ಭರತನಾಟ್ಯದ ಮುದ್ರೆಗಳು

ಭರತನಾಟ್ಯದ ಮುದ್ರೆಗಳು

ಬದಲಾಯಿಸಿ

ನರ್ತನದಲ್ಲಿ "ಮುದ್ರ"ಗಳೆಂದರೆ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು, ವ್ಯಕ್ತಪಡಿಸುವ ಸಾಧನವಾಗಿದೆ. 'ಶೃಂಗಾರ', 'ಹಾಸ್ಯ', 'ಕರುಣ', ರೌದ್ರ', 'ವೀರ', 'ಭಯಾನಕ', 'ಭೀಭತ್ಸ', 'ಅಧ್ಬುತ' ಮತ್ತು 'ಶಾಂತ' ಎಂಬ ನವರಸಗಳನ್ನು ಹಾಗೂ ಭಕ್ತಿ, ಪ್ರೇಮಗಳನ್ನು ಸಮರ್ಥವಾಗಿ ಪ್ರತಿಪಾದಿಸುವ ಮಾಧ್ಯಮವೆನ್ನಿಸಿದೆ.[]

 
ಅಸಂಯುಕ್ತ ಮುದ್ರಾ: ಕಟಕಾಮುಖ.

ಸೃಷ್ಟಿ ಕಾರ್ಯಮಗ್ನನಾದ ಬ್ರಹ್ಮನು ಈ ಶಾಸ್ತ್ರವನ್ನು ಭರತಮಹರ್ಷಿಗೆ ಉಪದೇಶಿಸಿದನು. ಭರತಮುನಿಯಿಂದ ಪ್ರಚುರಪಡಿಸಲ್ಪಟ್ಟ, ಅವನ ಹೆಸರಿನಿಂದಲೇ ಜಗತ್ಪ್ರಸಿದ್ದವಾದ ನಾಟ್ಯಶಾಸ್ತ್ರವೇ "ಭರತನಾಟ್ಯ". ಜಗತ್ತಿನಲ್ಲಿ ಇದರ ಆದ್ಯಪ್ರವರ್ತಕ ನಾಟ್ಯಾಚಾರ್ಯ-ಭರತ ಮಹಾಮುನಿ. ನಮ್ಮೆಲ್ಲ ಅಂಗಗಳಿಂದಲೇ 'ನವರಸ'ಗಳನ್ನು ಎಲ್ಲ ಭಾವನೆಗಳನ್ನೂ, ಮೌನ ವಾಙ್ಮಯವನ್ನು ಪ್ರಕಟಿಸಿ, ಪ್ರದರ್ಶಿಸಬಹುದೆಂದು, ಈ ಅಪೂರ್ವ ನಾಟ್ಯಶಾಸ್ತ್ರಕ್ಕೆ ಬುನಾದಿ ಹಾಕಿದ್ದಾನೆ. ನೃತ್ಯದಲ್ಲಿ ತಾಳ, ಸಂಗೀತ, ಭಾವ, ರಸ, ಸಾಹಿತ್ಯಗಳು ಒಂದಕ್ಕೊಂದು ಪೂರಕವಾಗಿ ಮೇಳವಿಸಿಕೊಂಡಿರುತ್ತವೆ. ಅವಿನಾಭಾವ ಸಂಬಂಧ ಹೊಂದಿರುತ್ತವೆ.[]

ನಾಟ್ಯಶಾಸ್ತ್ರದ, 'ಮುದ್ರಾ' ಶಬ್ದಕ್ಕೆ ಸಂಸ್ಕೃತವಾಙ್ಮಯದಲ್ಲಿ ಹಲವಾರು ಅರ್ಥ ಹಾಗೂ ಪ್ರಭೇದಗಳಿವೆ. 'ನೇತ್ರಮುದ್ರ' ನಮ್ಮ ಕಣ್ಣುಗಳ ಚಲನೆಗಳಿಂದ ಹಾಗೂ ಹುಬ್ಬಿನಿಂದ ಭಾವನೆಗಳ ಪ್ರಕಟೀಕರಣ. 'ಮುಖಮುದ್ರಾ', ಮುಖದ ಚಹರೆ, ಬದಲಾಗುವ ಭಾವನೆಗಳ ಪ್ರಕಟೀಕರಣ. ಅಂತೆಯೇ 'ಅಂಗಮುದ್ರಾ', ದೇಹದ ವಿವಿಧ ಅಂಗಗಳ ಚಲನೆಯಿಂದ ಭಾವನೆಗಳ ಪ್ರಕಟೀಕರಣ. "ಹಸ್ತಮುದ್ರಾ", ಹಸ್ತಗಳ, ಬೆರಳುಗಳ ಚಲನೆ, ವಿವಿಧ ವಿನ್ಯಾಸಗಳಿಂದ ಹಲವು ವಸ್ತು ಪ್ರಾಣಿ, ವಿಷಯಗಳ ಪ್ರಕಟೀಕರಣ ಪ್ರತಿಪಾದಿತವಾಗುತ್ತವೆ. ಇವುಗಳಲ್ಲಿ ಹಲವು ವಿಧಗಳಿವೆ. "ಅಸಂಯುಕ್ತ ಹಸ್ತ", ಅಥವಾ "ಏಕಹಸ್ತ" ಮುದ್ರಗಳು, ಒಂದೇ ಹಸ್ತದ ಕೈ ಬೆರಳುಗಳ ಸಂಯೋಜನೆಯಿಂದ ಪ್ರಕಟೀಕರಣ ಆಗುವ ಭಾವನೆ, ವಸ್ತು, ವಿಚಾರಾದಿಗಳ ಮುದ್ರಗಳು. "ಸಂಯುಕ್ತ ಹಸ್ತ" ಎರಡೂ ಹಸ್ತಗಳ ಬೆರಳುಗಳನ್ನು ಸಂಯೋಜಿಸಿಕೊಂಡು ಮಾಡುವ ಮುದ್ರಗಳು. ಇವಲ್ಲದೆ 'ಕಾಯ' ದೇಹದ ವಿವಿಧ ಅಂಗಗಳಾದ ತಲೆ, ಕೈ ಕಾಲುಗಳ ಚಾಲನಾವಿನ್ಯಾಸಗಳಾದ, ವಿವಿಧ ಮುದ್ರೆಗಳಾದ, "ಶಿರೋಮುದ್ರಾ", "ಹಸ್ತಮುದ್ರಾ", "ಕಟಿಮುದ್ರಾ", "ಊರುಮುದ್ರಾ", ಹಾಗೂ "ಪಾದಮುದ್ರಾ"ಗಳ ವಿಶಿಷ್ಟ ಚಾಲನೆಯಿಂದ ಭಾವನಾ ಪ್ರಕಟೀಕರಣ ರೂಪುಗೊಂಡಿದೆ. "ಅಷ್ಟಾಂಗಯೋಗ"ದ ಮೂರನೇ ಹಂತವಾದ ವಿವಿಧ ದೈಹಿಕ ಆಸನಗಳು ಸಹಾ ಇವುಗಳಲ್ಲಿ ಸಂಲಗ್ನವಾಗಿರುತ್ತವೆ ಎಂದು ತಿಳಿಯಲಾಗಿದೆ.[]

ಅಸಂಯುಕ್ತ ಮುದ್ರಾ (ಏಕಹಸ್ತಮುದ್ರೆಗಳು)

ಬದಲಾಯಿಸಿ

"ಅಸಂಯುಕ್ತ ಮುದ್ರಾ" ಅಥವಾ "ಏಕಹಸ್ತಮುದ್ರಾ" ಅಂದರೆ ಒಂದೇ ಹಸ್ತದ ಕೈಬೆರಳುಗಳ ಸಂಯೋಜನೆಯ ವಿವಿಧ ವಿನ್ಯಾಸಗಳಿಂದ ನಮ್ಮ ಭಾವನೆಗಳನ್ನು ಹಲವು ವಸ್ತು ವಿಶೇಷಗಳನ್ನು ಹಾಗೂ ಘಟನೆಗಳನ್ನು ಉಲ್ಲೇಖಿಸುವ, ಪ್ರತಿಬಿಂಬಿಸುವ ಇಪ್ಪತೆಂಟು (೨೮) ಮುದ್ರೆಗಳು ಪ್ರಚಲಿತವಾಗಿವೆ. ಅಭಿನಯ ದರ್ಪಣದಲ್ಲಿರುವ ಅವುಗಳ ಶ್ಲೋಕ ರೂಪ ಹೇಗಿದೆ:

                                         ಪತಾಕಸ್ತ್ರಿಪತಾಕೋರ್ಧಪತಾಕಃ ಕರ್ತರೀಮುಖಃ ॥
ಮಯೂರಾಖ್ಯೋರ್ಧಚಂದ್ರಶ್ಚಾಪ್ಯರಾಳಶ್ಶುಕತುಂಡಕಃ ॥೧೦೩॥
ಮುಶ್ಟಿಶ್ಚಶಿಖರಾಖ್ಯಶ್ಚ ಕಪಿತ್ಥಃ ಕಟಕಾಮುಖಃ ॥
ಸೂಚೀ ಚಂದ್ರಕಲಾ ಪದ್ಮಕೋಶ ಸರ್ಪಶೀರ್ಷಸ್ತಥಾ ॥೧೦೪॥
ಮೃಗಶೀರ್ಷಃ ಸಿಂಹ ಮುಖೋ ಕಾಂಗುಲಸ್ಸೋವಪದ್ಮಕಃ ॥
ಚತುರೋ ಭ್ರಮರಶ್ಚೈವ ಹಂಸಾಸ್ಯೋ ಹಂಸಪಕ್ಷಕಃ ॥೧೦೫॥
ಸಂದಂಶೋ ಮುಕುಳಶ್ಚೈವ ತಾಮ್ರಚೂಡಸ್ತ್ರೆಶೂಲಕಃ ॥
ಅಷ್ಟಾವಿಂಶತಿ ಸಸ್ತಾನಾಮೇವಂ ನಾಮಾನಿ ವೈಕ್ರಮಾತ್ ॥೧೦೬॥
- ಅಭಿನಯ ದರ್ಪಣ
 
ಅಸಂಯುಕ್ತ ಹಸ್ತ: ಪತಾಕ.

೧. ಪತಾಕ ಮುದ್ರಾ:

ಬದಲಾಯಿಸಿ

ಈ ಮುದ್ರೆಯನ್ನು ಬಲಗೈನಲ್ಲೇ ಆಚರಿಸಬೇಕು. ಹೆಬ್ಬೆಟ್ಟನ್ನು ಹಸ್ತದೊಳಕ್ಕೆ ಸ್ವಲ್ಪ ಮಡಿಸಿ ಮಿಕ್ಕೆಲ್ಲ ನಾಲ್ಕೂ ಬೆರಳುಗಳನ್ನು ಜೋಡಿಸಿಕೊಂಡು ನೇರವಾಗಿಟ್ಟುಕೊಳ್ಳುವುದೇ "ಪತಾಕ ಹಸ್ತಮುದ್ರ".

ಈ ಮುಖ್ಯವಾದ ಮುದ್ರೆ, ನಾಟ್ಯದ ಆರಂಭ, ಮೇಘ, ವನ, ನದಿ, ದೇವಸಮೂಹ, ಅಶ್ವ, ಗಾಳಿ, ಸ್ವರ್ಗ, ಮಳೆಗಾಲ, ಇವುಗಳಲ್ಲದೆ ಇನ್ನೂ ಹಲವು ಅಂಶಗಳನ್ನು ಈ ಪತಾಕಮುದ್ರೆ ಪ್ರತಿಪಾದಿಸುತ್ತದೆ.[]

೨. ತ್ರಿಪತಾಕ ಮುದ್ರ:

ಬದಲಾಯಿಸಿ

ಬಲಗೈನಲ್ಲಿ ಆಚರಿಸುತ್ತಿರುವ ಮೇಲಿನ ಪತಾಕ ಮುದ್ರೆಯಂತೆಯೇ ಹಸ್ತವನ್ನು ತೋರಿಸುತ್ತ ಉಂಗುರ ಬೆರಳನ್ನು ಮಡಿಚಿ ತೋರಿಸುವ ವಿನ್ಯಾಸವೇ "ತ್ರಿಪತಾಕ ಹಸ್ತ ಮುದ್ರ".

ಈ ಮುದ್ರೆ ಕಿರೀಟಾ, ಮರ, ಇಂದ್ರ, ಇಂದ್ರಾಯುಧ, ದೀಪ, ಬೆಂಕಿಯಜ್ವಾಲೆ, ಕೆನ್ನೆ, ಬಾಣಾ, ಸ್ತ್ರೀಪುರುಷ ಸಂಪಾದಕ ಇವುಗಳನ್ನು ಪ್ರತಿಪಾದಿಸುತ್ತದೆ.

೩. ಅರ್ಧಪತಾಕ ಮುದ್ರಾ:

ಬದಲಾಯಿಸಿ

ಮೇಲಿನ ತ್ರಿಪತಾಕ ಮುದ್ರೆಯಲ್ಲಿ ಉಂಗುರುದ ಬೆರಳನ್ನು ಮಡಿಸಿದಂತೆ ಅದರ ಜೊತೆಯಲ್ಲಿ ಕಿರುಬೆರಳನ್ನೂ ಮಡಿಸಿ ತೋರಿಸುವ ವಿನ್ಯಾಸವೇ "ಅರ್ಧಪತಾಕ ಮುದ್ರಾ".

ಈ ಮುದ್ರೆ, ಮುರಾಣಿ, ಗೋಪುರ, ಚಿಗುರು, ಫಲಕ, ನದೀದಡೆ, ಗರಗಸ, ಕತ್ತಿ, ಧ್ವಜ, ಗುಡಿ, ಪ್ರಾಣಿಗಳ ಕೊಂಬುಗಳು ಇವುಗಳನ್ನು ಸೂಚಿಸಲು ಈ ಮುದ್ರೆ ವಿನಿಯೋಗವಾಗುತ್ತದೆ.

೪. ಕರ್ತರೀ ಮುಖ ಮುದ್ರಾ:

ಬದಲಾಯಿಸಿ

ಅರ್ಧ ಪತಾಕ ಮುದ್ರೆಯಲ್ಲಿ ಮಡಿಸಿಕೊಂಡಿರುವ ಕಿರುಬೆರಳನ್ನು ನೇಡುತ್ತ, ತೋರುಬೆರಳನ್ನು ಮಧ್ಯಬೆರಳಿನ ಹಿಂಭಾಗಕ್ಕೆ ಹೆಡಿದು ಕತ್ತರಿ ಬಾಯಂತೆ ಅಲ್ಲದೆ ಎರಡೂ ಅಲಗುಗಳಂತೆ, ತೋರು ಮತ್ತು ಮಧ್ಯ ಬೆರಳುಗಳನ್ನು ತೋರಿಸುವ ವಿನ್ಯಾಸವೇ "ಕರ್ತರೀ ಮುಖ ಮುದ್ರಾ".

ಈ ಮುದ್ರೆ, ಲೂಟಿ ಮಾಡುವುದು, ಕಡೆಗಣ್ಣ ನೋಟ, ಭೇದಭಾವ, ಮಿಂಚು, ಕದಿಯುವುದು, ನೋಟ, ಸಾವು, ವ್ಯತ್ಯಾಸ ತೋರುವುದು, ದೀಪಜ್ವಾಲನೆ, ಇವುಗಳನ್ನು ಪ್ರತಿಪಾದಿಸುತ್ತದೆ.

೫. ಮಯೂರ ಮುದ್ರಾ:

ಬದಲಾಯಿಸಿ

ಹಸ್ತದಲ್ಲಿನ ಅನಾಮಿಕಾ, ಉಂಗುರದ ಬೆರಳಿನ ತುದಿಯನ್ನೂ ಉಂಗುಷ್ಠದ ತುದಿಯನ್ನೂ ಸ್ಪರ್ಷಿಸುತ್ತ ಮಿಕ್ಕೆಲ್ಲ ಬೆರಳುಗಳನ್ನು ನೇರವಾಗಿ ಇಟ್ಟು, ವಿನ್ಯಾಸ ಮಾದುವುದೇ, "ಮಯೂರ ಮುದ್ರಾ". ಮಯೂರ ಎಂದರೆ ನವಿಲು, ಅಂತೆಯೇ ಈ ಮುದ್ರೆ ನವಿಲಿನ ಮುಖವನ್ನು ಹೋಲುತ್ತದೆ.

ಈ ಮುದ್ರ ಮುಂಗುರುಳನ್ನು, ಭವಿಷ್ಯವನ್ನು, ನವಿಲು, ಹಕ್ಕಿ, ಗುಂಗುರು, ಹಣೆ, ಬಿಂದಿ, ಕಣೀರು, ಪ್ರಸಿದ್ದ, ಭವಿಷ್ಯ ಇವುಗಳನ್ನು ಪ್ರತಿಪಾದಿಸುತ್ತದೆ.

೬. ಅರ್ಧಚಂದ್ರ ಮುದ್ರಾ:

ಬದಲಾಯಿಸಿ

ಮೊದಲಿನ ಪತಾಕಹಸ್ತದಂತೆಯೇ ನಾಲ್ಕೂ ಬೆರಳುಗಳನ್ನು ಜೋಡಿಸಿ ಮುಡಿಸಿರುವ ಹೆಬ್ಬೆರಳನ್ನು ಮೇಲೆತ್ತಿ ಮೇಲ್ಮುಖವಾಗಿರುವ ಹಸ್ತವನ್ನು ಬಲ ಪಕ್ಕಕ್ಕೆ ಬಾಗಿಸುವ ವಿನ್ಯಾಸವೇ "ಅರ್ಧಚಂದ್ರ ಮುದ್ರಾ".

ಈ ಮೂದ್ರೆಯು, ಚಂದ್ರನನ್ನು, ಭಿಲ್ಲಾಯುಧ, ದೇವತೆಗೆ ಅಭಿಷೇಕ ಮಾಡುವುದು, ಊಟದ ತಟ್ಟೆ, ಉದ್ಭವ, ಸೊಂಟ, ಚಿಂತೆ, ನಮಸ್ಕಾರ, ಧ್ಯಾನ, ನನ್ನದು ಎನ್ನುವುದು, ಪ್ರಾರ್ಥನೆ, ಇವುಗಳನ್ನು ಪ್ರತಿಪಾದಿಸುತ್ತದೆ.

೭. ಅರಾಳ ಮುದ್ರಾ:

ಬದಲಾಯಿಸಿ

ಮೊದಲಿನ ಪತಾಕ ಮುದ್ರೆಯಂತೆಯೇ ಇರುವ ಹಸ್ತದಲ್ಲಿ ತೋರುಬೆರಳನ್ನು ಮಡಿಸಿ ತೋರಿಸುವ ವಿನ್ಯಾಸವೇ "ಅರಾಳ ಮುದ್ರ".

ಈ ಮುದ್ರೆ, ಚಂಡಮಾರುತ, ಧ್ವಂಸ ಮಾಡುವುದು, ನೇರು ಕುಡಿಯುವುದು, ಅಮೃತ ಅಥವಾ ವಿಷಪಾನಾ, ಬಿರುಗಾಳಿ ಗುಡುಗು ಮಿಂಚುಗಳನ್ನು ಪ್ರತಿಪಾದಿಸುತ್ತದೆ.

೮. ಶುಕತುಂಡ ಮುದ್ರಾ:

ಬದಲಾಯಿಸಿ

ಮೇಲಿನ ಅರಾಳ ಮೂದ್ರೆಯಂತೆಯೇ ಹಸ್ತವಿನ್ಯಾಸ ಮಾಡಿ, ಮಡಿಸಿಕೊಂಡಿರುವ ತೋರುಬೆರಳಿನ ಜತೆಗೆ ಉಂಗುರದ ಬೆರಳನ್ನೂ ಸಹಾ ಮಡಿಸಿಕ್ಕೊಳುವುದೇ "ಶುಕತುಂಡ ಮುದ್ರಾ".

ಈ ಮುದ್ರೆ, ಧನುಸ್ಸಿನಲ್ಲಿ ಬಾಣವನ್ನು ಪ್ರಯೋಗಿಸುವ, ಈಟಿ, ಮರ್ಮೊಕ್ತಿ, ಹಿಂದಿನ ಜನ್ಮ ರಹಸ್ಯದ ನೆನಪು, ಬಾಣ, ಆಯುಧ, ಕೋಪ ಪ್ರದರ್ಶನ, ಇವುಗಳನ್ನು ಪ್ರತಿಪಾದಿಸುತ್ತಿದೆ.

೯. ಮುಷ್ಠಿ ಮುದ್ರಾ:

ಬದಲಾಯಿಸಿ

ನಾಲ್ಕೂ ಬೆರಳುಗಳನ್ನು ಹಸ್ತದೊಳಕ್ಕೆ ಮಡಿಸಿಕ್ಕೊಂಡದ್ದು, ಹೆಬ್ಬೆರಳನ್ನು ಅವುಗಳ ಮೇಲೆ, ಮಡಿಸಿ ಇಟ್ಟುಕ್ಕೊಂಡಾಗ "ಮುಷ್ಠಿ ಮುದ್ರಾ" ಆಗುತ್ತದೆ.

ಈ ಮೂದ್ರೆ, ಸ್ಥಿರಭಾವವನ್ನು, ದುಢತ್ವವನ್ನು, ಜಟ್ಟಿಗಳ ಕುಸ್ತಿಯನ್ನು, ಎದೆಗಾರಿಕೆಗಳನ್ನು ಶಕ್ತಿ, ಧೈರ್ಯ, ಕುಸ್ತಿ, ಇತ್ಯಾದಿಗಳನ್ನು ಪ್ರತಿಪಾದಿಸುತ್ತದೆ.

 
ಅಸಂಯುಕ್ತ ಹಸ್ತ: ಶಿಖರ.

೧೦. ಶಿಖರ ಮುದ್ರಾ:

ಬದಲಾಯಿಸಿ

ಮೇಲಿನ ಮುಷ್ಠಿ ಹಸ್ತದಂತೆಯೇ ಎಲ್ಲ ಬೆರಳುಗಳನ್ನು ಹಸ್ತದೊಳಕ್ಕೆ ಮಡಿಸಿಕ್ಕೊಂಡು, ಮಡಿಸಿರುವ ಹೆಬ್ಬೆರಳನ್ನು ಮೇಲಕ್ಕೆತ್ತಿ ಚಾಚಿಕ್ಕೊಳ್ಳುವ ವಿನ್ಯಾಸವೇ "ಶಿಖರ ಮುದ್ರಾ" ಆಗುತ್ತದೆ.

ಈ ಮುದ್ರೆ, ಅರೆಯುವ ಕ್ರಿಯೆಯನ್ನು, ಪತಿಯನ್ನು, ಪೌನವನ್ನು, ಪಿತೃತರ್ಪಣವನ್ನು, ಕಾಮದೇವ, ಬಿಲ್ಲು, ಕಂಭ, ಮೌನ, ಪತಿ, ಕೈ ಕಾಲುಗಳನ್ನು, ಹಾಗೂ ಮೊಸರು ಕಡೆಯುವುದನ್ನು ಪ್ರತಿಪಾದಿಸುತ್ತದೆ.

೧೧. ಕಪಿತ್ಥ ಮುದ್ರಾ:

ಬದಲಾಯಿಸಿ

ಮೇಲಿನ ಶಿಖರ ಮೂದ್ರೆಯಲ್ಲಿ ಹೆಬ್ಬೆರಳನ್ನು ಎತ್ತಿ ಹೆಡಿದಿರುತ್ತೇವೆ. ಹೀಗೆ ಎತ್ತಿರುವ ಹೆಬ್ಬೆಟ್ಟಿನ ತುದಿಯ ಮೇಲೆ ತೋರುಬೆರಳನ್ನು ಕೊಕ್ಕೆಯಾಗಿಸಿ ಹೆಡಿದುಕೊಳ್ಳುವ ವಿನ್ಯಾಸವೇ "ಕಪಿತ್ಥ ಮುದ್ರಾ".

ಈ ಮುದ್ರೆ, ತಾಳವನ್ನು ಹಿಡಿದುಕೊಳ್ಳುವುದು, ಹಾಲುಕರಿಯುವುದು, ಕಣ್ಣಿಗೆ ಕಾಡಿಗೆ ಧರಿಸುವುದು, ಪುಷ್ಪವನ್ನು, ಆನಂದವನ್ನು ತೋರಿಸಲು, ಧೂಪ, ಲಕ್ಷ್ಮೀ, ಸರಸ್ವತೆ, ಪ್ರದಕ್ಷಿಂಎ, ತಾಳ, ದೀಪ ಮತ್ತು ಊದುಬತ್ತಿ ಹಿಡಿದುಕೊಳ್ಳುವುದು ಇತ್ಯಾದಿ ಚಟುವಟಿಕೆಗಳು ಈ ಮುದ್ರೆಯಿಂದ ಪ್ರತಿಪಾದಿಸಲ್ಪಡುತ್ತದೆ.

೧೨. ಕಟಕಾಮುಖ:

ಬದಲಾಯಿಸಿ

ನಮ್ಮ ತೋರುಬೆರಳು ಮತ್ತು ಮಧ್ಯಮಬೆರಳ ತುದಿಗಳನ್ನು ಅಂಗುಷ್ಠದ ತುದಿಗೆ ಸ್ಪರ್ಷಿಸುವುದು ಹಾಗೂ ಮಿಕ್ಕಿ ಉಂಗುರದ ಬೆರಳನ್ನು ಮತ್ತು ಕಿರುಬೆರಳುಗಳನ್ನು ಸ್ವಲ್ಪ ಬಗ್ಗಿಸಿ ಹಿಡಿಯುವ ವಿನ್ಯಾಸವೇ ಕಟಕಾಮುಖ ಮುದ್ರಾ ವೆನ್ಯಾಸವಾಗುತ್ತದೆ.

ಈ ಮುದ್ರೆ, ಹೂಕೀಳುವುದು, ಮುತ್ತುಮಾಲೆ, ಹೂಮುಡಿಯುವುದು, ನೋಟ ಮತ್ತು ಮಾತು, ಹೋತ್ರ, ಹವ್ಯ, ಕೊಡೆ, ಬಿಲ್ಲಿನ ಹೆದೆ ಏರಿಸುವುದು, ವೀಣೆಯ ತಂತಿ ಮಿಡಿಯುವುದು, ಬಾಚಣೆಗೆ, ಕನ್ನಡಿ ದರ್ಶನ, ರಂಗೋಲಿ ಚಿತ್ರಿಸುವುದು ಇತ್ಯಾದಿ ಪ್ರದರ್ಶಿಸಲು ಈ ಮುದ್ರೆ ಉಪಯೋಗಿಸಬಹುದು.

 
ಅಸಂಯುಕ್ತ ಹಸ್ತ: ಸೂಚಿ.

೧೩. ಸೂಚಿ:

ಬದಲಾಯಿಸಿ

ಮೇಲೆ ಪ್ರದರ್ಶಿಸಿದ ಕಟಕಾಮುಖಮುದ್ರೆಯ ಈ ವಿನ್ಯಾಸದಲ್ಲಿ ಹೆಬ್ಬೆರಳಿಗೆ ಸ್ಪರ್ಷಿಸುತ್ತಿರುವ ತೋರುಬೆರಳನ್ನು ನೇರವಾಗಿ ಮೇಲಕ್ಕೆ ನೀಡುವ, ಅಂತೆಯೇ ಮಿಕ್ಕ ಬೆರಳುಗಳನ್ನು ಹೆಬ್ಬೆಟ್ಟಿನೊಡನೆ ಸ್ಪರ್ಷಿಸುತ್ತ ಇರುವ ವಿನ್ಯಾಸವೇ "ಸೂಚೀ ಮುದ್ರಾ" ಎಂದಾಗುತ್ತದೆ.

ಈ ಮುದ್ರೆಯನ್ನು, ಅವನು, ಅವಳು ಎಂದು ನಿರ್ದೇಶಿಸುವುದು, ಮೂಲೆ ಎಂಬ ಜಾಗ ತೋರಿಸುವುದು, ಪರಬ್ರಹ್ಮ, ಒಂದನ್ನು ತೋರಿಸುವುದು, ಏಕೆ, ಯಾರು, ನಗರ, ವಿಶ್ವ, ಕೂದಲು, ಹೇಗೆ, ಛತ್ರಿ, ಸಾಮರ್ಥ್ಯ, ಜನರಗುಂಪು, ಯೋಚನೆ, ಸಂಜೆ ಎಂಬ ಹಲವು ಭಾವನೆ ಪ್ರತಿಪಾದಿಸುತ್ತದೆ.

 
ಅಸಂಯುಕ್ತ ಹಸ್ತ: ಚಂದ್ರಕಲಾ.

೧೪. ಚಂದ್ರಕಲಾ ಮುದ್ರಾ:

ಬದಲಾಯಿಸಿ

ಮೇಲಿನ ಸೂಚಿಮುದ್ರದಲ್ಲಿ ಸ್ಪರ್ಷಿಸುತ್ತಿರುವ ಮಧ್ಯದ ಬೆರಳನ್ನೂ ಸಹಾ ತೆಗೆದು ಕೇವಲ ತೋರುಬೆರಳನ್ನು ನೀಡಿಕೊಂಡಿದ್ದು ಮಿಕ್ಕ ಮೂರೂ ಬೆರಳುಗಳನ್ನು ಮಡಿಸಿಕ್ಕೊಂಡಿರುವ ವಿನ್ಯಾಸವನ್ನು "ಚಂದ್ರಕಲಾ ಮುದ್ರಾ" ಎಂದೇ ನಿರ್ದೇಶಿಸಿದೆ.

ಈ ಮುದ್ರೆಯನ್ನು, ಶೀತಲ ಕಿರಣನಾದ ಪೂರ್ಣಚಂದ್ರನ ಪ್ರತಿಪಾದನೆಗೆ ಹಾಗೂ ಮುಖ, ಅಳೆಯುವ ಗೇಣು, ಅರ್ಧಚಂದ್ರದ ಆಕಾರದ ವಸ್ತುಗಳನ್ನು ತೋರಿಸಲು ವಿನಿಯೋಗವಾಗುತ್ತದೆ.

 
ಅಸಂಯುಕ್ತ ಹಸ್ತ: ಪದ್ಮಕೋಶ ಮುದ್ರಾ.

೧೫. ಪದ್ಮಕೋಶ ಮುದ್ರಾ:

ಬದಲಾಯಿಸಿ

ಕೈನ ಬೆರಳುಗಳನ್ನೆಲ್ಲ ಬಿಡಿಸಿ ಅಂಗೈ ಒಳಕ್ಕೆ ಸ್ವಲ್ಪ ಮಡಿಸಿ ಅರಳುತ್ತಿರುವ ಕಮಲದ ಮೊಗ್ಗಿನಂತೆ ತೋರಿಸುವ ವಿನ್ಯಾಸವೇ ಪದ್ಮಕೋಶ ಮುದ್ರಾ.

ಈ ಮುದ್ರೆ, ಬಿಲ್ವ ಮತ್ತು ಕಪಿತ್ಥಫಲ, ಮೊಲೆಗಳು, ಮಾವು, ಹುತ್ತ, ಮೊಟ್ಟೆ, ನೈದಿಲೆ ಹೂ, ತಟ್ಟೆ, ಹೂ, ಘಂಟೆ, ಕನ್ಯಾದಾನ, ದಾಳಿಂಬೆಹಣ್ಣು, ನಕ್ಷತ್ರ ಇತ್ಯಾದಿಗಳನ್ನು ಪ್ರತಿಬಿಂಬಿಸಲು ಉಪಯೋಗಿಸಬಹುದು.

೧೬. ಸರ್ಪಶೀರ್ಷ ಮುದ್ರಾ:

ಬದಲಾಯಿಸಿ

ಮೊದಲಿನ ಪತಾಕ ಮುದ್ರದಂತೆಯೇ ಕೈಗಳನ್ನು ಹಿಡಿದು ನಾಲ್ಕೂ ಬೆರಳುಗಳನ್ನು ಮುಂದಕ್ಕೆ ವಾಲಿಸಿ, ಹಾವಿನ ಹೆಡೆಯಂತೆ ವೆನ್ಯಾಸ ಮಾಡುವುದೇ "ಸರ್ಪಶೀರ್ಷ ಮುದ್ರಾ".

ಈ ಮುದ್ರೆಯನ್ನು ಹಾವು, ಚಂದನ ಅರೆದಮುದ್ದೆ, ನಿಧಾನ, ಚುಮುರ್ಕಿಸು, ತೀರ್ಥ, ಗಮನಿಸು, ದೊನ್ನೆ, ಚಪ್ಪಾಳೆ, ಪ್ರತಿಮೆ, ದೋಣಿ, ಹಾಲು, ಪ್ರಾಣಾಯಾಮ ಆನೆ, ಕೇಸರಿಹೂ, ಎಂಬ ಹಲವಾರು ವಸ್ತು ಮತ್ತು ಭಾವನೆಗಳನ್ನು ಬಿಂಬಿಸುತ್ತದೆ.

೧೭. ಮೃಗಶೀರ್ಷ

ಬದಲಾಯಿಸಿ

ನಮ್ಮ ಹೆಬ್ಬೆರಳುಗಳನ್ನು ಮತ್ತು ಕಿರುಬೆರಳುಗಳನ್ನು ಮೇಲಕ್ಕೆ ಎತ್ತಿ ನೇರವಾಗಿ ಹಿಡಿದುಕ್ಕೊಂಡು ಮಿಕ್ಕ ಮೂರು ಬೆರಳುಗಳನ್ನು ಬಗ್ಗಿಸಿಟ್ಟು ತೋರಿಸುವ ವಿನ್ಯಾಸವೇ "ಮೃಗಶೀರ್ಷ".

ಈ ಮುದ್ರೆಯು ಕ್ರಮವಾಗಿ ಹೆದರಿದವನು, ತ್ರಿಪುಂಡ್ರಧಾರಣೆ, ರಂಗೋಲಿ, ವಿಭೂತಿ ಧಾರಣೆ, ಮೇಟ್ಟಿಲು, ಸ್ತ್ರೀ, ಮನೆ, ಜನಗಳ ಬೇಟಿ, ಚಲನೆ, ಇನ್ನೂ ಹಲವು ಭಾವಗಳನ್ನು ತೋರಿಸುತ್ತದೆ.

 
ಅಸಂಯುಕ್ತ ಹಸ್ತ: ಸಿಂಹಮುಖ.

೧೮. ಸಿಂಹಮುಖ

ಬದಲಾಯಿಸಿ

ನಮ್ಮ ಕೈನ ಮಧ್ಯಬೆರಳಿನ ತುದಿ ಮತ್ತು ಉಂಗುರಬೆರಳಿನ ತುದಿಗಳೆರಡನ್ನೂ ಹೆಬ್ಬೆಟ್ಟಿನತುದಿಗೆ ಸ್ಪರ್ಷಿಸುವ ವಿನ್ಯಾಸವೇ "ಸಿಂಹಮುಖ ಮುದ್ರಾ" ಎನ್ನುತ್ತಾರೆ.

ಹವಳ, ಮುತ್ತು, ಸುವಾಸನೆ, ಗುಂಗುರು, ಕೇಳುವುದು, ಬಿಂದು, ಮೋಕ್ಷ, ಹೃದಯ, ಆನೆ, ಮೊಲ, ದರ್ಭೆ, ಕಮಲಹಾರ, ಹೂ, ಸಿಂಹದಮುಖ, ವೈದ್ಯಕೀಯಸಿದ್ದತೆ. ಇವುಗಳನ್ನು ಪ್ರತಿಬಿಂಬಿಸಲು ಈ ಮುದ್ರೆಯನ್ನು ಉಪಯೋಗಿಸಲಾಗುತ್ತದೆ.

೧೯. ಕಾಂಗೂಲ ಮುದ್ರಾ:

ಬದಲಾಯಿಸಿ

ಪದ್ಮಕೋಶ ಮುದ್ರದಂತೆಯೇ ವಿನ್ಯಾಸಮಾಡಿ ಉಂಗುರದ ಬೆರಳನ್ನು ಮಾತ್ರ ಹಸ್ತಮಧ್ಯಕ್ಕೆ ಮಡಿಸಿಹಿಡಿಯುವ ವಿನ್ಯಾಸವೇ "ಕಾಂಗೂಲ ಮುದ್ರಾ" ಎಂದು ಪ್ರಚಲಿತವಿದೆ.

ನೊಂಬೆಹಣ್ಣು, ಕನ್ಯೆಯಮೊಲೆಗಳು, ಕಲ್ಹಾರಪುಷ್ಪ, ಚಕೋರಪಕ್ಷಿ, ಅಡಿಕೆ, ಕಿರುಗೆಜ್ಜೆಗಳು, ಚಾತಕಪಕ್ಷಿ, ಮುಂತಾದವುಗಳನ್ನು ಪ್ರತಿಪಾದಿಸಲು ಈ ಮುದ್ರೆ ವಿನಿಯೋಗವಾಗುತ್ತದೆ.

೨೦. ಅಲಪದ್ಮ ಮುದ್ರಾ:

ಬದಲಾಯಿಸಿ

ಎಲ್ಲ ಬೆರಳುಗಳನ್ನು ದೂರ ದೂರಕಿಟ್ಟು ಅಂಗೈಯನ್ನು ಮೇಲ್ಮುಖವಾಗಿಸಿ ವಿನ್ಯಾಸ ಮಾಡುವುದೆ "ಅಲಪದ್ಮ ಮುದ್ರಾ".

ಕಮಲ, ಕಪಿತ್ಥವೆಂಬ ಹಣ್ಣು, ತಿರುಗುವುದು, ಕನ್ನಡಿ, ವೆರಹ ವೇದನೆ, ಮೊಲೆಗಳು, ಪೂರ್ಣಚಂದ್ರ, ಜಡೆ, ಎತ್ತರ, ಕೆರೆ, ಗಾಡಿ, ಗಾಳಿ, ನೀರು, ಪ್ರಶಂಸೆ ಇವುಗಲನ್ನು ಪ್ರತಿಪಾದಿಸಲು ಈ ಮುದ್ರೆ ಪ್ರಯೋಗಿಸಲ್ಪಡುತ್ತದೆ.

೨೧. ಚತುರ ಮುದ್ರಾ:

ಬದಲಾಯಿಸಿ

ನಮ್ಮ ಕಿರುಬೆರಳನ್ನು ಮಾತ್ರ, ನೇರವಾಗಿಟ್ಟು, ಉಳಿದ ತರ್ಜನೀ ಸಹಿತ ಮೂರು ಬೆರಳುಗಳನ್ನು ಮಡಿಸಿ ನೇರವಾಗಿಟ್ಟು ಹೆಬ್ಬೆರಳನ್ನು ಉಂಗುರಬೆರಳ ಮೂಲಕ್ಕೆ ಸ್ಪರ್ಷಿಸಿ ಇಡುವ ವಿನ್ಯಾಸವೇ "ಚತುರಮುದ್ರಾ" ಎಂಬ ಅಭದಾನ ಪಡೆದಿದೆ.

ಈ ಮುದ್ರೆ, ಕಸ್ತೂರಿಸುವಾಸನೆ, ಸ್ವಲ್ಪ, ಚಿನ್ನ, ಮತ್ತಿತರ ಲೋಹಗಳು, ಒದ್ದೆ, ಕೋಶ, ತುಪ್ಪ, ಎಣ್ಣೆ, ಮಂದಗಮನೆ, ಆಸನ, ಚಲನೆ, ಪ್ರತಿಪಾದನೆಗೆ ವಿನಿಯೋಗವಾಗುತ್ತದೆ.

೨೨. ಭ್ರಮರ ಮುದ್ರಾ:

ಬದಲಾಯಿಸಿ

ಮಧ್ಯ ಬೆರಳಿನ ತುದಿಯನ್ನು ಮತ್ತು ಹೆಬ್ಬೆರಳಿನ ತುದಿಯನ್ನು ಮತ್ತು ಹೆಬ್ಬೆರಳಿನ ತುದಿಯನ್ನು ಸ್ಪರ್ಷಿಸುವುದು, ತೋರುಬೆರಳ ತುದಿಯನ್ನು ಸ್ಪರ್ಷವಾಗುವಂತೆ ಮಡಿಸಿಟ್ಟುಕೊಳ್ಳುವುದು ಮತ್ತು ಮಿಕ್ಕ ಉಂಗುರ ಬೆರಳು ಕಿರುಬೆರಳುಗಳನ್ನು ನೇರವಾಗಿಟ್ಟುಕೊಳ್ಳುವುದೇ "ಭ್ರಮರ ಮುದ್ರಾ".

ಈ ಮುದ್ರೆ ಭ್ರಮರ ಎಂದರ ಜೇನು ನೊಣ, ದೊಂಬಿ, ಜೇನ್ನೊಣ್, ಗಿಣಿ, ಧ್ಯಾನ, ಯೋಗ, ಕೋಗಿಲೆ ಪ್ರತಿಪಾದನೆಗೆ ವಿನಿಯೋಗವಾಗುತ್ತದೆ.

೨೩. ಹಂಸಾಸ್ಯ ಮುದ್ರಾ:

ಬದಲಾಯಿಸಿ

ಮಧ್ಯದ ಬೆರಳ ಸಹಿತ ಪಕ್ಕದ ಬೆರಳುಗಳನ್ನು ವಿರಳವಾಗಿ ದೂರವಾಗಿರಿಸಿ, ತೋರುಬೆರಳಿನ ತುದಿಯನ್ನು ಹೆಬ್ಬೆರಳ ತುದಿಗೆ ಸ್ಪರ್ಷಿಸುವುದೇ "ಹಂಸಾಸ್ಯ ಮುದ್ರಾ".

ಈ ಮುದ್ರೆ ಮಾಂಗಲ್ಯ ಧಾರಣೆ, ಸಲಹೆ, ಚಿತ್ರ, ದೀಪದ ಬತ್ತಿ, ಚಿತ್ರಲೇಖನ, ಕಾಡುನೊಣ, ಹೊಳೆಯುವ ವಸ್ತು, ರೂಪೆಸುವುದು, ಇಂತಹ ಹಲವು ಭಾವನೆಗಳನ್ನು ಪ್ರಕಟಪಡಿಸಲು ವಿನಿಯೋಗವಾಗುತ್ತದೆ.

೨೪. ಹಂಸಪಕ್ಷ ಮುದ್ರಾ:

ಬದಲಾಯಿಸಿ

ಸರ್ಪಶೀರ್ಷ ಮುದ್ರೆಯಂತೆಯೇ ವಿನ್ಯಾಸಮಾಡಿ ಕೈನ ಕಿರುಬೆರಳನ್ನು ಮಾತ್ರ ನೇರವಾಗಿ ನೇಡಿಕೊಳ್ಳುವುದೇ "ಹಂಸಪಕ್ಷ ಮುದ್ರಾ".

ಈ ಮುದ್ರೆ, ಆರುಸಂಖ್ಯೆ, ಸೇತುವೆ, ನಖಕ್ಷತ, ಕೆಲಸಮಾಡುವ ವಿಧಾನ, ಈ ಸೂಚನೆಗಳನ್ನು ಪ್ರತಿಪಾದಿಸಲು ವಿನಿಯೋಗವಾಗುತ್ತದೆ.

೨೫. ಸಂದಂಶ ಮುದ್ರಾ:

ಬದಲಾಯಿಸಿ

ಪದ್ಮಕೋಶ ಮುದ್ರೆಯನ್ನೇ ಆಚರಿಸಿ ಆ ಮುದ್ರೆಯಲ್ಲಿನ ಐದೂಬೆರಳುಗಳನ್ನು ಪುನಃಪುನಃ ಸೇರಿಸುವುದು ಹಾಗೂ ಬಿಡಿಸುವ ವಿನ್ಯಾಸವೇ "ಸಂದಂಶ ಮುದ್ರಾ".

ಉದಾರತೆ, ಹೋಮ, ಘಾಯ, ಕೀಟಗಳು, ಪೂಜೆ, ಚಿತ್ರಲೇಖನ, ರುದ್ರಾಕ್ಷಿ, ನಕ್ಷತ್ರಗಳು, ಈ ಮುದ್ರೆ ಪ್ರತಿಪಾದಿಸುತ್ತದೆ.

೨೬. ಮುಕುಲ ಮುದ್ರಾ:

ಬದಲಾಯಿಸಿ

ಮುಕುಲ ಎಂಬ ಪದದ ಅರ್ಥ ಹೂವಿನ ಮೊಗ್ಗು. ಅಂತೆಯೇ ನಮ್ಮೆಲ್ಲ ಐದೂ ಬೆರಳುಗಳ ತುದಿಗಳನ್ನು ಜತೆಗೂಡಿಸಿ ಹೂವಿನ ಮೊಗ್ಗಿನ ಆಕರ ಪ್ರದರ್ಶಿಸುವುದೇ "ಮುಕುಲ ಮುದ್ರಾ".

ಈ ಮುದ್ರೆ, ಮಲ್ಲಿಗೆಹೂ, ಭೋಜನ, ಕಾಮದೇವ, ವಿಭೂತಿ, ಕುಕ್ಷಿ, ಮುದ್ರಾ ಧಾರಣೆ, ಬಾಳೆಹೂ, ಊಟಮಾಡುವುದು, ಇತ್ಯಾದಿ ಚಟುವಟಿಕೆಗಳನ್ನು ಪ್ರತಿಪಾದಿಸುತ್ತದೆ.

 
ಅಸಂಯುಕ್ತ ಹಸ್ತ: ತಾಮ್ರಚೂಡ.

೨೭. ತಾಮ್ರಚೂಡ ಮುದ್ರಾ:

ಬದಲಾಯಿಸಿ

ಮುಕುಲ ಹಸ್ತದಂತೆಯೇ ವಿನ್ಯಾಸ ಮಾಡಿ ಕೇವಲ ತೋರುವೆರಳನ್ನು ಮಾತ್ರ ನೀಡಿ ಕೊಕ್ಕೆಯಂತೆ ಬಗ್ಗಿಕೊಳ್ಳುವ ವಿನ್ಯಾಸವೇ "ತಾಮ್ರಚೂಡ ಮುದ್ರಾ".

ಈ ಮುದ್ರೆ ಹುರಿಯುವುದು, ಬಕಪಕ್ಷಿ, ಕಾಗೆ, ಒಂಟೆ, ಕರು, ಪತ್ರಗಳು, ಕೋಳಿ ಇತ್ಯಾದಿಯನ್ನು ಪ್ರತಿಪಾದಿಸಲು ಉಪಯೋಗಿಸಲ್ಪಡುತ್ತದೆ.

೨೮. ತ್ರಿಶೂಲ ಮುದ್ರಾ:

ಬದಲಾಯಿಸಿ

ನಮ್ಮ ಕಿರುಬೆರಳನ್ನು ಬಗ್ಗಿಸಿ ಹೆಬ್ಬೆಟ್ಟಿನ ತುದಿಯಿಂದ ಅದನ್ನು ಮೃದುವಾಗಿ ಅಮುಕಿ ಹಿಡಿದು ಮಿಕ್ಕ ಉಂಗುರದ ಬೆರಳು ಮಧ್ಯಬೆರಳು ಮತ್ತು ತೋರುಬೆರಳುಗಳನ್ನು ನೇರವಾಗಿಟ್ಟುಕ್ಕೊಂಡು ಆಚರಿಸುವ ವಿನ್ಯಾಸವೇ "ತ್ರಿಶೂಲ ಮುದ್ರಾ".

ಈ ಮುದ್ರೆ, ಬೆಲ್ಪತ್ರೆ, ಮೂರು ಸಂಖ್ಯೆ, ಶಿವನ ತ್ರಿಶೂಲ, ಭೂಮಿ ಎಂಬುವುದನ್ನು ಪ್ರತಿಪಾದಿಸುತ್ತದೆ. []

ಛಾಯಾಚಿತ್ರ

ಬದಲಾಯಿಸಿ
 
ಪತಾಕ ಹಸ್ತ

ಸಂಪರ್ಕ

ಬದಲಾಯಿಸಿ

·

ಉಲ್ಲೇಖನ

ಬದಲಾಯಿಸಿ
  1. ೧.೦ ೧.೧ http://www.britannica.com/EBchecked/topic/64017/bharata-natyam
  2. ನಾಟ್ಯ ಯೋಗ ಮುದ್ರಾ - ಕೆ. ರಂಗರಾಜ ಅಯ್ಯಂಗಾರ್
  3. "Hastas". Archived from the original on 2019-12-30. Retrieved 2019-12-30.
  4. "Know The Single-Hand Bharatanatyam Mudras". Archived from the original on 2020-01-10. Retrieved 2019-12-30.