ಭೀಮಾಜಿ ಜೀವಾಜಿ ಹುಲಕವಿ

ಭೀಮಾಜಿ ಜೀವಾಜಿ ಹುಲಕವಿ ಇವರು ೧೮೯೫ರಲ್ಲಿ ಜನಿಸಿದರು. ಇವರು ಶಾಲಾ ಶಿಕ್ಷಕರಾಗಿದ್ದರು. ‘ವಾಗ್ಭೂಷಣ’ ಪತ್ರಿಕೆಯಲ್ಲಿ ಇವರ ಕೃತಿಗಳು ಧಾರಾವಾಹಿಯಾಗಿ ಪ್ರಕಟಗೊಂಡವು. ಇವರು ‘ಶಾರದೆಯ ಮುತ್ತಿನ ಸರ’ ಗ್ರಂಥಮಾಲೆಯ ಸಂಚಾಲಕರಾಗಿದ್ದರು.


ಇವರ ಕೆಲವು ಕೃತಿಗಳು:

  • ಪದ್ಮಾವತಿ ಪ್ರೇಮಮಂದಿರ
  • ಶ್ರೇಯಃ ಸಾಧನ
  • ಪತಿತ ಪರಿವರ್ತನ
  • ಶುದ್ಧಿ ಸಂಘಟನೆ
  • ಹತಭಾಗಿನಿಯಾದ ವಿಮಲೆ
  • ಶ್ರೀ ವಿದ್ಯಾರಣ್ಯ ಸ್ವಾಮಿಗಳು
  • ಕರ್ನಾಟಕ ಸ್ವಪ್ನ ವಾಸವದತ್ತೆ
  • ಅತ್ತೆ ಮನೆ ಕಾಟ ಅಥವಾ ಸುಶೀಲಾ ವಸಂತರ ದುರ್ದೈವ
  • ದುಷ್ಕರ್ಮ ಪರಿಪಾಕ ಅಥವಾ ಉನ್ಮಾದಿನಿಯಾದ ಮೋಹಿನಿ
  • ದೇವನಂದಿನಿ
  • ನನ್ನ ಕನಸು
  • ನರಗುಂದ ಬಂಡಾಯ


ಭೀಮಾಜಿ ಜೀವಾಜಿ ಹುಲಕವಿ ಇವರು ೧೯೫೯ರಲ್ಲಿ ನಿಧನರಾದರು.