ಮಂಗಳೂರು ಕನ್ನಡ
ಮಂಗಳೂರು ಕನ್ನಡವು ಕರ್ನಾಟಕದ ಮೂರು ಪ್ರಾದೇಶಿಕ ಪ್ರಭೇದಗಳಲ್ಲಿ ಒಂದಾಗಿದೆ, ಇದು ಭಾರತದ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿದೆ. ಇದನ್ನು "ಕರಾವಳಿ ಉಪಭಾಷೆ" ಎಂದು ಸಹ ಕರೆಯಲಾಗುತ್ತದೆ. ಕನ್ನಡದ ಇತರ ಪ್ರಾದೇಶಿಕ ವಿಧಗಳು ಬೆಂಗಳೂರು / ಮೈಸೂರು ಕನ್ನಡ ಮತ್ತು ಧಾರವಾಡ ಕನ್ನಡ (ಉತ್ತರ ಉಪಭಾಷೆ). ಮಂಗಳೂರಿನ ಕನ್ನಡವು ಪ್ರಾಥಮಿಕ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಐತಿಹಾಸಿಕ ಮತ್ತು ಪೌರಾಣಿಕ ಕನ್ನಡ ಚಲನಚಿತ್ರಗಳು ಮತ್ತು ನಾಟಕಗಳು ಮಂಗಳೂರು ಕನ್ನಡವನ್ನು ಬಳಸುತ್ತವೆ. ಇದು ಕೇಳುಗರಿಗೆ ಬಹಳ ಔಪಚಾರಿಕ ಮತ್ತು ಗೌರವಾನ್ವಿತವಾದದ್ದು. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅಂದರೆ ಹೆಚ್ಚು ಶಿಷ್ಟ / ಗ್ರಾಂಥಿಕ. ಮಂಗಳೂರು ಕಡೆಯವರ ಮನೆಯ ಭಾಷೆ ಕನ್ನಡವಲ್ಲ - ಅದು ತುಳು ಅಥವಾ ಕೊಂಕಣಿ. ಹಾಗಾಗಿ ಆ ಕನ್ನಡ ’ಕನ್ನಡಿಗರಲ್ಲದವರು” ಮಾತಾಡುವ ಕನ್ನಡ- ಅದಕ್ಕೇ ಅದು ಬರಹದ ಕನ್ನಡಕ್ಕೆ ಹತ್ತಿರವಾಗಿದೆ. ಮಂಗಳೂರು ಕನ್ನಡದಲ್ಲಿ ಬೇರೆಡೆ ಕಾಣಸಿಗದ ಕೆಲವು ವಿಶಿಷ್ಟ ಪ್ರಯೋಗಗಳು ಇವೆ.[೧]
ಪದಗಳು
ಬದಲಾಯಿಸಿ- ಅವನು ಇವತ್ತು ನಮ್ಮ ಮನೆಯಲ್ಲಿ ನಿಲ್ಲುತ್ತಾನೆ. (ಇರುತ್ತಾನೆ ಎಂಬರ್ಥದಲ್ಲಿ)
- ಬೇಗ ಮಂಗಳೂರಿಗೆ ಎತ್ತಬೇಕು.(ತಲುಪಬೇಕು)
- ಮಗು ತುಂಬಾ ಕೂಗುತ್ತಿದೆ (ಅಳುತ್ತಿದೆ)
- ನಿಮ್ಮದು ಟೀ ಆಯ್ತಾ? (ಸಾಮಾನ್ಯವಾಗಿ ಬೆಳಗಿನ ತಿಂಡಿ)
- ಟೈಮ್ ೧೦ ಗಂಟೆ ಆಯ್ತು. ಇವತ್ತು ಕ್ಲಾಸ್ ಇತ್ತಾ? (ಇದೆಯಾ?)[೨]
ಉಲ್ಲೇಖಗಳು
ಬದಲಾಯಿಸಿ- ↑ Concise Encyclopedia of Languages of the World, by Keith Brown, Sarah Ogilvie, page 577
- ↑ "ಆರ್ಕೈವ್ ನಕಲು". Archived from the original on 2009-11-07. Retrieved 2018-11-24.