ಮಣ್ಣಿನ ಸಂರಕ್ಷಣೆ:

   ಮಣ್ಣು ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿದೆ. ಈ ಸಸ್ಯಗಳು ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ನೈಸರ್ಗಿಕ ಪ್ರಕ್ರಿಯೆಗಳಿಂದ ಭೂಮಿಯ ಮೇಲೆ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಗಿದೆ. ಆದರೆ ಮಾನವನ ನಿರ್ಲಕ್ಷ್ಯದಿಂದಾಗಿ ಈ ಮಣ್ಣು ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗಿದೆ.
ಮಣ್ಣಿನ ಸವಕಳಿಯನ್ನು ತಡೆದು, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದೇ ಮಣ್ಣಿನ ಸಂರಕ್ಷಣೆ. ಮಣ್ಣಿನ ಸವಕಳಿಯನ್ನು ತಡೆಯಬಹುದು ಹೇಗೆ?
ಮಣ್ಣಿನ ಸವಕಳಿಯ ವಿವಿಧ (ಪ್ರಮುಕ) ಕಾರಣಗಳು ಇವು:
೧. ವೇಗವಾಗಿ ಬೀಸುವ ಗಾಳಿ
೨. ರಭಸವಾಗಿ ಹರಿಯುವ ನೀರು
೩. ಅರಣ್ಯನಾಶ 
೪. ಮಿತಿವೀರಿದ ಮೇಯುವಿಕೆ
   ಈ ಎಲ್ಲಾ ಕಾರಣಗಳನ್ನು ನಿಯಂತ್ರಿಸಿದರೆ ಮಣ್ಣಿನ ಸವಕಳಿಯು ತಡೆಯಲ್ಪಟ್ಟು ಮಣ್ಣಿನ ಫಲವತ್ತತೆ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಹಾಗೆಯೇ ಉಳಿಯುತ್ತದೆ. 
ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:

ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ಹೀಗಿವೆ-

೧.ಅರಣ್ಯೀಕರಣ:
ಗಿಡಗಳನ್ನು ನೆಟ್ಟು ಬೆಳೆಸುವುದನ್ನು ಅರಣ್ಣೀಕರಣ ಎನ್ನುವರು. ಮಣ್ಣಿನ ಸವಕಳಿಯನ್ನು ತಪ್ಪಿಸಲು ಇದೊಂದು ಪರಿಣಾಮಕಾರಿಯಾದ ಕ್ರಮವಾಗಿದೆ. ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಗಾಳಿ ಮತ್ತು ಮಳೆಯಿಂದ ಮಣ್ಣಿನ ಸವಕಳಿಯಾಗುವುದು ತಪ್ಪುತ್ತದೆ.
೨.ತಡೆಒಡ್ಡುಗಳನ್ನು ನಿರ್ಮಿಸುವುದು:
ವೇಗವಾಗಿ ಹರಿಯುವ ನೀರಿನ ಪ್ರವಾಹ ಹೊಲಗಳಲ್ಲಿಯ ಮೇಲ್ಪದರದ ಮಣ್ಣುನ್ನು ಕೊಂಡೊಯ್ಯುವುದು ನಮಗೆ ತಿಳಿದಿದೆ. ಹೊಲದಲ್ಲಿಯ ಮಣ್ಣು ಸಮತಲವಾಗಿದ್ದರೆ, ಬಿರುಸಾದ ಮಳೆಯ ನಂತರ ಉಂಟಾಗುವ ನೀರಿನ ಹರಿವು ಅಷ್ಟೊಂದು ರಭಸವಾಗಿರುವುದಿಲ್ಲ. ಹೀಗಿದ್ದರೂ, ನೀರಿನ ಈ ಹರಿವನ್ನು ತಡೆಯುವುದು ಒಳ್ಳೆಯದು. ಹೊಲಗಳ ಸತ್ತಲು ಒಡ್ಡುಗಳನ್ನು ನಿರ್ಮಿಸುವುದರ ಮೂಲಕ ನೀರಿನ ಹರಿವನ್ನು ತಡೆದು ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು.
೩.ಮರಗಳ ತಡೆಪಟ್ಟಿ:
ಹೊಲಗಳ ದಂಡೆಗಳಲ್ಲಿ ಮರಗಳನ್ನು ಬೆಳೆಸಿದಾಗ, ಆ ಮರಗಳಿಂದ ಗಾಳಿಂದ ತಡೆಯಲ್ಪಟ್ಟು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.

ಮರಗಳ ತಡೆಯ ಕಾರಣವಾಗಿ ಗಾಳಿಯು ಮಣ್ಣಿನ ಮೇಲೆ ತನ್ನ ಪರಿಣಾಮವನ್ನು ಹೆಚ್ಚಾಗಿ ಬೀರಲು ಸಾಧ್ಯವಾಗುವುದಿಲ್ಲ.

೪.ಸಮಪಾತಳಿ ಬೇಸಾಯ:
ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಲಾಗುತ್ತದೆ. ಇದರಿಂದ ಇಳಿಜಾರಿಗೆ ಅಡ್ಡವಾದ ಸಮಪಾತಳಿಯ ಹರಿಗಳು ಮತ್ತು ಬದುಗಳು ಉಂಟಾಗುತ್ತವೆ. ಇಂತಹ ಹರಿಗಳಲ್ಲಿ ಬೀಜಗಳನ್ನು ನಾಟಿ ಮಾಡಲಾಗುತ್ತದೆ. ಇಳಿಜಾರಿಗೆ ಅಡ್ಡಲಾಗಿರುವ 

ಸಮಪಾತಳಿಯ ಹರಿಗಳು ಮತ್ತು ಸಸ್ಯಗಳ ಸಾಲು ಇಳಿಜಾರಿನ ಮೂಲಕ ನೀರು ರಭಸವಾಗಿ ಹರಿಯುವುದನ್ನು ತಡೆಯುತ್ತವೆ. ಇದು ಸವಕಳಿಯನ್ನು ಕಡಿಮೆಗೊಳಿಸುತ್ತದೆ.

೫.ಯೋಜಿತ ಮೇಯಿಸುವಿಕೆ:
ದನ-ಕರುಗಳು, ಕುರಿ-ಮೇಕೆಗಳಿಂದ ಮೇಯಿಸುವಿಕೆಯನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಉಳಿಸಿ ಮಣ್ನುನ್ನು ಸಂರಕ್ಷಿಸಬಹುದು. ದೊರೆಯುವ ಹುಲ್ಲಿನ ಪ್ಪಮಾಣಕ್ಕೆ ಅನುಗುಣವಾಗಿ ಮೇಯಿಸುವಿಕೆಯ ಪ್ರಮಾಣವನ್ನು ನಿಯಂತ್ರಿಸಬೇಕು.
೬.ಸರದಿ ಬೆಳೆ ಪದ್ಧತಿ:
ಅನೇಕ ವರ್ಷಗಳ ಕಾಲ ಒಂದು ಜವೀನಿನಲ್ಲಿ ಒಂದೇ ಬೆಳೆಯನ್ನು ಬೆಳೆಯುವುದರಿಂದ ಕೆಲವು ನಿರ್ದಿಷ್ಟ ಸಸ್ಯ ಪೋಷಕಗಳ ಕೊರತೆ ಉಂಟಾಗುತ್ತದೆ. ಇದನ್ನು ತಡೆಯಲು ಒಂದು ವರ್ಷ ಬೆಳೆದ ಬೆಳೆಗಳನ್ನು ಅದೇ ಜಮೀನೆನಲ್ಲಿ ಮುಂದಿನ ವರ್ಷ ಬೆಳೆಯಬಾರದು, ಹೀಗೆ ಪ್ರತೀ ವರ್ಷ ಬೆಳೆಗಳನ್ನು ಬದಲಾಯಿಸುವ ವಿಧಾನಕ್ಕೆ ಸರದಿ ಪದ್ದತಿ ಎನ್ನುವರು.

ಉದಾ: ರಾಗಿ ಮತ್ತು ನೆಲಗಡಲೆ

೭.ಮಿಶ್ರ ಬೆಳೆ ಪದ್ಧತಿ:
ಒಂದೇ ಜಮೀನಿನಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಗೆಯ ಬೆಳೆಗಳನ್ನು ಒಟ್ಟಿಗೆ ಬೆಳೆಯುವ ವಿಧಾನಕ್ಕೆ ಮಿಶ್ರ ಬೆಳೆ ಪದ್ಧತಿ ಎನ್ನುವರು. ಇದು ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳುಲು ಸಹಾಯ ಮಾಡುತ್ತದೆ.

ಉದಾ: ಜೋಳ ಮತ್ತು ಅವರೆ