ಭಾರತದಲ್ಲಿ ಟೆನಿಸ್
ಭಾರತ ಮತ್ತು ಟೆನಿಸ್
ಬದಲಾಯಿಸಿಭಾರತದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಟೆನಿಸ್ ಒಂದಾಗಿದೆ. ಆದರೆ ಅದು ಇನ್ನೂ ನಗರ ಪ್ರದೇಶಗಳಲ್ಲಿ ಸೀಮಿತವಾಗಿರುತ್ತದೆ. ಆದರೂ ಟೆನಿಸ್ ಭಾರತದಲ್ಲಿ ಗಣನೀಯ ಅನುಯಾಯಿಗಳಿದ್ದರು ಹೊಂದಿದೆ. ಭಾರತ ಅಂತಾರಾಷ್ಟ್ರೀಯ ಮನ್ನಣೆ ಸಾಧಿಸಿದ ಟೆನಿಸ್ ಆಟಗಾರರರನ್ನು ಹೊಂದಿದೆ. ಅಗ್ರ ಟೆನಿಸ್ ಪಂದ್ಯಾವಳಿಗಳು ಮತ್ತು ಗ್ರಾಂಡ್ ಸ್ಲಾಂಗಳಲ್ಲಿ ಕೆಲವು ಟೆನಿಸ್ ಆಟಗಾರರು ತಮ್ಮ ಅಸ್ತಿತ್ವವನ್ನು ಪ್ರದಶಿಸಿದ್ದಾರೆ. ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ)(All India Tennis Association) (AITA) 1920 ರಲ್ಲಿ ಸ್ಥಾಪಿಸಲಾಯಿತು, ಇದು ಭಾರತದಲ್ಲಿರುವ ಟೆನಿಸ್ ಆಡಳಿತ ಮಂಡಳಿಯಾಗಿದೆ ಮತ್ತು ಅದು ಏಷ್ಯನ್ ಟೆನಿಸ್ ಒಕ್ಕೂಟ (Asian Tennis Federation.)ದ ಸದಸ್ಯ. ಭಾರತದ ಡೇವಿಸ್ ಕಪ್ ತಂಡ ಡೇವಿಸ್ ಕಪ್ನಲ್ಲಿ, ಏಷ್ಯಾದ ಅತ್ಯಂತ ಯಶಸ್ವಿ ತಂಡ. ಅದು ಏಷ್ಯಾದ ರನ್ನರ್ ಅಪ್ ಆಗಿ 3 ಬಾರಿ ಅಂತಿಮಗೊಂಡಿದೆ.
ಟೆನ್ನಿಸ್ ಕ್ರೀಡಾ ಪಟುಗಳು
ಬದಲಾಯಿಸಿ1970 ರ ದಶಕದಲ್ಲಿ, ವಿಜಯ್ ಅಮೃತ್ರಾಜ್ ಪ್ರಸಿದ್ಧಿಗೆ ಬಂದರು. ತಂಡದ ಸಹ ಪಟು ಆಗಿದ್ದ ಶಶಿ ಮೆನನ್, ಜಸಜೀತ್ ಸಿಂಗ್ ಮತ್ತು ಸಹೋದರ ಆನಂದ್ ಅಮೃತ್ರಾಜ್ ಜೊತೆ ವಿಶ್ವಕಪ್ ಫೈನಲ್ಸ್ಗೆ ಭಾರತ ಮುಟ್ಟಿತು. ವಿಜಯ್ 1973ರಲ್ಲಿ ಮತ್ತು 1981 ರಲ್ಲಿ ್ಲ ಅಮೇರಿಕಾದ ಓಪನ್ ಕ್ವಾರ್ಟರ್ ಫೈನಲ್ಸ್ಗೆ ತಲುಪಿದರು. ಅದೇರೀತಿ 1973 ಮತ್ತು 1974 ರಲ್ಲಿ ವಿಂಬಲ್ಡನ್ ನಲ್ಲಿ ಸಾಧನೆ ಕಂಡರು. ರಮೇಶ್ ಕೃಷ್ಣನ್, ರಾಮನಾಥನ್ ಕೃಷ್ಣನ್ ಮಗ ಜೂನಿಯರ್ ವಿಂಬಲ್ಡನ್ ಚಾಂಪಿಯನ್ಶಿಪ್ ಮತ್ತು ಕಿರಿಯ ಫ್ರೆಂಚ್ ಓಪನ್ ಪ್ರಶಸ್ತಿ 1979 ರಲ್ಲಿ ಗೆದ್ದು ವಿಶ್ವದ 1 ನೇ ಶ್ರೇಣಿ ಕಿರಿಯ ಸ್ಥಾನವನ್ನು.ಪಡೆದರು. ಅವರು ವಿಂಬಲ್ಡನ್ (1986) ಕ್ವಾರ್ಟರ್ ಫೈನಲ್ಸ್ ಗೆ ಸಹ ತಲುಪಿದರು. ಯುಎಸ್ ಓಪನ್ ನಲ್ಲಿ (ಎರಡು ಬಾರಿ) ಕ್ವಾರ್ಟರ್ ಫೈನಲ್ಸ್ ಗೆ ತಲುಪಿದರು. [೧]
- ಭಾರತದ ಲಿಯಾಂಡರ್ ಪೇಸ್ ಎಂಟು ಡಬಲ್ಸ್ ಮತ್ತು ಹತ್ತು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹಾಗು ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಹಿರಿಯ ಟೆನ್ನಿಸ್ ಕ್ರೀಡಾ ಪಟು.
ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು
ಬದಲಾಯಿಸಿ1997 ರಲ್ಲಿ ಭಾರತ ಮೊದಲ ಬಾರಿಗೆ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮಿಶ್ರ ಡಬಲ್ಸ್ ನಲ್ಲಿ ಗೆದ್ದಿತು. ಅಂದಿನಿಂದ ಭಾರತೀಯರು ಮಿಶ್ರ ಡಬಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಗ್ರಾಂಡ್ ಸ್ಲಾಮ್ ಜೊತೆಗೆ ಗರ್ಲ್ ಡಬಲ್ಸ್ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಯಾವುದೇ ಭಾರತೀಯ ಇಲ್ಲಿಯವರೆಗೆ ಪುರುಷರ ಅಥವಾ ಮಹಿಳೆಯರ ವಿಭಾಗದಲ್ಲಿ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿಲ್ಲ. [೨]
ಮಿಕ್ಸೆಡ್ ಡಬಲ್ಸ್
ಬದಲಾಯಿಸಿಫಲಿತಾಂಶ | ವರ್ಷ | ಛಾಂಪಿಯನ್ಶಿಪ್ | ನೆಲ | ಆಟಗಾರರು | ಪ್ರತಿಸ್ಪರ್ಧಿಗಳು | ಅಂಕ ಗಳಿಕೆ |
---|---|---|---|---|---|---|
ಉಪಾಂತವಿಜಯಿ | 2012 | ಆಸ್ಟ್ರೇಲಿಯಾ ಓಪನ್ | ಗಟ್ಟಿ ನೆಲ | ಲಿಯಾಂಡರ್ ಪೇಸ್ ಎಲೆನ ವೆದ್ನೆನ (ರಷ್ಯಾ) |
[[ಬೆಥೇನಿ ಸ್ಯಾಂಡ್ಸ್,ಮಟಕ್ ಸ್ಯಾಂದ್ಸ್ ಹೊರಿಯ Horia Tecău |
3–6, 7–5, [3–10] |
Winner | 2012 | ಫ್ರೆಂಚ್ ಓಪನ್(2) | ಮಣ್ಣು | ಮಹೇಶಭೂಪತಿ ಸಾನಿಯಾ ಮಿರ್ಜಾ |
[[ಕ್ಲೌಡಿಯಾ ಜಾನ್ಸ್-ಇಗ್ನಾಸಿಕ್ ಸಾಂಟಿಯಾಗೊ ಗೊನ್ಸಾಲಿಸ್(tennis)]] |
7–6(7–3), 6–1 |
ಉಪಾಂತವಿಜಯಿ | 2012 | ವಿಂಬಲ್ಡನ್ | ಹುಲ್ಲು | ಲಿಯಾಂಡರ್ ಪೇಸ್ ಎಲಿನಾ ವೆಸನಿನಾ |
ಲೀಸಾ ರೇಮಂಡ್ ಮೈಕ್ ಬ್ರಿಯಾನ್ |
3–6, 7–5, 4–6 |
ಉಪಾಂತವಿಜಯಿ | 2014 | ಆಸ್ಟ್ರೇಲಿಯಾ ಓಪನ್ | ಗಟ್ಟಿನೆಲ | ಹೊರಿಯ ತೆಕಾವು ಸಾನಿಯಾ ಮಿರ್ಜಾ |
ಕ್ರಿಸ್ಟೀನಾ ಮ್ಲೆಡೊನೊವಿಕ್ ಡೇನಿಯಲ್ ನೆಸ್ಟರ್ N |
3–6, 2–6 |
ವಿಜಯಿ | 2014 | ಯು.ಎಸ್.ಓಪೆನ್ | ಗಟ್ಟಿನೆಲ | ಬ್ರುನೊ ಸೊರ್ಸ್ ಸಾನಿಯಾ ಮಿರ್ಜಾ |
ಅಬಿಜೈಲ್ ಸ್ಪಿಯರ್ಸ್ ಸಾಂಟಿಯಾಗೊ ಗೊನ್ಸಾಲಿಸ್(tennis) |
6–1, 2–6, [11–9] |
ವಿಜಯಿ | 2015 | ಆಸ್ಟ್ರೇಲಿಯಾ ಓಪನ್ (3) | ಗಟ್ಟಿ | ಲಿಯಾಂಡರ್ ಪೇಸ್ ಮಾರ್ಟಿನಾ ಹಿಂಗಿಸ್ |
ಕೃಸ್ತಿನಾ ಮೆಡಿನೊವಿಕ್ ಡೇನಿಯಲ್ ನೆಸ್ಟರ್ |
6–4, 6–3 |
ವಿಜಯಿ | 2015 | ವಿಂಬಲ್ಡನ್ (4) | ಹುಲ್ಲು | ಲಿಯಾಂಡರ್ ಪೇಸ್ ಮಾರ್ಟಿನಾ ಹಿಂಗಿಸ್ |
ಅಲೆಗ್ಸಾಂಡರ್ ಪೆಯಾ ತಿಮಿಯಾ ಬಾಬೊಸ್ |
6-1, 6-1 |
ಮಹಿಳೆಯರ ಡಬಲ್ಸ್
ಬದಲಾಯಿಸಿಫಲಿತಾಂಶ | ವರ್ಷ | ಛಾಂಪಿಯನ್ಶಿಪ್ | ನೆಲ | ಆಟಗಾರರು | ಪ್ರತಿಸ್ಪರ್ಧಿಗಳು | ಅಂಕ ಗಳಿಕೆ |
---|---|---|---|---|---|---|
ಉಪಾಂತ ವಿಜಯಿ | 2011 | ಫ್ರೆಂಚ್ ಓಪನ್ | ಮಣ್ಣು | ಸಾನಿಯಾ ಮಿರ್ಜಾ ಎಲಿನಾ ವೆಸ್ನಿಯಾ |
ಆಡ್ರಿಯಾ ಹ್ಲಾವಚೊವಾ ಲೂಸಿಯಾ ಹೃದೇಕಾ |
4–6, 3–6 |
ವಿಜಯಿ | 2015 | ವಿಂಬಲ್ಡನ್ | ಹುಲ್ಲು | ಸಾನಿಯಾ ಮಿರ್ಜಾ ಮಾರ್ಟಿನಾ ಹಿಂಗಿಸ್ |
ಎಕತೆರಿನಾ ಮಕರೊವಾ ಎಲೀನಾವೆಸ್ನಿನಾ |
5–7, 7–6(7–4), 7–5 |
ಬಾಲಕಿಯರ ಡಬಲ್ಸ್
ಬದಲಾಯಿಸಿಫಲಿತಾಂಶ | ವರ್ಷ | ಛಾಂಪಿಯನ್ಶಿಪ್ | ನೆಲ | ಆಟಗಾರರು | ಪ್ರತಿಸ್ಪರ್ಧಿಗಳು | ಅಂಕ ಗಳಿಕೆ |
---|---|---|---|---|---|---|
ವಿಜಯಿ | 2003 | ವಿಂಬಲ್ಡನ್ | ಹುಲ್ಲು | ಸಾನಿಯಾ ಮಿರ್ಜಾ ಅಲಿಸಾ ಕ್ಲೆಬೊನೊವಾ |
ಕತರೀನಾ ಬೊಹಮೊವಾ (1986)]] ಮಿಚೆಲ್ಲಾ ಕ್ರಿಜಿಸೆಕ್ |
2–6, 6–3, 6–2 |
ಟೆನಿಸ್ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ
ಬದಲಾಯಿಸಿ- ಸನ್ಮಾನ: ರಿಯೊ ಒಲಿಂಪಿಕ್ಸ್ನಲ್ಲಿ ಸಾನಿಯಾ ಮಿರ್ಜಾ ಜೊತೆಯಾಡಿದ್ದ ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿನಿ, ಟೆನಿಸ್ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ ಅವರನ್ನು ಸನ್ಮಾನಿಸಲಾಯಿತು.[೩]