ಮಧುರೋಗ (ಡಯಾಬಿಟಸ್ ಮೆಲ್ಲಿಟಸ್)
ಕನ್ನಡದಲ್ಲಿ ಮಧುಮೇಹ ಅಥವಾ ಸಕ್ಕರೆರೋಗ ಕರೆಯಲ್ಪಡುವ (ವೈಜ್ಞಾನಿಕವಾಗಿ ಡಯಾಬಿಟಿಸ್ ಮೆಲ್ಲಿಟಸ್)ರೋಗದ ಅರಿವು ಭಾರತದಲ್ಲಿ ಬಹಳ ಹಿಂದೆ, ಆಯುರ್ವೇದದ ಕಾಲದಲ್ಲೂ ಇತ್ತು. ಭಾರತೀಯರಾದ ನಮಗೆ ಈ ರೋಗದ ಸರಿಯಾದ ತಿಳಿವಳಿಕೆಈ ಕೆಳಗೆ ಕಾಣಿಸಿರುವ ಕಾರಣಗಳಿಂದ ಅತ್ಯಂತ ಅವಶ್ಯವಾಗಿದೆ.
೧. ಪ್ರಸ್ತುತ ಭಾರತೀಯರಲ್ಲಿ ತೀವ್ರವಾಗಿ ಹೆಚ್ಚಿರುವ ಈ ರೋಗದಿಂದ ಬಳಲುವವರ ಸಂಖ್ಯೆ - ಇದು "ಸಕ್ಕರೆ ರೋಗದ ರಾಜಧಾನಿ" ಎಂಬ ಕುಖ್ಯಾತಿಯನ್ನು ದೇಶಕ್ಕೆ ತಂದಿದೆ. ೨. ಈ ರೋಗವನ್ನು ಮುಂಚೆಯೆ ಗುರುತಿಸಿ, ಚಿಕಿತ್ಸೆ ಪಡೆದಲ್ಲಿ ಆಗುವ ಅನೇಕ ಲಾಭಗಳು. ೩. ಬಹುಕಾಲ ರೋಗ ಪತ್ತೆಯಾಗದೇ ಇರುವುದು / ಪತ್ತೆಯಾದ ರೋಗಕ್ಕೆ ಚಿಕಿತ್ಸೆ ಪಡೆಯದಿರುವುದರಿಂದ ಆಗುವ ಅನಾಹುತಗಳು. ೪. ರೋಗವು ಬರದಂತೆ / ಬರಬಹುದಾದ ರೋಗವನ್ನು ನಿಧಾನಗೊಳಿಸುವಂತೆ ಮಾಡಬಹುದಾದ ವೈಯುಕ್ತಿಕ ಪ್ರಯತ್ನಗಳು. ೫. ರೋಗ ಪತ್ತೆಯಾದಾಗ ಉಪಯುಕ್ತವಾದ ಚಿಕಿತ್ಸೆ ಮತ್ತು ಜೀವನ ಕ್ರಮಗಳ ವಿವರಗಳ ತಿಳುವಳಿಕೆಯಿಂದಾಗುವ ಲಾಭಗಳು.