ಭೋಗಾಯನಕೆರೆಯು ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಸುಬ್ರಹ್ಮಣ್ಯದಿಂದ ೧೨ ಕಿಲೋಮೀಟರ್ ದೂರದಲ್ಲಿ ಬರುವ ಬಳ್ಪ ಎಂಬಲ್ಲಿ ಕಾಣಸಿಗುತ್ತದೆ.ಇದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇರುವಂತಹ ಹಲವಾರು ಕೆರೆಗಳಲ್ಲಿ ಇದೂ ಒಂದಾಗಿದೆ.ಅಂದಾಜು ೧.೪೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.[]


ಇತಿಹಾಸ

ಬದಲಾಯಿಸಿ

ತುಳುನಾಡಿನ ರಾಜ ಮನೆತನಗಳ ಗತವೈಭವದಲ್ಲಿ ಮೆರೆದ ಅಳುಪ, ಆಳರಸರು 1,200 ವರ್ಷಕ್ಕೂ ಹೆಚ್ಚು ಕಾಲ ಆಳಿದ ಬಳ್ಪ ಗ್ರಾಮದಲ್ಲಿದೆ ಈ ಕೆರೆ. ಪಾಂಡವರ ಕಾಲದಲ್ಲಿ ಈ ಕೆರೆ ಇತ್ತಂತೆ. ವಿಜಯನಗರ ರಾಜರಸುಗಳ ಪೈಕಿ ಭೋಜರಾಜ ಎನ್ನುವವರು ಈ ಕೆರೆ ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.[]

ವ್ಯಾಪ್ತಿ

ಬದಲಾಯಿಸಿ

ತನ್ನ ಸುತ್ತಮುತ್ತಲಿನ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುವ ಈ ಕೆರೆಯು ಸುಮಾರು ೧.೪೦ಎಕರೆ ಪ್ರದೇಶದಲ್ಲಿ ಹರಡಿಕೊಂಡು ಅಂದಾಜು ೨೫ ಅಡಿ ಅಳವನ್ನು ಒಳಗೊಂಡು ಇoದಿಗೂ ಸುತ್ತಮುತ್ತಲಿನ ಹಲವಾರು ಕುಟುಂಬಗಳಿಗೆ ನೀರನ್ನು ಒದಗಿಸುತ್ತದೆ.

ಪ್ರವಾಸಿತಾಣ

ಬದಲಾಯಿಸಿ

ಈ ಕೆರೆಯು ರಾಜ್ಯಹೆದ್ದಾರಿಯ ಬದಿಯಲ್ಲೇ ಕಾಣಸಿಗುವುದರಿಂದ ಪ್ರವಾಸಿಗರು ಪರಿಗಣಿಸಬಹುದಾಗಿದೆ. ಕೆರೆಯು ಹಲವಾರು ಜಲಚರಗಳಿಗೆ ವಾಸಸ್ಥಾನವಾಗಿದ್ದು ಹಾಗೂ ನಯನಮನೋಹರವಾದ ತಾವರೆಗಳು ಕಂಗೊಳಿಸುತ್ತವೆ ಮತ್ತು ಇದರ ಪಕ್ಕದಲ್ಲಿಯೇ ಶ್ರೀ ವಿಷ್ಣುಮೂರ್ತಿ ದೈವದ ಸ್ಥಾನವು ಇರುವುದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ.[]

ಉಲ್ಲೇಖಗಳು

ಬದಲಾಯಿಸಿ