ಭದ್ರಾವತಿ ರಾಮಾಚಾರಿ

ಡಾ.ಭದ್ರಾವತಿ ರಾಮಾಚಾರಿಯವರು ೯-೮-೧೯೭೨ ಬೊಮ್ಮನ ಕಟ್ಟೆ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ ರಾಜ್ಯದಲ್ಲಿ ಜನಿಸಿದರು. ಇವರು ಕುಂಚ ಕಲಾವಿದರು, ಸಾಹಿತಿ, ಕಾದಂಬರಿಕಾರರು, ಚಲನಚಿತ್ರ ನಿರ್ದೇಶಕರು, ಪ್ರಕಾಶಕರು.

ಇವರ ಸಾಹಿತ್ಯ ರಚನೆಗಳು

ಬದಲಾಯಿಸಿ

೧೯೯೨ರಲ್ಲಿ "ಪ್ರೀತಿ" ಎಂಬ ಕಥೆ ರಚನೆ, ತೀರ್ಥಹಳ್ಳಿಯ 'ಸಹ್ಯಾದ್ರಿ ವಾರ್ತೆ' ಎಂಬ ಕನ್ನಡ ವಾರ ಪತ್ರಿಕೆಯಲ್ಲಿ ಪ್ರಕಟವಾದ ನಂತರ.....

ಸುಧಾ, ತರಂಗ, ಕರ್ಮವೀರ, ಮಂಗಳ, ತು‍‌‌ಷಾರ, ಉತ್ಥಾನ, ರಾಗಸಂಗಮ, ಪ್ರಿಯಾಂಕ, ಗಂಡ ಹೆಂಡತಿ, ಉದಯವಾಣಿ, ಕನ್ನಡ ಪ್ರಭ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ 386 ಸ್ವರಚಿತ ಕಥೆಗಳು ಪ್ರಕಟವಾಗಿವೆ.

ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸದಿಂಗತ, ಸುಧಾ, ತರಂಗ, ಮಂಗಳ, ಕರ್ಮವೀರ, ರೂಪತಾರ, ಪ್ರಿಯಾಂಕ, ಗೃಹಶೋಭಾ ಹಾಗೂ ಮುಂತಾದ ಪತ್ರಿಕೆಗಳಲ್ಲಿ ಇದುವರೆಗೆ 500 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. (ಸಂದರ್ಶನ, ವೈಚಾರಿಕ ಬರಹ, ಚಿತ್ರಲೇಖನ, ಸಾಂದರ್ಭಿಕ ಲೇಖನ, ಕೃಷಿ ಲೇಖನಗಳು ಇತ್ಯಾದಿ....)

ಕಾದಂಬರಿಗಳು

ಬದಲಾಯಿಸಿ
  • ಚೈತ್ರ ತಂದ ಚಿಗುರು(೨ ಬಾರಿ ಮುದ್ರಣ),
  • ಹರಕೆ,
  • ನೆನಪೊಂದೇ ಶಾಶ್ವತ,
  • ಆಶಾಕಿರಣ(ಮಕ್ಕಳ ಕಾದಂಬರಿ),
  • ಭಾವ ನದೀ...
  • ಅಮ್ಮಾ...ನನ್ನನ್ನೂ ಸ್ವಲ್ಪ ಅರ್ಥ ಮಾಡ್ಕೋ...
  • ಮತ್ತೆ ಬದುಕಿತಾ ಬಡ ಜೀವ !?
  • ಅನ್ನದಾತನ ಸ್ವಗತ
  • ದೇವರು ಬಂದಾಗ
  • ನಿರ್ಭಯಾ

ಕಥಾ ಸಂಕಲನಗಳು

ಬದಲಾಯಿಸಿ
  • ಅಭಿರಾಮಿ ಮತ್ತು ಇತರ ಕಥೆಗಳು,
  • ನಮ್ಮ ಬದುಕಿನ ಸುತ್ತ,
  • ಕನಸುಗಳು ನೂರಾರು,
  • ಹೊಸ ಚಿಗುರು(ಸಂಪಾದಿತ ಕೃತಿ),
  • ತುಂತುರು ಮಳೆ ಹನಿ(ಸಂಪಾದಿತ ಕೃತಿ),
  • ಪಯಣಿಗರು,
  • ಬೆಳಕು ನೀನಾದೆ.
  • ಬೇವರ್ಸಿ ಬರೆದ ಕಥೆಗಳು
  • ದೀಪ ಹಚ್ಚುವ ಸಮಯ
  • ವಡೆ ಸ್ವಾಮಿ

ಆಕಾಶವಾಣಿ

ಬದಲಾಯಿಸಿ
  • ಭದ್ರಾವತಿ ಆಕಾಶವಾಣಿಯಿಂದ ೧೨ ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ.
  • ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕ ರಾಜ್ಯದ ಎಲ್ಲಾ ಬಾನುಲಿ ಕೇಂದ್ರದಿಂದ ಏಕಕಾಲಕ್ಕೆ ಪ್ರಸಾರವಾಗಿದೆ.
  • ಲೇಖನಗಳ ಪುಸ್ತಕ
  • ಅವಸರ
  • ಜೀವನ ಚರಿತ್ರೆ
  • ಹಳ್ಳಿ ಹೈದ (ಡಾ.ದೊಡ್ಡರಂಗೇಗೌಡರ ಜೀವನ ಚರಿತ್ರೆ)
  • ಪ್ರತಿ ಬಿಂಬ

ನಾಟಕದಲ್ಲಿ ಅಭಿನಯ

ಬದಲಾಯಿಸಿ
  • ನಮ್ಮ ನಿಮ್ಮ ನಡುವೆ
  • ಓಟು ನೋಟು ಹ್ಯಾಟು
  • ಬಾಳು ಗೋಳು
  • ವಿಧೂಷಕ

ಮುಂತಾದ ನಾಟಕಗಳಲ್ಲಿ ಅಭಿನಯ ಹಾಗೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಪ್ರದರ್ಶನ.

ಚಲನಚಿತ್ರ

ಬದಲಾಯಿಸಿ
  • ಉಂಡೂ ಹೋದ, ಕೊಂಡೂ ಹೋದ (ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ) ಸಹಾಯಕ ನಿರ್ದೇಶನ-ಕಲಾನಿರ್ದೇಶನ ಸಹಾಯ-ಟೈಟಲ್ಸ್ ಕಾರ್ಡ್ ಬರವಣಿಗೆ.
  • ಉದ್ಭವ (ನಿರ್ದೇಶನ : ಕೋಡ್ಲು ರಾಮಕೃಷ್ಣ) ಸಹಾಯಕ ನಿರ್ದೇಶನ - ಟೈಟಲ್ಸ್ ಕಾರ್ಡ್ ಬರವಣಿಗೆ.
  • ಕರ್ಣನ ಸಂಪತ್ತು (ನಿರ್ದೇಶನ : ಶಾಂತಾರಾಂ) ಸಹಾಯಕ ನಿರ್ದೇಶನ
  • ಬಾಳನೌಕೆ (ನಿರ್ದೇಶನ : ಶಾಂತಾರಾಂ) ಸಹಾಯಕ ನಿರ್ದೇಶನ
  • ಕ್ಷಮೆ (ನಿರ್ದೇಶನ : ಶಾಂತಾರಾಂ) ಸಹ ನಿರ್ದೇಶನ

ಟಿ.ವಿ.ಧಾರಾವಾಹಿಗಳು

ಬದಲಾಯಿಸಿ
  • ಪ್ರತಿಬಿಂಬ (ಮೆಘಾ ಧಾರಾವಾಹಿ), ಸಹನಿರ್ದೇಶಕ. (ನಿರ್ದೇಶನ:ನಾಗತಿಹಳ್ಳಿ ಚಂದ್ರಶೇಖರ)ಉದಯ ಟಿವಿ.
  • ಲಾಲಿ(ಮೆಘಾ ಧಾರಾವಾಹಿ), ಸಹಾಯಕ ನಿರ್ದೇಶನ. (ನಿರ್ದೇಶನ:ಎ.ಜಿ.ಶೇಷಾದ್ರಿ) ಈಟಿವಿ ಕನ್ನಡ.
  • ಗಂಗೋತ್ರಿ(ಮೆಘಾ ಧಾರಾವಾಹಿ), ನಿಯಮಿತ ಕಂತುಗಳಿಗೆ ಸಂಭಾಷಾಣೆಕಾರ. (ನಿರ್ದೇಶನ:ಆನಂದ್.ಪಿ ರಾಜು)ಡಿಡಿ೧.
  • ಬಾಳ ಅನುಬಂಧ(ಮೆಘಾ ಧಾರಾವಾಹಿ), ಸಹನಿರ್ದೇಶಕ. ಟೈಟಲ್ ಕಾರ್ಡ್ ಬರವಣಿಗೆ. (ನಿರ್ದೇಶನ:ಪರಿಸರ ಶಿವರಾಂ)ಡಿಡಿ೧.
  • ಆಸ್ಫೋಟನೆ (ಕಿರುಚಿತ್ರ)ಸಹನಿರ್ದೇಶಕ. (ನಿರ್ದೇಶನ:ಎಸ್.ಆಂಜನೇಯ್)ಡಿಡಿ೧.

ಸ್ವತಂತ್ರ ನಿರ್ದೇಶನ

ಬದಲಾಯಿಸಿ
  • ಕಾವ್ಯಾ(ಟೆಲಿಚಿತ್ರ), ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ (ಸುಪ್ರಭಾತ ಟಿವಿ).
  • ಅವಳೂ ಹೆಣ್ಣಲ್ಲವೇ?, ಕಥೆ-ಚಿತ್ರಕಥೆ-ಸಂಭಾಷಣೆ (ಸುಪ್ರಭಾತ ಟಿವಿ).
  • ಮುಂಜಾನೆ ಸತ್ಯ, ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ (ಸಿಟಿ ಕೇಬಲ್).
  • ಇವರೂ ನಮ್ಮವರೇ?, ಚಿತ್ರಕಥೆ-ಸಂಭಾಷಣೆ-ನಿರ್ದೇಶನ (ಸಿಟಿ ಕೇಬಲ್).
  • ಕಲಾವಿದ, ಕಥೆ-ಚಿತ್ರಕಥೆ-ಸಂಭಾಷಣೆ (ಸಿಟಿ ಕೇಬಲ್).
  • ಮನನ ಮನಸ್ಸು, ಚಿತ್ರಕಥೆ-ಸಂಭಾಷಣೆ-ನಿರ್ದೇಶನ (ಸಿಟಿ ಕೇಬಲ್).
  • ಬೇಸಿಗೆ ರಜಾ, ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ (ಶಾಲೆಗಳಲ್ಲಿ ಪ್ರದರ್ಶನ)

ಪ್ರಶಸ್ತಿ, ಬಹುಮಾನ, ಸನ್ಮಾನ

ಬದಲಾಯಿಸಿ
  • ೧೯೯೭ರಲ್ಲಿ ನವೋದಯ ಕಲಾ ಸಂಘದ ಪ್ರಶಸ್ತಿ
  • ೧೯೯೮ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇವರಿಂದ 'ಅತ್ಯ್ತುತ್ತಮ ಚಿತ್ರಕಥೆ ಬರಹಗಾರ ಪ್ರಶಸ್ತಿ'.
  • ೧೯೯೯ರಲ್ಲಿ ಪೊಲೀಸ್ ಇಲಾಖೆಯಿಂದ ಸನ್ಮಾನ.
  • ೨೦೦೧ರಲ್ಲಿ ಕನ್ನಡ ಸಾಹಿತ್ಯ ಪರಿ‍ಷತ್ತು ವತಿಯಿಂದ ಸನ್ಮಾನ.
  • ೨೦೦೨ರಲ್ಲಿ ಶ್ರೀ ಎಂ.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ.
  • ೨೦೦೫ರಲ್ಲಿ ಪತ್ರಕರ್ತರ ವೇದಿಕೆ, ಬೆಂಗಳೂರು, ಇವರಿಂದ 'ಹೂಗಾರ ಸ್ಮಾರಕ ಪ್ರಶಸ್ತಿ'
  • ೨೦೧೫ರಲ್ಲಿ ಭಾರತೀಯ ಕರ್ನಾಟಕ ಸಂಘ(ರಿ). ಇವರಿಂದ 'ಕಥಾ ಪ್ರಶಸ್ತಿ'.
  • ೨೦೧೫ರಲ್ಲಿ ಕರ್ನಾಟಕ ಸೇವಾ ಪ್ರತಿ‍ಷ್ಠಾನ ಇವರಿಂದ 'ನಾಡಭೂಷಣ' ಪ್ರಶಸ್ತಿ.
  • ೨೦೧೬ರಲ್ಲಿ ಕಥಾಬಿಂದು ಪ್ರಕಾಶನ ಇವರಿಂದ, 'ಚೈತನ್ಯ ಶ್ರೀ' ಪ್ರಶಸ್ತಿ.
  • ೨೦೧೬ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ 'ಕರ್ನಾಟಕ ಭೂಷಣ' ಪ್ರಶಸ್ತಿ.
  • ೨೦೧೬ರಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಇವರಿಂದ, 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'.
  • ೨೦೧೭ರಲ್ಲಿ ಇಂಡಿಯನ್ ವರ್ಚುಯಲ್ ವಿಶ್ವವಿದ್ಯಾನಿಲಯ(ಶಾಂತಿ ಮತ್ತು ಶಿಕ್ಷಣಕ್ಕಾಗಿ) ಇವರಿಂದ 'ಗೌರವ ಡಾಕ್ಟರೇಟ್' ಪ್ರಧಾನ.
  • ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ
  • ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ
  • ಪುನೀತ್ ಸ್ಪೂರ್ತಿ ಪ್ರಶಸ್ತಿ
  • ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ
  • ವರ್ಧಮಾನ ಪ್ರಶಸ್ತಿ

ಉಲ್ಲೇಖಗಳು

ಬದಲಾಯಿಸಿ