ಬ್ಲೂ ಡ್ರ್ಯಾಗನ್
Blue Dragon (BLUE DRAGON-ブルードラゴン-?)ಬ್ಲೂ ಡ್ರ್ಯಾಗನ್ ಎಂಬುದು ಒಂದು ಪೆಟ್ಟಿಗೆಯೊಳಗೆ ಅಡಕವಾಗಿಸಿದ ಪಾತ್ರ-ನಿರ್ವಹಣೆಯ ಆಟವಾಗಿದ್ದು, ಇದು ಮಿಸ್ಟ್‌ವಾಕರ್ ಮತ್ತು ಆರ್ಟೂನ್ ವತಿಯಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ ಹಾಗೂ ಮೈಕ್ರೋಸಾಫ್ಟ್ ಗೇಮ್ ಸ್ಟುಡಿಯೋಸ್ ವತಿಯಿಂದ ಎಕ್ಸ್‌ಬಾಕ್ಸ್ 360ಗಾಗಿ ಏಕಮಾತ್ರವಾಗಿ ಪ್ರಕಟಿಸಲ್ಪಟ್ಟಿದೆ. ಫೈನಲ್ ಫ್ಯಾಂಟಸಿ ಸರಣಿಯ ಸೃಷ್ಟಿಕರ್ತನಾದ ಹಿರೊನೊಬು ಸಕಾಗುಚಿ ಸೃಷ್ಟಿಸಿದ ವಿನ್ಯಾಸವೊಂದನ್ನು ಬ್ಲೂ ಡ್ರ್ಯಾಗನ್ ಆಧರಿಸಿದೆ; ಈತ ಬ್ಲೂ ಡ್ರ್ಯಾಗನ್‌ನ ಅಭಿವರ್ಧನೆಯ ಮೇಲ್ವಿಚಾರಣೆಯನ್ನು ವಹಿಸಿದ್ದು ಮಾತ್ರವೇ ಅಲ್ಲದೇ, ಅದರ ಕಥಾವಸ್ತುವನ್ನೂ ಬರೆದ.[೧] 2006ರ ಡಿಸೆಂಬರ್ 7ರಂದು ಈ ಆಟವು ಜಪಾನ್‌ನಲ್ಲಿ ಬಿಡುಗಡೆಯಾಯಿತು. ಅಲ್ಲಿ ಇದು ಒಂದು ಸ್ವತಂತ್ರವಾದ ಶೀರ್ಷಿಕೆಯಾಗಿ ಮತ್ತು ಎಕ್ಸ್‌ಬಾಕ್ಸ್ 360ರ ಜೊತೆಗಿನ ಒಂದು ಕಟ್ಟಿನ (ಸದರಿ ಆಟ, ಸ್ವತಃ ಎಕ್ಸ್‌ಬಾಕ್ಸ್ 360 ವ್ಯವಸ್ಥೆ, ಮತ್ತು ಬ್ಲೂ ಡ್ರ್ಯಾಗನ್ ಪೆಟ್ಟಿಗೆಯ ಒಂದು ಹೊರಹೊದಿಕೆ ಇವುಗಳನ್ನು ಒಳಗೊಂಡಿರುವುದು) ಭಾಗವಾಗಿ ಹೀಗೆ ಎರಡೂ ಸ್ವರೂಪಗಳಲ್ಲಿ ಮಾರಾಟವಾಯಿತು.[೨] 2007ರ ಆಗಸ್ಟ್ 24ರಂದು ಯುರೋಪ್‌ನಲ್ಲಿ, ಮತ್ತು 2007ರ ಆಗಸ್ಟ್ 28ರಂದು ಉತ್ತರ ಅಮೆರಿಕಾದಲ್ಲಿ ಆದ ಒಂದು ಬಿಡುಗಡೆಯೊಂದಿಗೆ, ಇತರ ಪ್ರದೇಶಗಳು ಕೇವಲ ಆಟವನ್ನಷ್ಟೇ ಸ್ವೀಕರಿಸಿದವು.
Blue Dragon | |
---|---|
ಅಭಿವರ್ಧಕ(ರು) | Mistwalker, Artoon |
ಪ್ರಕಟಣಕಾರ(ರು) | Microsoft Game Studios |
ವಿನ್ಯಾಸಕಾರ(ರು) | Hironobu Sakaguchi |
Artist(s) | Akira Toriyama |
Composer(s) | Nobuo Uematsu |
ಕಾರ್ಯಕಾರಿ ಪರಿಸರ(ಗಳು) | Xbox 360 |
ಬಿಡುಗಡೆ ದಿನಾಂಕ(ಗಳು) | ಟೆಂಪ್ಲೇಟು:Vgreleaseಟೆಂಪ್ಲೇಟು:Vgrelease |
ಪ್ರಕಾರ(ಗಳು) | Console role-playing game |
ಬಗೆ(ಗಳು) | Single-player, Xbox Live |
ಹಂಚಿಕೆ | 3 DVD-DL |
ಮಹೋನ್ನತ ಸಾಮ್ರಾಜ್ಯದ ದುಷ್ಟ ಆಡಳಿತಗಾರನಾದ ನೆನೆ ಎಂಬಾತನನ್ನು ಎದುರಿಸಲು ಪ್ರಪಂಚದಾದ್ಯಂತ ಪರ್ಯಟನೆ ಮಾಡುವ ಐವರು ಸ್ನೇಹಿತರ (ಷು, ಜಿರೋ, ಕ್ಲೂಕ್, ಝೋಲಾ, ಮತ್ತು ಮರುಮಾರೊ) ಕಥೆಯನ್ನು ಬ್ಲೂ ಡ್ರ್ಯಾಗನ್ ಅನುಸರಿಸುತ್ತದೆ. ಈ ಸನ್ನಿವೇಶವು ಪ್ರತ್ಯೇಕ ಸಜೀವ ಚಿತ್ರಿಕೆ ಮತ್ತು ಮಂಗಾ ರೂಪಾಂತರಗಳಿಗೆ ಪ್ರೇರೇಪಣೆಯನ್ನು ನೀಡಿತಾದರೂ, ಇವು ಕಥೆಯನ್ನು ವಿಭಿನ್ನ ಮಟ್ಟಗಳವರೆಗೆ ಅನುಸರಿಸಿಕೊಂಡು ಹೋಗುತ್ತವೆ ಮತ್ತು ಪಾತ್ರಗಳ ಒಂದು ವಿಭಿನ್ನ ಸ್ವರೂಪದ ಹಂಚಿಕೆಯನ್ನು ಒಳಗೊಳ್ಳುತ್ತದೆ. ಪರಿಶೋಧನೆ ಮತ್ತು ತಿರುವು-ಆಧರಿತ ಕದನದ ಸುತ್ತಲೂ ಆಧರಿಸಿರುವ, ಪಾತ್ರ-ನಿರ್ವಹಣೆಯ ಒಂದು ಸಾಂಪ್ರದಾಯಿಕ ವಿನ್ಯಾಸವನ್ನು ಈ ಆಟವು ಅನುಸರಿಸುತ್ತದೆ.
ಅನೇಕ ಮುದ್ರಿಕೆಗಳ (ಡಿಸ್ಕ್‌ಗಳ) ಬಳಕೆ ಮಾಡಿರುವ ಮೊದಲ ಎಕ್ಸ್‌ಬಾಕ್ಸ್ 360 ಶೀರ್ಷಿಕೆ ಎನಿಸಿಕೊಂಡಿರುವ ಬ್ಲೂ ಡ್ರ್ಯಾಗನ್ , ಒಟ್ಟಾರೆಯಾಗಿ ಮೂರು ಮುದ್ರಿಕೆಗಳವರೆಗೆ ವ್ಯಾಪಿಸಿಕೊಂಡಿದೆ.[೩] ಒಟ್ಟಾರೆಯಾಗಿ ಹೇಳುವುದಾದರೆ, ಈ ಆಟವು ಒಂದು ಧನಾತ್ಮಕ ಮಾನ್ಯತೆಯನ್ನು ಸ್ವೀಕರಿಸಿದ್ದು, ಮೆಟಕ್ರಿಟಿಕ್ ಎಂಬ ಅವಲೋಕನ ಸಂಗ್ರಾಹಕ ವೆಬ್‌ಸೈಟ್‌ನಲ್ಲಿ 79%ನಷ್ಟು ಸರಾಸರಿ ಅಂಕಗಳಿಕೆಯನ್ನು ದಾಖಲಿಸಿದೆ.[೪] ಪಾತ್ರ-ನಿರ್ವಹಣೆಯ ಆಟಗಳ ಸಾಂಪ್ರದಾಯಿಕ ಅಂಶಗಳನ್ನು ರೂಪಾಂತರ ಮಾಡಿದ್ದಕ್ಕಾಗಿ ಬ್ಲೂ ಡ್ರ್ಯಾಗನ್ ಶೀರ್ಷಿಕೆಯು ಮೆಚ್ಚುಗೆಯನ್ನೂ ಪಡೆದಿದೆ ಹಾಗೂ ಟೀಕೆಗಳನ್ನೂ ಎದುರಿಸಿದೆ.[೫]
ಪಾತ್ರವರ್ಗ
ಬದಲಾಯಿಸಿಆಡುವ ರೀತಿ
ಬದಲಾಯಿಸಿಹಲವಾರು JRPGಗಳಲ್ಲಿ ಕಂಡುಬರುವ ತಿರುವು-ಆಧರಿತ ಆಟದ ರೀತಿಯ ಅಂಶಗಳನ್ನು ಬಳಸಿಕೊಂಡಿರುವ ಜಪಾನಿಯರ ಹಳೆಯ ಪಾತ್ರ-ನಿರ್ವಹಣಾ-ಆಟಗಳಿಂದ ಬ್ಲೂ ಡ್ರ್ಯಾಗನ್ ನ ಆಡುವ ರೀತಿಯು ಪ್ರೇರೇಪಿಸಲ್ಪಟ್ಟಿದೆ.[೬] ಸದರಿ ಆಟದ ಪ್ರಪಂಚವು, ಪಟ್ಟಣಗಳು ಹಾಗೂ ನೆಲಮಾಳಿಗೆಯ ಕೋಣೆಯ-ರೀತಿಯ ಪ್ರದೇಶಗಳು ಎಂಬ ಎರಡು ಪ್ರಮುಖ ಬಗೆಯ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಪಟ್ಟಣಗಳಲ್ಲಿ ಆಟಗಾರನು ವಿಶ್ರಾಂತಿ ಪಡೆಯಬಹುದು ಹಾಗೂ ವಸ್ತುಗಳನ್ನು ಖರೀದಿಸಬಹುದು; ಇನ್ನುಳಿದಂತೆ ನೆಲಮಾಳಿಗೆಯ ಕೋಣೆಯ-ರೀತಿಯ ಪ್ರದೇಶಗಳಲ್ಲಿ ಸೋಲಿಸಲ್ಪಡಬೇಕಾದ ಹಲವಾರು ವಿರೋಧಿಗಳು ತುಂಬಿಕೊಂಡಿರುತ್ತಾರೆ.[೬]
ಪರಿಶೋಧನೆ
ಬದಲಾಯಿಸಿಆರಂಭದಲ್ಲಿ, ಆಟಗಾರರು ಮೇಲಿನ ಪ್ರಪಂಚದಲ್ಲಿನ ತಾಣಗಳ ನಡುವೆ ನಡೆದಾಡುವಲ್ಲಿ ಸಮರ್ಥರಾಗಿರುತ್ತಾರೆ, ಮತ್ತು ನಂತರದಲ್ಲಿ, ಹಿಂದೆಯೇ ಸಂದರ್ಶಿಸಿದ ತಾಣಗಳಿಗೆ ದೂರಸ್ಥ ಚಲನೆಯನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಗಳಿಸುತ್ತಾರೆ. ಆಟಗಾರನು ಪಾತ್ರಗಳ ಒಂದು ಕೂಟವನ್ನು ಅಥವಾ ತಂಡವನ್ನು ನಿಯಂತ್ರಿಸುತ್ತಾನಾದರೂ, ಮೇಲಿನ ಪ್ರಪಂಚವನ್ನು ಪರಿಶೋಧಿಸುವಾಗ ಕೇವಲ ಒಬ್ಬನನ್ನು ಮಾತ್ರವೇ ತೋರಿಸಲಾಗುತ್ತದೆ.[೭] ಪ್ರತಿಯೊಂದು ಪಾತ್ರವೂ ಹೊಂದಿರುವ ಅವುಗಳದೇ ಆದ ಸಾಮರ್ಥ್ಯಗಳನ್ನು ಆಧರಿಸಿ, ಕದನದ ಸನ್ನಿವೇಶಗಳ ಆಚೆಗೆ ಮೋಡಿಯನ್ನು ಅಥವಾ ಅದ್ಭುತ ಪರಿಣಾಮವನ್ನು ಎಸಗುವಲ್ಲಿ ಆಟಗಾರನು ಸಮರ್ಥನಾಗಿರುತ್ತಾನೆ. ಕದನವು ಆರಂಭವಾದಾಗ, ಸಮಸ್ತ ಕೂಟವು ಕದನಕ್ಕಾಗಿ ಕಾಣಿಸಿಕೊಳ್ಳುತ್ತದೆ.[೭] ಆಟಗಾರನು ಆಟದ ಪ್ರಪಂಚವನ್ನು ಪರಿಶೋಧಿಸುತ್ತಿರುವ ಸಂದರ್ಭದಲ್ಲಿ ಶತ್ರುಗಳು ಗೋಚರಿಸುತ್ತಾರೆ, ಮತ್ತು ಇವರಿಂದ ತಪ್ಪಿಸಿಕೊಂಡು ಹೋಗಲು ಅವಕಾಶವಿರುತ್ತದೆ. ಅದೇ ವೇಳೆಗೆ, ಶತ್ರುಗಳಿಗೆ ಸನಿಹದಲ್ಲಿಯೇ ಪ್ರಲೋಭನೆಯೊಡ್ಡುವ ಮೂಲಕ ಅವರನ್ನು ಎದುರಿಸುವ ಹಾಗೂ ತನ್ಮೂಲಕ ಏಕಕಾಲದಲ್ಲಿ ಅನೇಕ ಪೆಡಂಭೂತಗಳೊಂದಿಗೆ ಆಟಗಾರರು ಹೋರಾಡಲು ಅನುವಾಗುವಂತೆ ಒಂದು ವರ್ತುಲವನ್ನು ಸಕ್ರಿಯಗೊಳಿಸುವ ಮಾರ್ಗವನ್ನೂ ಆಟಗಾರರು ಆರಿಸಬಹುದಾಗಿದೆ.[೭] ಕೆಲವೊಂದು ನಿದರ್ಶನಗಳಲ್ಲಿ, ನಿರ್ದಿಷ್ಟ ವಿರೋಧಿಗಳು ಪಥವೊಂದಕ್ಕೆ ಅಥವಾ ಬಯಸಿದ ನಿಧಿಯ ಭಂಡಾರಕ್ಕೆ ತಡೆಯೊಡ್ಡುತ್ತಾರೆ; ಆದ್ದರಿಂದ ಮುಂದುವರಿಯಲು ಅವರನ್ನು ಸೋಲಿಸುವುದು ಅಗತ್ಯವಾಗಿರುತ್ತದೆ. ಆಟಗಾರನು ಒಮ್ಮೆಗೆ ಗುರುತಿಸಲ್ಪಟ್ಟನೆಂದರೆ, ಆಟಗಾರನ ಪಾತ್ರವನ್ನು ಇತರ ವಿರೋಧಿಗಳು ಬೆನ್ನಟ್ಟುತ್ತಾರೆ; ಆದರೂ, ಒಂದು ವೇಳೆ ಬಹಳಷ್ಟು ದೂರಕ್ಕೆ ಆಟಗಾರರು ಪಲಾಯನ ಮಾಡಿದಲ್ಲಿ, ವಿರೋಧಿಗಳಿಂದ ಆಟಗಾರರು ಉಪಾಯವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಪರದೆಯ ಮೇಲೆ ಆಗಿಂದಾಗ್ಗೆ ಪ್ರದರ್ಶಿಸಲ್ಪಡುವ ಒಂದು ಏಕಶತ್ರು ಅಥವಾ ಪೆಡಂಭೂತವು, ಕಾರ್ಯಸಾಧ್ಯವಾಗಿ ವಿಭಿನ್ನ ಬಗೆಗಳಲ್ಲಿರುವ ಹಲವಾರು ವಿಭಿನ್ನ ವಿರೋಧಿಗಳನ್ನು ವಾಸ್ತವವಾಗಿ ಪ್ರತಿನಿಧಿಸುತ್ತದೆ.[೬]
ಅವತಾರ್ ಎಂದು ಕರೆಯಲ್ಪಡುವ ಆಟಗಾರನು ಪೆಡಂಭೂತದೊಂದಿಗೆ ಹೇಗೆ ಸಂಪರ್ಕವನ್ನು ಸಾಧಿಸುತ್ತಾನೆ ಎಂಬುದನ್ನು ಅವಲಂಬಿಸಿ ಕದನವು ವಿಭಿನ್ನವಾಗಿ ಆರಂಭವಾಗುತ್ತದೆ. ಒಂದು ವೇಳೆ ಶತ್ರುವೊಬ್ಬನನ್ನು ಅವತಾರ್ ಹಿಂದಿನಿಂದ ದಾಳಿಮಾಡಿದರೆ, ಒಂದು "ಪ್ರತಿದಾಳಿ"ಯೊಂದಿಗೆ ಅವರು ಕದನದಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ, ಒಂದು ವೇಳೆ ಅವತಾರ್ ಹಿಂದಿನಿಂದ ದಾಳಿಗೊಳಗಾದರೆ, ಒಂದು "ಅನಿರೀಕ್ಷಿತವಾದ ದಾಳಿ"ಯಲ್ಲಿ ಶತ್ರುವು ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಒಂದೇ ಬಾರಿಗೆ ಪೆಡಂಭೂತಗಳ ಹಲವಾರು ಗುಂಪುಗಳೊಂದಿಗೆ ಹೋರಾಡುವುದನ್ನು ಆಟಗಾರರು ಆಯ್ಕೆಮಾಡಿಕೊಳ್ಳಬಹುದು. ಇಂಥ ಸಂದರ್ಭದಲ್ಲಿ ಪ್ರತಿ ಕದನವೂ ಹಿಂದಿನ ಕದನವಾದ ತಕ್ಷಣವೇ ಸಂಭವಿಸುತ್ತದೆ. ಈ ತಂತ್ರವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಆಟಗಾರನೊಬ್ಬನಿಗೆ ಬೋನಸ್‌ಗಳನ್ನು ಪ್ರತಿಫಲವಾಗಿ ನೀಡಲಾಗುತ್ತದೆ. ಶತ್ರುವಿನ ಮುಖಾಬಿಲೆಗಳನ್ನು ನಿಯಂತ್ರಿಸುವಲ್ಲಿ ನೆರವಾಗಲು ಆಟಗಾರರು "ಕ್ಷೇತ್ರ ಪರಿಣತಿಗಳನ್ನು" ಬಳಸಿಕೊಳ್ಳಬಹುದು; ಶತ್ರುಗಳನ್ನು ದುರ್ಬಲಗೊಳಿಸಲು ಬಾಂಬುಗಳನ್ನು ಬಳಸುವುದು ಇಂಥ ಒಂದು ಅವಕಾಶವಾಗಿದೆ.[೬][೮] ಅಪರೂಪದ ನಿದರ್ಶನಗಳಲ್ಲಿ, ಪೆಡಂಭೂತಗಳ ಎರಡು ಗುಂಪುಗಳು ಎದುರಾಳಿ ಜಾತಿಗಳಿಗೆ ಸೇರಿದವಾಗಿರಬಹುದು. ಇಂಥ ಸಂದರ್ಭದಲ್ಲಿ, "ಪೆಡಂಭೂತದ ಹೋರಾಟ"ವೊಂದು ಸಂಭವಿಸುತ್ತದೆ ಹಾಗೂ ಆಟಗಾರನ ಮೇಲೆ ದಾಳಿಮಾಡುವುದಕ್ಕೆ ಮುಂಚಿತವಾಗಿ, ಎರಡೂ ಪೆಡಂಭೂತದ ಗುಂಪುಗಳು ಒಮ್ಮೆಗೇ ಕಾಣಿಸಿಕೊಂಡು ಪರಸ್ಪರರ ಮೇಲೆ ಗಮನಹರಿಸುತ್ತವೆ.[೭]
ಛಾಯಾರೂಪಗಳು
ಬದಲಾಯಿಸಿಮೋಡಿ ಮಾಡುವಂಥ "ಛಾಯಾರೂಪಗಳನ್ನು" ಬಳಸುವುದು ಬ್ಲೂ ಡ್ರ್ಯಾಗನ್ ಆಟದಲ್ಲಿನ ಪ್ರಧಾನ ಕುಶಲ-ಕೆಲಸ ಎನಿಸಿಕೊಳ್ಳುತ್ತದೆ; ಇದರಲ್ಲಿ ಪ್ರತಿ ಆಡಬಲ್ಲ ಪಾತ್ರವೂ ಒಂದು ವಿಶಿಷ್ಟವಾದ ಛಾಯಾರೂಪವನ್ನು ಹೊಂದಿದ್ದು, ಅದು ಒಂದು ಡ್ರ್ಯಾಗನ್, ಒಂದು ಫೀನಿಕ್ಸ್, ಒಂದು ಬಾವಲಿ, ಒಂದು ನರವೃಷಭ, ಅಥವಾ ಒಂದು ಕತ್ತಿಹಲ್ಲಿನ ಹುಲಿಯ ಮಾದರಿಯಲ್ಲಿ ಇರಬಹುದಾಗಿರುತ್ತದೆ. ಪ್ರತಿ ಛಾಯಾರೂಪಕ್ಕೂ ಒಮ್ಮೆಗೆ ಒಂದು ಏಕ ಪಾತ್ರ ವರ್ಗವನ್ನು (ಇದೇ ರೀತಿಯ ಹಲವಾರು ವರ್ಗಗಳಿಂದ) ನಿಗದಿಪಡಿಸಲು ಸಾಧ್ಯವಿರುತ್ತದೆ ಹಾಗೂ ಆ ವರ್ಗದ ವಿಶೇಷ ಲಕ್ಷಣಗಳು ಮತ್ತು ಸಾಮರ್ಥ್ಯಗಳನ್ನು ಈ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ.[೯] ಕೇವಲ ಸಕ್ರಿಯ ವರ್ಗವು ಮಾತ್ರವೇ ವರ್ಗ ಮಟ್ಟಗಳು ಅಥವಾ "ಶ್ರೇಣಿಗಳನ್ನು" ಗಳಿಸಬಹುದಾಗಿರುತ್ತದೆ, ಆದರೂ ಕದನದಲ್ಲಿನ ಸಂದರ್ಭವನ್ನು ಹೊರತುಪಡಿಸಿದ ಯಾವುದೇ ಸಮಯದಲ್ಲಿ ವರ್ಗಗಳನ್ನು ಬದಲಾವಣೆ ಮಾಡಲು ಆಟಗಾರರಿಗೆ ಸ್ವಾತಂತ್ರ್ಯವಿರುತ್ತದೆ; ಇದರಿಂದಾಗಿ ಬಯಸಿದ ಪರಿಣತಿಗಳ ಸಂಯೋಜನೆಯನ್ನು ಸಾಧಿಸುವ ದೃಷ್ಟಿಯಿಂದ, ಗುಂಪಿನ ಛಾಯಾರೂಪಗಳನ್ನು ಅಗತ್ಯಕ್ಕನುಸಾರವಾಗಿ ರೂಪಿಸಲು ಅವಕಾಶ ಸಿಕ್ಕಂತಾಗುತ್ತದೆ.[೬]
ಒಂದು ನಿರ್ದಿಷ್ಟ ವರ್ಗದಲ್ಲಿ ಛಾಯಾರೂಪಗಳು ಶ್ರೇಣಿಯಲ್ಲಿ ಮೇಲೇರುತ್ತವೆಯಾದ್ದರಿಂದ, ಅವು ಹೊಸ ಪರಿಣತಿಗಳನ್ನು ಕಲಿತುಕೊಳ್ಳುತ್ತವೆ. ಇದರಿಂದಾಗಿ, ಕದನದಲ್ಲಿ ಬಳಸುವುದಕ್ಕಾಗಿ ಒಂದು ಸೀಮಿತ ಸಂಖ್ಯೆಯ ಪರಿಣತಿಯ ಸ್ಥಾನಗಳನ್ನು ಅವುಗಳಿಗೆ ನಿಗದಿಪಡಿಸಲು ಸಾಧ್ಯವಾಗುತ್ತದೆ. ಛಾಯಾರೂಪಗಳ ಸದ್ಯದ ವರ್ಗವನ್ನು ಲೆಕ್ಕಿಸದೆಯೇ, ಹಿಂದೆಯೇ ಕಲಿತುಕೊಂಡಿರುವ ಪರಿಣತಿಗಳನ್ನು ಅವುಗಳಿಗೆ ನಿಗದಿಪಡಿಸುವುದಕ್ಕೆ ಅವಕಾಶವಿದೆ.[೬] ಉದಾಹರಣೆಗೆ, ಒಂದುವೇಳೆ ಒಂದು "ಹತ್ಯಾಕಾರಿ"ಯಾಗಿರುವಂತೆ ಛಾಯಾರೂಪವೊಂದನ್ನು ಪ್ರಸಕ್ತವಾಗಿ ನಿಗದಿಪಡಿಸಲಾಗಿದ್ದರೂ, ಹಿಂದೆಯೇ ಕಲಿತುಕೊಂಡಿರುವ "ಪ್ರತಿಬಂಧಕ ಜಾದೂ"ವನ್ನು ಹೊಮ್ಮಿಸುವ ಸಾಮರ್ಥ್ಯವನ್ನು ಅದು ಹೊಂದಿರುತ್ತದೆ; ಪ್ರತಿಬಂಧಕ ಜಾದೂ ವರ್ಗದ ಓರ್ವ ಸದಸ್ಯನಾಗಿ ವರ್ತಿಸುವಾಗ, ಪ್ರತಿಬಂಧಕ ಜಾದೂ ಪರಿಣತಿಯನ್ನು ಒಂದು ಸಕ್ರಿಯ ಪರಿಣತಿಯಾಗಿ ನಿಗದಿಪಡಿಸಬಹುದಾಗಿರುತ್ತದೆ.[೧೦] ಬೆರೆಸುವಿಕೆ ಅಥವಾ ಸಂಕರೀಕರಣಕ್ಕೆ ಇದು ಅವಕಾಶ ನೀಡುವುದರಿಂದ, ಒಂದು ನಿರ್ದಿಷ್ಟ ಛಾಯಾರೂಪವು ಕಲಿತುಕೊಂಡಿರುವ ಪರಿಣತಿಗಳ ಗುಂಪಿನಿಂದ ಬೇಕಾದುದನ್ನು ಎತ್ತಿಕೊಳ್ಳಲು ಮತ್ತು ಆರಿಸಿಕೊಳ್ಳಲು ಆಟಗಾರನಿಗೆ ಸಾಧ್ಯವಾಗುತ್ತದೆ.[೬]
ಕದನ
ಬದಲಾಯಿಸಿಆಟದಲ್ಲಿನ ಕದನವು ತಿರುವು-ಆಧರಿತ ಸೂತ್ರವೊಂದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆಯಾದರೂ, ನೀವು ಹೊಂದಿರುವ ಪಾತ್ರಗಳ ತಿರುವಿನ ಶ್ರೇಣಿಯು ಪಾತ್ರದ ವೇಗದ ಅಂಕಿ-ಅಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಲ್ಪಟ್ಟಿರುತ್ತದೆ; ಮತ್ತು ಕೆಲವೊಂದು ನಿದರ್ಶನಗಳಲ್ಲಿ, ಪಾತ್ರಗಳು ಒಂದು ವೇಳೆ ಸಾಕಷ್ಟು ವೇಗವನ್ನು ಹೊಂದಿದ್ದೇ ಆಗಿದ್ದಲ್ಲಿ, ಶತ್ರುಗಳು ಕ್ರಮ ಕೈಗೊಳ್ಳುವುದಕ್ಕೆ ಮುಂಚೆಯೇ ದಾಳಿಮಾಡಲು ಪಾತ್ರಗಳಿಗೆ ಅವಕಾಶವಿರುತ್ತದೆ. ವಿಭಿನ್ನ ದಾಳಿಗಳು ಕಾರ್ಯರೂಪಕ್ಕೆ ಬರಬೇಕೆಂದರೆ ವೈವಿಧ್ಯಮಯವಾದ ಕಾಲಾವಧಿಗಳನ್ನು ಅವು ತೆಗೆದುಕೊಳ್ಳಬಹುದು.ಉಲ್ಲೇಖ ದೋಷ: Invalid parameter in <ref>
tag
ಕಥಾವಸ್ತು
ಬದಲಾಯಿಸಿಸನ್ನಿವೇಶ
ಬದಲಾಯಿಸಿಒಂದು ಕಾಲ್ಪನಿಕವಾದ, ಮುಕ್ತ-ಪ್ರಪಂಚದ ಪರಿಸರದಲ್ಲಿ ಬ್ಲೂ ಡ್ರ್ಯಾಗನ್ ಕಥೆಯು ನಡೆಯುತ್ತದೆ; ಇಲ್ಲಿ ಕಳೆದ ಹತ್ತು ವರ್ಷಗಳಿಂದಲೂ, ಪ್ರತಿ ವರ್ಷವೂ ಆಕಾಶದಲ್ಲಿ ನೇರಳೆ ಬಣ್ಣದ ಮೋಡಗಳು ರಹಸ್ಯಮಯವಾಗಿ ಕಾಣಿಸುತ್ತಿರುತ್ತವೆ; ಇದು ಪ್ರಪಂಚದಾದ್ಯಂತ ಜನರಿಗಾಗಿ ದುರದೃಷ್ಟ ಮತ್ತು ವಿಪತ್ತನ್ನು ಸೂಚಿಸುವ ಸೂಚಕವಾಗಿರುತ್ತದೆ. ಅನೇಕ ವರ್ಷಗಳವರೆಗೆ, "ಲ್ಯಾಂಡ್ ಶಾರ್ಕ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿದ್ದ ಒಂದು ಭಯಹುಟ್ಟಿಸುವ ಪಶು, ಮತ್ತು "ಸಮುದ್ರ ಘನಾಕೃತಿ"ಯಂಥ (ಸೀ ಕ್ಯೂಬ್) ಇತರ ಕಳೆದುಹೋದ ತಂತ್ರಜ್ಞಾನಗಳು ನೇರಳೆ ಬಣ್ಣದ ಮೋಡಗಳೊಂದಿಗೆ ಬರುತ್ತಿದ್ದವು; ಸಾವಿರಾರು ಜನರನ್ನು ಸಾಯಿಸುತ್ತಿದ್ದ ಇವು, ಹಲವಾರು ಹಳ್ಳಿಗಳನ್ನು ನಾಶಪಡಿಸುತ್ತಿದ್ದವು.[೧೧][೧೨] ವಾತಾವರಣದ ಪ್ರದೇಶಗಳಾಗಿ ಪ್ರಪಂಚವು ವಿಭಜಿಸಲ್ಪಟ್ಟಿದ್ದು, ಪ್ರತಿ ಪ್ರದೇಶವೂ ಅನೇಕ ಸಾಮ್ರಾಜ್ಯಗಳು ಮತ್ತು ಹಳ್ಳಿಗಳನ್ನು ಒಳಗೊಂಡಿರುತ್ತದೆ. ಇವುಗಳ ಪೈಕಿ ಕೆಲವು ಮುಖ್ಯ ಪಥದಲ್ಲಿ ಇಲ್ಲವಾದರೂ, ಸಣ್ಣ ಕಥೆಗಳನ್ನು ಹಿಡಿದಿಟ್ಟುಕೊಂಡಿವೆ; ದೈತ್ಯರು, ಮತ್ತು ಅಂಜುಕುಳಿಗಳಷ್ಟೇ ಅಲ್ಲದೇ, ಅಡಗಿಸಿರುವ ನೆಲಮಾಳಿಗೆಯ ಕೋಣೆಗಳೂ ಸಹ ಇವುಗಳಲ್ಲಿ ಅಂತರ್ಗತವಾಗಿರುತ್ತವೆ.[೧೩] ಸದರಿ ಪರಿಸರದ ಸುತ್ತಲೂ ಅನೇಕ ನಿಧಿಯ[೧೧] ಮೂಲಗಳಿವೆ.
ಕಥೆ
ಬದಲಾಯಿಸಿಷು, ಕ್ಲೂಕ್, ಮತ್ತು ಜಿರೋ ಇವರೇ ಮೊದಲಾದವರ ಸ್ವಂತ ಊರಾದ ಟಾಲ್ಟಾ ಹಳ್ಳಿಯಲ್ಲಿ ಐತಿಹ್ಯದ ನೇರಳೆ ಬಣ್ಣದ ಮೋಡಗಳು ಆಗಮಿಸಿದಾಗ ಬ್ಲೂ ಡ್ರ್ಯಾಗನ್ ಆರಂಭವಾಗುತ್ತದೆ. ಇತರ ಹಳ್ಳಿಗರು ಆಶ್ರಯವನ್ನು ಬಯಸಿದರೆ, ಷು ಮತ್ತು ಜಿರೋ ಲ್ಯಾಂಡ್ ಶಾರ್ಕ್‌ನ್ನು ನಿಧಾನಗೊಳಿಸುತ್ತಾರೆ. ತೊಂದರೆಗಳನ್ನು ಎದುರಿಸಿದ ನಂತರ, ಕ್ಲೂಕ್ ಅವರನ್ನು ರಕ್ಷಿಸುತ್ತಾನೆ. ಆ ಮೂವರೂ ಒಟ್ಟಾಗಿ ಲ್ಯಾಂಡ್ ಶಾರ್ಕ್‌ನ್ನು ಬಲೆಯೊಂದರಲ್ಲಿ ಸೆರೆಹಿಡಿಯುತ್ತಾರಾದರೂ, ಲ್ಯಾಂಡ್ ಶಾರ್ಕ್ ಬಲೆಯನ್ನು ಹರಿದುಕೊಂಡು ರಭಸವಾಗಿ ಓಡುತ್ತದೆ ಹಾಗೂ ಷು, ಜಿರೋ, ಮತ್ತು ಕ್ಲೂಕ್ ಅದರ ಬೆನ್ನಿನಿಂದ ನೇತಾಡಿಕೊಂಡು ಹೋಗುತ್ತಾರೆ.[೧೧][೧೪] ಮೂವರು ಸ್ನೇಹಿತರು ಪರಿಶೋಧಿಸುವ ಒಂದು ಪ್ರಾಚೀನ ಅವಶೇಷದಲ್ಲಿ ಲ್ಯಾಂಡ್ ಶಾರ್ಕ್ ನಿಲ್ಲುತ್ತದೆ. ಸದರಿ ಲ್ಯಾಂಡ್ ಶಾರ್ಕ್, ನಿಜವಾಗಿಯೂ "ಮೆಕ್ಯಾಟ್" ಎಂಬ ಒಂದು ಯಂತ್ರವಾಗಿದೆ ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಯಾವುದೇ ಎಚ್ಚರಿಕೆಯನ್ನು ನೀಡದೆಯೇ, ಮೆಕ್ಯಾಟ್ ಜೀವವನ್ನು ತಳೆಯುತ್ತದೆ; ಈ ಬಾರಿ ಕೇವಲ ಆಕಾಶದೊಳಗೆ ಯಾನಮಾಡುವ ಮೂಲಕ, ಆ ಮೂವರನ್ನೂ ಅದು ಮತ್ತೊಮ್ಮೆ ತನ್ನೊಂದಿಗೆ ಸಾಗಿಸುತ್ತದೆ.
ಮೋಡಗಳಲ್ಲಿರುವ ಒಂದು ದೈತ್ಯ ಮೆಕ್ಯಾಟ್ ನೆಲೆಗೆ ಈ ಕೂಟವು ಆಗಮಿಸುತ್ತದೆ ಮತ್ತು ಸುಸ್ಪಷ್ಟ ನಾಯಕನಾದ ನೆನೆಯ ಸಿಂಹಾಸನ ಕೊಠಡಿಯೊಳಗೆ ಅವು ಚಿಮ್ಮುತ್ತವೆ. ಲ್ಯಾಂಡ್ ಶಾರ್ಕ್‌ನ ಸಾಯುತ್ತಿರುವ ಬಲಿಪಶುಗಳ ಕಿರುಚಾಟಗಳನ್ನು ಕೇಳಿಸಿಕೊಳ್ಳುವಲ್ಲಿ ತನಗೆಷ್ಟು ಆನಂದವಾಗುತ್ತದೆ ಎಂಬುದನ್ನು ನೆನೆ ವಿವರಿಸುತ್ತಾನೆ. ನೆನೆಯೊಂದಿಗೆ ಈ ಕೂಟವು ಹೋರಾಟಕ್ಕೆ ಇಳಿಯುತ್ತದೆಯಾದರೂ, ಅದು ಸುಲಭವಾಗಿ ಸೋಲಿಸಲ್ಪಡುತ್ತದೆ.[೧೫] ನೆಲೆಯಿಂದ ಆಚೆಗೆ ಅವರನ್ನು ಎಸೆಯಲಾಗುತ್ತದೆ ಮತ್ತು ತಂತಮ್ಮ ಸಾವನ್ನು ಕಾಣಲು ಅವರು ಕೆಳಗೆ ಬೀಳಲು ಪ್ರಾರಂಭಿಸುತ್ತಾರೆ; ಆದರೆ ನೆಲೆಯಿಂದ ಬರುವ ಬೆಳಕಿನ ಕಿರಣವೊಂದು ಅವರನ್ನು ಹಿಡಿದಿಕೊಳ್ಳುತ್ತದೆ ಮತ್ತು ಮರಳಿ ಅವರನ್ನು ನೆಲೆಗೆ ತರುತ್ತದೆ. ಕೊಠಡಿಯ ಮಧ್ಯದಲ್ಲಿ ತೇಲುತ್ತಿರುವ ಮೂರು ಸಣ್ಣ ಗೋಳಗಳನ್ನು ಈ ಕೂಟವು ಕಂಡುಕೊಳ್ಳುತ್ತದೆ; ಸದರಿ ಗೋಳಗಳನ್ನು ನುಂಗುವಂತೆ ಒಂದು ನಿಗೂಢ ಧ್ವನಿಯು ಅವರಿಗೆ ಆದೇಶಿಸುತ್ತದೆ. ಇದನ್ನು ಕೂಟವು ತಿರಸ್ಕರಿಸುತ್ತದೆ, ಮತ್ತು ಅದರ ಬದಲಿಗೆ ಸಂರಕ್ಷಣೆಗಾಗಿ ಗೋಳಗಳ ಆಶ್ರಯವನ್ನು ಪಡೆಯುತ್ತದೆ. ನೆಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮತ್ತೊಂದು ಮೆಕ್ಯಾಟ್‌ನ್ನು ತಲುಪಲು ಕೂಟದ ಸದಸ್ಯರು ಪ್ರಯತ್ನಿಸುತ್ತಿದ್ದಂತೆ, ನೆನೆಯ ಯಂತ್ರಮಾನವರ ಒಂದು ದೊಡ್ಡ ಸೇನೆಯೊಂದಿಗೆ ಅವರು ಹೋರಾಡಬೇಕಾಗಿ ಬರುತ್ತದೆ. ಕದನವು ಮುಗಿಯುವುದೇ ಇಲ್ಲವೇನೋ ಎಂಬಂತೆ ತೋರಿದಾಗ, ಮತ್ತು ಮೆಕ್ಯಾಟ್‌ಗೆ ಹೇಗೆ ದಾರಿ ತೋರಿಸಬೇಕು ಎಂಬುದರ ಕುರಿತು ಕಾಣದ ಧ್ವನಿಯು ಅವರಿಗೆ ಭರವಸೆ ನೀಡಿದಾಗ, ಕೂಟದ ಸದಸ್ಯರು ಗೋಳಗಳನ್ನು ತಿನ್ನುತ್ತಾರೆ. ಅವರು ಗೋಳಗಳನ್ನು ಸೇವಿಸುತ್ತಿದ್ದಂತೆ, ಪ್ರತಿಯೊಬ್ಬರಲ್ಲೂ ಒಂದು ವಿಚಿತ್ರವಾದ ರೂಪಾಂತರವು ಸಂಭವಿಸುತ್ತದೆ; ಅವರ ಛಾಯಾರೂಪಗಳ ಸ್ವರೂಪಗಳು ಶಕ್ತಿಯುತ ಜೀವಿಗಳಾಗಿ ಬದಲಾಯಿಸಲ್ಪಡುತ್ತವೆ. ಈ ಶಕ್ತಿಯುತ ಜೀವಿಗಳು ಯಂತ್ರಮಾನವರ ಸೇನೆಯನ್ನು ನಾಶಪಡಿಸಲು ಸಮರ್ಥವಾಗಿರುತ್ತವೆ. ನೆಲೆಯಿಂದ ಕೂಟವು ತಪ್ಪಿಸಿಕೊಳ್ಳುತ್ತದೆ ಮತ್ತು ಮರುಭೂಮಿಯೊಂದಕ್ಕೆ ಅಪ್ಪಳಿಸುತ್ತದೆ.[೧೬]
ತಮ್ಮ ಹೊಸ ಛಾಯಾರೂಪಗಳೊಂದಿಗೆ ನಿಕಟತೆಯನ್ನು ಪಡೆದುಕೊಂಡ ನಂತರ, ಕೂಟದ ಸದಸ್ಯರು ಟಾಲ್ಟಾ ಹಳ್ಳಿಗೆ ಪ್ರಯಾಣಿಸುತ್ತಾರೆ. ದಾರಿಯಲ್ಲಿ ಸಿಗುವ ಮರುಮಾರೊಗೆ ಅವರು ನೆರವಾಗುತ್ತಾರೆ. ಮರುಮಾರೊ ಕೂಡಾ ಒಂದು ಮೋಡಿ ಮಾಡುವಂಥ ಛಾಯಾರೂಪವನ್ನು ಹೊಂದಿರುತ್ತಾನೆ. ಜಿಬ್ರಾಲ್ ರಾಜಧಾನಿ ನಗರದ ಕಡೆಗೆ ಹೊರಡಲು ಟಾಲ್ಟಾದ ಹಳ್ಳಿಗರು ಪ್ರಾರಂಭಿಸಿದ್ದಾರೆ ಎಂಬುದನ್ನು ಕಂಡುಕೊಳ್ಳುವ ಕೂಟವು ಅಲ್ಲಿಂದ ನಿರ್ಗಮಿಸುತ್ತದೆ. ಜಿಬ್ರಾಲ್‌ನಿಂದ ಸ್ವಲ್ಪವೇ ಹೊರಭಾಗದಲ್ಲಿ ಹಳ್ಳಿಗರು ಪೆಡಂಭೂತಗಳಿಂದ ದಾಳಿಗೊಳಗಾಗಿರುವುದನ್ನು ಕೂಟವು ಕಂಡುಕೊಳ್ಳುತ್ತದೆಯಾದರೂ, ಜಿಬ್ರಾಲ್ ರಾಜ ಹಾಗೂ ಝೋಲಾಳನ್ನು ಒಳಗೊಂಡಿರುವ ಅವನ ಪಡೆಗಳ ಆಗಮನದಿಂದಾಗಿ ಅವರೆಲ್ಲರೂ ರಕ್ಷಿಸಲ್ಪಟ್ಟಿರುತ್ತಾರೆ. ಹಳ್ಳಿಗರನ್ನು ಜಿಬ್ರಾಲ್ ನಗರಕ್ಕೆ ಒಮ್ಮೆಗೆ ತಂದನಂತರ, ಜಿಬ್ರಾಲ್ ಸಮೀಪವಿರುವ ನೆನೆಯ ನೆಲೆಗಳ ಪೈಕಿ ಒಂದನ್ನು ನಾಶಪಡಿಸುವುದರ ಕುರಿತಾದ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ರಾಜನು ನಿರ್ಧರಿಸುತ್ತಾನೆ; ಇದಕ್ಕಾಗಿ ಝೋಲಾಳ ಜೊತೆಯಲ್ಲಿ, ಷು ಮತ್ತು ಅವನ ಸ್ನೇಹಿತರನ್ನು ಬಳಸಿಕೊಳ್ಳಲು ತೀರ್ಮಾನಿಸುತ್ತಾನೆ. ನೆನೆಯ ಮೆಕ್ಯಾಟ್ ನೆಲೆಗೆ ಮುತ್ತಿಗೆ ಹಾಕಲೆಂದು ಸನ್ನದ್ಧವಾಗುವ ಜಿಬ್ರಾಲ್ ಸಾಮ್ರಾಜ್ಯದ ಟಾಲ್ಟಾ ಹಳ್ಳಿಯ ಯೋಧರೊಂದಿಗೆ ಕೂಟವು ಒಟ್ಟಾಗಿ ಕೈಜೋಡಿಸುತ್ತದೆ. ನೆಲೆಯನ್ನು ನಾಶಪಡಿಸಿದ ನಂತರ, ಕೂಟವು ನೆನೆಯನ್ನು ಅರಸಿಕೊಂಡು ಉತ್ತರದ ಕಡೆಗೆ ಹೊರಡುತ್ತದೆ. ನೆನೆಯು ಕ್ಲೂಕ್‌ಳನ್ನು ಸೆರೆಹಿಡಿಯುತ್ತಾನೆ, ಮತ್ತು ಅವಳ ಕುತ್ತಿಗೆಯ ಸುತ್ತ ಒಂದು ಕೊರಳಪಟ್ಟಿಯನ್ನು ಸುತ್ತುವ ಆತ, ಅದು ಸ್ಫೋಟಿಸಲಿರುವುದಾಗಿ ಘೋಷಿಸುತ್ತಾನೆ. ನೆನೆಯನ್ನು ತಲುಪಿದ ನಂತರ, ನೆನೆಯ ಮೇಲೆ ಕೂಟವು ದಾಳಿಮಾಡಲೆಂದು ಅವರಿಗಾಗಿ ಸಮಯವನ್ನು ಖರೀದಿಸಲೆಂದು ಕೂಟದಿಂದ ಬೇರ್ಪಡುತ್ತಾನೆ. ಕ್ಲೂಕ್‌ಳ ಕೊರಳಪಟ್ಟಿಯನ್ನು ತೆಗೆದುಹಾಕಲು ಕೂಟವು ಪ್ರಯತ್ನಿಸಿದಾಗ, ಅವರೆಲ್ಲರಿಗೂ ಕೊರಳಪಟ್ಟಿಗಳನ್ನು ಲಗತ್ತಿಸುವ ಮೂಲಕ ಕೂಟದ ಛಾಯಾರೂಪಗಳನ್ನು ನೆನೆ ಅಂತರ್ಗತ ಮಾಡಿಕೊಳ್ಳುತ್ತಾನೆ. ಅವರ ಶಕ್ತಿಗಳನ್ನು ತೆಗೆದುಕೊಂಡು ಸ್ವತಃ ತನ್ನೊಳಗೆ ಇರಿಸಿಕೊಂಡ ನಂತರ, ಆತ ಅವರ ಕೊರಳಪಟ್ಟಿಗಳನ್ನು ತೆಗೆದುಹಾಕುತ್ತಾನೆ ಮತ್ತು ಅವರು ಚೇತರಿಸಿಕೊಳ್ಳುವುದಕ್ಕೆ ಮುಂಚೆಯೇ ಅವರನ್ನು ಸಾಯಿಸಲು ಪ್ರಯತ್ನಿಸುತ್ತಾನೆ. ಷು ತನ್ನ ಮೋಡಿ ಮಾಡುವಂಥ ಸಾಮರ್ಥ್ಯವು ಬರಿದುಮಾಡಲ್ಪಟ್ಟಿದ್ದರೂ ಸಹ, ತಿಳಿಯದೆಯೇ ದೂರದ ಡೆವೌರ್ ಹಳ್ಳಿಗೆ ಕೂಟದ ದೂರಸ್ಥ ಚಲನೆಗಳನ್ನು ಮಾಡುತ್ತಾನೆ.[೧೩]
ಡೆವೌರ್ ಹಳ್ಳಿಯಲ್ಲಿ, ಸಮುದಾಯವು ಕೆಟ್ಟ ಮರಗಳಿಂದ ಸುತ್ತುವರಿಯಲ್ಪಟ್ಟಿರುವುದರಿಂದಾಗಿ, ತಮ್ಮ ಜಾದೂವಿನ ನೆರವಿಲ್ಲದೆಯೇ ಹಳ್ಳಿಯಿಂದ ತಪ್ಪಿಸಿಕೊಳ್ಳಲು ತಾವು ಅಸಮರ್ಥರಾಗಿರುವುದನ್ನು ಅವರು ಅರಿತುಕೊಳ್ಳುತ್ತಾರೆ. ಷು ಒಂದು ಅಂತರ್ಜ್ಞಾನವನ್ನು ಹೊಂದಿರುತ್ತಾನೆ ಮತ್ತು ತನ್ನ ಗೋಳದ ನೆರವಿಲ್ಲದೆಯೇ ತನ್ನ ಡ್ರ್ಯಾಗನ್ ಛಾಯಾರೂಪಕ್ಕೆ ಆಜ್ಞೆಮಾಡುವಷ್ಟು ತಾನು ಸಮರ್ಥನಾಗಿರುವುದನ್ನು ಕಂಡುಕೊಳ್ಳುತ್ತಾನೆ. ಡೆವೌರ್ ಹಳ್ಳಿಯಲ್ಲಿರುವ ಮುಖ್ಯ ಕೆಟ್ಟ ಮರವನ್ನು ಷು ನಾಶಪಡಿಸುತ್ತಾನೆ, ಮತ್ತು ಅಂತಿಮವಾಗಿ ಅಲ್ಲಿಂದ ಹೊರಡುವುದಕ್ಕೆ ಕೂಟಕ್ಕೆ ಸಾಧ್ಯವಾಗುತ್ತದೆ. ಅಂತಿಮವಾಗಿ ಕೂಟದ ಎಲ್ಲ ಸದಸ್ಯರೂ ತಂತಮ್ಮ ಛಾಯಾರೂಪಗಳಿಗೆ ಆಜ್ಞೆಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ.
ಆ ಹಂತದಲ್ಲಿ, ಕೂಟವು ಮತ್ತೆ ಝೋಲಾಳ ಜೊತೆಯಲ್ಲಿ ಸೇರುತ್ತದೆ; ನೆನೆಯನ್ನು ಬೆನ್ನಟ್ಟುವುದಕ್ಕೆ ಅವರಿಗೆ ನೆರವಾಗಲೆಂದು ಝೋಲಾ ಅವರಿಗೊಂದು ಮೆಕ್ಯಾಟ್‌ನ್ನು ಪೂರೈಸುತ್ತಾಳೆ.[೧೩] ನೆನೆಯನ್ನು ಹಿಂಬಾಲಿಸಿಕೊಂಡು ಕೂಟವು ಮೆಕ್ಯಾಟ್‌ನಲ್ಲಿ ಹೋಗುತ್ತಿರುವಂತೆ, ನೆನೆಯು ಒಂದು ಪ್ರಾಚೀನ ಯಂತ್ರವನ್ನು ಶುರುಮಾಡುತ್ತಾನೆ; ಅದು ಪ್ರಪಂಚವನ್ನು ಎರಡು ಅರ್ಧಗೋಳಗಳಾಗಿ ವಿಭಜಿಸುತ್ತದೆ ಹಾಗೂ ಅರ್ಧಭಾಗಗಳ ನಡುವೆ ಸಾವಿರಾರು ಪ್ರತ್ಯೇಕಿಸಲ್ಪಟ್ಟ ಘನಾಕೃತಿಗಳು ತೇಲಾಡಲು ಪ್ರಾರಂಭಿಸುತ್ತವೆ. ರೂಪಾಂತರದ ತಿರುಳಿನಲ್ಲಿರುವ ಮೂಲ ಘನಾಕೃತಿಯವರೆಗೆ ನೆನೆಯನ್ನು ಕೂಟವು ಅನುಸರಿಸಿಕೊಂಡು ಹೋಗುತ್ತದೆ. ಘನಾಕೃತಿಯ ಮೂಲಕ ಪ್ರಯಾಣ ಮಾಡುವ ಕೂಟವು ಅಂತಿಮವಾಗಿ ಜನರಲ್ ಜಾಬೊವನ್ನು ಸೋಲಿಸುತ್ತದೆ ಮತ್ತು ನೆನೆಯನ್ನು ಎದುರಿಸುತ್ತದೆ. ನೆನೆಯನ್ನು ಕೂಟವು ದುರ್ಬಲಗೊಳಿಸುತ್ತಿದ್ದಂತೆ, ನೆನೆಗಾಗಿ ಝೋಲಾ ಕೆಲಸಮಾಡುತ್ತಿದ್ದಳು ಎಂಬ ವಿಷಯವು ಹೊರಗೆಡವಲ್ಪಡುತ್ತದೆ, ಮತ್ತು ಗೋಳಗಳನ್ನು ನುಂಗುವಂತೆ ಇತರರಿಗೆ ಹೇಳಿದ ಧ್ವನಿಯು ಅವಳದ್ದೇ ಎಂಬುದೂ ಗೊತ್ತಾಗುತ್ತದೆ. ತನ್ನನ್ನು ಸಮರ್ಥಿಸಿಕೊಳ್ಳಲು ಸ್ವತಃ ಝೋಲಾ ತೀರಾ ಅಸಮರ್ಥಳಾದಾಗ, ನೆನೆಯು ಅವಳಿಗೊಂದು ಛಾಯಾರೂಪವನ್ನು ನೀಡಿರುತ್ತಾನೆ ಮತ್ತು ಓರ್ವ ಗೂಢಚಾರಿಣಿಯಾಗಿ ಅವಳನ್ನು ಜಿಬ್ರಾಲ್‌ಗೆ ಕಳಿಸಿರುತ್ತಾನೆ. ನೆನೆಗೆ ಬದಲಿಗೆ ತನ್ನ ಸ್ನೇಹಿತರನ್ನು ಆರಿಸಿಕೊಳ್ಳುವ ಮೂಲಕ ಝೋಲಾ ನೆನೆಗೆ ನಂಬಿಕೆದ್ರೋಹಮಾಡುತ್ತಾಳೆ. ನೆನೆಯ ಸಾವು ಸಂಭವಿಸುತ್ತಿದ್ದಂತೆ, ಅವನ ಭುಜದ ಮೇಲಿರುತ್ತಿದ್ದ ಡೆತ್‌ರಾಯ್ ಎಂಬ ಸಣ್ಣ ಜೀವಿಯು, ತನ್ನ ಯಜಮಾನನ ಶರೀರದಿಂದ ತನ್ನನ್ನು ಬಿಡುಗಡೆ ಮಾಡಿಕೊಂಡು, ನೆನೆಯ ಉಳಿದ ಜೀವಬಲವನ್ನು ಬರಿದುಮಾಡುತ್ತದೆ. ಡೆತ್‌ರಾಯ್ ಎಂಬುದು ಡೆಸ್ಟ್ರಾಯ್ ಎಂಬ ಜೀವಯಾಂತ್ರಿಕ ಶಸ್ತ್ರಾಸ್ತ್ರ ಎಂಬ ವಿಷಯವು ಬಹಿರಂಗವಾಗುತ್ತದೆ. ಹಿಂದೊಮ್ಮೆ ಪ್ರಪಂಚಕ್ಕೆ ಶಾಂತಿಯನ್ನು ತರಲು ಪ್ರಯತ್ನಿಸಿದ ಐತಿಹ್ಯದ ಪ್ರಾಚೀನರನ್ನು ಈ ಶಸ್ತ್ರಾಸ್ತ್ರವು ನಾಶಪಡಿಸಿತ್ತು ಎಂದು ತಿಳಿದುಬರುತ್ತದೆ. ಡೆಸ್ಟ್ರಾಯ್‌ನ್ನು ಲಾವಾದಲ್ಲಿ ಕರಗಿಸುವ ಮೂಲಕ ಅದನ್ನು ಕೂಟವು ನಾಶಪಡಿಸುತ್ತದೆ. ತಮ್ಮ ಕುಟುಂಬಗಳನ್ನು ಮತ್ತೆ ಸೇರಿಕೊಳ್ಳುವ ದೃಷ್ಟಿಯಿಂದ, ಕೂಟವು ಕರಗಿಸುವ ಘನಾಕೃತಿಯಿಂದ ಆಗ ಶೀಘ್ರವಾಗಿ ತಪ್ಪಿಸಿಕೊಳ್ಳುತ್ತದೆ.[೧೭]
ಅಭಿವೃದ್ಧಿ
ಬದಲಾಯಿಸಿ2005ರ ಫೆಬ್ರುವರಿ 24ರಂದು ಬ್ಲೂ ಡ್ರ್ಯಾಗನ್ ಮೊದಲ ಬಾರಿಗೆ ಪ್ರಕಟಗೊಂಡಿತು. ಎಕ್ಸ್‌ಬಾಕ್ಸ್ 360 ಎಂಬುದಾಗಿ ನಂತರದಲ್ಲಿ ಪರಿಚಿತಗೊಂಡ ಪೆಟ್ಟಿಗೆಗೆ ಸಂಬಂಧಿಸಿದಂತೆ, ಮಿಸ್ಟ್‌ವಾಕರ್ ಸ್ಟುಡಿಯೋಸ್‌ನಿಂದ ಅಭಿವರ್ಧಿಸಲ್ಪಡುತ್ತಿದ್ದ ಹೆಸರಿಸದ ಪಾತ್ರ-ನಿರ್ವಹಣೆಯ ಎರಡು ಆಟಗಳ ಪೈಕಿ ಒಂದಾಗಿ ಇದು ಹೊರಗೆಡಹಲ್ಪಟ್ಟಿತು.[೧೮] ಅನಾವರಣವನ್ನು ಅನುಸರಿಸಿಕೊಂಡು IGNನಲ್ಲಿ ಬಂದ ಸಂದರ್ಶನವೊಂದರಲ್ಲಿ, ಆಟಗಾರಿಕೆಯ ವ್ಯವಸ್ಥೆಯಲ್ಲಿ ಜಪಾನಿಯರ ಆಟಗಳು ಲಭ್ಯವಾಗುವಂತೆ ಪ್ರಾಮುಖ್ಯತೆ ನೀಡಿದ ಮೈಕ್ರೋಸಾಫ್ಟ್‌ಗೆ ಪೀಟರ್ ಮೂರ್ ಒತ್ತುನೀಡಿದ. ಈ ಕುರಿತು ಅವನು ಹೀಗೆ ವ್ಯಾಖ್ಯಾನಿಸಿದ: "... ಜಪಾನೀ ಅಭಿವರ್ಧಕರು ನಮ್ಮ ಪಾಲುದಾರರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸುವಲ್ಲಿ ಮುಂದಿನ 12–18 ತಿಂಗಳುಗಳು ನಮಗೆ ಒಂದು ಮುಖ್ಯ ಆದ್ಯತೆಯಾಗಿರುತ್ತದೆ."[೧೯] ಬ್ಲೂ ಡ್ರ್ಯಾಗನ್ ಆಟಕ್ಕೆ ಕೊಡುಗೆ ನೀಡಿರುವವರ ಪೈಕಿ ಜೂಜಾಟದ ಉದ್ಯಮದಲ್ಲಿ ಪ್ರಸಿದ್ಧರಾಗಿರುವ ಹಲವಾರು ಸುಪರಿಚಿತ ಜಪಾನಿಯರು ಸೇರಿದ್ದಾರೆ. ಸದರಿ ಶೀರ್ಷಿಕೆಯ ಮೂಲ ಕಥೆಯನ್ನು ಹಿರೊನೊಬು ಸಕಾಗುಚಿ ಎಂಬಾತ ಬರೆದ; ಈತ ಮೊದಲ ಐದು ಫೈನಲ್ ಫ್ಯಾಂಟಸಿ ವಿಡಿಯೋ ಆಟಗಳ ಆಟದ ನಿರ್ದೇಶಕನಾಗಿದ್ದ. ಡ್ರ್ಯಾಗನ್ ಬಾಲ್ ನ ಸೃಷ್ಟಿಕರ್ತನಾದ ಅಕಿರಾ ಟೋರಿಯಾಮಾ ಎಂಬಾತನಿಂದ ಸೃಷ್ಟಿಸಲ್ಪಟ್ಟ ಕಲೆಯನ್ನೂ ಇದು ಒಳಗೊಳ್ಳುತ್ತದೆ; ಈತ ಡ್ರ್ಯಾಗನ್ ಕ್ವೆಸ್ಟ್ ಸರಣಿ ಮತ್ತು ಕ್ರೋನೋ ಟ್ರಿಗರ್ ಈ ಎರಡಕ್ಕೂ ಸಂಬಂಧಿಸಿದಂತೆ ಗೋಚರ ಪಾತ್ರದ ಮತ್ತು ಪೆಡಂಭೂತದ ವಿನ್ಯಾಸಕ ಮತ್ತು ಸಚಿತ್ರಕಾರನಾಗಿಯೂ ಕೆಲಸ ಮಾಡಿದ್ದ.[೨೦]
ಆಟಕ್ಕೆ ಸಂಬಂಧಿಸಿದ ವಾಸ್ತವಿಕ ತಂತ್ರಾಂಶದ ಬಹುಪಾಲು ಅಭಿವೃದ್ಧಿ ಕೆಲಸವನ್ನು ಆರ್ಟೂನ್‌ನಲ್ಲಿ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ಟಕುಯಾ ಮಾಟುಸುಮೊಟೊ ಎಂಬಾತ ನಿರ್ದೇಶಕನಾಗಿ ಸೇವೆ ಸಲ್ಲಿಸಿದರೆ, ಆಟದ ವಿಶ್ವನೋಟಕ್ಕೆ ಸಂಬಂಧಿಸಿದಂತೆ ಮನಾಬು ಕುಸೊನೊಕಿ ಎಂಬಾತ ಹೊಣೆಗಾರನಾಗಿದ್ದ. Blinx 2: Masters of Time and Space ಗೆ ಸಂಬಂಧಿಸಿದಂತೆ ಮಾಟುಸುಮೊಟೊ ಓರ್ವ ವಿನ್ಯಾಸಕನಾಗಿ ಹಿಂದೆಯೇ ಕೆಲಸಮಾಡಿದ್ದರೆ, ಪಾನ್‌ಜರ್ ಡ್ರಾಗೂನ್ ಪ್ರಪಂಚವೂ ಸೇರಿದಂತೆ ಸೆಗಾ ಎಂಬುದಕ್ಕೆ ಸಂಬಂಧಿಸಿದ ತನ್ನ ಕೆಲಸಕ್ಕಾಗಿ ಕುಸೊನೊಕಿ ಸುಪರಿಚಿತನಾಗಿದ್ದಾನೆ.[೨೧] 2005ರ ನವೆಂಬರ್ ಅಂತ್ಯದ ಸುಮಾರಿಗೆ, ಅಂದರೆ ಜಪಾನ್‌ನಲ್ಲಿ ಸದರಿ ಶೀರ್ಷಿಕೆಯು ಬಿಡುಗಡೆಯಾಗುವುದಕ್ಕೆ ಸರಿಸುಮಾರಾಗಿ ಒಂದು ವರ್ಷ ಮುಂಚಿತವಾಗಿ, ಆಟವು ಸುಮಾರು 40%ನಷ್ಟು ಸಂಪೂರ್ಣವಾಗಿತ್ತು ಎಂಬುದಾಗಿ ಆರ್ಟೂನ್‌ನ ನವೊಟೊ ಓಶಿಮಾ ಸೂಚಿಸಿದ. ಪ್ರಧಾನವಾಗಿ ಸಾಹಸಮಯ ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ ಆರ್ಟೂನ್ ಹಿಂದೆಯೇ ಪರಿಚಿತವಾಗಿತ್ತು ಎಂದೂ ಸಹ ತಿಳಿಸಿದ ಅವನು, ಬ್ಲೂ ಡ್ರ್ಯಾಗನ್ ಆಟಕ್ಕೆ ಸಂಬಂಧಿಸಿದ ಹೊಣೆಗಾರಿಕೆಯು ಮೂಲತಃ ಒಂದು ರೀತಿಯಲ್ಲಿ ಭಯಹುಟ್ಟಿಸುವಂಥದ್ದಾಗಿತ್ತು ಎಂದು ಹೇಳಿದ.[೨೨] ಇದು ಮಾತ್ರವೇ ಅಲ್ಲದೇ, 2006ರ ಬಹುಭಾಗಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿನ ಮಾಹಿತಿಯಲ್ಲಿ ಸಾಕಷ್ಟು ಕೊರತೆ ಕಂಡುಬಂದಿದ್ದರಿಂದಾಗಿ, 2007ರವರೆಗೂ ಸದರಿ ಶೀರ್ಷಿಕೆಯು ವಿಳಂಬಗೊಳ್ಳಬಹುದೆಂಬ ಊಹನವು ಹುಟ್ಟಿಕೊಂಡಿತು; ಆದರೆ 2006ರ ಆಗಸ್ಟ್‌ನಲ್ಲಿ ಮೈಕ್ರೋಸಾಫ್ಟ್‌ನ ಟಕಾಶಿ ಸೆನ್‌ಸುಯಿ ದೃಢೀಕರಣವನ್ನು ನೀಡಿ, 2006ರ ಅಂತ್ಯದ ವೇಳೆಗೆ ಆಟವು ಅವಶ್ಯವಾಗಿ ಬಿಡುಗಡೆಯಾಗುವುದೆಂದು ತಿಳಿಸಿದ.[೨೩] ಅಂತಿಮವಾಗಿ, ಮೂರು ಸಂಪೂರ್ಣ DVD ಮುದ್ರಿಕೆಗಳಲ್ಲಿ ಬಿಡುಗಡೆಯಾದ ಬ್ಲೂ ಡ್ರ್ಯಾಗನ್ ಆಟವು, ಅನೇಕ ಮುದ್ರಿಕೆಗಳಿಗೆ ವ್ಯಾಪಿಸುವಲ್ಲಿನ ಮೊದಲ ಎಕ್ಸ್‌ಬಾಕ್ಸ್ 360 ಆಟ ಎಂದು ಕರೆಸಿಕೊಂಡಿತು.[೩]
2006ರ ನವೆಂಬರ್‌ನಲ್ಲಿ IGN ಜೊತೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಸಕಾಗುಚಿಯು ದೃಢೀಕರಣವನ್ನು ನೀಡುತ್ತಾ, ಬ್ಲೂ ಡ್ರ್ಯಾಗನ್ 2 ಎಂಬ ಉತ್ತರಭಾಗವು ಯೋಜನಾ ಹಂತಗಳಲ್ಲಿದ್ದು, ಆ ಹಂತವನ್ನು ದಾಟಿದ ಕೆಲವೇ ದಿನಗಳಲ್ಲಿ ಅಭಿವೃದ್ಧಿಯ ಹಂತಕ್ಕೆ ಅದು ಸಂಭಾವ್ಯವಾಗಿ ಪ್ರವೇಶಿಸಲಿದೆ ಎಂದು ತಿಳಿಸಿದ.[೨೪] ನಂತರ, ನಿಂಟೆಂಡೊ DSಗೆ ಸಂಬಂಧಿಸಿದಂತಿರುವ ಕೆಲಸಗಳಲ್ಲಿ ಬ್ಲೂ ಡ್ರ್ಯಾಗನ್ ಪ್ಲಸ್ ತೊಡಗಿಸಿಕೊಂಡಿದೆ ಎಂಬುದಾಗಿ ವೀಕ್ಲಿ ಷೋನೆನ್ ಜಂಪ್ ನ ಸಂಚಿಕೆಯೊಂದರಲ್ಲಿ ಘೋಷಿಸಲಾಯಿತು.[೨೫] ಇದೊಂದು ನಿಜಾವಧಿ ಅನುಕರಣೆಯ RPG ಆಗಿದ್ದು, 2D ಸ್ಪ್ರೈಟ್ ಗ್ರಾಫಿಕ್ ಕಲೆಗಳನ್ನು ಒಳಗೊಂಡಿದೆ. ಇದು 2008ರ ಸೆಪ್ಟೆಂಬರ್ 4ರಂದು ಜಪಾನ್‌ನಲ್ಲೂ ಹಾಗೂ 2009ರ ಫೆಬ್ರುವರಿ 19ರಂದು ಉತ್ತರ ಅಮೆರಿಕಾದಲ್ಲೂ ಬಿಡುಗಡೆಯಾಯಿತು.[೨೬] 2009ರಲ್ಲಿ, DSಗಾಗಿ Blue Dragon: Ikai no Kyojū ಎಂಬ ಎರಡನೇ ಬ್ಲೂ ಡ್ರ್ಯಾಗನ್ ಶೀರ್ಷಿಕೆಯು ಬಿಡುಗಡೆಯಾಯಿತು. ಸದರಿ ಎರಡನೇ ಶೀರ್ಷಿಕೆಯು ಹೆಚ್ಚಿನ ರೀತಿಯಲ್ಲಿ ಸಾಹಸಮಯ ಅಂಶಗಳನ್ನು ಒಳಗೊಂಡಿದ್ದು, ಷು ಪಾತ್ರಕ್ಕೆ ಬದಲಾಗಿ ಆಟಗಾರನಿಂದ ಸೃಷ್ಟಿಸಲ್ಪಟ್ಟ ಪಾತ್ರವೊಂದನ್ನು ಅದು ಅನುಸರಿಸುತ್ತದೆ.
ಸಂಗೀತ
ಬದಲಾಯಿಸಿಬ್ಲೂ ಡ್ರ್ಯಾಗನ್ 'ನ ಸಂಗೀತವನ್ನು ನೊಬುವೊ ಉಯೆಮಾಟ್ಸು ಎಂಬಾತ ಸಂಯೋಜಿಸಿದ ಮತ್ತು ನಿರ್ಮಿಸಿದ; ಫೈನಲ್ ಫ್ಯಾಂಟಸಿ ಎಂಬ ಜನಪ್ರಿಯ ಸರಣಿಯಲ್ಲಿನ ಬಹುಪಾಲು ಸಂಗೀತದ ಸಂಯೋಜನೆಗೆ ಸಂಬಂಧಿಸಿದಂತೆ ಇವನು ಪ್ರಸಿದ್ಧನಾಗಿದ್ದಾನೆ. ಪ್ರಮುಖ ವಿಷಯಗಳಲ್ಲಿ ಒಂದಾದ "ಎಟರ್ನಿಟಿ" ಎಂಬುದನ್ನು ಉಯೆಮಾಟ್ಸು ಸಂಯೋಜಿಸಿದ. ಇದು ಇಯಾನ್ ಗಿಲ್ಲನ್ ಎಂಬ ಇಂಗ್ಲಿಷ್ ಗಾಯಕನಿಂದ ಸಾದರಪಡಿಸಲ್ಪಟ್ಟ ಗಾಯನ ಭಾಗಗಳನ್ನು ಒಳಗೊಂಡಿದೆ.[೨೭] 2006ರ ಡಿಸೆಂಬರ್ 13ರಂದು ಬ್ಲೂ ಡ್ರ್ಯಾಗನ್ ಒರಿಜಿನಲ್ ಸೌಂಡ್‌ಟ್ರಾಕ್ ಬಿಡುಗಡೆಯಾಯಿತು ಮತ್ತು ಇದರ ವಾದ್ಯಸಂಗೀತವನ್ನು ಸಟೊಷಿ ಹೆನ್‌ಮಿ ಮತ್ತು ಹಿರೋಯುಕಿ ನಕಾಯಾಮ ಎಂಬಿಬ್ಬರು ವ್ಯವಸ್ಥೆಗೊಳಿಸಿದ್ದರು.[೨೮] ಬ್ಲೂ ಡ್ರ್ಯಾಗನ್ ಗೆ ಸಂಬಂಧಿಸಿದ ಸಂಗೀತವು, ಸಂಗೀತ ಕಚೇರಿಗಳಲ್ಲಿ ಪ್ರತ್ಯಕ್ಷವಾಗಿ ನೀಡಲ್ಪಟ್ಟ ಪ್ರಸ್ತುತಿಯಾಗಿತ್ತು. ಅಂದರೆ, 2006ರಲ್ಲಿ ನಡೆದ ಪ್ಲೇ! ಎ ವಿಡಿಯೋ ಗೇಮ್ ಸಿಂಫನಿ ಎಂಬ ಸಂಗೀತ ಕಚೇರಿಗಳಲ್ಲಿ ಇದರ ಪ್ರಸ್ತುತಿಯು ಜರುಗಿತ್ತು.[೨೯] "ಕೇವ್" ಧ್ವನಿಪಥವು "ನೊಬುವೊ ಉಯೆಮಾಟ್ಸುನ 10 ಅಗ್ರಗಣ್ಯ ಸಂಗೀತಮಯ ಕ್ಷಣಗಳಲ್ಲಿ" ಒಂದಾಗಿದೆ ಎಂಬುದಾಗಿ IGN ಶ್ಲಾಘಿಸಿತು.[೩೦] ಎಂಟರ್ ಶಿಕಾರಿ vs. ಬ್ಲೂ ಡ್ರ್ಯಾಗನ್ ಎಂಬ ಒಂದು ವಾದ್ಯಸಂಗೀತದ ಗೀತೆಯನ್ನೂ ಸಹ ಮೂಲ ಧ್ವನಿಪಥಕ್ಕಾಗಿ ಎಂಟರ್ ಶಿಕಾರಿ ರೂಪಿಸಿತು.[೩೧]
ಬ್ಲೂ ಡ್ರ್ಯಾಗನ್ ಒರಿಜಿನಲ್ ಸೌಂಡ್‌ಟ್ರಾಕ್ ಧ್ವನಿಪಥದ ಪಟ್ಟೀಕರಣ
Disc 1 | ||
---|---|---|
ಸಂ. | ಹಾಡು | ಸಮಯ |
1. | "Waterside" | 1:54 |
2. | "A Lamenting Bell Toll" | 2:13 |
3. | "The Land Shark is Coming!" | 2:04 |
4. | "Crisis" | 0:43 |
5. | "Mysterious Village" | 1:44 |
6. | "Dragon Fight!" | 1:32 |
7. | "Thumbs Up!" | 0:33 |
8. | "Everyday Tranquility" | 1:30 |
9. | "Mystery of the Ancient Machine" | 2:03 |
10. | "Challenge" | 1:00 |
11. | "An Omen" | 2:52 |
12. | "In Search of the Ruins" | 1:59 |
13. | "Ruins" | 3:54 |
14. | "High-Speed Flight" | 1:33 |
15. | "Anger and Sorrow" | 2:57 |
16. | "Watashi no Mizu to Sora" | 5:38 |
17. | "Cave" | 4:23 |
18. | "The City Lights" | 2:00 |
19. | "The Ruined Village" | 2:00 |
20. | "Exceed the Land" | 2:48 |
21. | "BAD BUT BAT" | 3:23 |
22. | "Torippo!" | 1:30 |
23. | "A Smiling Face" | 2:26 |
24. | "Knock It Down" | 1:57 |
25. | "Army of the Holy Sword" | 1:56 |
ಒಟ್ಟು ಸಮಯ: | 56:54 |
Disc 2 | ||
---|---|---|
ಸಂ. | ಹಾಡು | ಸಮಯ |
1. | "Gibral Castle" | 3:15 |
2. | "Zola's Theme" | 1:55 |
3. | "A Little Fight" | 1:49 |
4. | "The Frozen Village" | 2:13 |
5. | "Nene's Paradise" | 3:22 |
6. | "Giant Mechat" | 3:01 |
7. | "Advance! Drill Machine" | 2:04 |
8. | "The Dance-Loving Devi Tribe" | 2:03 |
9. | "The Ancients" | 2:13 |
10. | "An Ancient Fortress" | 2:47 |
11. | "The Mechanical Temple" | 2:05 |
12. | "The Path to Gibral" | 3:10 |
13. | "Mecha-Robo Corps Charge!" | 2:25 |
14. | "The Land of Happiness" | 1:51 |
15. | "A Village of Murals" | 2:03 |
16. | "The Calm Waterside" | 2:27 |
17. | "An Uneasy Night" | 1:52 |
18. | "Eternity" | 3:52 |
19. | "Mechat Takes Off!" | 1:30 |
20. | "Take Back the Shadow!" | 2:02 |
21. | "State of Emergency" | 2:08 |
22. | "CAVERN" | 2:52 |
23. | "Revival of the Ancients" | 3:00 |
24. | "The Seal is Broken" | 4:52 |
25. | "Happy Birthday" | 4:24 |
26. | "Blue Dragon Main Theme" | 3:18 |
27. | "Waterside ~for Piano and Orchestra~" | 3:30 |
ಒಟ್ಟು ಸಮಯ: | 1:12:02 |
ಮಂಗಾ ಮತ್ತು ಸಜೀವ ಚಿತ್ರಿಕೆ
ಬದಲಾಯಿಸಿಬ್ಲೂ ಡ್ರ್ಯಾಗನ್ ಆಟದ ಒಂದು ಮಂಗಾ ರೂಪಾಂತರವನ್ನು ನಿರ್ಮಿಸಲಾಗುವುದು ಎಂಬುದಾಗಿ 2006ರ ನವೆಂಬರ್ 12ರಂದು ಷುಯೆಷಾ ಘೋಷಿಸಿತು. Blue Dragon: Secret Trick ಎಂಬುದು ಷಿಬ್ಯಾಟಾ ಅಮಿಯಿಂದ ರೂಪಿಸಲ್ಪಟ್ಟಿದ್ದು, 2007ರ ಜನವರಿಯಲ್ಲಿ ಮಂತ್ಲಿ ಷೋಯೆನ್ ಜಂಪ್ ನಲ್ಲಿ ಇದರ ಪ್ರಥಮ ಪ್ರದರ್ಶನವನ್ನು ನಿಗದಿಪಡಿಸಲಾಯಿತು.[೩೨] ಡೆತ್ ನೋಟ್ ನ ಸಚಿತ್ರಕಾರನಾದ ಟಕೇಶಿ ಒಬೇಟಾ ಎಂಬಾತ ಬ್ಲೂ ಡ್ರ್ಯಾಗನ್ ರಾಲ್ ಗ್ರಾಡ್ ನ್ನು ನಿರ್ವಹಿಸುತ್ತಿದ್ದು, ಇದು ವೀಕ್ಲಿ ಷೋನೆನ್ ಜಂಪ್ ನ 2007ರ ಸಂಚಿಕೆ 1ರಲ್ಲಿ ಧಾರವಾಹಿ ರೂಪದ ಪ್ರಸಾರವಾಗಿ ಆರಂಭವಾಯಿತು.[೩೩] ನಂತರದಲ್ಲಿ, ವಿಝ್ ಮೀಡಿಯಾ ಸಂಸ್ಥೆಯು ಮಂಗಾದ ಮೊದಲ ಸಂಪುಟವನ್ನು ಕೇವಲ "ರಾಲ್ ಗ್ರಾಡ್ " ಎಂಬ ಶೀರ್ಷಿಕೆಯಲ್ಲಿ 2008ರ ಫೆಬ್ರುವರಿಯಲ್ಲಿ ಬಿಡುಗಡೆಮಾಡಿತು.[೩೪]
ಯುಕಿಹಿರೊ ಮಾಟ್ಸುಷಿಟಾ ಎಂಬಾತನಿಂದ ನಿರ್ದೇಶಿಸಲ್ಪಟ್ಟ ಒಂದು ಸಜೀವ ಚಿತ್ರಿಕೆಯ ರೂಪಾಂತರದ ಕುರಿತಾಗಿ 2006ರ ನವೆಂಬರ್‌ನಲ್ಲಿ ಘೋಷಿಸಲಾಯಿತು. ಸ್ಟುಡಿಯೋ ಪಿಯೆರಾಟ್ ವತಿಯಿಂದ ಇದರ ಸಜೀವ ಚಿತ್ರಿಕೆಯ ಕಾರ್ಯವನ್ನು ನಡೆಸಲಾಯಿತು ಮತ್ತು ಸ್ಕೈ ಪರ್ಫೆಕ್ಟ್ ವೆಲ್‌ಥಿಂಕ್, TV ಟೋಕಿಯೋ ಮತ್ತು ಪಿಯೆರಾಟ್ ಸಹ-ನಿರ್ಮಾಣದಲ್ಲಿ ಇದು ಮೂಡಿಬಂದಿತು.[೩೫] 2007ರ ಏಪ್ರಿಲ್ 7ರಂದು ತನ್ನ ಪ್ರಸಾರವನ್ನು ಆರಂಭಿಸಿದ ಈ ಸಜೀವ ಚಿತ್ರಿಕೆಯು, ಆಟಕ್ಕೆ ಬಳಸಲಾಗಿದ್ದ ಗಾಯನ ಭಾಗಕ್ಕಿಂತ ವಿಭಿನ್ನವಾಗಿರುವ ಒಂದು ಗಾಯನ ಭಾಗದ ಹಂಚಿಕೆಯನ್ನು ಒಳಗೊಂಡಿತ್ತು. ಇದು ಆಟದ ಬಹುತೇಕ ಕಥಾವಸ್ತುವನ್ನೂ ಉಪೇಕ್ಷಿಸಿತು.[೩೬] TV ಟೋಕಿಯೋದಲ್ಲಿ ಇದು ಪ್ರಸಾರವಾಗಲು ಪ್ರಾರಂಭಿಸಿ 51 ಸಂಚಿಕೆಗಳವರೆಗೆ ಓಡಿತು.[೩೭] Blue Dragon: The Seven Sky Dragons (BLUE DRAGON 天界の七竜 Burū Doragon: Tenkai no Shichiryū?) ಎಂಬ ಶೀರ್ಷಿಕೆಯನ್ನುಳ್ಳ ಬ್ಲೂ ಡ್ರ್ಯಾಗನ್‌ನ ಎರಡನೇ ಋತುವೊಂದು 2008ರ ಏಪ್ರಿಲ್ 5ರಂದು TV ಟೋಕಿಯೋದಲ್ಲಿ ಪ್ರಥಮ ಪ್ರದರ್ಶನ ಕಂಡಿತು.[೩೮] 2007ರ ಏಪ್ರಿಲ್ 16ರಂದು ವಿಝ್ ಮೀಡಿಯಾ ಸಂಸ್ಥೆಯು ಪ್ರಕಟಣೆಯೊಂದನ್ನು ನೀಡಿ, ಉತ್ತರ ಅಮೆರಿಕಾ ಮತ್ತು ಯುರೋಪ್‌ಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಂಬಂಧಿಸಿದಂತೆ ಸದರಿ ಸಜೀವ ಚಿತ್ರಿಕೆಗೆ ತಾನು ಅನುಮತಿ ನೀಡಿದ್ದಾಗಿ ತಿಳಿಸಿತು.[೩೯] ಇಂಗ್ಲಿಷ್ ಭಾಷೆಗೆ ಡಬ್ ಮಾಡಲಾದ ಸರಣಿಯ ಒಂದು ಸಂಕಲಿತ ಆವೃತ್ತಿಯು, 2008ರ ಏಪ್ರಿಲ್ 5ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಪ್ರಥಮ ಪ್ರದರ್ಶನ ಕಂಡಿತು; 2009ರ ಜನವರಿ 30ರಂದು ಜೆಟ್‌ಸ್ಟ್ರೀಮ್‌ನ್ನು ರದ್ದುಪಡಿಸುವವರೆಗೂ, ಟೂನಾಮಿ ಜೆಟ್‌ಸ್ಟ್ರೀಮ್‌ನಲ್ಲಿ ಇದು ಪ್ರಸಾರವಾಯಿತು.[೪೦] ಅಲ್ಲಿಂದೀಚೆಗೆ ಕಂಡುಬಂದಿರುವ ಪ್ರಕಾರ, ಬ್ಲೂ ಡ್ರ್ಯಾಗನ್ ಸಜೀವ ಚಿತ್ರಿಕೆಯ ಕತ್ತರಿ ಪ್ರಯೋಗಕ್ಕೆ ಒಳಗಾಗದ ಒಂದು ಆವೃತ್ತಿಯನ್ನು ವಿಝ್ ಮೀಡಿಯಾ ಸಂಸ್ಥೆಯು ಇಂಗ್ಲಿಷ್‌ನಲ್ಲಿ ನಿರ್ಮಿಸಲಿಲ್ಲ. ಮಂಗಾ ಎಂಟರ್‌ಟೈನ್‌ಮೆಂಟ್ ವತಿಯಿಂದ ಬಿಡುಗಡೆಯಾದ, ಕತ್ತರಿ ಪ್ರಯೋಗಕ್ಕೆ ಒಳಗಾಗದ ಈ ಆವೃತ್ತಿಯ ಮೊದಲ 24 ಸಂಚಿಕೆಗಳು DVDಯಲ್ಲಿ (ಇದುವರೆಗೆ ಏಕಮಾತ್ರವಾಗಿ UKಯಲ್ಲಿ ಮಾತ್ರವೇ ಬಿಡುಗಡೆಯಾಗಿದೆ) ಬಿಡುಗಡೆಯಾದವು ಮತ್ತು 2 ಮುದ್ರಿಕೆಯನ್ನು ಒಳಗೊಂಡ ಮೂರು DVD ಕಟ್ಟುಗಳನ್ನು ಅದು ಹೊಂದಿತ್ತು. ಮುಂದಿನ DVD ಕಟ್ಟಿನ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸುವುದಿದೆ. USನಲ್ಲಿನ DVD ಬಿಡುಗಡೆಗಳಿಗಿಂತ ಭಿನ್ನವಾಗಿರುವ ಈ ಕತ್ತರಿ ಪ್ರಯೋಗಕ್ಕೆ ಒಳಗಾಗದ ಸಂಚಿಕೆಗಳು, ಜಪಾನಿಯರ ಮೂಲ ಪ್ರಾರಂಭ ಮತ್ತು ಮುಕ್ತಾಯವನ್ನು ಸಂಪೂರ್ಣವಾಗಿ ಪರಿಷ್ಕರಿಸಿವೆ; ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಪ್ರಸಾರಗೊಂಡ ಆವೃತ್ತಿಯ ಎಲ್ಲಾ ಸಂಕಲಿತ ದೃಶ್ಯಗಳು, ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಜಪಾನಿ ಭಾಷೆಯಲ್ಲಿ ನೋಡುವ ಆಯ್ಕೆ ಇವೇ ಮೊದಲಾದ ಲಕ್ಷಣಗಳನ್ನು ಇವು ಹೊಂದಿವೆ.
ಜನರ ಸ್ವೀಕೃತಿ
ಬದಲಾಯಿಸಿReception | |
---|---|
Aggregate scores | |
Aggregator | Score |
GameRankings | 76%[೪] |
Metacritic | 79 out of 100[೪೧] |
Review scores | |
Publication | Score |
1UP.com | C+[೪೨] |
Eurogamer | 5 out of 10[೪೩] |
Famitsu | 37 out of 40[೪೪] |
Game Informer | 9 out of 10[೪೫] |
GamePro | 4.5 out of 5[೪೬] |
GameSpot | 6 out of 10[೪೭] |
GameSpy | 4 out of 5[೪೮] |
IGN | 7.9 out of 10[೬] |
X-Play | [೫] |
ಒಂದು ಸೀಮಿತ ಆವೃತ್ತಿಯ ಎಕ್ಸ್‌ಬಾಕ್ಸ್ 360 ಪ್ರಧಾನ ವ್ಯವಸ್ಥೆಯೊಂದಿಗೆ ಜತೆಗೂಡಿಸಲ್ಪಟ್ಟಿದ್ದ ಬ್ಲೂ ಡ್ರ್ಯಾಗನ್ ಆಟದ ಪೂರ್ವಭಾವಿ-ಬೇಡಿಕೆಗಳು, 2006ರ ಡಿಸೆಂಬರ್ 7ರ ಬಿಡುಗಡೆ ದಿನಾಂಕಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಜಪಾನ್‌ನಲ್ಲಿ ಮಾರಾಟವಾದವು.[೪೯] 200,000ಕ್ಕೂ ಹೆಚ್ಚಿನ ಪ್ರತಿಗಳು[೫೦] ಮಾರಾಟವಾಗಬಹುದು ಎಂಬುದಾಗಿ ಮೈಕ್ರೋಸಾಫ್ಟ್ ಮತ್ತು ಮಿಸ್ಟ್‌ವಾಕರ್ ಕಂಪನಿಗಳು ಆರಂಭದಲ್ಲಿ ಆಶಿಸಿದ್ದವು; ಇದು ಜಪಾನ್‌ನಲ್ಲಿ ಎಕ್ಸ್‌ಬಾಕ್ಸ್ 360 ಆಟವೊಂದರ ಮಾರಾಟಕ್ಕೆ ಸಂಬಂಧಿಸಿದಂತೆ ಅವು ಹೊಂದಿದ್ದ ದಾಖಲೆಯನ್ನು ಮುರಿಯಬಲ್ಲ ಸಂಖ್ಯೆಯಾಗಿತ್ತು. 2007ರ ಡಿಸೆಂಬರ್ 27ರ ವೇಳೆಗೆ, ನಿಖರವಾಗಿ 200,000 ಪ್ರತಿಗಳು ಮಾರಾಟವಾಗುವುದರೊಂದಿಗೆ, ಸದರಿ ಗುರಿಯನ್ನು ಮುಟ್ಟುವಲ್ಲಿ ಆಟವು ಯಶಸ್ವಿಯಾಯಿತು.[೫೧] ಆಟವು ಗಳಿಸಿದ ಕೀರ್ತಿ ಮತ್ತು ಅದು ಮಾರಾಟವಾದ ಪರಿಯನ್ನು ಕಂಡು ಅದರ ಸೃಷ್ಟಿಕರ್ತ ಹಿರೊನೊಬು ಸಕಾಗುಚಿ ಸಂತೋಷಗೊಂಡ.[೫೨]
ಬ್ಲೂ ಡ್ರ್ಯಾಗನ್ ಆಟಕ್ಕೆ ಸಂಬಂಧಿಸಿದ ವಿಮರ್ಶೆಗಳು ಒಂದಷ್ಟು ಸಮ್ಮಿಶ್ರವಾಗಿದ್ದರೂ ಸಹ, ಸಾರ್ವತ್ರಿಕವಾಗಿ ಅನುಕೂಲಕರವಾಗಿದ್ದವು. ಗೇಮ್ ರ್ಯಾಂಕಿಂಗ್ಸ್ ಎಂಬ ಅವಲೋಕನ ಸಂಗ್ರಾಹಕ ತಾಣದಲ್ಲಿ, 67 ಅವಲೋಕನಗಳನ್ನು ಆಧರಿಸಿದ 76%ನಷ್ಟು ಪ್ರಮಾಣದ ಒಂದು ಸರಾಸರಿ ಅಂಕಗಳಿಕೆಯನ್ನು ಆಟವು ಹೊಂದಿತ್ತು.[೪] ಆಟವು ಒಳಗೊಂಡಿರುವ ಸಾಂಪ್ರದಾಯಿಕ ವಿಧಾನಕ್ಕೆ ಸಂಬಂಧಿಸಿದಂತೆ ಅನೇಕ ವಿಮರ್ಶಕರು ಆಟವನ್ನು ಶ್ಲಾಘಿಸಿದರೆ, ಇನ್ನು ಕೆಲವು ವಿಮರ್ಶಕರು ಒಂದು ಮುಖ್ಯ ಕಾರಣಕ್ಕಾಗಿ ಅದನ್ನು ಟೀಕಿಸಿದರು; ಓರ್ವ ವಿಮರ್ಶಕನು ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ
ಉಲ್ಲೇಖಗಳು
ಬದಲಾಯಿಸಿ- ↑ Blue Dragon: Expanded Information, GameStop, archived from the original on ಜೂನ್ 17, 2008, retrieved July 1, 2008
- ↑ Ashcraft, Brian (October 6, 2006), Blue Dragon Faceplate To Slay Japan, Kotaku, archived from the original on ಡಿಸೆಂಬರ್ 3, 2008, retrieved July 23, 2008
- ↑ ೩.೦ ೩.೧ Gantayat, Anoop (December 6, 2006), Blue Dragon Arrives, IGN, retrieved July 22, 2008
- ↑ ೪.೦ ೪.೧ ೪.೨ Blue Dragon Reviews, Game Rankings, archived from the original on ಮಾರ್ಚ್ 9, 2010, retrieved March 17, 2010
- ↑ ೫.೦ ೫.೧ Stewart, Greg, Blue Dragon Review, X-Play, archived from the original on ಜೂನ್ 27, 2017, retrieved May 15, 2009
- ↑ ೬.೦ ೬.೧ ೬.೨ ೬.೩ ೬.೪ ೬.೫ ೬.೬ ೬.೭ Brudvig, Eric, Blue Dragon Review, IGN, archived from the original on ಅಕ್ಟೋಬರ್ 11, 2007, retrieved April 14, 2009
- ↑ ೭.೦ ೭.೧ ೭.೨ ೭.೩ "Blue Dragon Xbox 360Video - Monsters battle one-another" (in Japanese). IGN. December 7, 2006. Retrieved May 31, 2009.
{{cite web}}
: CS1 maint: unrecognized language (link) - ↑ Charles, Onyett (September 22, 2006), TGS 2006: Blue Dragon Hands-On, IGN, retrieved April 14, 2009
- ↑ Roper, Chris; Gantayat, Anoop, TGS 2006: Blue Dragon Trailer Eyes-on, IGN, retrieved April 14, 2009
- ↑ Gantayat, Anoop (May 19, 2005), More on Lost Odyssey and Blue Dragon., IGN, retrieved April 13, 2009
- ↑ ೧೧.೦ ೧೧.೧ ೧೧.೨ Brudvig, Erik (May 24, 2007), Blue Dragon Hands-on, IGN, retrieved April 25, 2009
- ↑ "Blue Dragon Xbox 360Gameplay - English Intro (HD)". IGN. June 19, 2007. Retrieved May 31, 2009.
- ↑ ೧೩.೦ ೧೩.೧ ೧೩.೨ Brudvig, Erik (June 4, 2007), Blue Dragon: 20 Hours In, IGN, retrieved April 25, 2009
- ↑ Nardozzi, Dale (June 18, 2007), Blue Dragon Hands-on Preview (Xbox 360), TeamXbox, archived from the original on ಮೇ 5, 2009, retrieved April 25, 2009
- ↑ "Blue Dragon Xbox 360Gameplay - Nene Delivers a Beating (HD)" (in Japanese). IGN. May 24, 2007. Retrieved May 31, 2009.
{{cite web}}
: CS1 maint: unrecognized language (link) - ↑ Bush, Eric, Blue Dragon Review, Planet Xbox 360, archived from the original on ಮೇ 5, 2009, retrieved April 25, 2009
- ↑ Loe, Casey (August 20, 2007), Blue Dragon Official Game Guide, Prima Official Game Guides, Prima Games, p. 304, ISBN 9780761557098, OCLC 154760010
- ↑ Perry, Douglass, Former Square President to Create Xbox 2 Games, IGN, retrieved May 15, 2009
- ↑ Perry, Douglass, Peter Moore on Mistwalker's RPGs, IGN, archived from the original on ಸೆಪ್ಟೆಂಬರ್ 7, 2008, retrieved May 15, 2009
- ↑ Gantayat, Anoop, Blue Dragon Revealed, IGN, retrieved May 15, 2009
- ↑ Gantayat, Anoop, Pre-E3 2005: Blue Dragon Revealed, IGN, retrieved May 15, 2009
- ↑ Gantayat, Anoop, Blue Dragon Progress Report, IGN, retrieved May 15, 2009
- ↑ Gantayat, Anoop, Blue Dragon Still On Track for 2006, IGN, retrieved May 15, 2009
- ↑ IGN staff (November 21, 2006), Mistwalker Plans Blue Dragon Sequel, IGN, archived from the original on ನವೆಂಬರ್ 3, 2007, retrieved March 28, 2007
- ↑ 新作タイトルの発表も行われた"ジャンプフェスタ2009"が開催, Famitsu, December 21, 2008, retrieved April 27, 2009
- ↑ Blue Dragon Plus Release Summary, GameSpot, retrieved April 27, 2009
- ↑ Game Informer, no. 166, GameStop, pp. 50–59, February 2007
{{citation}}
: Missing or empty|title=
(help) - ↑ Blue Dragon: Original Soundtrack, IGN, archived from the original on ಏಪ್ರಿಲ್ 25, 2009, retrieved April 19, 2009
- ↑ Square Enix Music Online, Square Enix, retrieved April 19, 2009
- ↑ Zelfden, Alex (Devember 8, 2008). "Top 10 Nobuo Uematsu Musical Moments". IGN. p. 2. Archived from the original on ಫೆಬ್ರವರಿ 7, 2009. Retrieved May 30, 2009.
{{cite web}}
: Check date values in:|date=
(help) - ↑ "Xbox.com | Soundtracks - Enter Shikari". Archived from the original on 2009-04-30. Retrieved 2010-11-10.
- ↑ Blue Dragon ST(manga), AnimeNewsNetwork, retrieved May 15, 2009
- ↑ Simmons, Alex (November 20, 2006), Blue Dragon Manga Announced, IGN, retrieved November 28, 2006
- ↑ Ral & Grad Volume 1, Simon & Schuster, retrieved June 15, 2008
- ↑ Blue Dragon Anime Series Coming?, AnimeNation, November 30, 2006, archived from the original on ಆಗಸ್ಟ್ 30, 2008, retrieved April 13, 2009
- ↑ VIZ Media Acquires Blue Dragon Anime, Anime News Network, April 16, 2007, retrieved April 13, 2009
- ↑ あにてれ:BLUE DRAGON 天界の七竜 (in Japanese), TV Tokyo, retrieved April 27, 2009
{{citation}}
: CS1 maint: unrecognized language (link) - ↑ Viz Media Licenses Blue Dragon TCG to Konami Digital Entertainment, Anime News Network, June 18, 2008, retrieved April 13, 2009
- ↑ VIZ Media Named Master Licensor for Blue Dragon Anime Series, Anime News Network, April 16, 2007, retrieved July 12, 2007
- ↑ And Now We're Done..., Toonami Infolink, January 31, 2009, retrieved May 17, 2009
- ↑ Blue Dragon (Xbox360: 2007): Reviews, Metacritic, archived from the original on ಜೂನ್ 11, 2008, retrieved June 14, 2008
- ↑ ಉಲ್ಲೇಖ ದೋಷ: Invalid
<ref>
tag; no text was provided for refs named1up
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedeurogamer
- ↑ Dormer, Dan (June 11, 2006). "Blue Dragon Impresses Famitsu: News from 1UP.com". 1UP.com. Archived from the original on ಜುಲೈ 20, 2012. Retrieved May 27, 2009.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedgameinformer
- ↑ Ouroboros (August 28, 2007), Review: Blue Dragon, GamePro, archived from the original on ಸೆಪ್ಟೆಂಬರ್ 25, 2008, retrieved June 15, 2008
- ↑ VanOrd, Kevin (August 30, 2007), Blue Dragon for Xbox 360 Review, GameSpot, archived from the original on ಡಿಸೆಂಬರ್ 2, 2008, retrieved June 15, 2008
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedgamespy
- ↑ Davies, Jonti (December 7, 2006), Blue Dragon sets Japan Ablaze, Joystiq, retrieved July 10, 2008
- ↑ Orry, James (December 14, 2006), Blue Dragon sells 80,000 in Japan, Pro-G, archived from the original on ಫೆಬ್ರವರಿ 25, 2012, retrieved February 3, 2007
- ↑ Boyer, Brandon (December 27, 2007), Blue Dragon Tops Lifetime Xbox 360 Software Sales In Japan, Gamasutra, retrieved June 15, 2008
- ↑ GameSpot staff (March 16, 2007), Q&A: Mistwalker's Hironobu Sakaguchi, GameSpot, retrieved June 18, 2007