ಭಾರತೀಯ ಸಾಹಿತ್ಯ ದರ್ಶನ
ಪೀಠಿಕೆ
ಬದಲಾಯಿಸಿಕನ್ನಡ ಸಾಹಿತ್ಯ ಎಷ್ಟು ಹಳೆಯದೂ ವಿವಿಧವೂ ಆಗಿದ್ಡರೂ ಎಂದಿಲ್ಲದ ನಿಲುವು, ನೋಟ ಅದಕ್ಕೆ ಇಂದು ಬಂದಿದೆ.ಹೊಸಗನ್ನಡ ಎಂಬ ಪದವು ಪೊಸಗನ್ನಡ ಎಂಬ ಹಳೆಯ ರೂಪದಲ್ಲಿ ಮೊದಲುಗೊಂಡು ಕನಿಷ್ಟ ೧೧ನೇಯ ಶತಮಾನದಿಂದ ಪ್ರಚಾರದಲ್ಲಿದೆ. ಆದರೆ ೧೯-೨೦ನೇಯ ಶತಮಾನಗಳಲ್ಲಿ ಹೊಸ ಕನ್ನಡಕ್ಕೆ ದೊರೆತ ದೃಷ್ಟಿ,ಸೃಷ್ಟಿ ಸತ್ಯವಾಗಿ ಅಪೂರ್ವ.ಹೊಸ ಕಾವ್ಯಕೆ ಒಂದು ಸಮಯ ಸ್ವತಂತ್ರವಾದ ಬೀಸುವ ಬಗೆ ಗೌಢ ವಿಶಾಲವಾದ ಬಾಳಕಳೆ ಪ್ರಾಪ್ತವಾಗಿದೆ. ಗದ್ಯವು ಹುಲುಸಾಗಿ ಬೆಳೆಯುತ್ತಿರುವುದು ಇಂದೇ.ಹಿಂದೆ ಕಣ್ಡೆರೆಯದ ಸಾಹಿತ್ಯ ರೂಪಗಳು ಇಂದು ಕಣ್ಣನ್ನು ತುಂಬಿ ತೋರಿರುತ್ತವೆ. ಹಿಂದಿನ ಸಾಹಿತ್ಯ. ಸತ್ವದಲ್ಲಿ ಸ್ವತಂತ್ರ ರೂಪದಲ್ಲಿ ನವೀನ ವಿವಿಧತರ ಇದೆಲ್ಲ ಹೆಮ್ಮಯ ಮಾತು ಆದರೆ ಹೆಮ್ಮಪಡುವವರಿಗೆ ನಮ್ಮರಿವು ಬೇಕು. ಇನ್ನೂ ಹೆಚ್ಚಾಗಿ ಹೆಮ್ಮೆಪಡುವಂತೆ ಕನ್ನಡದ ಸೊಮ್ಮು ಸೊಸಿ ಹರಿಯುವಂತೆ ನಾವು ಮಾಡ ಬೇಕಾದ್ದೇನು. ಎಂಬ ಅರಿವು ಅದನ್ನು ಇನ್ನೂ ಮಾಡಿಲ್ಲವೆಂಬ ಅತೃಪ್ತಿ ಇವು ಕೊಡಿ ಕೊಂಡಿರಬೇಕು.
ಸಾಹಿತ್ಯಯದ ಪ್ರಕಾರಗಳು
ಬದಲಾಯಿಸಿ- ಕಾವ್ಯ
- ಕಾದಂಬರಿ
- ಸಣ್ಣಕತೆ
- ನಾಟಕ
- ಪ್ರವಾಸಸಾಹಿತ್ಯ ಮತ್ತು ಮಕ್ಕಳಸಾಹಿತ್ಯ
- ಆತ್ಮಚರಿತ್ರೆ ಮತ್ತು ಜೀವನಚರಿತ್ರೆ
- ಲಲಿತ ಪ್ರಬಂಧಗಳು ಮತ್ತು ವಿನೋದಸಾಹಿತ್ಯ
- ವಿಚಾರ ಮತ್ತು ಮಾನವಿಕಸಾಹಿತ್ಯ
- ಅನುವಾದ
- ಸಂಶೋಧನೆ ಮತ್ತು ಗ್ರಂಥ ಸಂಪಾದನೆ
- ಸಾಹಿತ್ಯ ವಿಮರ್ಶೆ
ಕಾವ್ಯ
ಬದಲಾಯಿಸಿನಮ್ಮ ಚಲನಶೀಲ ಬದುಕಿನ ಜೊತೆಯಲ್ಲಿ ಅದಕ್ಕೆ ಮಿಗಿಲಾಗಿ ಮತ್ತು ಅದಕ್ಕೆ ಹೆಗಲೆಣೆಯಾಗಿ ಯಾವುದು ಸಾಗುತ್ತಿರುವುದೋ ಆದೇ ನಿಜವಾದ ಕಾವ್ಯ ಪ್ರತಿಯೆಯೇ ಕಾವ್ಯವಾಗುತ್ತದೆ. ಹಿಂದಿದ ಕಾವ್ಯದ ಬಗೆಗಿನ ಆರಾಧನೆ ಹೊರಟು ಹೊಗಿದೆ. ಶಿಲ್ಪ,ಬಂಧ,ಛಂದಸ್ಸು - ಇತ್ಯಾದಿಗಳ ಬಗೆಗೆ ತಲೆ ಕೆಡಿಸಿಕೊಳ್ಳುವ ಕಾಲ ಹೊರಟುಹೋಗಿದೆ. ಆದರೆ ನಂತರ ಕಾವ್ಯರಚನೆ ರಾಜಸೇವಾಸಕ್ತರಿಗೆ ಮಾತ್ರ ಸೀಮಿತವಾದ ಕ್ರಿಯೆಗಲಿಲ್ಲಿ ಕಾರ್ಮಿಕನಂಥ ಶ್ರಮಜೀವಿಯೂ ಇಂದು ಕಾವ್ಯ ಬರೆಯುವಂತಾಯಿತು. ತನ್ನ ಬದುಕಿನ ತುರ್ತುಗಳನ್ನು ಹೇಗೆ ಕಾವ್ಯ ಮಾಡಬೇಕು ಎಂಬುದು ತಿಳಿದಿದ್ದರೆ ಸಾಕು.ಹಿಂದಿದ್ದ ಕಾವ್ಯದ ಬಗೆಗಿನ ಆರಾಧನೆ ಹೊರಟು ಹೋಗಿದೆ. ನವೋದಯದ ವಿರುದ್ಧ ನವ್ಯ ಪ್ರತಿಭಟಿಸಿವನಿಂತಂತೆ ನವ್ಯದ ವಿರುದ್ಧವಾಗಿ ಬಂಡಾಯದ ಪ್ರತಿಭಟನೆಯೊ ಇತ್ತು. ಬಂಡಾಯ ಸಾಹಿತ್ಯ ಬಲವಾಗುತ್ತಿರುವ ಈ ಸಂದರ್ಭದಲ್ಲಿ ಇದರಿಂದ ಬಿಡಿಸಿಕೋಳ್ಳಲು ಕೆಲವು ನವ್ಯಕವಿಗಳು ನವೋದಯದ ಕಡೆಗೆ ತಿರುಗಿದ ಸ್ಧಿತಿಯನ್ನು ಕಾಣಬಹುದು. ಅದರ ಪರಿಣಾಮವಾಗಿ ಕಥನಕಾವ್ಯ ಭಾವಗೀತೆಗಳಂಥ ಪುನರ್ ಸೃಷ್ಟಿಗಳು ಕಾಣಿಸಿಕೊಳ್ಳುತದೆ.
ಕಾದಬಂರಿ
ಬದಲಾಯಿಸಿಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಇಂದಿಗೂ ಅತ್ಯಂತ ಜನಪ್ರಿಯವಾಗಿರುವ ಮಾಧ್ಯಮ ಕಾದಂಬರಿಯೇ ಎನ್ನುವುದು ನಿರ್ಮಿವಾದ ಸಂಗತಿ. ಆದರೆ ಓದುಗರನ್ನು ಸೆಳೆವ ಓದಿನಲ್ಲಿ ತೊಡಗಿಸಿಕೊಳ್ಳುವ ಗುಣ ಈ ಸಾಹಿತ್ಯಲ್ಲಿದರೂ ಇತೀಚೆಗೆ ವಿವಿಧ ಮಾಧ್ಯಮಗಳಿಂದಾಗಿ ಈ ಲಾದಂಬರಿ ಸಾಹಿತ್ಯದ ಸಂಖ್ಯೆ ಗುಣಮಟ್ಟದಲ್ಲಿ ಕೂಡ ಕುಸಿತವನ್ನು ಕಾಣಬಹುದು. ೧೯೯೬ರಲ್ಲಿ ಪ್ರಕಟವಾಗಿರುವ ವಿಷಯದಲ್ಲೂ ಆದೇ ಮಾತು ಅನ್ವಯಿಸುತ್ತೆದೆ ಸುಮರು ೧೨೦ ಕಾದಂಬರಿಗಳನ್ನು ಅವಗಾಹನೆಗೆ ತೆಗೆದುಕೋಳ್ಳುವುದು ಇಲ್ಲ ಸಾಧ್ಯವಾಗಿದೆ.
ಸಣ್ಣಕತೆ
ಬದಲಾಯಿಸಿಸಣ್ಣಕತೆಯಷ್ಟು ದೊಡ್ಡ ಕ್ಯಾನ್ವಾಸಿಲ್ಲದ ಸಣ್ಣಕತೆಗೆ ವ್ಯಕ್ತಿಯ ಮನೋಲೋಕದತ್ತಲೇ ಹೆಚ್ಚು ಬಲವು ಅದ್ದರಿಂದ ಅಧುನಿಕ ಸಣ್ಣಕತೆ ಮಾನವನ ಆಳದ ಒಂಟಿತನ ಹಾಗೂ ಮೆಟಫಿಸಿಕಲ್ ಮುಖವನ್ನು ಶೋಧಿಸ ಹೊರಡುತ್ತೆದೆಂಬುದು ಲೋಕ ಪ್ರಸಿದ್ಧವಾದ ಮಾತು.ಪಶ್ಷಿಮದ ಸಣ್ಣಕತೆಗೆ ಹೆಚ್ಚು ಅನ್ವಯವಾಗಬಲ್ಲ ಈ ಮಾತು ವಸಾಹತು ಸಣ್ಣಕತೆಗೆ ಅಪ್ಠೇನೂ ಪರಕೀಯವಾದದ್ದಲ್ಲ. ಈ ವಿಸ್ತರಣೆಯಲ್ಲಿ ದೊಡ್ಡ ಮಟ್ಟದಲ್ಲಿ ಪಾಲ್ಲೊಂಡು ಕನ್ನಡ ಸಂವೇದನೆಯನ್ನು ಆಳಗಾಗಿ ಪ್ರಭಾವಿಸಿ ಇಬ್ಬರು ಶ್ರೇಷ್ಠ ಕತೆಗಾರದಾದ ದೇವನೂರ ಮಹಾದೇವ ಹಾಗೂ ಪಿ.ಲಂಕೇಶರ ಸಮಗ್ರ ಕತೆಗಳೂ ಈ ಸಲ ಪ್ರಕಟವಾಗಿರುವುದರ ಹಿನ್ನೆಲೆ ತೊಂಭತ್ತೆರಡರ ಹೊಸ ಕಥಾ ಸಂಕಲನಗಳನ್ನು ಗಮವಿಸಿದರೆ ಈ ಇಬ್ಬರೂ ಸೃಷ್ಠಿಸಿದ ಮಾದರಿಗಲಳು ಇನ್ನೂ ಮುರಿದುವರಿದಿರುವುದು ಗೋಚಲಸುತ್ತದೆ.
ನಾಟಕ
ಬದಲಾಯಿಸಿಅಧುನಿಕ ಕನ್ನಡ ನಾಟಕಗಳ ಬೆಳವಣಿಗೆಯನ್ನು ನಾದದಿಂದ ಮಾತಿಗೆ, ಮಾತಿನಿಂದ ನಾದಕ್ಕೆ ಹರಿದ ರಂಗಯಾನವನ್ನಾಗಿ ನಾವು ಗುರುತಿಸಬಹುದು. ವೃತ್ತಿರಂಗಭೂಮಿ ಹಾಗೂ ಜನಪದ ರಂಗರೂಪಕಗಳಲ್ಲಿ "ಸಂಗೀತ" ಪ್ರಧಾನವಾಗಿದ್ದುದಲ್ಲದೆ, ಅಲ್ಲಿ ಬಳಸಲ್ಪಡುವ ವಾದ್ಯ ವಿಶೇಷತೆತಯಿಂದಲೇ ಅದೇ ಒಂದು ವಿಶಿಷ್ಟ ಅಭಿವ್ಯಕ್ತಿ ಪ್ರಕಾರವಾಗಿ ರೂಪುಗೊಂಡಿರುತ್ತಿತ್ತು. ಹೀಗೆ ನಾದ ಪ್ರಧಾನವಾಗಿದ್ದ ನವೋದಯ ಪೂರ್ವದ ನಾಟಕಗಳು ಹಿಂಸರಿದು ಮಾತು, ಭಾಷೆಯಲ್ಲೇ ನಾದದಲಯ ಕಂಡುಕೊಂಡ ಆಧುನಿಕ ಯುಗದ ನಾಟಕಗಳೇ ಪ್ರಧಾನವಾಗತೊಡಗಿದವು.
ಪ್ರವಾಸಸಾಹಿತ್ಯ ಮತ್ತು ಮಕ್ಕಳಸಾಹಿತ್ಯ
ಬದಲಾಯಿಸಿ- ಪ್ರವಾಸಸಾಹಿತ್ಯ
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವಿದೆ ಜೀವನ" ಬದುಕು ಇಲ್ಲದೆ ಸಾಹಿತ್ಯವಿಲ್ಲ ಪ್ರವಾಸವಿಲ್ಲದೆ ಪ್ರವಾಸಸಾಹಿತ್ಯವಿಲ್ಲ. ಆದ್ದರಿಂದ ಮನುಷ್ಯ ಏಕೆ ಪ್ರವಾಸ ಮಾಡುತ್ತಾನೆ ? ಯಾವ ತುಡಿತ, ಯಾವ ಸೆಳೆತ ಆತನನ್ನು ಮವೆಯಿಂದ ಹೊರದಬ್ಬುತ್ತದೆ ? ಋತುಚಕ್ರ ಬದಲಾಗುತ್ತಿದ್ದಂತೆ ಸೊಂಪಾದ ಆಹಾರ ಹುಡುಕಿಕೊಂಡು ಅಲೆಯುತ್ತಿದ್ದ ಆದಿಮ ಮಾನವನ ಅಲೆಮಾರಿ ಪ್ರವೃತ್ತಿ ಇಂದಿಗೂ ಉಳಿದು ಬಂದಿದೆಯೇ ? ಏಕೆಂದರೆ ದೇಹಕ್ಕೆ ನಿರ್ಬಂಧ ಹಾಕಿದರೂ ಮನಸ್ಸಾದರೂ ಅಲೆಮಾರಿಯಾಗುತ್ತದೆ.ಮನುಷ್ಯನ ಈ ಪ್ರಪಂಚದಲ್ಲಿ ಬಬ್ಬ ಪ್ರವಾಸಿ, ಅವನ ಜೀವನ ಸಮಸ್ತವೂ ಒಂದು ಪ್ರವಾಸ ಎಂದು ಅವರ ಅನಿಸಿಕೆ.
- ಮಕ್ಕಳಸಾಹಿತ್ಯ
ಮಕ್ಕಳ ಪುಸ್ತಕಗಳನ್ನು ಗಮನಿಸಿದಾಗ ಕಥೆ ಕವನಗಳು ಹೆಚ್ಚು ಸಂಖ್ಯೆಯಲ್ಲಿ ಕಾಣಬರುತ್ತವೆ. ೨೦ ಕಥಾ ಪುಸ್ತಕಗಳು, ೯ ಕವನ ಸಂಗ್ರಹಗಳು ನನ್ನ ಗಮನಕ್ಕೆ ಬಂದವು. ಆದರೆ ಸೃಜನಶೀಲ ಸಾಹಿತ್ಯವರ್ಗಕ್ಕೆ ಸೇರಿದರೂ ಒಂದೇ ಒಂದು ನಾರಕ ಮಾತ್ರ ಪ್ರಕಟವಾಗಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಹಾಗೆ ನೋಡಿದರೆ ಕಥೆಯಾಗಲಿ, ಕವನವಾಗಲಿ ಮಕ್ಕಳ ಮನಸ್ಸನ್ನು ಸೆಳೆಯುವ ಗುಣ ನಾಟಕೀಯತೆ.ಆದರೂ ಮಕ್ಕಳ ನಾಟಕಗಳ ಬಗ್ಗೆ ಗಮನ ಹೊರಳಿಲ್ಲ ಇಂಬುದು ವಿಷಾದದ ವಿಷಯ
ಆತ್ಮಚರಿತ್ರೆ ಮತ್ತು ಜೀವನಚರಿತ್ರೆ
ಬದಲಾಯಿಸಿ- ಆತ್ಮಕಥನ
ಆತ್ಮಕಥನ ಮತ್ತು ಜೀವನಚರಿತ್ರೆ ಸಾಹಿತ್ಯಪ್ರಕಾರಗಳಲ್ಲಿ ಒಂದೇ ನಾಣ್ಯದ ಎರಡು ಮುಖಗಳ ಸ್ವರೂಪವಾಗಿ ಬೆಳೆಯುತ್ತ ಬಂದಿರುವ ಒಂದು ಪ್ರಕಾರ. ಆತ್ಮಕಥನ ತನ್ನ ಜೀವತಕ್ಕೆ ಒಂದು ವ್ಯಕ್ತಿತ್ವ ತಾನೇ ರೂಪುಗೊಡುತ್ತ ತನ್ನ ಜೀವಿತವನ್ನು ತಾನೇ ನಿರುಕಿಸುತ್ತ ತನ್ನ ಜೀವಿತವನ್ನು ಲೋಕದರ್ಶನಕ್ಕಾಗಿ ಬಿಚ್ಚಿ ಇಡುವಂಥದು.ಗಾಂಧೀಜಿಯವರ ಆತ್ಮಕಥನ ಮತ್ತು ಲೂಯಿ ಪಿಷರ್ ಅವರ ಗಾಂಧೀಜಿಯವರ ಜೀವನಚರಿತ್ರೆ ಈ ಪ್ರಕಾರದ ಈ ದ್ವ್ರೆಮುಖಿ ಸ್ವರೂಪವನ್ನು ಸ್ಪಷ್ಟವಾಗಿ ತೋರುವಂಥ ಕೃತಿಗಳು.
- ಜೀವನಚರಿತ್ರೆ
ಬಬ್ಬ ವ್ಯಕ್ತಿಯ ಜನನದ ಬಗ್ಗೆ ನೀಡಬೇಕಿರುವ ಅನಗತ್ಯ ಪೂರ್ವಪೀಠಿಕೆಗಳ್ನ್ನು ಹೊರತುಪಡಿಸಿ ನೇರವಾಗಿ ಒಂದು ಜೀವನಚರಿತ್ರೆಯೊಂದನ್ನು ನಿರ್ಮಿಸಲು ಆರಂಭಿಸುತ್ತದೆ. ಎ.ಎಸ್.ಕುಲಕರ್ಣಿ ಅವರು 'ಲಿಯೋ ಟಾಲ್ ಸ್ಟಾಯ್' ಮತ್ತು 'ಡಾ. ನೆಲ್ಸನ್ ಮಂಡೇಲಾ' ಕೃತಿಗಳನ್ನು ರಚಿಸಿದ್ದಾರೆ.
ಲಲಿತ ಪ್ರಬಂಧಗಳು ಮತ್ತು ವಿನೋದಸಾಹಿತ್ಯ
ಬದಲಾಯಿಸಿಆಧುನಿಕ ಸಾಹಿತ್ಯದಲ್ಲಿ, ಸೃಜನ ಹಾಗೂ ಸೃಜನೇತರ ಈ ಎರಡೂ ಪ್ರಕಾರಗಳಲ್ಲಿ, ಗದ್ಯವು ಪ್ರಕಟಪಡಿಸಿರುವ ಅಭಿವ್ಯಕ್ತಿಯ ಸಾಧ್ಯತೆಗಳು ಅಪಾರವಾದುವು. ವಸ್ತುವಿನ ಸಂವಹನದ ದೃಷ್ಟಿಯಿಂದ ಮಾತ್ರವಲ್ಲದೆ ಕಾವ್ಯಾತ್ಮಕ ಅಭಿವ್ಯಕ್ತಿಗೂ ಕೂಡ ಹೊಸ ಆಯಾಮಗಳನ್ನು ನೀಡಿದ ಹೆಗ್ಗಳಿಕೆ ಅದರದು. ೧೯೯೨ರಲ್ಲಿ ಪ್ರಕಟವಾದ ಲಲಿತ ಪ್ರಬಂಧಗಳುನ್ನುನೀಡಿದ ಮತ್ತು ವಿನೋದ ಸಾಹಿತ್ಯಗಳನ್ನು ಆಯಾ ಪ್ರಕಾರದ ಹಿನ್ನೆಲೆಯಲ್ಲಿ ಗಮನಿಸುವುದಕ್ಕೆ ಮೊದಲು ಕೇವಲ ಗದ್ಯವಾಗಿ ಕೂಡ ಅವುಗಳನ್ನೊಂದಿಷ್ಟು ನೋಡಬೇಕಾಗುತ್ತದೆ.
ವಿಚಾರ ಮತ್ತು ಮಾನವಿಕಸಾಹಿತ್ಯ
ಬದಲಾಯಿಸಿಯಾವುದೇ ಒಂದು ವಸ್ತು ವಿಷಯ ಅಥವಾ ಸಂದರ್ಭದ ಯುಕ್ತಾಯುಕ್ತ ವಿವೇಚನಯೇ ವಿಚಾರ.ಕಾರ್ಯಕಾರಣ ಸಂಬಂಧಗಳನ್ನು ಆಧರಿಸಿದ ವಿಶ್ಲೇಷಣೆ ವಿಚಾರಕ್ಕೆ ಹೊಸತನವನ್ನು, ವಿವಿಧ ಆಯಾಮಗಳನ್ನು ತಂದುಕೊಡುತ್ತದೆ. ವಸ್ತು, ವಿಷಯ ಸಂದರ್ಭಗಳನ್ನು ಮತ್ತೊಂದರೊಡನೆ ಹೋಲಿಸಿ ನೋಡುವುದರಿಂದ, ಅದರ್ ಗುಣಾವಗುಣಗಳನ್ನು ವಿವೇಚಿಸುದರಿಂದ ವಿಚಾರ ಅಂತಿನವಾಗಿ ಸ್ಫುಟಗೊಳ್ಳುತ್ತದೆ.೧೯೯೨ರ ಸಾಲಿನಲ್ಲಿ 'ಮಾನವಿಕ ಸಾಹಿತ್ಯ'ದ ಬೆಳೆ ಹಲುದಾಗಿ ಬಂದಿದೆ.ಜನಸಾಮಾನ್ಯರಿಗೆ ತಿಳಿಯಪಡಿಸುವ ಪರಿಚಯಾತ್ಮಕ ಪುಸ್ತಕಗಳಿಂದ ಮೊದಲುಗೊಂಡು ವಿದ್ವತ್ಪೂರ್ಣ ಕೃತಿಗಳವರೆಗೂ ಇದರ ಸಂಖ್ಯೆಯ ಗಣನೀಯ ಪ್ರಮಾಣದಲ್ಲಿದೆ.
ಅನುವಾದ
ಬದಲಾಯಿಸಿಅನುವಾದಕ್ಕೆ ಒಳಪಡುವ ಅವಧಿಯಲ್ಲಿ ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದೆ.ಎಲ್ಲ ಪುಸ್ತಕಗಳನ್ನೂ ಕುರಿತು ಬರೆಯ ಹೊರಡುವುದು ಅವಾಸ್ತವಿಕವಾಗುತ್ತದೆ.ಆದ್ದರಿಂದ ಒಂದೊದು ಪ್ರಕಾರದಲ್ಲೂ ವಿಶಿಷ್ಟವೆಂದು ತೋರಿದ ಒಂದೋ ಎರಡೋ ಕೃತಿಗಳನ್ನು ಮಾತ್ರ ಇಲ್ಲಿ ಸಮಿಕ್ಷೆಗೆತ್ತಿಕೊಳ್ಲಲಾಗಿದೆ.ಹೀಗೆ ಹೇಳುವಾಗ ಇಲ್ಲಿ ಹೆಸರಿಸಿದ ಯಾವುದೇ ಕೃತಿಯು ಆ ಪ್ರಕಾರದ ಶ್ರೇಷ್ಠ ಮಾದರಿಯೆಂದೇನೊ ತಿಳಿಯಬೇಕಾಗಿಲ್ಲ. ಸಂದರ್ಭದ ಪರಿಮಿತಿ ಮತ್ತು ಲೇಖಕನ ಇತಿಮಿತಿಯಲ್ಲಿ ಸಿದ್ಧಪಡಿಸಿದ ಲೇಖನ ಇದು.
ಸಂಶೋಧನೆ ಮತ್ತು ಗ್ರಂಥ ಸಂಪಾದನೆ
ಬದಲಾಯಿಸಿನಮ್ಮ ಬಹುಪಾಲು ಹೊಸಬರಿಗೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ನೊಂದಣಿ ಮಾಡಿಸಿಕೊಂಡಾಗ ಹೇಗೆ ಅಧ್ಯಯನ ಮಾಡಬೇಕೆಂಬ ತಾತ್ವಿಕ ತಿಳಿವಳಿಕೆಇರುವುದಿಲ್ಲ. ಪ್ರಾಥಮಿಕ ತಿಳಿವಳಿಕೆಕೂಡ ಇರುವುದಿಲ್ಲ. ಆಗ ಸಾಮಾನ್ಯವಾಗಿ ಅವರು ಈಗಾಗಲೆ ಬಂದಿರುವ ಪಿ.ಎಚ್.ಡಿ ಗ್ರಂಥಗಳನ್ನು ಮಾದರಿಯಾಗಿ ಇಟ್ಟುಕೊಳ್ಳುತ್ತಾರೆ. ಹಾಗೆ ಇಟ್ಟುಕೊಂಡಾಗ ಕುಮಾರವ್ಯಾಸನ ಕಾವ್ಯದಲ್ಲಿ ಜಾನಪದೀಯ ಅಂಶಗಳು ಒಂದು ಅಧ್ಯಯನ ಎಂಬ ಕೃತಿಯೊಂದು ಅದಾಗಲೇ ಪಿಎಚ್.ಡಿ. ಪಡೆದ ಗ್ರಂಥ ಸಿಗುತ್ತದೆ ಎಂದುಕೊಳ್ಳೋಣ. ಆಗ ಅದನ್ನೆ ಮಾದರಿಯಾಗಿ ಮಾಡಿಕೊಂಡು ಸ್ವಲ್ಪ ಮಾರ್ಪಡಿಸಿ ಪಂಪನ ಕಾವ್ಯದಲ್ಲಿ ಜಾನಪದೀಯತೆ ಎಂದು ತಮ್ಮದೆ ಒಂದು ವಿಷಯ ರೂಪಿಸಿಕೊಳ್ಳುತ್ತಾರೆ. ಆಗ ವಸ್ತು, ವಿಧಾನ ಎಲ್ಲವೂ ಸಿದ್ಧ ಮಾದರಿಯ ಅನ್ವಯೀಕರಣ – ಅನುಕರಣೆಯೇ ಆಗುತ್ತದೆ.
ಸಾಹಿತ್ಯ ವಿಮರ್ಶೆ
ಬದಲಾಯಿಸಿ೧೯೯೦ರಲ್ಲಿ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ನನ್ನ ‘ಸಾಹಿತ್ಯ ವಿಮರ್ಶೆ’ ಕೃತಿಯು ಇಂದಿನವರೆಗೆ ಐದು ಮರುಮುದ್ರಣಗಳನ್ನು ಕಂಡಿದೆ. “ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಕೃತಿ ಕರ್ನಾಟಕ ಸರ್ಕಾರದ ‘ಕನ್ನಡ ಸಂಸ್ಕೃತಿ ಇಲಾಖೆ’ಯಿಂದ ಮರು ಮುದ್ರಿತವಾಗುತ್ತಿರುವುದು ನನಗೆ ತುಂಬಾ ಸಂತೋಷದ ಸಂಗತಿ. ಇದಕ್ಕಾಗಿ ಆಯ್ಕೆ ಸಮಿತಿಯ ಸದಸ್ಯರಿಗೆ, ಕರ್ನಾಟಕ ಸರಕಾರಕ್ಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ನಾನು ಕೃತಜ್ಞನಾಗಿದ್ದೇನೆ.
ಆಧಾರ
ಬದಲಾಯಿಸಿ- ಸಾಹಿತ್ಯೋಪಾಸನೆ(ಡಾ.ರಂ.ಶ್ರೀ.ಮುಗಳಿ,ಎಂ.ಎ.,ಬಿ.ಟ.,ಡಿ.ಲಿಟ್.)
- ಕನ್ನಡ ಸಾಹಿತ್ಯ ಸಮೀಕ್ಷೆ ೧೯೯೨(ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು)