ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ
ಮಂಗಳೂರಿನ ರೈಲ್ವೆ ನಿಲ್ದಾಣ
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ(ನಿಲ್ದಾಣ ಕೋಡ್: MAQ) ಮಂಗಳೂರು ನಗರದ ಪ್ರಮುಖ ರೈಲ್ವೇ ಟರ್ಮಿನಸ್ ಆಗಿದೆ. ಇದು ಕರ್ನಾಟಕ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ | |
---|---|
ಭಾರತೀಯ ರೈಲ್ವೆ ನಿಲ್ದಾಣ | |
ಸ್ಥಳ | ಭಾರತ |
ಎತ್ತರ | 28 metres (92 ft) |
ಒಡೆತನದ | ಭಾರತೀಯ ರೈಲ್ವೆ |
ನಿರ್ವಹಿಸುತ್ತದು | ನೈಋತ್ಯ ರೈಲ್ವೆ |
ವೇದಿಕೆ | ೪ |
Construction | |
ಪಾರ್ಕಿಂಗ್ | ಇದೆ |
Other information | |
ಸ್ಥಿತಿ | ಚಾಲ್ತಿಯಲ್ಲಿದೆ |
ನಿಲ್ದಾಣದ ಸಂಕೇತ | MAQ |
ವಿದ್ಯುನ್ಮಾನ | ಹೌದು |
ಇತಿಹಾಸ
ಬದಲಾಯಿಸಿಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ 1907 ರಲ್ಲಿ ನಿರ್ಮಾಣವಾಯಿತು. 1929-1930ರ ಅವಧಿಯಲ್ಲಿ ಅವಿಭಜಿತ ಭಾರತದ ಅತಿ ದೂರ ಪ್ರಯಾಣ ಮಾಡುವ ಪ್ರಯಾಣಿಕ ರೈಲು ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭವಾಗುತ್ತಿತ್ತು, ಇದಕ್ಕೆ ಗ್ರ್ಯಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ಎಂದು ಹೆಸರಿತ್ತು. ಇದು ಮಂಗಳೂರು ಮತ್ತು ಪೇಶಾವರದ ನಡುವೆ ಚಲಿಸುತ್ತಿತ್ತು.
ರೈಲು ಸಂಪರ್ಕಗಳು
ಬದಲಾಯಿಸಿಮಂಗಳೂರು ಸೆಂಟ್ರಲ್ಗೆ ಭಾರತದ ಪ್ರಮುಖ ರಾಜ್ಯ ರಾಜಧಾನಿಗಳಾದ ಚೆನ್ನೈ, ಬೆಂಗಳೂರು, ಹೈದರಾಬಾದ್, ತಿರುವನಂತಪುರಂ, ಮುಂಬೈ, ಥಾಣೆ, ದೆಹಲಿ, ಅಜ್ಮೀರ್, ಅಹಮದಾಬಾದ್ ಸಂಪರ್ಕವಿದೆ.