ಮಕಮಲ್ಲು
ಮಕಮಲ್ಲು (ಮಖಮಲ್) ಒಂದು ಬಗೆಯ ನೇಯ್ದ ಕುಚ್ಚುಗಳಿರುವ ಬಟ್ಟೆ. ಇದರಲ್ಲಿ ಕತ್ತರಿಸಿದ ನೂಲುಗಳು ಸಮವಾಗಿ ಹಂಚಿಕೊಂಡಿರುತ್ತವೆ ಮತ್ತು ಗಿಡ್ಡನೆಯ ದಟ್ಟ ಜುಂಗನ್ನು ಹೊಂದಿರುತ್ತದವೆ. ಇದರಿಂದ ಇದಕ್ಕೆ ವಿಶಿಷ್ಟ ಮೃದು ಸ್ಪರ್ಶ ಬರುತ್ತದೆ. ಮಕಮಲ್ಲು ಬಟ್ಟೆಯನ್ನು ಕೃತಕ ಅಥವಾ ನೈಸರ್ಗಿಕ ನಾರುಗಳಿಂದ ತಯಾರಿಸಬಹುದು.
ಮಕಮಲ್ಲನ್ನು ಹಲವಾರು ಭಿನ್ನ ಬಗೆಯ ನೂಲುಗಳಿಂದ ತಯಾರಿಸಬಹುದು. ಸಾಂಪ್ರದಾಯಿಕವಾಗಿ ಇವುಗಳಲ್ಲಿ ಅತ್ಯಂತ ದುಬಾರಿಯಾದದ್ದೆಂದರೆ ರೇಷ್ಮೆ. ಇಂದು "ರೇಶ್ಮೆ ಮಕಮಲ್ಲು" ಎಂದು ಮಾರಾಟವಾಗುವ ಬಹುಭಾಗ ಮಕಮಲ್ಲು ವಾಸ್ತವವಾಗಿ ರೇಯಾನ್ ಹಾಗೂ ರೇಷ್ಮೆಯ ಮಿಶ್ರಣವಾಗಿರುತ್ತದೆ.[೧] ಸಂಪೂರ್ಣವಾಗಿ ರೇಷ್ಮೆಯಿಂದ ತಯಾರಿಸಿದ ಮಕಮಲ್ಲು ಅಪರೂಪವಾಗಿದೆ ಮತ್ತು ಸಾಮಾನ್ಯವಾಗಿ ಇದರ ಮಾರಾಟ ಬೆಲೆ ಗಜಕ್ಕೆ ಹಲವು ನೂರು ಡಾಲರ್‌ಗಳಿರಬಹುದು. ಹತ್ತಿಯನ್ನು ಕೂಡ ಮಕಮಲ್ಲನ್ನು ತಯಾರಿಸಲು ಬಳಸಲಾಗುತ್ತದೆ, ಆದರೆ ಹಲವುವೇಳೆ ಇದು ಕಡಿಮೆ ಐಷಾರಾಮಿ ಬಟ್ಟೆಯಾಗಿರುತ್ತದೆ. ಮಕಮಲ್ಲನ್ನು ನಾರುಬಟ್ಟೆ, ಮೊಹೇರ್ ಹಾಗೂ ಉಣ್ಣೆಯಂತಹ ನಾರುಗಳಿಂದಲೂ ತಯಾರಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Jeanne Stauffer (1 January 2004). Sewing Smart with Fabric. DRG Wholesale. p. 73. ISBN 978-1-59217-018-0.