ಭಿತ್ತಿಪತ್ರ
ಭಿತ್ತಿಪತ್ರವು ಸಾಮೂಹಿಕ ಬಳೆಕೆಗಾಗಿ ಒಂದು ಸಾರ್ವಜನಿಕ ಸ್ಥಳದಲ್ಲಿ ಇರಿಸಲಾದ ಒಂದು ಕಲ್ಪನೆ, ಉತ್ಪನ್ನ ಅಥವಾ ಕಾರ್ಯಕ್ರಮದ ತಾತ್ಕಾಲಿಕ ಪ್ರಚಾರ.[೧] ಸಾಮಾನ್ಯವಾಗಿ, ಭಿತ್ತಿಪತ್ರಗಳು ಪಠ್ಯ ಮತ್ತು ಚಿತ್ರಾತ್ಮಕ ಎರಡೂ ಅಂಶಗಳನ್ನು ಒಳಗೊಳ್ಳುತ್ತವೆ. ಆದರೆ ಒಂದು ಭಿತ್ತಿಪತ್ರವು ಸಂಪೂರ್ಣವಾಗಿ ಚಿತ್ರಾತ್ಮಕವಾಗಿರಬಹುದು ಅಥವಾ ಸಂಪೂರ್ಣವಾಗಿ ಪಠ್ಯದಿಂದ ಕೂಡಿರಬಹುದು. ಭಿತ್ತಿಪತ್ರಗಳು ಆಕರ್ಷಕ ಮತ್ತು ಮಾಹಿತಿಯುಳ್ಳದ್ದು ಎರಡೂ ಆಗಿರುವಂತೆ ವಿನ್ಯಾಸಗೊಂಡಿರುತ್ತವೆ. ಭಿತ್ತಿಪತ್ರಗಳನ್ನು ಅನೇಕ ಉದ್ದೇಶಗಳಿಗೆ ಬಳಸಬಹುದು. ಅವು ಒಂದು ಸಂದೇಶವನ್ನು ಹೇಳಲು ಪ್ರಯತ್ನಿಸುತ್ತಿರುವ ಜಾಹೀರಾತುಗಾರರು (ವಿಶೇಷವಾಗಿ ಕಾರ್ಯಕ್ರಮಗಳು, ಸಂಗೀತಗಾರರು ಹಾಗೂ ಚಲನಚಿತ್ರಗಳ ಜಾಹೀರಾತುಗಳು), ಪ್ರಚಾರಕರು, ಪ್ರತಿಭಟನಕಾರರು ಮತ್ತು ಇತರ ಗುಂಪುಗಳ ಆಗಾಗ್ಗಿನ ಸಾಧನಗಳಾಗಿರುತ್ತವೆ. ಭಿತ್ತಿಪತ್ರಗಳನ್ನು ಕಲಾಕೃತಿಗಳು, ವಿಶೇಷವಾಗಿ ಪ್ರಸಿದ್ಧ ಕೃತಿಗಳ ನಕಲುಗಳಿಗೆ ಕೂಡ ಬಳಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಮೂಲಕೃತಿಗೆ ಹೋಲಿಸಿದರೆ ಕಡಿಮೆವೆಚ್ಚದ್ದಾಗಿರುತ್ತವೆ. ಆದರೆ, ನಮಗೆ ತಿಳಿದಿರುವ ಆಧುನಿಕ ಭಿತ್ತಿಪತ್ರವು ೧೮೪೦ ಮತ್ತು ೧೮೫೦ರ ದಶಕದಷ್ಟು ಹಿಂದಿನ ಕಾಲದ್ದಾಗಿದೆ. ಆಗ ಮುದ್ರಣ ಉದ್ಯಮವು ವರ್ಣ ಶಿಲಾಮುದ್ರಣಕಲೆಯನ್ನು ಉತ್ತಮಗೊಳಿಸಿ ಸಾಮೂಹಿಕ ಉತ್ಪಾದನೆಯನ್ನು ಸಾಧ್ಯವಾಗಿಸಿತು.[೨]
ಉಲ್ಲೇಖಗಳು
ಬದಲಾಯಿಸಿ- ↑ Lippert, Angelina (18 August 2017). "What is a poster?". article. Poster House. Archived from the original on 18 ಜುಲೈ 2019. Retrieved 18 July 2019.
- ↑ Stephen Eskilson, Graphic Design: A New History, Yale University Press, 2012, pp. 43-7.