ಮಂತ್ರ ಸರ್ಫಿಂಗ್ ಕ್ಲಬ್, ಮಂಗಳೂರು
ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಮುಲ್ಕಿಯಲ್ಲಿ ಮಂತ್ರ ಸರ್ಫಿಂಗ್ ಕ್ಲಬ್ ಇದೆ. ಇದು ದೇಶದ ಮೊದಲ ಸರ್ಫಿಂಗ್ ಕ್ಲಬ್ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಈ ಕ್ಲಬ್ ಅಂತಾರಾಷ್ಟ್ರೀಯ ಸರ್ಫಿಂಗ್ ಸಮುದಾಯಕ್ಕೆ ಭಾರತವನ್ನು ಪರಿಚಯಿಸಿದೆ. ಇದನ್ನು ಜಾಕ್ ಹಾರ್ಬರ್ ಹಾಗೂ ರಿಕ್ ಪೆರ್ರಿ 2006 ರಲ್ಲಿ ಆರಂಭಿಸಿದರು. ಇವರು ಪೂರ್ವ ಅಮೆರಿಕದ ಸರ್ಫಿಂಗ್ ಕ್ಷೇತ್ರದ ಪ್ರವರ್ತಕರೆನಿಸಿಕೊಂಡಿದ್ದಾರೆ. ಜನರಲ್ಲಿ ಆರೋಗ್ಯ ಮತ್ತು ಸೃಜನಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸರ್ಫಿಂಗ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.[೧]
ದಿನನಿತ್ಯದ ಕಾರ್ಯವೈಖರಿಯೊಂದಿಗೆ ಇವು ಒಂದು ಭಾಗವಾಗಿದ್ದು ಸರ್ಫಿಂಗ್ ಜತೆ ಇಲ್ಲಿ ಧ್ಯಾನ ಹಾಗೂ ಜಪಮಾಲೆಯೊಂದಿಗೆ ಜಪಿಸುವ ಕಾರ್ಯವೂ ಆಗುತ್ತಿದೆ. ಇದರಿಂದಲೇ ಈ ಸರ್ಫಿಂಗ್ ಕ್ಲಬ್ ವಿಭಿನ್ನವಾಗಿ ತನ್ನನ್ನು ಗುರುತಿಸಿಕೊಂಡಿದೆ. ಈ ಕೇಂದ್ರದ ಮುಖ್ಯ ಉದ್ದೇಶ ಆಧ್ಯಾತ್ಮಿಕ ಆರೋಗ್ಯ ಕಾಪಾಡುವುದಾಗಿದೆ. ಸ್ಥಳೀಯ ಹಳ್ಳಿಯ ನಿವಾಸಿಗಳೊಂದಿಗೆ ಸೇರಿಕೊಂಡು ಇಲ್ಲಿ ವಾರ್ಷಿಕ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದಲ್ಲದೇ ಇಲ್ಲಿ ಆಧ್ಯಾತ್ಮಿಕ ಜೀವನ ಹಾಗೂ ಆಧ್ಯಾತ್ಮ ಮಾರ್ಗದಲ್ಲಿ ಜೀವನ ಕ್ರಮ ನಡೆಸುವ ವಿಧಾನವನ್ನು ಹೇಳಿಕೊಡಲಾಗುತ್ತದೆ. ದೇಶದ 15 ಸದಸ್ಯರೊಂದಿಗೆ ಇದರ ಆರಂಭ ಆಗಿದ್ದು, ಕಳೆದ 15 ವರ್ಷದಿಂದ ಇದು ನಿರಂತರವಾಗಿ ಕಾರ್ಯನಿರತವಾಗಿದೆ. ಅಂದಿನಿಂದಲೂ ಇವರು ಉನ್ನತ ಜ್ಞಾನ ಹಾಗೂ ಜೀವನ ಕ್ರಮ ಕಲಿಸಿಕೊಡುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ