ಮದುರೈ ಮಣಿ ಅಯ್ಯರ್ (ಅಕ್ತೋಬರ್ 25, 1912 –ಜೂನ್ 8, 1968) ಕರ್ನಾಟಕ ಸಂಗೀತದಲ್ಲಿ ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಸಿದ್ಧರಾಗಿದ್ದ ಪ್ರತಿಭಾವಂತ ಗಾಯಕರು.ತಮ್ಮ ವಿಶಿಷ್ಟ ಶೈಲಿಯ ಗಾಯನದಿಂದಾಗಿ ಪ್ರಸಿದ್ಧರಾಗಿದ್ದ ಇವರು, ರಾಗ ಅಲಾಪನೆ, ನೆರವಲ್ ಮತ್ತು ಕಲ್ಪನಾ ಸ್ಚರಗಳ ಹಾಡುಗಾರಿಕೆಯಲ್ಲಿ ಕುಶಲಿಗರಾಗಿದ್ದರು.ಇವರ ಶೈಲಿ ಇಂದಿಗೂ ಪ್ರಸ್ತುತವಾಗಿದ್ದು ಆಸಕ್ತಿದಾಯಕವಾಗಿದೆ.

ಬಾಲ್ಯ ಮತ್ತು ಶಿಕ್ಷಣ ಸಂಪಾದಿಸಿ

ಸುಬ್ರಹ್ಮಣ್ಯ ಎಂಬ ನಿಜ ನಾಮಧೇಯದ ಮಣಿ ಅಯ್ಯರ್, ಅಕ್ಟೋಬರ್ ೨೫,೧೯೧೨ ರಂದು ಎಮ್.ಎಸ್.ರಾಮಸ್ವಾಮಿ ಮತ್ತು ಸುಬ್ಬುಲಕ್ಶ್ಮೀ ದಂಪತಿಗಳಿಗೆ ಮಧುರೆಯಲ್ಲಿ ಜನಿಸಿದರು.ತಂದೆ ಸರಕಾರಿ ನೌಕರರಾದರೂ ಸಹೋದರ ವಿದ್ವಾನ್ ಪುಷ್ಪವನಂ ಸಂಗೀತ ವಿದ್ವಾಂಸರಾಗಿದ್ದರು.ಸಂಗೀತದ ತಮ್ಮ ಮೊದಲ ಶಿಕ್ಷಣವನ್ನು ರಾಜಂ ಭಾಗವತರ್ ಎಂಬವರಿಂದ ಪಡೆದರೂ ಮುಂದೆ ಖ್ಯಾತ ಮುತ್ತಯ್ಯ ಭಾಗವತರು ಮಧುರೈಯಲ್ಲಿ ಸ್ಥಾಪಿಸಿದ ಶ್ರೀ ತ್ಯಾಗರಾಜ ಸಂಗೀತ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.

ಪ್ರಶಸ್ತಿ ಮತ್ತು ಗೌರವಗಳು ಸಂಪಾದಿಸಿ

ಮಣಿ ಅಯ್ಯರ್‍ರವರ ಸಂಗೀತ ಸಾಧನೆಗೆ ಆ ಕಾಲದ ಗಣ್ಯರಿಂದ ಹಲವಾರು ಪ್ರಶಸ್ತಿಗಳು ಸಂದಿವೆ. ಅದರಲ್ಲಿ ೧೯೫೯ರಲ್ಲಿ ಪಡೆದ ಸಂಗೀತ ಕಲಾನಿಧಿ ಪ್ರಶಸ್ತಿ ಮುಖ್ಯವಾಗಿದೆ.