ಮತ್ತೂರು (ಮತೂರು , ಮತ್ತೂರು ಮತ್ತು ಮಥೂರು ಎಂದು ಸಹ ಉಚ್ಛರಿಸಬಹುದು) (ಕನ್ನಡ:ಮತ್ತೂರು, ಸಂಸ್ಕೃತ:मत्तूरु) ದಕ್ಷಿಣ ಭಾರತದ ಕರ್ನಾಟಕದಲ್ಲಿರುವ ಶಿವಮೊಗ್ಗದ ಹತ್ತಿರವಿರುವ ಒಂದು ಚಿಕ್ಕ ಗ್ರಾಮವಾಗಿದೆ. ಇದು ತುಂಗಾ ನದಿಯ ದಡದಲ್ಲಿದೆ. ಇತ್ತೀಚಿನ ಸಮಯದಲ್ಲಿ ಸಂಸ್ಕೃತ ಬೋದನೆಯಿಂದಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿನ ಹೆಚ್ಚಿನ ಕುಟುಂಬಗಳು ಸಂಸ್ಕೃತವನ್ನು ನಿತ್ಯ ಭಾಷೆಯಾಗಿ ಬಳಸುತ್ತಾರೆ.

ಮತ್ತೂರು
India-locator-map-blank.svg
Red pog.svg
ಮತ್ತೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಶಿವಮೊಗ್ಗ ಜಿಲ್ಲೆ
ನಿರ್ದೇಶಾಂಕಗಳು 13° N 75° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಮತ್ತೂರಿನಲ್ಲಿರುವ ತುಂಗಾ ನದಿ
ಮತ್ತೂರಿನಲ್ಲಿ ಸೂರ್ಯಾಸ್ತ

ವೇದಗಳು ಮತ್ತು ವೇದಾಂತಗಳ ಅದ್ಯಯನವು ಈ ಗ್ರಾಮದ ಇನ್ನೊಂದು ವೈಶಿಷ್ಟ್ಯವಾಗಿದೆ. ಗ್ರಾಮದಲ್ಲಿರುವ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಮತ್ತು ಇದು ಶಂಕರರು ಮೂಲವಾಗಿ ಪ್ರತಿಪಾದಿಸಿದ ಶಂಕರ ವೇದಾಂತವನ್ನು ಬೋಧಿಸುವ ಕೆಲವೇ ಶಾಲೆಗಳಲ್ಲಿ ಒಂದಾಗಿದೆ.

ಮತ್ತೂರಿನ ಅವಳಿ ನಗರವಾದ ಹೊಸಹಳ್ಳಿಯೂ ಮತ್ತೂರಿನ ಎಲ್ಲಾ ಲಕ್ಷಣಗಳನ್ನು ಹಂಚಿಕೊಂಡಿದೆ. ಹೊಸಹಳ್ಳಿಯು ತಂಗಾ ನದಿಯ ದಡದಲ್ಲಿದೆ. ಈ ಎರಡೂ ಹಳ್ಳಿಗಳನ್ನು ಹೆಚ್ಚಾಗಿ ಒಟ್ಟಿಗೆ ಉಲ್ಲೇಖಿಸಲಾಗುತ್ತಿದೆ.

ಕರ್ನಾಟಕದಲ್ಲಿನ ಹಾಡುವ ಮತ್ತು ಕಥೆ ಹೇಳುವ ಒಂದು ಅನನ್ಯ ಪ್ರಕಾರವಾದ ಗಮಕ ಕಲೆಯನ್ನು ಬೆಂಬಲಿಸುವಲ್ಲಿ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳ ಪರಿಶ್ರಮದಿಂದಾಗಿ ಹೆಚ್ಚು ಚಿರಪರಿಚಿತವಾಗಿದೆ.

ಡಾ. ಮತ್ತೂರು ಕೃಷ್ಣಮೂರ್ತಿ:

ಭಾರತ ವಿದ್ಯಾಭವನದ ಅಡಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಸುಸಂಸ್ಕ್ರತ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂಬುದು ಕುಮಾರವ್ಯಾಸ ಭಾರತ ವ್ಯಾಖ್ಯಾನ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ,

ಭಾರತ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ ಅವರ ಅಭಿಮತ. ಬಡತನ ಶಾಪವಲ್ಲ. ಬದಲಾಗಿ ಅದೊಂದು ವರ. ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವಂಥದ್ದು. ಮನುಷ್ಯನನ್ನು ಮನುಷ್ಯನನ್ನಾಗಿ ಇಡಬಲ್ಲ ಶಕ್ತಿ ಅದಕ್ಕಿದೆ. ಅದರಂತೆ ಬಡತನವೇ ಭಾಗ್ಯ ಎಂದು ಬಗೆದ ಡಾ. ಕೃಷ್ಣಮೂರ್ತಿ ಕಡುಕಷ್ಟದ ಜೀವನ ನಡೆಸುವ ಮೂಲಕ ತಮ್ಮ ಬದುಕನ್ನು ಎತ್ತರಿಸಿಕೊಂಡವರು. ಶಿವಮೊಗ್ಗ ಜಿಲ್ಲೆಯ ಮತ್ತೂರ (ಸಂಸ್ಕೃತ) ಗ್ರಾಮದ ತೀರಾ ಬಡ ಕುಟುಂಬದಲ್ಲಿ (8-8-1928) ಜನಿಸಿದರು.

ಹೊರಗಿನ ಕೊಂಡಿಗಳುಸಂಪಾದಿಸಿ

ನಿರ್ದೇಶಾಂಕಗಳು: 11°20′N 79°14′E / 11.333°N 79.233°E / 11.333; 79.233

"https://kn.wikipedia.org/w/index.php?title=ಮತ್ತೂರು&oldid=867961" ಇಂದ ಪಡೆಯಲ್ಪಟ್ಟಿದೆ