ಮಧುಮಿತಾ ಬಿಶ್ತ್ (೫ ಆಕ್ಟೋಬರ್ ೧೯೬೪) ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ.ಅವರು ಎಂಟು ಬಾರಿ ರಾಷ್ಟ್ರೀಯ ಸಿಂಗಲ್ಸ್ ಚಾಂಪಿಯನ್, ಒಂಬತ್ತು ಬಾರಿ ಡಬಲ್ಸ್ ವಿಜೇತ ಮತ್ತು ಹನ್ನೆರಡು ಬಾರಿ ಮಿಶ್ರ ಡಬಲ್ಸ್ ವಿಜೇತರಾಗಿದ್ದಾರೆ.ಅವರು ರೈಟ್-ಹ್ಯಾಂಡ್ ಆಟಗಾರ್ತಿ.[೧]

ಮಧುಮಿತಾ ಬಿಶ್ತ್
ಮಧುಮಿತ ಬಿಶ್ತ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು (1964-10-05) ೫ ಅಕ್ಟೋಬರ್ ೧೯೬೪ (ವಯಸ್ಸು ೫೯)
ಪಶ್ಚಿಮ ಬಂಗಾಳ, ಭಾರತ
ಎತ್ತರ೫ ಅಡಿ ೩ ಇಂಚುಗಳು
ದೇಶ ಭಾರತ
ಆಡುವ ಕೈರೈಟ್
ಮಹಿಳಾ ಸಿಂಗಲ್ಸ್, ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್
ಅತಿಹೆಚ್ಚಿನ ಸ್ಥಾನ೨೮ (೧೯೯೨)

ಜನನ ಬದಲಾಯಿಸಿ

ಮಧುಮಿತಾ ಬಿಶ್ತ್ ರವರು ಭಾರತದ ಪಶ್ಚಿಮ ಬಂಗಾಳದ ಜೈಪೈಗುರಿಯಲ್ಲಿ ಜನಿಸಿದರು.

ವೈವಾಹಿ ಜೀವನ ಬದಲಾಯಿಸಿ

ಅವರು ೧೯೮೩ ರಲ್ಲಿ ಸಹ ಬ್ಯಾಡ್ಮಿಂಟನ್ ಆಟಗಾರ ವಿಕ್ರಮ್ ಸಿಂಗ್ ಬಿಶ್ತೆಗೆ ವಿವಾಹವಾದರು ಮತ್ತು ೧೯೯೩ ರಲ್ಲಿ ಗಂಡು ಮಗುವನ್ನು ಆಶೀರ್ವದಿಸಿದರು.

ವೃತ್ತಿ ಜೀವನ ಬದಲಾಯಿಸಿ

ಆಕೆಯ ಕಷ್ಟದ ಸಂದರ್ಭದಲ್ಲಿ ತನ್ನ ಆಟ್ಟಕ್ಕೆ ಅಡಚಣೆಯನ್ನುಂಟು ಮಾಡಲು ಅವರು ಎಂದಿಗೂ ಅವಕಾಶ ನೀಡಲಿಲ್ಲ.ಮಧುಮಿತಾ ಅವರು ಐರನ್ ಲೇಡಿ ಆಫ್ ಬ್ಯಾಡ್ಮಿಟನ್ ಎಂದು ಕರೆಯಲ್ಪಟ್ಟರು.ಅವರು ಒಂದು ವರ್ಷಕ್ಕೂ ಹೆಚ್ಚಿನ ಕಾಲ ಭಾರತೀಯ ತಂಡದ ಪ್ರಮುಖ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಅರ್ಜುನ ಪ್ರಶಸ್ತಿ ಪಡೆದ ಬಿಶ್ತ್ ಅವರು ಭಾರತಕ್ಕೆ ಹಲವಾರು ಕೊಡುಗೆ ಸಲ್ಲಿಸಿದ್ದಾರೆ. ಅವರು ಮದುವೆಯಾದ ನಂತರ ಆಡುವುದನ್ನು ನಿಲ್ಲಿಸಲಿಲ್ಲ. ಅದೇ ಮಟ್ಟದಲ್ಲಿ ಮತ್ತು ಬದ್ಧತೆ ಭಾವೋದ್ರೇಕದೊಂದಿಗೆ ಆಡುತ್ತಿದರು. ಆಟಗಾರರು ಸೈನಾ ನೆಹವಾಲ್ನ, ವಿಮಲ್ ಕುಮಾರ್, ಎಸ್.ವಿ ಆರಿಫ್ ಆಫ್ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನಾಪ್ಪ ಮತ್ತು ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್ ಮುಂತಾದ ತಮ್ಮ ವೈಯಕ್ತಿಕ ತರಬೇತುದಾರರನ್ನು ಹೊಂದಿರಬಹುದು ಆದರೆ ಅವರು ೫೦ ವರ್ಷ ವಯಸ್ಸಿನ, ಶಕ್ತಿಯುತ ಮತ್ತು ಉತ್ಸಾಹಿ ಮಹಿಳೆಯನ್ನು ಹೊಂದಿದ್ದಾರೆ. ಭಾರತೀಯ ಆಟಗಾರರ ನೈತಿಕತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರತಿಯೊಂದು ಪಂದ್ಯದಲ್ಲಿಯೂ ಕಂಡುಬರುತ್ತದೆ. ಮೇ ೨೦೧೪ರಲ್ಲಿ ಉಬರ್ ಕಪ್ ಪಂದ್ಯಾವಳಿಯ ಮೊದಲು ಭಾರತೀಯ ತಂಡದ ಸಹಾಯಕ ತರಬೇತುದಾರರಾಗಿ ಆಯ್ಕೆಯಾದರು.

ನಿವೃತಿ ಜೀವನ ಬದಲಾಯಿಸಿ

ಸುಮಾರು ೨೭ ವರ್ಷಗಳ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ನಂತರ, ಅವರು ಅಂತಿಮವಾಗಿ ಮೇ ೨೦೦೨ ರಲ್ಲಿ ನಿವೃತ್ತಿ ಘೋಷಿಸಿದರು. ನಿವೃತ್ತಿಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ, ಅವರು ಭಾರತೀಯ ರೈಲ್ವೆಯ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು ಮತ್ತು ಸ್ಪೋರ್ಟ್ಸ್ ಅಥಾರಿಟಿ ಆ ಇಂಡಿಯಾ (SAI) ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತಮ್ಮ ಆಟದ ಮಟ್ಟವನ್ನು ಪೋಷಿಸಲು ಯುವ ಶಟ್ಲರ್ಗಳಿಗೆ ತರಬೇತಿ ನೀಡಿದರು. ಜುಲೈ ೨೦೧೨ರಲ್ಲಿ ಬಿಶ್ತ್ ಅವರ ಪತಿಯೊಂದಿಗೆ ದೆಹಲಿಯ ಎಮ್ವಿ ಬಿಶ್ತ್ ಅಕಾಡೆಮಿಯ ಹೆಸರಿನ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ತೆರೆಯಲಾಯಿತು.[೨]

ಪ್ರಶಸ್ತಿಗಳು ಬದಲಾಯಿಸಿ

ಅವರು ೨೦೦೬ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.[೩]ಅವರು ೧೯೮೨ ರಲ್ಲಿ ಅರ್ಜುನ ಪ್ರಶಸ್ತಿ ಪಡೆದರು.೧೯೯೮ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದರು.೧೯೯೨ರಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವಕಪ್ ಆಡಿದರು. ಮಧುಮಿತಾ ಅವರು ೧೯೯೨ರಲ್ಲಿ ಟ್ರಿಪಲ್ ಕಿರೀಟವನ್ನು ಗೆದ್ದರು ಹಾಗೇ ಮಾಸ್ಕೋದಲ್ಲಿ ಯುಎಸ್ಎಸ್ಆರ್ ಓಪನ್ ಪಂದ್ಯಾವಳಿಯಲ್ಲಿ ಎರಡನೆಯ ಅತ್ಯುತ್ತಮ ಪ್ರಶಸ್ತಿ ಗೆದಿದ್ದಾರೆ. ಅವರು ಎಂಟು ಬಾರಿ ರಾಷ್ಟ್ರೀಯ ಸಿಂಗಲ್ಸಾ ಚಂಪಿಯನ್, ಒಂಬತ್ತು ಬಾರಿ ಡಬಲ್ಸ್ ಹಾಗೇ ಹನ್ನೆರಡು ಬಾರಿ ಮಿಶ್ರ ಡಬಲ್ಸ್ ವಿಜೇತರಾಗಿದ್ದಾರೆ.[೪]

ಉಲ್ಲೇಖಗಳು ಬದಲಾಯಿಸಿ

  1. https://bwfbadminton.com/player/43/madhumita-bisht
  2. https://in.news.yahoo.com/madhumita-bisht-iron-lady-indian-060049038.html
  3. https://www.india.gov.in/myindia/padmashri_awards_list1.php?start=160
  4. https://www.sportstarlive.com/tss2519/25190690.htm[ಶಾಶ್ವತವಾಗಿ ಮಡಿದ ಕೊಂಡಿ]