ಮಂಟೇಸ್ವಾಮಿ ಮಹಿಮೆ
ಧರೆಗೆ ದೊಡ್ಡವರು ಮಂಟೇಸ್ವಾಮಿಯ ಚರಿತ್ರೆ
ಪರಂಜ್ಯೋತಿ ಮಂಟೇಸ್ವಾಮಿ | |
---|---|
ಚಿತ್ರ:Manteswamy | |
ಗೌರವಗಳು | ಆದಿಗುರು, ಅಲ್ಲಮಪ್ರಭು, ಧರೆಗೆ ದೊಡ್ಡವರು, ಪರಂಜ್ಯೋತಿ, ಮಂಟೇದಲಿಂಗಯ್ಯ, ಕಾಲಜ್ಞಾನ ಸಾರಿದ ಕಂಡಾಯದೊಡೆಯ |
"ಆದಿಗುರು ಅಲ್ಲಮಪ್ರಭು ಧರೆಗೆ ದೊಡ್ಡವರು ಪರಂಜ್ಯೋತಿ ಮಂಟೇದಲಿಂಗಯ್ಯ ಕಾಲಜ್ಞಾನ ಸಾರಿದ ಕಂಡಾಯದೊಡೆಯ".
ಅಲ್ಲಮಪ್ರಭು ಎಂಬಾ ಹೆಸರು ಬರಲು ಕಾರಣ ಆದಿಯಲ್ಲಿ ವಿಶ್ವವು ಅಂದಕರದಲ್ಲಿರುವಾಗ ಪರಂಜ್ಯೋತಿಯ ಸ್ವರೂಪದಲ್ಲಿದ್ದ ಪ್ರಭುವು ನಿರಾಕಾರ ರೂಪ ನಿರಂಜನನಗಿದ್ದ ಅವರಿಗೆ ಅಲ್ಲಮಪ್ರಭು ಎಂದು ಕರೆಯುತ್ತಾರೆ. 'ಅಲ್ಲಮ' ಎಂದರೆ ನಿರಾಕಾರ ರೂಪ ಎಂದರ್ಥ 'ಪ್ರಭು' ಎಂದರೆ ದೇವಾ ಎಂದರ್ಥ 'ಅಲ್ಲಮಪ್ರಭು' ಎಂದರೆ ದೇಹ ಇಲ್ಲದ ದೇವಾ ಎಂದರ್ಥ.
ಆದಿಗುರು ಎಂಬಾ ಹೆಸರು ಬರಲು ಕಾರಣ ತ್ರಿಮೂರ್ತಿಗಳ ಸೃಷ್ಟಿಕರ್ತನಾದ ಪರಂಜ್ಯೋತಿಯು ಅವರಿಗೆ ಮೊದಲ ಗುರುವಾಗಿ ಬಂದಿದ್ದರಿಂದ ಆದಿಗುರು ಅಲ್ಲಪ್ರಭು ಎಂದು ಕರೆಯುತ್ತಾರೆ.
ಪರಂಜ್ಯೋತಿ ಎಂಬ ಹೆಸರು ಬರಲು ಕಾರಣ ಅವರು ಆದಿಯಲ್ಲಿ ಜ್ಯೋತಿ ಸ್ವರೂಪದಲ್ಲಿ ಇದ್ದ ಕಾರಣ ಅವರಿಗೆ ಪರಂಜ್ಯೋತಿ ಎಂದು ಕರೆಯುತ್ತಾರೆ.
ಧರೆಗೆ ದೊಡ್ಡವರು ಎಂಬಾ ಹೆಸರು ಬರಲು ಕಾರಣ ಧರೆಯನ್ನು ಸೃಷ್ಟಿಸಿದ ಕಾರಣ ಅವರಿಗೆ ಧರೆ ತಂದ ಧರ್ಮಗುರು ಪರಂಜ್ಯೋತಿ ಲಿಂಗಯ್ಯನೇ ಎಂದು ಕರೆಯುತ್ತಾರೆ.
ಕಾಲಜ್ಞಾನ ಸಾರಿದ ಕಂಡಾಯದೊಡೆಯ ಎಂಬ ಹೆಸರು ಬರಲು ಕಾರಣ ಕಾಲಜ್ಞಾನವನ್ನು ಸಾರಿ ಮುಂದೆ ಧರೆಯಲ್ಲಿ ಏನೆಲ್ಲಾ ಹಾಗುತ್ತದೆ ಎಂಬುದನ್ನು ಅವರು ಕಾಲಜ್ಞಾನ ಕೃತಿಯಲ್ಲಿ ಹೇಳಿದ್ದಾರೆ ಅದಕ್ಕಾಗಿ ಅವರಿಗೆ ಕಾಲಜ್ಞಾನ ಸಾರಿದ ಕಂಡಾಯದೊಡೆಯ ಎಂದು ಕರೆಯಲಾಗಿದೆ.
ಮಂಟೇದಲಿಂಗಯ್ಯ ಎಂಬ ಹೆಸರು ಬರಲು ಕಾರಣ ಬಳೆ ಮುದ್ದಮ್ಮ ಹಾಲು ಕರೆಯುವ ಸಮಯದಲ್ಲಿ ಪರಂಜ್ಯೋತಿಯು ಬಿಕ್ಷಕ್ಕೆ ಬರುತ್ತಾರೆ ಅವರ ತಂಬೂರಿ ಸ್ವರ ಜಗಟೆಯ ಸ್ವರವ ಕೇಳಿದ ಕಾಮಧೇನು ಬೆದರಿ ಹಾಲು ಕರೆಯುತ್ತಿರುವ ಮುದ್ದಮ್ಮನನ್ನು ಒದೆಯುತ್ತದೆ ಇದರಿಂದ ಕೆಳಗೆ ಬಿದ್ದ ಮುದ್ದಮ್ಮ ಪರಂಜ್ಯೋತಿಯನ್ನು ಮುದ್ದಮ್ಮ ಆಳಾದ ಮಂಟೋಗೋನೆ ನಾನು ಮಂಟೋದ ಹಾಗೆ ನೀನು ಮಂಟೋಗೊ ಎಂದು ಬೈಯುತ್ತಾಳೆ, ಈ ಮಾತು ಕೇಳಿ ಕೋಪಗೊಳ್ಳದೆ ನಗುತ್ತಾ ಪರಂಜ್ಯೋತಿಯು ನನಗೆ ನಾಮಕರಣ ಮಾಡಿದ ಮೊದಲ ಶರಣೆ ತಾಯೇ ನಾನು ಹುಟ್ಟಿದಾಗಿನಿಂದ ನನಗೆ ಯಾರು ಹೆಸರು ಕಟ್ಟಿರಲಿಲ್ಲ ನೀನು ಕರೆದ ಮಂಟೋಗೋನೆ ಎಂಬ ಹೆಸರು ನನಗೆ ಪ್ರಿಯವಾಯಿತಲ್ಲ ಇನ್ನು ಮುಂದೆ ನಾನು ಮನೆ ಮನೆಗೂ ಮಂಟೇದಲಿಂಗಯ್ಯ ನಾಗಿ ಸೂರ್ಯ ಚಂದ್ರ ಇರುವವರೆಗೂ ನೀ ಕರೆದ ಹೆಸರು ಸ್ಥಿರವಾಗಿರಲಿ ಎಂದು ಮುದ್ದಮ್ಮನಿಗೆ ಹರಸಿ ಭಾಗ್ಯವನ್ನು ನೀಡುತ್ತಾರೆ.
ಧರೆಗೆ ದೊಡ್ಡವರು ಮೊದಲು ಕಲ್ಯಾಣ ಪಟ್ಟಣಕ್ಕೆ ಬಂದಾಗ ಅವರ ಹೆಸರು ಧರೆಗೆ ದೊಡ್ಡವರು ಅಲ್ಲಮಪ್ರಭು ಕಂಡಾಯ ದೊಡೆಯ ಎಂಬಾ ಹೆಸರಿನಲ್ಲಿ ಕಾಣಿಸಿಕೊಂಡು ಮುಂದೆ ದಕ್ಷಿಣಕ್ಕೆ ಬಂದಾಗ ಮಂಟೇಸ್ವಾಮಿ ಎಂಬಾ ಹೆಸರನ್ನು ಪಡೆಯುತ್ತಾರೆ. ಈ ಕಾರಣದಿಂದ ಮಂಟೇಸ್ವಾಮಿ ಯಾರು ಎಂಬುದು ಉತ್ತರ ಕರ್ನಾಟಕದ ಜನರಿಗೆ ಅರಿವು ಬಾರದದಂತೆ ಕಾಣಿಸುತ್ತದೆ ಆದರೆ ದಕ್ಷಿಣ ಕರ್ನಾಟಕದ ಜನರಿಗೆ ಅವರು ಎಲ್ಲಿಂದ ಬಂದರು ಎಂಬುದು ತಿಳಿದಿರುವ ಕಾರಣ ಅವರು ಜಾನಪದ ಶೈಲಿಯ ತಂಬೂರಿ ಕಥೆಗಳನ್ನು ನೀಲಗಾರರು ಮಂಟೇಸ್ವಾಮಿ ಸಿದ್ದಪ್ಪಾಜಿ ಚರಿತ್ರೆಯನ್ನು ಹಾಡಿ ಹೊಗಳುತ್ತಾರೆ.
ಧರೆಗೆ ದೊಡ್ಡವರ ಜನನ
ಆದಿಯಲ್ಲಿ ವಿಶ್ವವು ಅಂದಕರಾದಲ್ಲಿರುವಾಗ ದಿವ್ಯವಾದ ಜ್ಯೊತಿಯೊಂದು ಜನಿಸಿ ಅನೇಕ ವರ್ಷಗಳ ಕಾಲ ತಪಸ್ಸನ್ನು ಆಚರಿಸಿ ರೂಪಕ್ಕೆ ಬಂದಿತು ಆ ಜ್ಯೋತಿ ಸ್ವರೂಪದಲ್ಲಿ ಇದ್ದ ಅವರೆ "ಅದಿಗುರು ಪರಂಜ್ಯೋತಿ" ಅವರು ದೃಷ್ಟಿ ಇಟ್ಟು ನೋಡಿ ನಂಗೆ ಯಾರೆಂದರೆ ಯಾರೂ ಇಲ್ಲ ನಾನು ಶಿಸು ಮಕ್ಕಳ ಪಡೆಯಬೇಕು ಎಂದು ತಪಸ್ಸನ್ನು ಆಚರಿಸುತ್ತಿರಲು ಅವರ ಬೆವರ ಹನಿಯಿಂದ ಒಂದು ಹೆಣ್ಣು ಮಗುವೂ ಸೃಷ್ಟಿಯಾಗುತ್ತದೆ. ಅವಳೇ ಆದಿಶಕ್ತಿ
ಮುಂದುವರೆಯುತ್ತದೆ..........