ಮತ್ಸ್ಯ ರೇತಸ್ಸು
ಮತ್ಸ್ಯ ರೇತಸ್ಸು ಆಂಗ್ಲಭಾಷೆಯಲ್ಲಿ ಮಿಲ್ಟ್ ಎಂಬುವುದು ಮೀನುಗಳ ವೀರ್ಯ, ಇದು ಬಾಹ್ಯ ಫಲೀಕರಣ ಸಂತಾನೊತ್ಪತ್ತಿಯ ಸಮಯದಲ್ಲಿ ಹೆಣ್ಣು ಮೀನುಗಳು ಇಟ್ಟಿರುವ ಮೊಟ್ಟೆಗಳ ಮೇಲೆ ಗಂಡು ಮೀನುಗಳು ತಮ್ಮ ವೀರ್ಯವನ್ನು ಹರಡುತ್ತವೆ.
ಆಹಾರವಾಗಿ ಮತ್ಸ್ಯ ರೇತಸ್ಸು
ಬದಲಾಯಿಸಿಮತ್ಸ್ಯ ರೇತಸ್ಸು ಗಂಡು ಮೀನುಗಳ ಲೈಂಗಿಕ ಅಂಗ,ಇದು ವೀರಿಯವನ್ನು ಹೊಂದಿರುತ್ತದೆ,ಇದನ್ನು ಆಹಾರವಾಗಿ ಬಳಸುತ್ತಾರೆ. ಹಲವು ಸಂಸ್ಕೃತಿಯವರು ಮತ್ಸ್ಯ ರೇತಸ್ಸನ್ನು ಎಣ್ಣೆಯಲ್ಲಿ ಕರೆದು ಬೇರೆ ಆಹಾರಗಳೊಂದಿಗೆ ಬಳಸಿ ಸೇವಿಸುತ್ತಾರೆ.
- ಜಪಾನ್ನಲ್ಲಿ ಸಾಂಪ್ರದಾಯಿಕ ಆಹಾರದಲ್ಲಿ ಕಾಡ್,ಅಂಗ್ಲರ್ ಮೀನು,ಸಾಮನ್ ,ಸ್ಕ್ವಿಡ್ ಮೀನು ,ಪಫ್ಲರ್ ಮೀನು ಗಳ ಮತ್ಸ್ಯ ರೇತಸ್ಸನ್ನು ವಿಶೇಷವಾಗಿ ಬಳಸುತ್ತಾರೆ.
- ಕೊರಿಯದ ಸಾಂಪ್ರದಾಯಿಕ ಆಹಾರದಲ್ಲಿ ಅಲಸ್ಕ,ಪೊಲೊಕ್, ಕಾಡ್, ಬ್ಲಾಕ್ ಮೌತ್ ಆಂಗ್ಲರ್, ಬೊಗಿಯೊ ಮತ್ತು ಸಿಬ್ರೀಮ್ ಗಳ ಮತ್ಸ್ಯ ರೇತಸ್ಸನ್ನು ವಿಶೇಷವಾಗಿ ಬಳಸುತ್ತಾರೆ.
- ರೊಮಾನಿಯದ ಸಾಂಪ್ರದಾಯಿಕ ಆಹಾರದಲ್ಲಿ ಕಾರ್ಪ್ ಮೀನು ಮತ್ತು ಇತರೆ ಮೀನುಗಳ ರೇತಸ್ಸನ್ನು ಲಪ್ಟಿ ಎಂದು ಕರೆಯುತ್ತಾರೆ. ಇದನ್ನು ಎಣ್ಣೆಯಲ್ಲಿ ಕರೆದು ಸೇವಿಸುತ್ತಾರೆ.
- ರಷ್ಯಾದ ಸಾಂಪ್ರದಾಯಿಕ ಆಹಾರದಲ್ಲಿ ಹರ್ರಿಂಗ್ ಮೀನುಗಳ ರೇತಸ್ಸನ್ನು ಉಪ್ಪಿನಕಾಯಿ ಮಾಡಿ ಸೇವಿಸುತ್ತಾರೆ, ಕೆಲವು ಬಾರಿ ಹರ್ರಿಂಗ್ ಹೆಣ್ಣು ಮೀನುಗಳ ಮೊಟ್ಟೆಯ ಜೋತೆ ಸೇರಿಸಿ ಉಪ್ಪಿನಕಾಯಿ ಮಾಡುತ್ತಾರೆ. ಅನೇಕ ಬಗೆಯ ಬಿಳಿಯ ಮೀನಿನ ರೇತಸ್ಸನ್ನು ಕರೆದು ದೈನಂದಿನ ಆಹಾರ್ವಾಗಿ ಸೇವಿಸುತ್ತಾರೆ.
- ಸಿಸಿಲಿಯನ್ನಿನ ಸಾಂಪ್ರದಾಯಿಕ ಆಹಾರದಲ್ಲಿ ಟೂನಾದ ರೇತಸ್ಸನ್ನು ಶಾವಿಗೆಯೊಂದಿಗೆ ಬೆರಸಿ ತಿನ್ನುತ್ತಾರೆ.