ಮಂಗಳಾ ಗೌರಿ ಶಕ್ತಿಪೀಠ್, ಗಯಾ, ಬಿಹಾರ್

ಭಾರತದೇಶದ ಬಿಹಾರ ರಾಜ್ಯದ ಗಯಾದಲ್ಲಿರುವ ಶಕ್ತಿಪೀಠದ ಹೆಸರು ಮಂಗಳಾ ಗೌರಿ, ೫೨ ಶಕ್ತಿಪೀಠಗಳಲ್ಲಿ ಇದೂ ಒಂದು. 'ಪದ್ಮಪುರಾಣ', 'ವಾಯುಪುರಾಣ' ಮತ್ತು 'ಅಗ್ನಿಪುರಾಣ', ತಂತ್ರ ಚೂಡಾಮಣಿ ಗ್ರಂಥಗಳಲ್ಲಿ ಈ ಪೀಠದ ಉಲ್ಲೇಖವಾಗಿದೆ. ೧೫ ನೆಯ ಶತಮಾನದಲ್ಲಿ ಸ್ತಾಪಿತವಾದ ಈ ದೇವಾಲಯ ಶಕ್ತಿಯ ಅಧಿದೇವತೆಯ ಆರಾಧನೆಗೆ ಮೀಸಲಾಗಿದೆ. 'ವೈಷ್ಣವಧರ್ಮದ ಶ್ರದ್ಧಾಳು'ಗಳಿಗೆ 'ಗಯಾ'ದ ಈ ಶಕ್ತಿಪೀಠ ಸಮರ್ಪಿತವಾಗಿದೆ. ಇಲ್ಲಿ ಸತಿದೇವಿಯ ಶರೀರದ ಹೃದಯ ಭಾಗ ಬಿದ್ದಿದೆ. ಈ ಜಾಗವನ್ನು 'ಉಪಶಕ್ತಿಪೀಠ'ವೆಂದೂ ಕರೆಯುತ್ತಾರೆ. ಭಕ್ತರ ಇಷ್ಠಾರ್ಥಗಳು ಈಡೇರುತ್ತವೆಯೆಂಬ ನಂಬಿಕಯಿಂದಾಗಿ ಈ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ದೇವಸ್ಥಾನದ ಮುಖದ್ವಾರ ಪೂರ್ವಭಿಮುಖಕ್ಕಿದೆ. ಇದು ಅಲ್ಲಿನ 'ಮಂಗಳಗೌರಿ ಬೆಟ್ಟ'ದಮೇಲೆ ನಿರ್ಮಿಸಲ್ಪಟ್ಟಿರುವ ಪುರಾತನ ದೇವಸ್ಥಾನ. ನಮಗೆ ಕಾಣುವುದು ಒಂದು ಸಭಾಗೃಹ, ಮಂಟಪ, ಹಾಗೂ ಅಗ್ನಿಕುಂಡ. ಇಲ್ಲಿ ಹೋಮ ಮೊದಲಾದ ದೈವ ಕಾರ್ಯಗಳು ನಡೆಯುತ್ತಿರುತ್ತವೆ, 'ಶಿವ' ಮತ್ತು 'ಮಹಿಶಾಸುರ ಮರ್ದಿನಿ ವಿಗ್ರಹಗಳಿವೆ. 'ದೇವಾಲಯದ ಪ್ರಾಂಗಣದಲ್ಲಿ, ದಕ್ಷಿಣ ಕಾಳಿಮಾತಾ', 'ಗಣೇಶ್', 'ಹನುಮಾನ್', ಮತ್ತು 'ಶಿವನ ಮೂರ್ತಿ'ಗಳಿವೆ.

'ಮಂಗಳಾ ಗೌರಿ ಶಕ್ತಿಪೀಠ, ಗಯಾ, ಬಿಹಾರ್'

ಗಯಾದಲ್ಲಿರುವ ಕೆಲವು ಪ್ರಮುಖ ದೇವಸ್ಥಾನಗಳು ಬದಲಾಯಿಸಿ

  • ವಿಷ್ಣುಪಾದ
  • ದಕ್ಷಿಣಾರ್ಕ
  • ಪ್ರಪಿತಾ ಮಹೇಶ್ವರ್

ಗಯಾದಲ್ಲಿರುವ ಇನ್ನಿತರ ಶಕ್ತಿದೇವತೆಗಳು ಬದಲಾಯಿಸಿ

ಫಲ್ಗು ಚಂಡಿ, ಸ್ಮಶಾನಾಕ್ಷಿ, ಮುಂಡಪ್ರಿಷ್ಟ, ಕಾಮಾಕ್ಷ್ಟ ಈ ಕ್ಷೇತ್ರವು ತಾಂತ್ರಿಕ ಶಕ್ತಿಯ ಅಧಿದೇವತೆಗಳ ಸ್ಥಾನವಾದುದರಿಂದ ಪ್ರಾಣಿ ಬಲಿಯನ್ನು ಕೊಡುವ ಪ್ರತೀತಿಯಿದೆ.

ಸಂಪರ್ಕಿಸಿ :