ಭೀಮೇಶ್ವರ
ಭೀಮೇಶ್ವರ
ಭೀಮೇಶ್ವರ ಪಾಂಡವರ ಅಜ್ಞಾತ ವಾಸದ ಕಾಲದಲ್ಲಿ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನ
ಭೀಮೇಶ್ವರ, ಸಾಗರ ತಾಲ್ಲೂಕಿನ ಈ ಪುಟ್ಟ ಗ್ರಾಮವು ಸಾಗರ-ಕೋಗಾರ್-ಭಟ್ಕಳ ಮಾರ್ಗದಲ್ಲಿ ಸಿಗುತ್ತದೆ. ಸಾಗರ ನಗರದಿಂದ ೬೨ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಭೀಮೇಶ್ವರನ ಲಿಂಗ ಕಾಣಬಹುದು. ದೇವಸ್ಥಾನದ ಪಕ್ಕದಲ್ಲೇ ೫೦ ಅಡಿ ಎತ್ತರಿಂದ ಧುಮುಕುವ ಒಂದು ಜಲಪಾತವಿದೆ.
ಸ್ಥಳ ಪುರಾಣ
ಬದಲಾಯಿಸಿಈ ದೇವಸ್ಥಾನದ ಇತಿಹಾಸವು ಪುರಾಣದ ಜೊತೆಗೆ ತಳಕು ಹಾಕಿಕೊಂಡಿದ್ದು, ಅದರ ಪ್ರಕಾರ ಈ ದೇವಸ್ಥಾನವನ್ನು ಪಾಂಡವರು ಅಜ್ಞಾತವಾಸದಲ್ಲಿ ಇರುವಾಗ ಕಾಶಿಯಿಂದ ಭೀಮನು ತಂದ ಲಿಂಗವನ್ನು ಇಲ್ಲಿ ಸ್ಥಾಪಿಸಿದರು. ಆ ಲಿಂಗಕ್ಕೆ ಅಭಿಷೇಕ ಮಾಡಲು ನೀರು ಬೇಕಾದಾಗ ಅರ್ಜುನ ಬಾಣ ಹೂಡಿ ಜಲಧಾರೆಯನ್ನು ಚಿಮ್ಮಿಸುತ್ತಾನೆ, ಅದೇ ಈಗ ಅಲ್ಲಿ ಧುಮುಕುವ ಸರಳ ಹೊಳೆ. ಕಾಲಕ್ರಮೇಣ ಆ ಪ್ರದೇಶವನ್ನಾಳಿದ ಪಾಳೇಗಾರರು, ನಂತರ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧಿಯಾಗಿದ್ದ ಗೇರುಸೊಪ್ಪದ ಚನ್ನಭೈರಾದೇವಿಯು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿರುವ ಕುರುಹುಗಳಿವೆ[೧].
ಆಚರಣೆಗಳು
ಬದಲಾಯಿಸಿಪ್ರತಿದಿನವೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ[೨].
ಪ್ರಕೃತಿ ಸೌಂದರ್ಯ
ಬದಲಾಯಿಸಿಈ ದೇವಸ್ಥಾನವು ಪಶ್ಚಿಮ ಘಟ್ಟದ ದಟ್ಟಾರಣ್ಯದ ಮದ್ಯೆ ಇರುವುದರಿಂದ ನೈಸರ್ಗಿಕವಾಗಿ ಹರಿಸಿನಿಂದ ಕೂಡಿದೆ. ವಿವಿಧ ರೀತಿಯ ಕಾಡಿನ ಗಿಡ ಮರಗಳು, ಹಲವಾರು ರೀತಿಯ ಚಿಟ್ಟೆಗಳು, ಬಗೆಬಗೆಯ ಪಕ್ಷಿಗಳು, ಮಂಗ ಮತ್ತು ಸಿಗಂಳಿಕಗಳು ಕಾಣಸಿಗುತ್ತವೆ.
ಸಾರಿಗೆ ವ್ಯವಸ್ಥೆ ಮತ್ತು ಮಾರ್ಗ
ಬದಲಾಯಿಸಿಸಾಗರದಿಂದ ಭಟ್ಕಳಕ್ಕೆ, ಕೋಗಾರು ಮಾರ್ಗದಲ್ಲಿ ಹೋಗುವ ಎಲ್ಲ ಬಸ್ಗಳಿಗೂ ಭೀಮೇಶ್ವರ ಕ್ರಾಸ್ ನಲ್ಲಿ ನಿಲುಗಡೆ ಇದೆ ಅಲ್ಲಿಂದ ೨ ಕಿಲೋಮೀಟರ್ ನಡೆದು ಕೊಂಡು ಹೋಗಬೇಕು. ಸ್ವಂತ ವಾಹನವಾದರೆ ದೇವಸ್ಥಾನದ ಹತ್ತಿರದವರೆಗು ಹೋಗಬಹುದು. ಆದರೆ ರಸ್ತೆ ದುರ್ಗಮವಾಗಿದ್ದು ಜಾಗೃತೆ ಅವಶ್ಯಕವಾಗಿದೆ.
ಮಾರ್ಗ:
ಬದಲಾಯಿಸಿವಸತಿ ಮತ್ತು ಊಟ
ಬದಲಾಯಿಸಿಭೀಮೇಶ್ವರದಲ್ಲಿ ಯಾತ್ರಿಕರಿಗೆ ವಸತಿ ವ್ಯವಸ್ಥೆ ಇಲ್ಲ. ಸಾಗರ, ಜೋಗ ಅಥವಾ ಭಟ್ಕಳದಲ್ಲಿ ಉಳಿದುಕೊಂಡು ಇಲ್ಲಿಗೆ ಭೇಟಿ ನೀಡಬೇಕು. ಅಲ್ಲಿ ಯಾತ್ರಿಕರಿಗೆ ಊಟೋಪಚಾರದ ವ್ಯವಸ್ಥೆ ಮಾತ್ರ ಲಭ್ಯವಿದೆ.