ಮಂಚೆರ್ಜಿ ಜೋಶಿ ಪಾಂಚ್ ಗಾರ್ಡನ್ಸ್, ಮುಂಬಯಿ

ಪಾಂಚ್ ಗಾರ್ಡನ್ಸ್,[] ಅಥವಾ 'ಪಾಂಚ್ ಬಗೀಚ,' (FIVE GARDENS), 'ಮಂಚೆರ್ಜಿ ಜೋಶಿ ಪಾಂಚ್ ಗಾರ್ಡನ್ಸ್' ಎಂದು ಗುರುತಿಸಲಾಗಿರುವ ಮುಂಬಯಿ ಮಹಾನಗರ ಪಾಲಿಕೆಯವರು ಸ್ಥಾಪಿಸಿರುವ, ಸಾರ್ವಜನಿಕ ಉದ್ಯಾನವು, ದಾದರ್ ಬಳಿ ಇದೆ. ಈ ಉದ್ಯಾನವು, ಮುಂಬಯಿನ ಉಪನಗರಗಳಲ್ಲೊಂದಾದ 'ಮಾಟುಂಗಾ'ದ ಹತ್ತಿರವಿರುವ 'ಮಹೇಶ್ವರಿ ಉದ್ಯಾನ 'ದ ಸಮೀಪದಲ್ಲಿದೆ. ೧೯೩೦ ರ ಹೊತ್ತಿಗೇ ದಾದರ್ ನಲ್ಲಿ 'ಹಿಂದೂ ಕಾಲೋನಿ,' ಹಾಗೂ ಅದರ ಎದುರಿಗೆ, 'ಪಾರ್ಸಿ ಕಾಲೋನಿ,' ಗಳನ್ನು ಸ್ಥಾಪಿಸಲಾಯಿತು. ಪಾರ್ಸಿ ಕಾಲೋನಿಯ ಶುರುವಿನಲ್ಲೇ 'ಮಂಚರ್ ಜೀ ಜೋಷಿಯವರಉದ್ಯಾನ,' ವಿದೆ. ವಿಶಾಲವಾದ ರಸ್ತೆಗಳು. ಫುಟ್ಪಾತ್ ಗಳು, ಹಾಗೂ ಕಾಂಪೌಂಡ್ ಗೋಡೆಯಿರುವ ಬಂಗಲೆಗಳು ಈ ಎರಡೂ ಕಾಲೋನಿಗಳ ವಿಶಿಷ್ಠತೆ. ಏಕೆಂದರೆ ನವಿ ಮುಂಬಯಿ ಬಿಟ್ಟರೆ, ಹಳೆಯ ಮುಂಬಯಿಮಹಾನಗರದ ಕೋಟೆ-ಪ್ರದೇಶ ಮತ್ತಿತರ ಪ್ರದೇಶಗಳಲ್ಲಿ ಮಾತ್ರ, ಕಾಂಪೌಂಡ್ ಇರುವ ಮನೆಗಳು, ಮತ್ತು 'ಫುಟ್ಪಾತ್ ಇರುವ ರಸ್ತೆ'ಗಳನ್ನು ಕಾಣಬಹುದು.

ಚಿತ್ರ:P1010023 (1).JPG
'ಪಾಂಚ್ ಗಾರ್ಡನ್ಸ್'

ಸ್ವಯಂಪೂರ್ಣ ಕಾಲೋನಿ

ಬದಲಾಯಿಸಿ

ಮುಂಬಯಿ ಮಹಾನಗರದಲ್ಲಿ ನಿರ್ಮಿಸಿರುವ ಹಲವಾರು ಪಾರ್ಸಿ ಕಾಲೋನಿಗಳ ತರಹ, ದಾದರ್ ಪಾರ್ಸಿ ಕಾಲೋನಿಯನ್ನು ಕಟ್ಟುವ ಸಮಯದಲ್ಲಿ ಬಹಳ ಜಾಗರೂಕತೆಯಿಂದ ಹಲವಾರು ಮೂಲಭೂತ ಸಂಗತಿಗಳಿಗೆ ಅತ್ಯಂತ ಮಹತ್ವವನ್ನು ಕೊಡಲಾಗಿದೆ. ಸುಪ್ರಸಿದ್ಧ ೫ ಗಾರ್ಡನ್ಸ್ ಗಳಿಂದ ಸುತ್ತುವರೆದ ಮಂಚೆರ್ಜಿ ಜೋಶಿ ಪಾಂಚ್ ಗಾರ್ಡನ್ಸ್ ನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದರ ಜೊತೆಗೆ, 'ದಾದರ್ ಯೂತ್ ಅಸೆಂಬ್ಲಿ ಹೈಸ್ಕೂಲ್', 'ಹೆಣ್ಣುಹುಡುಗಿಯರ ಶಾಲೆ', 'ಕಾಲೋನಿ ಲೈಬ್ರೆರಿ', ಕಾಲೋನಿಯ ಒಳ ಭಾಗದ 'ಚಿಕ್ಕ ಉದ್ಯಾನ', 'ಪಾಲಂಕೋಟ್ ಮದುವೆ ಕಾರ್ಯಾಲಯ', 'ಸುಪ್ರಸಿದ್ಧ ಪಾರ್ಸಿ ಜಂಖಾನ', ಮೊದಲಾದ ಸಂಘಟನೆಗಳು ನಗರದ ಇತರೆ ಕಾಲೋನಿಗಳಿಗೆ ಮಾದರಿಯಾಗಿವೆ.

ಪಾರ್ಸಿ ಗಾರ್ಡನ್ಸ್ ಹತ್ತಿರ

ಬದಲಾಯಿಸಿ

'ಪಾರ್ಸಿಗಾರ್ಡನ್' ನ ಸಮೀಪದಲ್ಲಿ ವಾಸಿಸುತ್ತಿದ್ದ ಹೆಸರಾಂತ ವ್ಯಕ್ತಿಗಳು, ಹಾಗೂ ಪ್ರಮುಖ ಸಂಸ್ಥೆಗಳ ವಿವರಗಳು ಹೀಗಿವೆ :

ಚಿತ್ರ:P1010026.JPG
'ಈ ಪಾರ್ಕ ನ, ಒಳಭಾಗದಲ್ಲಿ 'ಎಲೆಕ್ಟ್ರಿಕ್ ಟ್ರಾನ್ಸ್ ಫಾರ್ಮಾರ್' ನ್ನು ಸ್ಥಾಪಿಸಲಾಗಿದೆ'

ಉಲ್ಲೇಖಗಳು

ಬದಲಾಯಿಸಿ
  1. Dadar Parsi Colony Five Gardens, Attraction in Mumbai