ಮಡಿಲು ಎಂದರೆ ಒಂದು ದ್ವಿಪಾದಿಯು ಕುಳಿತಿರುವ ಅಥವಾ ಮಲಗಿರುವ ಸ್ಥಿತಿಯಲ್ಲಿರುವಾಗ ಮಂಡಿ ಮತ್ತು ಟೊಂಕದ ನಡುವೆ ಸೃಷ್ಟಿಯಾದ ಮೇಲ್ಮೈ (ಸಾಮಾನ್ಯವಾಗಿ ಸಮತಲವಾದ ಮೇಲ್ಮೈ). ಒಬ್ಬ ಹೆತ್ತವಳ ಅಥವಾ ಪ್ರೀತಿಪಾತ್ರರ ಮಡಿಲು ಮಗುವಿಗೆ ಕುಳಿತುಕೊಳ್ಳಲು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರಾಮದಾಯಕ ಸ್ಥಳವಾಗಿ ಕಾಣಲಾಗುತ್ತದೆ.[] ಕ್ರಿಸ್ಮಸ್ ಆಚರಿಸುವ ದೇಶಗಳಲ್ಲಿ, ಅವರಿಗೆ ಕ್ರಿಸ್ಮಸ್‍ಗೆ ಏನು ಬೇಕು ಎಂದು ಹೇಳಲು, ಮತ್ತು ತಮ್ಮ ಛಾಯಾಚಿತ್ರವನ್ನು ತೆಗೆಸಿಕೊಳ್ಳಲು ಮಕ್ಕಳು ಸ್ಯಾಂಟಾ ಕ್ಲಾಸ್‍ನ ವೇಷ ಧರಿಸಿರುವ ವ್ಯಕ್ತಿಯ ಮಡಿಲಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯವಾಗಿದೆ. ಆದರೆ ಈ ದೇಶಗಳ ಪೈಕಿ ಕೆಲವಲ್ಲಿ ಈ ಆಚರಣೆಯನ್ನು ಪ್ರಶ್ನಿಸಲಾಗಿದೆ, ಏಕೆಂದರೆ ಮಕ್ಕಳು ಮತ್ತು ಅಪರಿಚಿತ ವಯಸ್ಕರ ನಡುವೆ ಈ ಬಗೆಯ ಸಂಪರ್ಕವು ಕಳವಳಕ್ಕೆ ಎಡೆಮಾಡಿಕೊಡುತ್ತದೆ.

ತಾಯಿಯ ಮಡಿಲಲ್ಲಿ ಮಗು ಮಲಗಿರುವುದು

ವಯಸ್ಕರಲ್ಲಿ, ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಮಡಿಲಲ್ಲಿ ಕುಳಿತುಕೊಳ್ಳುವುದು ಸಾಮಾನ್ಯವಾಗಿ ಅವರಿಬ್ಬರ ನಡುವೆ ನಿಕಟ ಅಥವಾ ಪ್ರಣಯ ಸಂಬಂಧವನ್ನು ಸೂಚಿಸುತ್ತದೆ; ಮಡಿಲು ನರ್ತನ ಎಂದು ಕರೆಯಲ್ಪಡುವ ಬತ್ತಲೆ ಕೂಟಗಳಲ್ಲಿನ ಕಾಮಪ್ರಚೋದಕ ಚಟುವಟಿಕೆಯಲ್ಲಿ ಇದು ಒಂದು ಅಂಶವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಮಡಿಲ ಮೇಲೆ ಕಾಲು ಆಚೆ ಈಚೆಗೆ ಇರುವಂತೆ ಕೂಡುತ್ತಾನೆ ಮತ್ತು ತನ್ನ ಕೆಳಗಿನ ಅವಯವಗಳನ್ನು ಪ್ರಚೋದನಕಾರಿ ರೀತಿಯಲ್ಲಿ ಸುತ್ತಿಸುತ್ತಾನೆ.

ಒಂದು ಮೇಜು ಲಭ್ಯವಿಲ್ಲದಿದ್ದಾಗ ಕೆಲಸಗಳನ್ನು ಮಾಡಲು ಮಡಿಲು ಒಂದು ಉಪಯುಕ್ತ ಮೇಲ್ಮೈಯಾಗಬಹುದು. ಲ್ಯಾಪ್‍ಟಾಪ್ ಕಂಪ್ಯೂಟರ್‌ಗೆ (ಮಡಿಲಗಣಕ) ಆ ಹೆಸರು ಬರಲು ಕಾರಣವೇನೆಂದರೆ ಅದನ್ನು ಒಬ್ಬ ಬಳಕೆದಾರನ ಮಡಿಲ ಮೇಲೆ ಬಳಸುವುದು ಸಾಧ್ಯವಾಗಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Sent Before My Time: A Child Psychotherapist's View of Life on a Neonatal Intensive Care Unit, by Margaret Cohen, 2003, page 108.


"https://kn.wikipedia.org/w/index.php?title=ಮಡಿಲು&oldid=846298" ಇಂದ ಪಡೆಯಲ್ಪಟ್ಟಿದೆ