ಭಾವಚಿತ್ರ (ಚಲನಚಿತ್ರ)
ಭಾವಚಿತ್ರ - ಇದು ೧೮- ಫೆಬ್ರುವರಿ -೨೦೨೨ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಒಂದು ಟೆಕ್ನೋಥ್ರಿಲ್ಲರ್ ಆಗಿದೆ ಎಂದು ಹೇಳಲಾಗಿದೆ. [೧] ಇದರಲ್ಲಿ ಚಕ್ರವರ್ತಿ ನಾಯಕನಾಗಿಯೂ ಟಿವಿ ಕಲಾವಿದೆ ಗಾನವಿ ಲಕ್ಷ್ಮಣ್ ನಾಯಕಿಯಾಗಿಯೂ ಅಭಿನಯಿಸಿದ್ದಾರೆ. ಇತರ ಪಾತ್ರಗಳಲ್ಲಿ ಅವಿನಾಶ್ , ಕಾರ್ತಿಕ ಸುಂದರಂ ಹಾಗೂ ಗಿರೀಶ್ ಬಿಜ್ಜಳ ಇದ್ದಾರೆ. ಬಿ.ಗಿರೀಶ್ ಕುಮಾರ್ ಅವರ ಕಥೆ ಹಾಗೂ ನಿರ್ದೇಶನ ಇದೆ. ಚಿತ್ರಕಥೆಗೆ ಗಿರೀಶ್ ಬಿಜ್ಜಳ ಕೈಜೋಡಿಸಿದ್ದಾರೆ. ವುಡ್ ಕ್ರೀಪರ್ಸ್ ಲಾಂಛನದಡಿ ವಿನಾಯಕ ನಾಡಕರ್ಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಿವು ಬೇರಗಿ ಮತ್ತು ವಿಶ್ವಜಿತ್ ರಾವ್ ಅವರು ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಅವರ ಸಂಗೀತವಿದೆ. ಛಾಯಾಗ್ರಹಣ ಅಜೇಯಕುಮಾರ್ ಅವರದು, ಸಂಕಲನ ರತೀಶ್ ಕುಮಾರ್ ಅವರದು[೨].
ಉಲ್ಲೇಖಗಳು
ಬದಲಾಯಿಸಿ