ಭಾರಶಿವ ರಾಜವಂಶ
ಭಾರಶಿವ ರಾಜವಂಶ (ಸು. ಕ್ರಿ.ಶ. 170–350) ಗುಪ್ತ ಪೂರ್ವ ಕಾಲದ ಅತ್ಯಂತ ಪ್ರಬಲ ರಾಜವಂಶವಾಗಿತ್ತು. ವೀರಸೇನನ ನೇತೃತ್ವದಲ್ಲಿ ವಿದೀಶಾದ ನಾಗರು ಮಥುರಾಕ್ಕೆ ಸ್ಥಳಾಂತರಗೊಂಡು ಇತರ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಅವರು ಪದ್ಮಾವತಿ ಪವಾಯಾ, ಕಾಂತಿಪುರಿ ಮತ್ತು ವಿದೀಶಾವನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡು, ಈ ರಾಜ್ಯಗಳ ಅರಸರಾಗಿ ತಮ್ಮ ಕುಟುಂಬ ಸದಸ್ಯರನ್ನು ಇರಿಸಿದರು. ಒಬ್ಬ ವಿದ್ವಾಂಸನ ಪ್ರಕಾರ ಮಥುರಾದ ನಾಗರು ಭಾರಶಿವದ ರಾಜವಂಶದ ಅಧಿಪತಿಗಳಾಗಿದ್ದರು.[೧]
ಮಥುರಾದ ನಾಗರು
ಬದಲಾಯಿಸಿಕುಷಾಣರ ಪತನದ ಕಾರಣ, ರಾಜ ವೀರಸೇನನ ನೇತೃತ್ವದಲ್ಲಿ ಮಥುರಾದ ನಾಗರು ಸ್ವಾತಂತ್ರ್ಯ ಪಡೆದು ಭಾರಶಿವ ರಾಜವಂಶವನ್ನು ಸ್ಥಾಪಿಸಿದರು. ಭಾರಶಿವ ಪ್ರಾಂತ್ಯಗಳು ಮಾಲ್ವಾದಿಂದ ಪೂರ್ವ ಪಂಜಾಬ್‍ವರೆಗೆ ವಿಸ್ತರಿಸಿದ್ದವು, ಮತ್ತು ಮಥುರಾ, ಕಾಂತಿಪುರಿ ಹಾಗೂ ಪದ್ಮಾವತಿಗಳಲ್ಲಿ ಮೂರು ರಾಜಧಾನಿಗಳನ್ನು ಹೊಂದಿದ್ದವು.[೨]
ವೀರಸೇನ ನಾಗನ ನಂತರ, ಪದ್ಮಾವತಿಯ ಕುಟುಂಬ ಅವನ ಉತ್ತರಾಧಿಕಾರಿಯಾಗಿ ಸ್ವಲ್ಪಕಾಲ ಇಡೀ ಭಾರಶಿವ ಸಾಮ್ರಾಜ್ಯವನ್ನು ಆಳಿದರು, ನಂತರ ಅದನ್ನು ಮೂರು ಭಾಗಗಳಾಗಿ ವಿಭಜಿಸಲಾಯಿತು.[೩]