ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ, ನವದೆಹಲಿ

'ನವದೆಹಲಿ'ಯ 'ಪೂಸಾ,' ದಲ್ಲಿ ಸ್ಥಾಪಿಸಲ್ಪಟ್ಟಿರುವ 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ',(The Indian Council of Agricultural Research) (ICAR) ದ ಕಾರ್ಯಕ್ಷೇತ್ರದ ವ್ಯಾಪ್ತಿ ದೇಶದಾದ್ಯಂತ ವ್ಯಾಪಿಸಿದೆ. ಸನ್.೧೯೨೯ ರ, ಜುಲೈ ೧೬ ರಂದು, ಅಸ್ತಿತ್ವಕ್ಕೆ ಬಂದ ಈ ಮಹಾ ಸಂಸ್ಥೆ, 'ಭಾರತ ಸರ್ಕಾರದ ಕೃಷಿ ಅನುಸಂಧಾನ ಹಾಗೂ ವಿದ್ಯಾಪ್ರಸಾರದ ಹೊಣೆಯನ್ನು ಹೊತ್ತು, ಸಮರ್ಥವಾಗಿ ನಿಭಾಯಿಸುತ್ತಿರುವ,'ಕೃಷಿ ಮಂತ್ರಾಲಯ'ದ ಆಡಳಿತದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. 'ಸ್ವಯಂ ನಿರ್ಭರತೆ'ಯನ್ನು ಹೊಂದಿರುವ ಈ ಸಂಸ್ಥಾನದ ಮೂಲ ನಾಮ, 'ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್' ಯೆಂದಿತ್ತು. (registered society under the Societies Registration Act, 1860)

ಬಿಹಾರದಿಂದ ಹೊಸದೆಹಲಿಗೆ

ಬದಲಾಯಿಸಿ

ಅಮೆರಿಕದ ಧನ ಸಹಾಯದಿಂದ, ಬಿಹಾರ ರಾಜ್ಯದ 'ಪೂಸಾ ಕ್ಷೇತ್ರ'ದಲ್ಲಿ ಸ್ಥಾಪಿಸಲ್ಪಟ್ಟ 'ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್'ಸಂಸ್ಥೆಯ ಕಾಲಾವಧಿಯಲ್ಲಿ ಭೀಕರ ಮಳೆ, ಗುಡುಗು ಸಿಡಿಲಿನ ಆಘಾತದಿಂದ ಸಂಸ್ಥೆಯ ಕಟ್ಟಡ ನಾಶಗೊಂಡ ಬಳಿಕ, ಸರಕಾರ ಹೊಸ ದೆಹಲಿಯಲ್ಲಿ ವಿಶಾಲ ಸ್ಥಳವನ್ನು ಖರೀದಿಸಿ, 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ'ವನ್ನು, ಅಲ್ಲಿ ಸ್ಥಾಪಿಸಿತು. ಆ ಜಾಗಕ್ಕೂ 'ಪೂಸಾ'ಯೆಂದು ಕರೆಯಲಾಯಿತು.

ಸಂಪರ್ಕಿಸಿ

ಬದಲಾಯಿಸಿ