ಭಾರತ ಉಪಖಂಡ ಮತ್ತು ಮಹಾ ಹಿಮಾಲಯಾದ ತ್ರಿಕೋನಮಿತಿ ಭೂ-ಮಾಪನ
ಪೀಠಿಕೆ
ಬದಲಾಯಿಸಿಭಾರತದ ಉಪಖಂಡದ ಮತ್ತು ಮಹಾಪರ್ವತ ಶ್ರೇಣಿ ಹಿಮಾಲಯಾದ ತ್ರಿಕೋನಮಿತಿ ಭೂ-ಮಾಪನವು ಹತ್ತೊಂಭತ್ತನೇ ಶತಮಾನದ ಒಂದು ದೊಡ್ಡ ಸಾಹಸ. ಅಸಮ ಸಾಹಸವಾದ ಈ ಕಾರ್ಯ ಮೊದಲು ಈಸ್ಟ್ ಇಂಡಿಯಾ ಕಂಪನಿಯಿಂದಲೂ ನಂತರ ಬ್ರಿಟಿಷ್ ಇಂಪೀರಿಯಲ್ ಸರ್ಕಾರದಿಂದಲೂ ಮಾಡಲ್ಪಟ್ಟಿತು. ಈ ಭೂಮಾಪನ ಒಂದು ಮಹತ್ವಾಕಾಕ್ಷೆಯ ಅಸಾಧಾರಣ ವೈಜ್ಞಾನಿಕ ತರ್ಕಬದ್ಧವಾದ ಯೋಜನೆ. ಈ ಮಹಾಕಾರ್ಯದ ಕಾರ್ಯಕರ್ತರು-ನಿರ್ವಾಹಕರು ಸರಿಸಾಟಿಯಿಲ್ಲದ, ಬಹಳ ಕಠಿಣ ಸವಾಲುಳ್ಳ ಪ್ರಯಾಸದ ಪಯಣಮಾಡಿ ಅಸಾಧಾರಣ ಸಾಹಸ, ಜಾಣ್ಮೆ, ಕೌಶಲಗಳನ್ನೂ, ಪ್ರತಿಭೆಯನ್ನೂ ಮೆರೆದಿದ್ದಾರೆ. ಅವರು ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ. ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಮತ್ತು ಇದು ಇತಿಹಾಸದ ದಾಖಲೆ.
ಭಾರತದಲ್ಲಿ ಭೂಮಾಪನದ ಇತಿಹಾಸ ಮತ್ತು ಸವಾಲುಗಳು:
ಬದಲಾಯಿಸಿರಾಬರ್ಟ್ ಕ್ಲೈವನ ಕಾಲದಲ್ಲೇ ಅವನು ಎರಡನೇ ಬಾರಿ ಬಂಗಾಳದ ಗೌರ್ನರ್ ಆದಾಗ ಅದರ ಒಂದು ನಕ್ಷೆ ತಯಾರಿಸPಲು ಅಪೇಕ್ಷೆ ಪಟ್ಟನು. ಅದಕ್ಕೆ ಜೇಮ್ಸ ರೆನೆಲ್ಲ್ ನನ್ನು(1767ರಲ್ಲಿ ಮೇಲ್ವಿಚಾರಕನನ್ನಾಗಿ ನೇಮಿಸಿದನು. ಕೇವಲ 24 ವಯಸ್ಸಿನ ರೆನಲ್ಲ್ ದೂರವನ್ನು ಅಳೆಯಲ್ ರಸ್ತೆಮೇಲೆ ಉರುಳುವ ದೊಡ್ಡ ಚಕ್ರವನ್ನು ಉಪಯೋಗಿಸಿದನು. ಅದಕ್ಕೆ ಸುತ್ತಿದ ಸುತ್ತುಗಳ ಲೆಖ್ಖದ ಯಂತ್ರ ಜೋಡಿಸಿ ಅಯಸ್ಕಾಂತದ ಉತ್ತರಮುಖಿಯನ್ನು ಉಪಯೋಗಿಸಿ ದಾರಿಗಳ ದೂರವನ್ನೂ ದಿಕ್ಕನ್ನು ಗುರುತಿಸಿ ಬಂಗಾಲದ ನಕ್ಷೆಯನ್ನು (ಭೂಪಟ) ತಯಾರಿಸಿದನು. ಪ್ರತಿ ಬಾರಿ ಧೃವ ನಕ್ಷತ್ರ ಮತ್ತು ಇತರ ನಕ್ಷತ್ರಗಳ ಸ್ಥಾನಗಳೊಡನೆ ಪರಶೀಲಸಿ ನಕ್ಷೆಗೆ ನಿಖರತೆ ಒದಗಿಸಿದನು. ಹೀಗೆ ಅವನು ಬಂಗಾಲದ ನಕ್ಷೆ ತಯಾರಿಸಲು ಹಗಲಿರುಳೂ ಹತ್ತುವರ್ಷ ಶ್ರಮ ಪಟ್ಟನು. ಅವನು ಗ್ರೀಕರ ಪುರಾಣದಲ್ಲಿಬರುವ ಗ್ಯಾಂಜಿಸ್ ನದಿ ಗಂಗಾನದಿಯೇ ಸರಿ ಎಂದು ಸಾರಿದನು. ಆದರೆ ಅತಿ ಪರಿಶ್ರಮದ ಪರಿಣಾಮ ಅನಾರೋಗ್ಯ ಪೀಡಿತನಾಗಿ ಕೆಲಸದಿಂದ ನಿವೃತ್ತಿ ಪಡೆದನು ಅವನು ಭಾರತದ/ ಇಂಡಿಯಾದ ಮೊದಲ ವೈಜ್ಞಾನಿಕ ಭೂಮಾಪಕ ಮತ್ತು ಅವನನ್ನು “ಭಾರತದ ಭೂಗೋಲ ಶಾಸ್ರದ ಪಿತ”ನೆಂದು (ಫಾದರ್ ಆಫ್ ಇಂಡಿಯನ್ ಜಿಯೋಗ್ರಫಿ) ಹೆಸರಿಸಲ್ಪಟ್ಟನು.
ಇಂಡಿಯಾದ ಸರ್ವೆಯು ಅಧಿಕೃತವಾಗಿ ಕ್ರಿ.ಶ. 1800 ರಲ್ಲಿ ಆರಂಭವಾಯಿತೆಂದು ಹೇಳಬಹುದು. ಅದು ಕಂಪನಿ ಸರ್ಕಾರ ಸದಾ ಯುದ್ಧದಲ್ಲಿ ನಿರತವಾಗಿದ್ದ ಕಠಿಣ ಕಾಲ. ಮೈಸೂರು 2,3,4 ನೇ ಯುದ್ಧ ಮತ್ತು ಮರಾಠಾ ಯುದ್ಧ ಕಾಲ.
ಮಾಕ್ರ್ವಿಸ್ ವಲ್ಲೆಸ್ಲಿ ಗೌರ್ನರ್. ವಿಲಿಯಮ್ ಲ್ಯಾಂಬ್ಟನ್ ಎಂಬ 33ನೇ ಕಾಲ್ದಳ ರೆಜಿಮೆಂಟಿನ ಅಧಿಕಾರಿಯನ್ನು ಭಾರತದ ದಕ್ಷಿಣದ ತುದಿಯಿಂದ ಭೂ ಮಾಪನ ಮಾಡಲು ನೇಮಿಸಲಾಯಿತು. ಅವನ ಕಾರ್ಯಯೋಜನೆಗೆ ಕಂಪನಿ ಸರ್ಕಾರ ನಷ್ಟದಲ್ಲಿದ್ದರೂ ಹಣವದಗಿಸಲು ಒಪ್ಪಿತು. ಕಂಪನಿಯ ಅಧೀನದಲ್ಲಿದ್ದ ಅಂದಿನ ಮದ್ರಾಸು ಸರ್ಕಾರವೂ ಒಪ್ಪಿಗೆ ಕೊಟ್ಟಿತು. ಈ ಭೂ ಮಾಪನ ಸಂಬಂಧಪಟ್ಟ ಭೂಮಿಯ ಮೇಲ್ಮೈನ ತ್ರಿಕೋನಮಿತಿ ಅಳತೆಯನ್ನು ಅತ್ಯಂತ ನಿಖರತೆಯಿಂದ ಉತ್ತರ ಮತ್ತು ದಕ್ಷಿಣ ಧೃವ ಬಿಂದುಗಳ ಆಧಾರದ ಅಕ್ಷಾಂಶ ರೇಖಾಂಶಗಳ ಆಧಾರದ ಮೇಲೆ ತ್ರಿಕೋನಮಿತಿಯ ಲೆಖ್ಖದಲ್ಲಿ ಭೂಮಿಯ ಮೇಲ್ಮೈ ಲಕ್ಷಣವನ್ನೂ ಗುರತಿಸುತ್ತಾ ಮಾಡಬೇಕಿತ್ತು. ಮದ್ಯಾಹ್ನ ರೇಖೆಯ (ರೇಖಾಂಶ) ಆಧಾರದಿಂದ ಪೂರ್ವ-ಪಶ್ಚಿಮದ ಅಕ್ಷಾಂಶ ರೇಖೆ ಉತ್ತರ-ದಕ್ಷಿಣ ಧೃವಗಳನ್ನು ಹಾದು ಹೋಗುವ ರೇಖಾಶವನ್ನೂ ತ್ರಿಕೋನ-ಮಿತಿಯಲ್ಲಿ ಈ ಭಾರತ ಪರ್ಯಾಯ ಭೂಖಂಡದಲ್ಲಿ ಗುರುತಿಸುವತಿರಬೇಕಿತ್ತು. ಅದಕ್ಕೆ ಆಧಾರವಾದ ತ್ರಿಕೋನದ ಒಂದು ತಲರೇಖೆಯನ್ನು (ಬೇಸ್ ಲೈನ್ ಆಫ್ ಟ್ರೈಯಾಂಗಲ್) ಮೊದಲು ಗುರುತಿಸಬೇಕಿತ್ತು. ಅದಕ್ಕೆ ತಲಾಧಾರ ರೇಖೆಯ ತುದಿಯ ಎರಡೂ ಬಿಂದುಗಳಿಂದ ತ್ರಿಕೋನದ ಮೂರನೆಯ ಬಿಂದುವನ್ನು ಕಂಬದ ಗುರುತಿನಲ್ಲಿ/ ಬಾವುಟದ ಸಂಕೇತದಲ್ಲಿ ಇರಬೇಕಿತ್ತು. ನಂತರ ಆ ತ್ರಿಕೋನದ ಬಾಹುಗಳನ್ನು ಆಧಾರ-ತಲ-ರೇಖೆಯಾಗಿ ಪರಿಗಣಿಸಿ ತ್ರಿಕೋನಮಿತಿ ಲೆಖ್ಖದಲ್ಲಿ ಭೂಆಳತೆ ಬರೆಯಬೇಕಾಗಿತ್ತು. ಹೀಗೆ ಅಳತೆ ಮಾಡಿ ಆಕಾಶದಲ್ಲಿ ನಕ್ಷತ್ರ,- ಸೂರ್ಯನ ಸ್ಥಾನ ಚಲನೆ ಇವಗಳಿಂದ ಪ್ರತಿ ಹಂತದಲ್ಲಿ ಪರಿಶೀಲಿಸಲಾಯಿತು. ಹೀಗೆ ಮಾಪನ ಮಾಡುವಾಗ ಭೂಮಿಯ ಉಬ್ಬು ತಗ್ಗು , ವಾತಾವರಣದಲ್ಲಿ ಬೆಳಕಿನ ವಕ್ರೀಭವನವನ್ನೂ ಗಣನೆಗೆ ತೆಗೆದುಕೊಳ್ಳಲಾಯಿತು. ಇವೆಲ್ಲಾ ಮಾಡುವಾಗ ಕಾಡಿನಲ್ಲಿ ಮರಗಳು ಅಡ್ಡಬರುವಿಕೆ, ಕಾಡುಪ್ರಾಣಿಗಳಾದ ಹುಲಿ ಚಿರತೆ, ಕಾಡುಕೋಣಗಳ ಕಾಟ ಮುಂತಾದ ಅನೇಕ ಅಡಚಣೆಗಳಿದ್ದವು. ಹಿಮಾಲಯದಲ್ಲಿ ಎತ್ತರದ ಪ್ರದೇಶಗಳನ್ನೇ ಅಳತೆಯು ಬಿಂದುಗಳಿಗೆ ಆಯ್ಕೆ ಮಾಡಿಕೊಳ್ಳಬೇಕಿತ್ತು. ಅಗತ್ಯ ಪರಿಕರಗಳು ಸೂಕ್ಷ್ಮ ಹಾಗೂ ಭಾರವಾಗಿದ್ದವು. ಭೂಮಾಪಕರು ಅನೇಕ ಬಾರಿ ಮಲೇರಿಯಾ ಮತ್ತು ಇತರೆ ಕಾಣದಿಂದ ಅನಾರೋಗ್ಯ ಪೀಡಿತರಾಗಿ ಕೆಲಸಕ್ಕೆ ಬರತ್ತಿರಲಿಲ್ಲ..
ವಿಲಿಯಮ್ ಲ್ಯಾಂಬ್ಟನ್ ಮತ್ತು ಭೂ ಮಾಪನ ಆರಂಭ
ಬದಲಾಯಿಸಿಲ್ಯಾಂಬ್ಟನ್ ನು ಬೆಂಗಳೂರು ಮದ್ರಾಸು (ಚನ್ನೈ) ಮಧ್ಯೆ 11 ಕಿಮೀ ಉದ್ದದ ಎರಡು ತ್ರಿಕೋನ ತಲರೇಖೆಯನ್ನು (ಆಧಾರ ತಲ ರೇಖೆ) ಗುರುತಿಸಿದನು. ಇದಕ್ಕೆ 30 ಮೀಟರಿನ (100 ಅಡಿ) ಉಕ್ಕಿನ ಚೈನನ್ನು ಬಳಸಿದನು. ಚೈನಿಗೆ ಮೂರು ಕಾಲಿನ ಸ್ಟೂಲನ್ನು ಬಳಸಿ ಸಡಿಲವಾಗದಂತೆ ಚಕ್ರದ ಸನ್ನೆಯಿಂದ ಬಿಗಿಪಡಿಸಿದನು . ಶಾಖದಿಂದ ಚೈನಿನ ಹಿಗ್ಗುವಿಕೆ ತಡೆಯಲು ಸೂಕ್ತ ಪಟ್ಟಿಗೆಗಳನ್ನು ಉಪಯೋಗಿಸಿದ್ದನು. ಈ 11 ಕಿ.ಮೀ ಉದ್ದದ ಎರಡು ತಲರೇಖೆ ಎಳೆಯಲು ಈ ಚೈನಿನ ವ್ಯವಸ್ಥೆಯನ್ನು 700 ಬಾರಿ ಬಿಚ್ಚಿ ಮತ್ತೆ ಸೇರಿಸಲಾಯಿತು. ಇದನ್ನು ಗುರುತಿಸುವಾಗ ಖಗೋಲ ಬಿಂದುಗಳನ್ನೂ ಉಪಯೋಗಿಸಿ ನಿಖರತೆಗೆ ಬರಲಾಯಿತು. ಇದಕ್ಕೆ ಅವನೇ ಜೋಡಿಸಿದ ಮಾಪನ ಯಂತ್ರ (ಥಿಯೊಡೊಲೈಟ್) ಉಪಯೋಗಿಸಿದನು. ಇದು ಸಣ್ಣ ಟೆಲಿಸ್ಕೋಪ್(ದೂರದರ್ಶಕ) , ಸಮಾನಾಂತರ ಪ್ಯಾರಲಲ್) ಮತ್ತು ಲಂಬ ರೇಖೆಗಳನ್ನು (ಪರ್ಪೆಂಡಿಕ್ಯುಲರ್) ಗುರುತಿಸುವ (ಕೋನ ಮಾಪಕ) ವ್ಯವಸ್ಥೆಗಳನ್ನು ಒಳಗೋಡ ದೊಡ್ಡ ಯಂತ್ರ. ಅದು ಒಟ್ಟೆಲ್ಲಾ ಸೇರಿ ಸುಮಾರು 5 ಕ್ವಿಂಟಾಲ್ ತೂಗತ್ತಿತ್ತು. ಅದನ್ನು ಒಮ್ಮೆ ಕಟ್ಟಡದ ಮೇಲೆ ಇಟ್ಟು ಪ್ರಯೋಗಿಸುವಾಗ ಬಿದ್ದು ಕಳಚಿ ಕೆಟ್ಟು ಹೋಯಿತು. ಅವನು ಅದನ್ನು ತನ್ನ ಡೇರೆಯಲ್ಲಿ ಕುಳಿತು ಕೆಲವೇ ಕೆಲಗಾರರ ಸಹಾಯದಿಂದ ಆರು ವಾರಗಳಲ್ಲಿ ಪುನಃ ರಿಪೇರಿ ಮಾಡಿ ಜೋಡಿಸಿದನು. ಈ ತ್ರಿಕೋನ ಮಿತಿ ಭೂಮಾಪನವನ್ನು 1805 ರ ಹೊತ್ತಿಗೆ ಭಾರತದ ಪಶ್ಚಿಮ ಭಾಗಕ್ಕೆ ವಿಸ್ತರಿಸಿದ್ದನು. ಹಿಂದಿನ ತಪ್ಪನ್ನು ತಿದ್ದಿ 13 ಡಿಗ್ರಿ ರೇಖಾಂಶವನ್ನು ಸ್ಥಿರಗೊಳಿಸಿದನು ಮತ್ತು 78 ನೇ ಡಿಗ್ರಿಯ ರೇಖಾಶದಲ್ಲಿ ಕನ್ಯಾಕುಮಾರಿಯ ಬಿಂದುವಿನಿಂದ ಉತ್ತರ ಭಾರತಕ್ಕೆ (ಸೆಂಟ್ರಲ್ ಇಂಡಿಯಾ) ಬಂದನು. ಹಿಂದಿನ ಅಂದಾಜು ಅಳತೆಯನ್ನು ಸರಿಪಡಿಸಿದನು. ಅದೇ ಸಮಯದಲ್ಲಿ ಇಂಜನೀಯರ್ ಮುಖ್ಯಸ್ಥ ಕೋಲಿನ್ ಮೆಕೆನ್ಜೀ ಈ ಭೂಖಂಡದ ಮೇಲ್ಮೈ ಲಕ್ಣಣದ ಭೌಗೋಲಿಕ ಸರ್ವೆಯನ್ನು ಮಾಡಲು ಒಂದು ಶಿಸ್ತು ಬದ್ಧ ಯೋಜನೆಯನ್ನು ರೂಪಿಸಿ ಒಂದು ಪ್ರದೇಶದ ಸರ್ವೆ ಮುಗಿದ ನಂತರ ಮುಂದಿನದನ್ನು ಎತ್ತಿಕೊಳ್ಳುವ ಯೋಜನೆ ತಂದನು. ಅವನು ಮಾಪನದ ಅಳತೆಗೆ -“ಒಂದು ಮೈಲಿಗೆ ಒಂದು ಇಂಚಿನ ಮಾಪನ-ಪ್ರಮಾಣ”ವನ್ನು ಉಪಯೋಗಿಸಿದನು. 1818ರಲ್ಲಿ ಕಂಪನಿಯ ಈ ಯೋಜನೆಗೆ ಬ್ರಿಟಿಷ್ ಸರ್ಕಾರದ ಮಂಜೂರಾತಿ ಪಡೆಯಿತು. ಇದಕ್ಕೆ ಮಹತ್ ತ್ರಿಕೋನಮಿತಿ ಸರ್ವೆ (ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೆ) ಎಂದು ಹೆಸರಿಸಲಾಯಿತು. ಇದೇ ಸಮಯದಲ್ಲಿ ಜಾರ್ಜ್ ಎವರೆಸ್ಟ್ ನು ಲ್ಯಾಂಬ್‍ಟನ್ ಗೆ ಸಹಾಯ ಮಾಡಲು ಕೇಂದ್ರ ಪ್ರಾಂತದಲ್ಲಿ (ಉತ್ತರ ಪ್ರದೇಶ) ಅವನ ಜೊತೆ ಸೇರಿಕೊಂಡನು.
ಕಲ್ಲಚ್ಚು ಮತ್ತು ಭಾರತದ ಕೆಲಸಗಾರರು
ಬದಲಾಯಿಸಿ1920ರಲ್ಲಿ ಮಾಪನ ಸ್ಥಳದಲ್ಲಿಯೇ ಉಪಯೋಗಿಸುವ ಕೋನಗಳನ್ನು ಗುರುತಿಸುವ ಸಲಕರಣೆಯುಳ್ಳ (ಕೋನ ಮಾಪಕ -ಅಲಿಡೇಡ್) ದುಂಡು ಮೇಜಿನ ಉಪಯೋಗವು ್ಲ ಆರಂಭವಾಯಿತು. ಅಲ್ಪ ಶಿಕ್ಷಣ ಹೊಂದಿದ , ಆದರೆ ತೀಕ್ಷಣ ಬುದ್ಧಿಶಕ್ತಿ ಮತ್ತು ಉತ್ತಮ ತರಬೇತಿ ಹೊಂದಿದ ಭಾರತೀಯ ನಕ್ಷಾ (ಭೂಪಟ)-ತಯಾರಿಕೆ ಕೆಲಸಗಾರರು ಬಹುಕಾಲ ಅನೇಕ ರೀತಿ ಉಪಯೋಗಕ್ಕೆ ಬರುವ ಈ ನಕ್ಷೆ (ಭೂಪಟ) ತಯಾರಿಕೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದರು. ಈ ನಕ್ಷೆಗಳಿಗೆ ಆಗಲೆ ಸ್ಥಿರತೆಗೆ ಬಂದಿದ್ದ ರಾಜ್ಯಾಡಳತದಲ್ಲಿ ಬಹಳ ಬೇಡಿಕೆ ಬಂದಿತು. ಲಿಥೋಗ್ರಾಫಿಕ್ ಮ್ಯಾಪ್ (ನಕ್ಷೆ-ಭೂಪಟ) ನ್ನು (ಕಲ್ಲಚ್ಚು) ಅಚ್ಚುಮಾಡುವ ವಿಧಾನ ಮ್ಯಾಪ್ ತಯಾರಿಕೆಯಲ್ಲಿ ಕ್ರಾಂತಿಯನ್ನೇ ಮಾಡಿತು ಎನ್ನಬಹುದು. ಆರಂಭದ ಕೆಲಸಗಾರರು ಇದರಲ್ಲಿ ಮಾನಸಿಕ ಜರ್ಝರಿತರಾದರೂ , ನಂತರದವರು ಉತ್ತಮ ಕೆಲಸಮಾಡಿದರು. ಎವರೆಸ್ಟನು ಮಾಪನದಲ್ಲಿ ದೊಡ್ಡವೃತ್ತದ 20 ಡಿಗ್ರಿಯ ಅದುವರೆಗೂ ಮಾಡದ ಅಳತೆಮಾಡಿದನು.
ಜಾರ್ಜ್ ಎವರೆಸ್ಟ್
ಬದಲಾಯಿಸಿ1823 ರಲ್ಲಿ ಲ್ಯಾಂಬ್ಟನ್ ಮರಣ ಹೊಂದಿದನು; ಜಾರ್ಜ್ ಎವರೆಸ್ಟ್ ಸರ್ವೆ ಇಲಾಖೆಯ ಸರ್ವೆಮುಖ್ಯಸ್ಥನಾದನು (ಸೂಪರಿಡೆಂಟ್ ಆಫ್ ಸರ್ವೆ). 1829 ರಲ್ಲಿ ಅವನನ್ನು ಸರ್ವೆಯರ್ ಜನರಲ್ ಆಫ್ ಇಂಡಿಯಾ (ಇಂಡಿಯಾ ಸರ್ವೇಯ ಮಹಾ ಪಾಲಕ) ನನ್ನಾಗಿನೇಮಕ ಮಾಡಲಾಯಿತು. ಮೊದಲು ಮಳೆಗಾಲ ಅತಿ ಚಳಿಗಾಲದಲ್ಲಿ ಸರ್ವೆ ಮಾಡುತ್ತಿರಲಿಲ್ಲ. ಆದರೆ ಎವರೆಸ್ಟನು ಚಳಿಗಾಲ ಮಳೆಗಾಲವೆನ್ನದೆ ವರ್ಷವಿಡೀ ಕಲಸಮಾಡಿದನು. ದೂರದ ಬಿಂದುಗಳನ್ನು ಮಬ್ಬಾದ ಬೆಳಕಿನಲ್ಲಿ ಗುರುತಿಸಲು ದಿಣ್ಣೆ ಅಥವಾಗೋಪುರಗಳನ್ನು ನಿರ್ಮಿಸಿ ಅದರ ಮೇಲೆ ಕೊಡೆ-ಸೂರು ಮಾಡಿಕೊಂಂಡನು. ಆದರೆ ಮಲೇರಿಯಾದ ಕಾಟ ಸ್ವಲ್ಪ ಇತ್ತು. ಈಗೋಪುರ ವ್ಯವಸ್ಥೆಯಿಂದ ರಾತ್ರಿಯಲ್ಲೂ ಗಡಿ ಬಿಂದು (ಬಾಂದು) ಗಳನ್ನು ಗುರುತಿಸಬಹುದಿತ್ತು. ಅವನ ಮಹತ್ವಾಕಾಂಕ್ಷೆಯ ಯೋಜನೆಯು ಲ್ಯಾಂಬ್ಟನ್ ನ ಪ್ರಾಜೆಕ್ಟ್ (ಕ್ರಿಯಾ ಯೋಜನೆಯನ್ನು) ಮುಂದುವರೆಸುವುದು. 78ನೇ ಡಿಗ್ರಿಯ ಪೂರ್ವ ಭಾಗದ ಸರ್ವೆ; ಮತ್ತು ಬೀದರನ್ನು ಆಧಾರ ಸಮತಲ ರೇಖೆ (ಮಧ್ಯಾಹ್ನ ರೇಖೆ-ರೇಖಾಂಶ ರೇಖೆ) ಯಾಗಿ ಹಿಡಿದು ಉತ್ತರಕ್ಕೆ ತೆರಳುವುದು; ಅವನು “ಗ್ರಿಡಿರನ್ ವಿಧಾನ”ವನ್ನು ಅನುಸರಿಸಲು ನಿರ್ಧರಿಸಿದನು. ತ್ರಿಕೋನಾಧಾರಿತ 1 ಡಿಗ್ರಿಯ ಮಧ್ಯಾಹ್ನ ರೇಖೆಗೆ 6 ಡಿಗ್ರಿಯ ಅಂತರವನ್ನಿಟ್ಟು ಗುರುತಿಸುವುದು. ಈವಿಧಾನದಿಂದ ಇಡೀ ಭರತಖಂಡದ ಪರ್ಯಾಯ ದ್ವೀಪವನ್ನು ಬರ್ಮಾ ಸೇರಿ ಅಳತೆಗೆ ಒಳಪಡಿಸುವುದು. ಇದು ಭೌಗೋಲಿಕರಿಗೆ ಭೂಮಿಯ ಆಕೃತಿಯ ನಕ್ಷೆ ತಯಾರಿಸಲು ಹೆಚ್ಚು ನಿಖರತೆ ವದಗಿಸುತ್ತಿತ್ತು. ಭೂ ಮಾಪನ ತಜ್ಞ ಕೆನೆತ್ ಎಂಬುವವನು ಏಷಿಯಾದ ಸರ್ವೆ ಕಾರ್ಯಕ್ಕೆ (ಏಷ್ಯಾದ ಭೂಮಾಪನಕ್ಕೆ) ಜಾರ್ಜ್ ಎವರಸ್ಟನಷ್ಟು ಸೇವೆ ಸಲ್ಲಿಸಿದವರು ಮತ್ತೊಬ್ಬರಿಲ್ಲವೆಂದಿದ್ದಾನೆ.
ಜೇಮ್ಸ್ ವಾಕರ್
ಬದಲಾಯಿಸಿಜೇಮ್ಸ್ ವಾಕರ್ ,(James Walker (Surveyor General) ಆಂಗ್ಲೋ-ಇಂಡಿಯನ್ ಸರ್ವೇಯರ್ (1826 1 ಡಿಸೆಂಬರ್ - 1896 16 ಫೆಬ್ರವರಿ) ; (ಅವನು 12 ಮಾರ್ಚ್ 1861, ಭಾರತದ ಗ್ರೇಟ್ ಟ್ರಿಗ್ನೋಮೆತ್ರಿಕಲ್ ಸರ್ವೆಗೆ 12 ಮಾರ್ಚಿಯಲ್ಲಿ 1861 ರಲ್ಲಿ ಸೂಪರಿಂಟೆಂಡೆಂಟ್ ಆದನು.) ಅವನನ್ನು 1860 ರಲ್ಲಿ ಖಗೋಳ ಸಹಾಯಕರನ್ನಾಗಿ ನೇಮಕ ಮಾಡಲಾಯಿತು . ಮತ್ತು ನಂತರ ಸರ್ವೇಯರ್ ಜನರಲ್ ಆದನು. ಮುಂದಿನ ಎರಡು ವರ್ಷಗಳಲ್ಲಿ ಭಾರತದ ಉತ್ತರದ ಮೂರು ಕೊನೆಯ ಮೆರಿಡಿಯನ್ನ ಸರಣಿ ಅಳತೆ ಪೂರ್ಣಗೊಳಿಸಿದನು . ವಾಕರ್ ಮೊದಲ ಸ್ವತಂತ್ರ ಕೆಲಸ ನಿಖರತೆ ಸಾಧಿಸಿದ್ದು 1862 ರಲ್ಲಿ . ಆಗ ಪೂರ್ಣಗೊಂಡ ವಿಶಾಖಪಟ್ಟಣದ ಬೇಸ್ ಲೈನ್, ಮಾಪನ. ಮತ್ತು ಅವನ ಮಾಪನ /ಅಳತೆ ಎಷ್ಟು ಕರಾರುವಾಕ್ಕಾಗಿತ್ತೆಂದರೆ ನಂತರ ಬಂಗಾಳದಲ್ಲಿ ಕಂಪ್ಯೂಟ್ ಮಾಡಿದ ಉದ್ದ ಮತ್ತು ತ್ರಿಕೋನಗಳಲ್ಲಿ ಲೆಕ್ಕ ದ ಉದ್ದ, ದಟ್ಟವಾದ ಅರಣ್ಯಗಳು ನಡುವಿನ ಮೂಲಕ ಹಾದುಹೋಗುವ, 480 ಮೈಲಿ ದೂರದ ಕಲ್ಕತ್ತಾ ಬೇಸ್ ಲೈನ್ ನಲ್ಲಿ, ಆದ ವ್ಯತ್ಯಾಸ ಕೇವಲ ಅರ್ಧ ಇಂಚು.[೨]
ಸರ್ ಆನ್ಡ್ರೂ ವ್ಯಾಗ್-ಎವರೆಸ್ಟ್ ಶಿಖರ
ಬದಲಾಯಿಸಿ1846ರಲ್ಲಿ ನೇಪಾಳದ ಗಡಿಯಲ್ಲಿ ಡೆಹರಾಡೂನಿನಿಂದ ಪೂರ್ವ ಪಶ್ಚಿಮಾವಾಗಿ ನೇಕ ತ್ರಿಕೋಣ ಅಳತೆಗಳು ಆರಂಭವಾದವು. ತ್ರಿಕೋನಾತ್ಮಕ ಬಿಂದುಗಳನ್ನು ಗುರುತಿಸಿ 79 ಎತ್ತರದ ಭಾರೀ ಪರ್ವತ ಶಿಖರಗಳನ್ನು ಗುರುತಿಸಲಾಯಿತು. ಪ್ರತಿ ಪರ್ವತಕ್ಕೂ ರೋಮನ್ ಅಂಕಗಳನ್ನು (ಹೆಸರಿನ ಬದಲಿಗೆ) ಕೊಡಲಾಯಿತು.
ಸನ್ 1843 ರಲ್ಲಿ ಸರ್ ಆನ್ಡ್ರೂ ವ್ಯಾಗ್ ಸರ್ವೆ ಇಲಾಖೆಗೆ ಸರ್ವೆಯರ ಜನರಲ್ ಆದನು . ಅವನು 1856 ರಲ್ಲಿ XV (15 ನೇ) ನಂಬರಿನ ಶಿಖರದ ಎತ್ತರವನ್ನು ಲೆಖ್ಖ ಹಾಕಿ, ಅದು ಎಲ್ಲ ಶಿಖರಗಳಿಗಿಂತ ಎತ್ತರವಾದುದು ಮತ್ತು ಅದರ ಎತ್ತರ 8,839 ಮೀಟರ್ (29,002 ಅಡಿ ಎಂದು ) ಲೆಖ್ಖ ಹಾಕಿದನು. ಮತ್ತು ಅದಕ್ಕೆ ಹಿಂದಿನ ಸರ್ವೆ ಜನರಲ್ ನ ಗೌರವಾರ್ಥ ಮೌಂಟ್ ಎವೆರೆಸ್ಟ್ ಎಂದು ಹೆಸರಿಸಿದನು. 1858 ರಲ್ಲಿ ಕ್ಯಾಪ್ಟನ್ ಮಾಂಟಿಗೊಮರಿ ಪುನಃ ಅಳತೆಮಾಡಿ , ಕಾರಾಕೋರಮ್ ಪ್ರದೇಶದಲ್ಲಿರುವ ಏ1 ಮತ್ತು ಏ2 ಶಿಖರಗಳು ಬಹಳ ಎತ್ತರವಿದ್ದರೂ ಎವರೆಸ್ಟ್ ಶಿಖರದಷ್ಟು ಎತ್ತರವಿಲ್ಲವೆಂದು ಸಾರಿದನು. ಸುಮಾರ 260 ಕಿಲೋಮೀಟರ್ ದೂರದಿಂದ ತ್ರಿಕೋನ ಮಿತಿ ಪ್ರಕಾರ ಈ ಶಿಖರಗಳನ್ನು ಅಳತೆ ಮಾಡಿದ್ದರೂ ಅವುಗಳ ಅಳತೆ ಅತ್ಯಾಶ್ಚರ್ಯಕರವಾಗಿ ಕರಾರವಾಕ್ಕಾಗಿದ್ದವು. ಈಗ ಎವರೆಸ್ಟ್ ಶಿಖರವನ್ನು 8,848 ಮೀಟರ್ ಅಥವಾ 29,028/29029? ಅಡಿ ಎಂದು ನಿರ್ಧರಿಸಲಾಗಿದೆ.
ಹೆನ್ರಿ ಜಾನ್ಸನ್ ಮತ್ತು ಕಾಶ್ಮೀರ-ಟಿಬೆಟ್ ಸರ್ವೆಗೆ ಆರಂಭ
ಬದಲಾಯಿಸಿಕಾರಾಕೊರಮ್ ಪರ್ವತ ಶ್ರೇಣಿಗಳನ್ನೂ ಅಲ್ಲಿಯ ಹಿಮ ಪ್ರಪಾತ ಮತ್ತು ಶಿಖರಗಳನ್ನು ಹತ್ತಿರದಿಂದ ಸರ್ವೆ ಮಾಡಿದವರಲ್ಲಿ ಕರ್ನಲ್ ಹೆನ್ರಿ ಗಾಡ್ವಿನ್-ಆಸ್ಟಿನ್ ಪ್ರಸಿದ್ಧನು. ಕೆ2 ಶಿಖರವು ಈಗಲೂ ಅವನ ಹೆಸರಿನಲ್ಲಿ ಕರೆಯುವ ರೂಡಿಯಲ್ಲಿದೆ. ಕಾಶ್ಮೀರದಲ್ಲಿ ಈ ಮಹತ್ ತ್ರಿಕೋನಮಿತಿ ಮಾಪನ (ಸರ್ವೆ-ಜಿಟಿಎಸ್) ಮಾಡಿದವರಲ್ಲಿ ಇಂಡಿಯಾ ಸಂಜಾತ ಬ್ರಿಟನ್ನಿನ ವಿಲಿಯಮ್ ಹೆನ್ರಿ ಜಾನ್ಸನ್ ಎಂಬುವವನು ಪ್ರಸಿದ್ಧನು.. ಇವನು ದೈತ್ಯ ಶಕ್ತಿಯುಳ್ಳ ಅತ್ಯದ್ಭುತ ಕ್ರಿಯಾಶೀಲ. ಇವನು ಅತ್ಯುತ್ತಮ ತ್ರಿಕೋನ ಜ್ಯಾಮಿತಿ ಸರ್ವೆ ಕೆಲಸ ಮಾಡಿದನು. ಯಾರೂ ಏರದ ಎತ್ತರ ಶಿಖರಗಳನ್ನು ಒಂದಾದ ಮೇಲೊಂದರಂತೆ ವರ್ಷ ವರ್ಷಗಳಲ್ಲಿ ಏರಿದನು. ಶಿಖರ ಏರುವುದರಲ್ಲಿ ಅಂದಿನ ಜಾಗತಿಕ ದಾಖಲೆಯನ್ನು ಮುರಿದನು. 1862ರಲ್ಲಿ ಕಾಶ್ಮೀರದ ಸರ್ವೆಮಾಡುವಾಗ 6800ಮೀ (22300 ಅಡಿ) ಎತ್ತರವನ್ನು ಹತ್ತಿದ್ದನು. ಅವನು ಮಾಂಟಗೊಮೆರಿ ಯವರ ಸಹಾಯಕನಾಗಿದ್ದನು. ಕ್ಯಾಪ್ಟನ್ ಮಾಂಟಗೊಮೆರಿ ರಜೆ ಸಮಯದಲ್ಲಿ ಹೆನ್ರಿ ಜಾನ್ಸನ್ ನು ಈ ಅನ್ವೇಷಣೆಯನ್ನು ಮುಂದುವರೆಸಿ ತ್ರಿಕೋನ ಜ್ಯಾಮಿತಿ ಸರ್ವೆಯನ್ನು ಮಾಡಿ ಮುಗಿಸಿದನು.
1792 ನೇ ಇಸವಿಯಿಂದ ಭಾರತ ನೇಪಾಳಗಳಿಗೆ ಟಿಬೆಟ್ಟಿನ ಗಡಿಯನ್ನು ಮುಚ್ಚಲಾಗಿತ್ತು. ಚೀನಾ ಸರ್ಕಾರ ಕೇವಲ ಬೌದ್ಧ ತೀರ್ಥಯಾತ್ರಿಗಳನ್ನು, ಕಾಶ್ಮೀರಿಗಳನ್ನು ಮತ್ತು ಕೆಲವು ವರ್ತಕರನ್ನು ಮಾತ್ರಾ ಭೂತಾನ, ಕಾಶ್ಮೀರ, ಸಿಕ್ಕಿಂನಿಂದ ಬಿಡುತ್ತಿದ್ದರು. ಹಿಂದುಗಳಿಗೆ ಮುಸ್ಲಿಮರಿಗೆ ಯೂರೋಪಿಯನ್ನರಿಗೆ ರಹದಾರಿ ಇರಲಿಲ್ಲ. ಬೌದ್ಧ ತೀರ್ಥಯಾತ್ರಿಗಳನ್ನು ಬೌದ್ಧಕ್ಷೇತ್ರ ದರ್ಶನಮಾಡಲು ಅನುಮತಿ ನೀಡುತ್ತಿದ್ದರು 1864 ರಲ್ಲಿ ಕಾಶ್ಮೀರದ ಸರ್ವೆ ಮುಗಿದ ನಂತರ ಇದುವರೆಗೂ ಹೊರ ಜಗತ್ತಿಗೆ ಅಪರಿಚಿತವಾಗಿದ್ದ ರಷ್ಯಾ, ಚೀನಾ ಗಡಿಯನ್ನೊಳಗೊಂಡ ಹಿಮಾಯದ ಒಳ ಮತ್ತು ಉತ್ತರ ಬಾಗದ ಸರ್ವೆಕಾರ್ಯ ಅಗತ್ಯವಾಗಿತ್ತು ಯೂರೋಪಿಯನ್ನರಿಗೆ (ಬ್ರಿಟಿಷರಿಗೆ) ಈ ಅಪರಿಚಿತ ಭಾಗದ ಸರ್ವೆಕಾರ್ಯ ಬಹಳ ಪ್ರಾಮುಖ್ಯವೆನ್ನಿಸಿತು. ಪಾಮಿರ್ ಪ್ರಾಂತ್ಯಗಳಿಗೆ ರಷ್ಯಾವೂ ಬೇರೆ ನೆವಗಳಿಂದ ಅದರ ಪೂರ್ವ ಭಾಗಕ್ಕೆ ಅನ್ವೇಷಕರನ್ನು ಕಳಿಸುತ್ತಿತ್ತು. ಬ್ರಿಟಿಷರಿಗೆ ಕಾಶ್ಮೀರದ ಉತ್ತರ-ಭಾರತದ ಬಾಗದ ರಕ್ಷಣೆ ಅಗತ್ಯವಾಗಿತ್ತು.
ಅದಕ್ಕಾಗಿ ಹಿಮಾಲಯದ ಆ ಅಜ್ಞಾತ ಪ್ರದೇಶಗಳ ಸರ್ವೆಗೆ ಗುಪ್ತಕಾರ್ಯಕರ್ತರನ್ನು ಕಳಿಸಬೇಕಾಗಿತ್ತು ಇದಕ್ಕೆ “ಗ್ರೇಟ್ ಗೇಮ್” (ಮಹಾ ಕ್ರೀಡೆ) ಎಂಬ ಹೆಸರಿನ ಕ್ರಿಯಾಯೋಜನೆ ರೂಪಿಸಲಾಯಿತು. ಅದರಲ್ಲಿ ಈ ರಹಸ್ಯ ಕಾರ್ಯಾಚರಣೆಗೆ ಟಿಬೆಟ್ಟಿನಲ್ಲಿದೆಯೆಂದು ಹೇಳಲಾದ ದೊಡ್ಡ ಚಿನ್ನದ ಗಣಿಯ ಶೋಧನೆಗೂ, ಇದರ ಜೊತೆಗೆ ಬ್ರಿಟಷರು ಜಗತ್ತಿಗೆ ಅಪರಿಚಿತವಾದ ಈ ಭಾಗದ ವೈಜ್ಞಾನಿಕ ಸಂಶೋದನೆಗೂ ಅದರ ಅನ್ವೇಷಣೆಯ ಕೀರ್ತಿಗಾಗಿಯೂ ಮಹತ್ವ ಕೊಟ್ಟರು. ಟಿಬೆಟಿನ ರಾಜಧಾನಿ ಲಾಸಾದ ನಿಖರ ಸ್ಥಾನವನ್ನು ಕಂಡುಹಿಡಿಯುವುದೂ ಮುಖ್ಯವಾಗಿತ್ತು. ಮಧ್ಯ ಏಷಿಯಾದ ಅನೇಕ ನಗರಪ್ರದೇಶಗಳ ಸರಿಯಾದ ತಿಳುವಳಿಕೆ ಯೂರೋಪಿನ್ನರಿಗೆ ಅತ್ಯಗತ್ಯವಾಗಿತ್ತು. ಹೀಗಾಗಿ ಭಾರತದಲ್ಲಿ ಸೀಪಾಯಿ ದಂಗೆ ನಡೆಯುಯ್ಯಿದ್ದರೂ ಸರ್ವೆಕಾರ್ಯವನ್ನು ನಿಲ್ಲಿಸದೆ ನಡೆಯಲು ಸೂಚಿಲಾಗತ್ತು
ಸರ್ವೆಗೆ ಪಂಡಿತರ ತರಬೇತಿ ಮತ್ತು ನೇಮಕ
ಬದಲಾಯಿಸಿಹಿಮಾಲಯದ ಮೇಲಿನ ಕಣಿವೆಗಳ ಸರ್ವೆಗೆ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕಿತ್ತು . ಚೀನೀಯರ /ಟಿಬೆಟನ್ನರ ಕಣ್ಣುತಪ್ಪಿಸಲು “ಪಂಡಿತರು” ಎಂಬ ಹೆಸರಿಟ್ಟು ಸ್ಥಳೀಯ ನೇಪಾಲಿ ಯಾ ಟಿಬೇಟನ್ನರು ಅಥವಾ ಕಾಶ್ಮೀರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಗ್ರೇಟ್ ಟ್ರಿಗ್ನೋಮೆಟ್ತ್ರಿಕಲ್ ಸರ್ವೆಗೆ (ಭೂಮಾಪನಕ್ಕೆ) ಇವರಿಗೆ ಹೊಸದಾಗಿ ತರಬೇತಿ ಅಗತ್ಯವಾಗಿತ್ತು. ಇಂಗ್ಲೆಂಡ್ ನ ಕರ್ನಲ್ ವಾಕರ್ ನಿರ್ಗಮಿಸಿದ ಮೇಲೆ, ಕ್ಯಾಪ್ಟನ್ ಮಾಂಟ್ಗೋಮೆರಿಯ ಕೈಕೆಳಗೆ ಈ “ಪಂಡಿತರ” ತರಬೇತಿಯ ಕಾರ್ಯ ಪೂರ್ಣಗೊಂಡಿತು..ಹೀಗೆ ಆರಿಸಿದ
ಅವರು ಬಹಳ ಬುದ್ಧಿವಂತರು; ಷಷ್ಟಕ, ದಿಕ್ಸೂಚಿ, & ಸಿ, ಇವುಗಳ ಬಳಕೆಯನ್ನು ಬೇಗ ಕಲಿತರು. ದೊಡ್ಡ ನಕ್ಷತ್ರಗಳನ್ನು ಗುರುತಿಸಬಲ್ಲರಾದರು ..ಅವರ ಮುಖ್ಯ ಕೆಲಸ ಸರ್ವೆಯ ದತ್ತಾಂಶಗಳನ್ನು ಸಂಗ್ರಹಿಸುವುದು ಮತ್ತು ಡೆಹ್ರಾಡೂನಿಗೆ ತಲುಪಿಸುವುದು ಡೆಹ್ರಾಡೂನಿನಲ್ಲಿ ಅದರ ಆಧಾರದಿಂದ ಭೂಪಟ ಅಥವಾ ನಕ್ಷೆಯನ್ನು ತಯಾರಿಸಲಾಗತ್ತಿತ್ತು. ಈ ಪಂಡಿತರ ಕೆಲಸ ಬಹಳ ಅಪಾಯಕಾರಿಯದಾಗಿತ್ತು. ಇವರು ದ್ರೋಹಿಗಳು ಅಥವಾ ಸರ್ವೆಕಾರ್ಯಮಾಡುವವರು ಎಂದು ಟಿಬೆಟನ್ನರಿಗೆ ಅಥವಾ ಚೀನೀಯರಿಗೆ ತಿಳಿದರೆ ಅವರನ್ನು ಪರ್ವತದ ಕೆಲಗೆ ತಳ್ಳಿ ಸಾಯಿಸುತ್ತಿದ್ದರು. ಇವರ ತರಬೇತಿ / ಕೆಲಸ, ತೃಪ್ತಿದಾಯಕ ಎಂದು ಕಂಡ, ಕ್ಯಾಪ್ಟನ್ ಮಾಂಟ್ಗೋಮೆರಿ ನಿರ್ದೇಶನದಲ್ಲಿ ಘೋರ್ತೋಕ್ ಮತ್ತು ಲ್ಹಾಸಾದ ದೊಡ್ಡ ಮಾರ್ಗದ ಸಮೀಕ್ಷೆ ಮಾಡಲು ಮತ್ತು ಮಾನಸ ಸರೋವರದ ಮೂಲಕ ಮರಳಲು ಅವರಿಗೆ ನಿರ್ದೇಶಿಸಿದರು . ಅದು ಹೆಚ್ಚು ಕಾರ್ಯಸಾಧುವಾದಾಗಿತ್ತು. ಮೊದಲು ಹೀಗೆ ನೇಮಕಗೊಂಡವರಲ್ಲಿ ನಯನ್ ಸಿಂಗ್ ಮೊದಲಿಗ. ಅವನ ಸರ್ವೆಗುಪ್ತನಾಮ ನಂ.1 ಅಥವಾ ಪಂಡಿತ (ತಂಡ). ಅವನೊಬ್ಬ ಶಿಕ್ಷಕನಾಗಿದ್ದ. ಅವನಿಗೆ ಡೆಹರಾಡೂನಿನಲ್ಲಿ ವಿಶೇಷ ತರಬೇತಿ ನೀಡಲಾಯಿತು. ಅವನು 2000 ಹೆಜ್ಜೆ ನೆಡೆದರೆ ಒಂದು ಮೈಲಿ ಎಂದು ಗಣನೆ . ಅದಕ್ಕೆ ಅವನು 100 ಮಣಿಯ ಜಪಸರವನ್ನು ಲೆಕ್ಕಕ್ಕೆ ಉಪಯೋಗಿಸುತ್ತಿದ್ದನು. ಲಾಮಾನಂತೆ ಬಟ್ಟೆ ಧರಿಸಿದ್ದನು. ತಲೆಯ ಮೇಲೆ ಬೌದ್ಧರ ಪ್ರಾರ್ಥನಾ ಚಕ್ರವನ್ನು ಇಟ್ಟುಕೊಂಡಿದ್ದನು ಅದರಡಿಯಲ್ಲಿ ಕೋನ ಮಾಪಕ ಅಡಗಿತ್ತು. ಸೆಕ್ಸ್`ಟ್ಯಾಂಟ್ ಎಂಬ ಖಗೋಲ ಕೋನಮಾಪಕವನ್ನು ತನ್ನ ಪಯಣದ ಪಟ್ಟಿಗೆಯ ಅಡಿಯಲ್ಲಿ ಅಡಗಿಸಿಕೊಂಡಿದ್ದನು. ಒಬ್ಬನೇ ಹೋಗದೆ ಯಾತ್ರಿಗಳ ಜೊತೆ ಸಂಚರಿಸುತ್ತಿದ್ದನು.
ಅವನ ಮೊದಲ ಪಯಣ 1865-66ರಲ್ಲಿ ಕಠ್ಮಂಡುವಿಗೆ ಮತ್ತು ತ್ರಾದಮ್ (ಜೋಂಗ್ಬಾ) ಗೆ; ಅಲ್ಲಿ ಅವನು ಲ್ಹಾಸಾಕ್ಕೆ ಹೋಗುವ ಪಯಣಿಗರ ಜೊತೆ ಸೇರಿಕೊಂಡನು. ಅವನೇ ಲ್ಹಾಸಾಕ್ಕೆ ಹೋಗುತ್ತಿರುವ ಬ್ರಿಟಿಷರ ಮೊದಲ ನೌಕರ. ಅವನು ಲ್ಹಾಸಾದ ನಿರ್ದಿಷ್ಟ ಸ್ಥಳವನ್ನು ನಕ್ಷಯಲ್ಲಿ ಗುರುತಿಸಿದ (ದತ್ತಾಂಶ ಪಡೆದವ) ಮೊದಲಿಗ. ಅವನು ಯರ್ಲುಂಗ್ ಜಾಂಗ್ಬೋ ಕಣಿವೆ ಮತ್ತು ಮಾನಸ ಸರೋವರದ ಮೂಲಕ ಭಾರತಕ್ಕೆ ಹಿಂದಿರುಗಿದನು. ಅವನು ಆ ದಾರಿ 2000 ಕಿಲೋ ಮೀಟರ್ (1250ಮೈಲಿ)ಎಂದು ಲೆಕ್ಕ ಹಾಕಿದನು. 25 ಲಕ್ಷ ಹೆಜ್ಜೆ ನೆಡೆದಿದ್ದನು. ಅವನ ಇನ್ನೊಂದು ಪಯಣ 1867ರಲ್ಲಿ ಮಾನಸ ಸರೋವರ ಮತ್ತು ಸಿಂಧೂ ನದಿಯ ಉಗಮದ ಮಧ್ಯೆ/ ಹತ್ತಿರವಾಗಿತ್ತು. ಮೂರನೇ ಪಯಣ 1873-75 ರಲ್ಲಿ ಲಡಖ್ ನಿಂದ ಲ್ಹಾಸಾಕ್ಕೆ ಸುಮಾರು ಸರಾಸರಿ, 16,500ಅಡಿ (5000 ಮೀ) ಎತ್ತರ ಪ್ರದೇಶದಲ್ಲಿ ಪಯಣ. ಇವನ ಪಯಣದ ವಿವರ ಸರ್ವೆಗೆ ಪ್ರಮುಖ ಆಧಾರ ವಿಷಯಗಳನ್ನು ಒದಗಿಸಿತು. ಅವನು (ನಯನ್ ಸಿಂಗ್) ಯರ್ಲುಂಗ ಜಾಂಗಬೋ ನದಿ ಮತ್ತು ಬ್ರಹ್ಮಪುತ್ರಾ ನದಿ ಎರಡೂ ಒಂದೇ ಎಂದು ಸಾದಿಸಿ ತೋರಿಸಿದನು. ಲ್ಹಾಸಾದ ಉತ್ತರಕ್ಕೆ ನ್ಯೈನ್-ಕ್ವಿಂಟಾಂಗ್ಲಾ ಶಾನ್ ಎಂಬ ಪರ್ವತಶ್ರೇಣಿ ಇರುವುದನ್ನು ಗುರುತಿಸಿದನು. ಅದು ಕೇಂದ್ರ ಏಷಿಯಾ ಮತ್ತು ದಕ್ಷಿಣ ಏಷಿಯಾದ ಮಧ್ಯದ ಜಲಸಮೃದ್ಧ ಪ್ರದೇಶವೆಂದು ಹೇಳಿದನು. ಅವನು ತೆಂಗ್ರಿ ಸರೋವರವನ್ನು (ಲಾಮ್ ಕೋ) ಗುರುತಿಸಿದನು. ಟಿಬೆಟ್ಟಿನ ಪಶ್ಚಿಮ ಗಡಿಯಲ್ಲಿ ಚಿನ್ನದ ಗಣಿ ಇರುವುದು ನಿಜವೆಂದು ಹೇಳಿದನು.
ಅವನ ಜೊತೆಯಲ್ಲಿ ತರಬೇತಿ ಪಡೆದು ಪೂರ್ವ ಟರ್ಕಿಸ್ತಾನ ಮತ್ತು ಟಿಬೆಟ್ಟಿನಲ್ಲಿ ಸರ್ವೆಕಾರ್ಯ ಮಾಡಿದವನು ನಯನ್ ಸಿಂಗನ ಹತ್ತಿರದ ಸಂಬಂಧಿ ಸೋದರ ಕಿಶೆನ್ ಸಿಂಗ್;. ಅವನ ಗುಪ್ತನಾಮ “ಕೃಷ್ಣ” ಅಥವಾ “ಎ-ಕೆ” . 1871 ರಲ್ಲಿ ಅವನು ನೇಪಾಳದಿಂದ ಟಿಬೆಟ್ಟಗೆ ಪ್ರವೇಶ ಮಾಡಿ ವಿಸ್ತಾರ ಪ್ರದೇಶದ ಇದುವರೆಗೆ ನಕ್ಷೆಗೆ ಒಳಪಡದ ಕೇಂದ್ರ ಏಷಿಯಾ ಪ್ರದೇಶದ ಸರ್ವೆಕಾರ್ಯ ಮಾಡಿದನು. ಆ ಪ್ರದೇಶ ಲ್ಹಾಸಾದ ಲಾಮ್ ಕೊ ಸರೋವರದ ಪಶ್ಚಿಮ ಭಾಗ; ಟಕಿರ್ಉಸ್ತಾನದ ಗಡಿ ಪ್ರದೇಶ.
ಲ್ಹಾಸಾ ಯಾತ್ರೆ
ಬದಲಾಯಿಸಿ1873 ರಲ್ಲಿ ಕಿಶೆನ್ ಸಿಂಗ್, ನಯಿನ್ ಸಿಂಗ್ ,ಕಾಲಿಯನ್ ಸಿಂಗ್ ಮತ್ತು ಇತರರು ಲೇಹ ದಿಂದ ಕಶ್ಗರ್ (ಕಶಿ/ಕಾಶಿ)ಗೆ ಸರ್ವೆ ಮಾಡುತ್ತಾ ಪಯಣಿಸಿದರು. ಕಿಶೆನ್ ಸಿಂಗ್ ನ ದೀರ್ಘ ಯಾತ್ರೆ 1878 ರಲ್ಲಿ ಆರಂಭವಾಯಿತು. ಅದು ಅವನ ಕೊನೆಯ ಸಾಹಸ ಯಾತ್ರೆ. ಅವನು ಡಾರ್ಜಲಿಂಗದಿಂದ ಲ್ಹಾಸಾಕ್ಕೆ ಪಯಣಿಸಿ ಅಲ್ಲಿಂದ ಚೀನಾದ ಪಶ್ಚಿಮದ ಮದ್ಯಭಾಗವನ್ನು ಪ್ರವೇಶಿಸಿದನು. ಅವನು ತ್ಸಾಯಿಡ್ಯಾಮ (ತ್ಸಾಯಿದಮ) ದ ಜವುಗು ಪ್ರಾಂತದಿಂದ ಗೋಭಿ ಮರುಭೂಮಿಯ ಉತ್ತರದ ಭಾಗವನ್ನು ಅನ್ವೇಶಣೆ ಮಾಡಿದನು. ಅವನ ಮರು ಪ್ರಯಾಣ ಟಿಬೆಟ್ಟಿ ಮೂಕ ಭಾರತಕ್ಕೆ ಹಿಂತಿರುಗಿದನು. ಅವನು ಈ ಪಯಣ ಅನ್ವೇಷಣೆಯಲ್ಲಿ ಸುಮಾರು 4,750 ಕಿಲೋ ಮೀಟರ್ (3000 ಮೈಲಿ) ಪ್ರಯಾಣ ಮಾಡಿದ್ದನು.
ಸಿಂಧೂ ಮತ್ತು ಬ್ರಹ್ಮಪುತ್ರಾ ನದಿಯ ಮೂಲ
ಬದಲಾಯಿಸಿನಯನ್ ಸಿಂಗ್ ಯರ್ಲುಂಗ ಜಾಂಗಬೋ ನದಿ ಮತ್ತು ಬ್ರಹ್ಮಪುತ್ರಾ ನದಿ ಎರಡೂ ಒಂದೇ ಎಂದು (1875) ಸಾದಿಸಿ ತೋರಿಸಿದರೂ ಇನ್ನೂ ಅನುಮಾನ ಉಳಿದಿತ್ತು. 1880ರಲ್ಲಿ .ಕ್ಯಾಪ್ಟನ್ ಎಚ್.ಹರ್ಮನ್ನನು ಇದನ್ನು ಪುನಃ ಸಾಧಿಸಲು ಪ್ರಯತ್ನಿಸಿದನು. ಯರ್ಲುಂಗ ಜಾಂಗಬೋ ನದಿಯಲ್ಲಿ ಗುರುತು ಮಾಡಿದ ಮರದ ದಿಮ್ಮಿಗಳನ್ನು ತೇಲಿಬಿಟ್ಟು ಬ್ರಹ್ಮ ಪುತ್ರಾನದಿಯಲ್ಲಿ ಅದನ್ನು ಗುರುತಿಸಲು ಪ್ರಯತ್ನಿಸಿದನು. ಆದರೆ ಅವನು ಅನಾರೋಗ್ಯದ ಕಾರಣ ಈ ಯೋಜನೆ ಮುಂದುವರಿಯಲಿಲ್ಲ. ಆದರೆ ಈ ಕಾರ್ಯಕ್ಕೆ ಸಹಾಯ ಮಾಡಲು ನಿಯೋಜಿಲ್ಪಟ್ಟ ಲಾಮಾನ ಕೆಲದಾಳು -ಕಿನ್‍ಟುಪ್ ಎಂಬುವವನು ಅವನಿಂದ ತಪ್ಪಿಸಿಕೊಂಡು ಈ ಕಾರ್ಯವನ್ನು ಮುಂದುವರಿಸಿ ಗುರತಿಸಿದ ಅನೇಕ ಮರದ ದಿಮ್ಮಿಗಳನ್ನು ಯರ್ಲುಂಗ ಜಾಂಗಬೋ ನದಿಯಲ್ಲಿ ತೇಲಿಬಿಟ್ಟು ಭಾರತಕ್ಕೆ ಬಂದು ತನ್ನ ಪ್ರಯತ್ನವನ್ನು ಪತ್ರದಲ್ಲಿ ಬರೆದು ಸರ್ವೆಯವರಿಗೆ ತಿಳಿಸಿದನು. ಆದರೆ ಅದು ಆಗ ಗಮನಕ್ಕೆ ಬರದೆ 20 ವರ್ಷಗಳ ನಂತರ ಅದನ್ನು ಗುರುತಿಸಿ ಆ ಲಾಮಾನ ಗುಲಾಮ-ಕೂಲಿಯು ಸರ್ವೆ ಇಲಾಖೆಗೆ ಮಾಡಿದ ಸೇವೆ ದಾಖಲಿಸಲ್ಪಟ್ಟಿತು.
ಭಾರತ ಆಫ್ಘಾನಿಸ್ತಾನದ ಈಶಾನ್ಯ ಬಾಗದಲ್ಲಿ ಆಟಾ ಮಹಮದ್ ಎಂಬ ಮುಲ್ಲಾನು ಸ್ವತಃ ಅನ್ವೇಷóಣೆ ಮಾಡಿ 1873-74 ರಲ್ಲಿ ಸಿಂಧೂ ನದಿಯ ಮತ್ತು ಅದರ ಉಪನದಿಯೊಂದರ ಮಾರ್ಗಗಳನ್ನು ದಾಖಲಿಸಿದನು. 1868-73 ರಲ್ಲಿ ಮಿರ್‍ಜಾ ಶೂಜ ಎಂಬುವವನು ಉತ್ತರ ಆಫ್ಘಾನಿಸ್ತಾನ ದ ಅನ್ವೇಷಣೆ ಮಾಡಿದನು. ಆದರೆ ಅವನು ಕೊಲೆಯಾಗಿ ಅರ್ಧಕ್ಕೆ ನಿಂತ ಕೆಲಸವನ್ನು ಹೈದರ್ ಸಾಬ್-“ಹವಾಲದ್ದಾರ” ಎಂಬ ಗುಪ್ತನಾಮದಲ್ಲಿ ಪೂರೈಸಿದನು.
20ನೇ ಶತಮಾನದ ಬೆಳವಣಿಗೆ
ಬದಲಾಯಿಸಿ1880 ರ ವೇಳೆಗೆ ಭಾರತ ಉಪಖಂಡದದ ತ್ರಿಕೋನ ಜ್ಯಾಮಿತಿ ಸರ್ವೆಕಾರ್ಯ ಮುಕ್ತಾಯವಾಯಿತು. 20ನೇ ಶತಮಾನದ ಅರಂಭದಲ್ಲಿ ಭಾರತದ ಮೇಲ್ಮೈ ಲಕ್ಷಣದ ಸರ್ವೆಕಾರ್ಯ ಮುಗಿಯಿತು. ಭಾರತದ ಭೂಪಟದಲ್ಲಿ ಅಕ್ಷಾಂಶ ರೇಖಾಂಶಗಳನ್ನು ಭಾಮಿಯ ಎತ್ತರ -ತಗ್ಗು ಪ್ರದೇಶಗಳನ್ನೂ ಗುರುತು ಮಾಡಲಾಯಿತು. ಆದರೆ ಹಿಂದಿನ ಭೂಪಟ / ನಕ್ಷೆಗಳು ಹಳೆಯದಾಗಿ ಕಾಲಾತೀತವಾಗಿತ್ತು. ಲಾರ್ಡ್‍ಕಿಚೆನರ್ 1905 ರಲ್ಲಿ ಸೇನಾ ಮುಖ್ಯಾಧಿಪತಿಯಾಗಿ ಬಂದ ನಂತರ ಹೊಸದಾಗಿ ಸುಧಾರಿತ ಕಾಂಟೂರು ಸರ್ವೆ ಕಾರ್ಯವನ್ನು ಬಣ್ಣದ ನಕ್ಷೆ /ಭೂಪಟವನ್ನು ಒಂದು ಇಂಚಿಗೆ ಒಂದು ಮೈಲಿ ಪ್ರಮಾಣದಲ್ಲಿ ಮಾಡಿಸಿದನು. ಸುಧಾರಿತ ಭೂಪಟಗಳನ್ನು / ನಕ್ಷೆಗಳನ್ನು ತಯಾರಿಸಲಾಯಿತು. ಆದರೂ ಕಾಶ್ಮೀರದ ಉತ್ತರದ ಸರ್ವೆಯಲ್ಲಿ ರಷ್ಯನರ ಸರ್ವೆಗೆ ಹೋಲಿಸಿದಾಗ ಭಾರತ ಮತ್ತು ರಷ್ಯಾದ ಅಳತೆಗೆ ಆಧಾರ ತಲರೇಖೆಯಲ್ಲಿ 1.5ಮೀಟರಿನಷ್ಟು (5ಅಡಿ) ವ್ಯತ್ಯಾಸ ಡುಬಂದಿತು.
ಹೆಚ್ಚಿನ ಓದು
ಬದಲಾಯಿಸಿ- Markham, Clements (1878). A Memoir On The Indian Surveys (2 ed.). London. W H Allen And Co. p. 67. Retrieved 2009-03-01.https://archive.org/details/memoirontheindia025502mbp/
ಉಲ್ಲೇಖ ಮತ್ತು ಆಧಾರ
ಬದಲಾಯಿಸಿ
- https://en.wikipedia.org/wiki/Great_Trigonometrical_Survey
- The Great Trigonometrical Survey of India in a Historical Perspective by Rama Deb Roy
- Rawat, Indra Singh. Indian Explorers of the 19th Century. New Delhi: Publications Division, Ministry of Information and Broadcasting, Government of India, 1973. Excellent account of the “pundits”.
- Full text of "Report on the Trans-Himalayan Explorations, in Connexion with the Great Trigonometrical Survey of India, during 1865-7: Route-Survey made by Pundit -, Nepal to Lhasa, and thence through the Upper Valley of the Brahmaputra to Its Source (Early Journal Content on JSTOR, Free to Anyone in the World) *https://archive.org/stream/jstor-1798967/1798967_djvu.txt
- JSTOR (head) ; JSTOR (article) ; JSTOR (issue) ; JSTOR (journal)
- https://en.wikipedia.org/wiki/James_Walker_(Surveyor_General)