್ತಿಯನ್ನಿತ್ತು ಗೌರವಿಸಿದೆ.
  • ಉತ್ಕಲ್ ವಿಶ್ವವಿದ್ಯಾಲಯವು ೧೯೯೧ರಲ್ಲಿ ಸಂಸ್ಕೃತ ಮಾತುಗಾರಿಕೆಯ ಪ್ರಶಸ್ತಿ ಮತ್ತು ವಿಕ್ರಂ ವಿಶ್ವವಿದ್ಯಾಲಯ ಮತ್ತು ಉಜ್ಜೈನಿ ವಿಶ್ವವಿದ್ಯಾಲಯಗಳು ಸಹ ೧೯೯೦ರಲ್ಲಿ ಗೌರವಾನ್ವಿತ ಪ್ರಶಸ್ತಿಗಳನ್ನಿತ್ತು ಗೌರವಿಸಿವೆ.
  • ಇವರಿಗೆ ೨೦೦೭ರಲ್ಲಿ ಆಶು-ಕವಿತ್ವ ಚಾತುರ್ಯಕ್ಕೆ ಗೀತ-ಸಾರಸ ಪ್ರಶಸ್ತಿ ದೊರೆತಿದೆ.
  • ಇವರಿಗೆ ೨೦೦೭ರಲ್ಲಿ ಆನಂದ ಭಾರದ್ವಾಜ್ ಸಮ್ಮಾನ್ ಪ್ರಶಸ್ತಿ ಲಭಿಸಿದೆ.
  • ಇವರಿಗೆ ಲೋಕ ಕಾವ್ಯನಿಧಿ ಪ್ರಶಸ್ತಿಯನ್ನು ಅಖಿಲ ಭಾರತ ಲೋಕಭಾಸ ಪ್ರಚಾರ ಸಮಿತಿಯು ೨೦೦೮ರಲ್ಲಿ ಇತ್ತು ಗೌರವಿಸಿದೆ.
  • ಇವರಿಗೆ ಭರತಿ-ಭರತ ಸಮ್ಮಾನ್ ಪ್ರಶಸ್ತಿಯು ರಾಷ್ಟ್ರೀಯ ಸಂಸ್ಕೃತ ಸಾಹಿತ್ಯ ಅಕಾಡೆಮಿಯ ವತಿಯಿಂದ ೨೦೦೯ರಲ್ಲಿ ಸಂದಿದೆ.
  • ಇವರಿಗೆ ಅಭಿನವ ಜಯದೇವ ಸಮ್ಮಾನ್ ಪ್ರಶಸ್ತಿಯನ್ನು ಭಕ್ತಕವಿ ಶ್ರೀ ಜಯದೇವ ಸಮಾರೋಹ ಸಮಿತಿಯ ವತಿಯಿಂದ ೨೦೦೯ರಲ್ಲಿ ಸಂದಿದೆ.
  • ಇವರಿಗೆ ಸರಸ್ವತಿ ಸಂಶೋಧನಾ ಸಂಸ್ಥೆಯು ಫೆಲೋಷಿಪ್ ಆಫ್ ವಾಚಸ್ಪತಿ ಎನ್ನುವ ಬಿರುದನ್ನು ನೀಡಿ ಗೌರವಿಸಿದೆ.
  • ಇವರಿಗೆ ಚಿಂತ ಚೇತನ ರಾಷ್ಟ್ರೀಯ ಬೈಸಖಿ ಪ್ರಶಸ್ತಿಯು ೨೦೧೨ರಲ್ಲಿ ಸಂದಿದೆ.

ಹೀಗೆ ಇವರಿಗೆ ಹತ್ತು ಹಲವಾರು ಪ್ರಶಸ್ತಿ ಪ್ರದಾನಗಳು ಇವರ ಮಡಿಲುನ್ನ್ಜು ಸೇರಿವೆ.ಸಂಸ್ಕೃತ ಸಾಹಿತ್ಯ ವಲಯದಲ್ಲಿ ಇವರ ಸಾಧನೆಗಳು ಅಪಾರ.ಇವರು ಭಾರತದ ಸಂಸ್ಕೃತದ ಕವಿಪುಂಗವರಲ್ಲಿ ಒಂದು ಅಮೋಘವಾದ ರತ್ನವಾಗಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. https://en.wikipedia.org/wiki/Manmohan_Acharya
  2. http://www.dictionary.com/browse/dance-drama
  3. https://en.wikipedia.org/wiki/Gita_Govinda
  4. https://en.wikipedia.org/wiki/Doctor_of_Philosophy