ಬ್ರೇಕಿಂಗ್ ಬೆಂಜಮಿನ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2010) |
ಬ್ರೇಕಿಂಗ್ ಬೆಂಜಮಿನ್ ಎಂಬುದು ವಿಲ್ಕೆಸ್-ಬರ್ರೆ, ಪೆನ್ಸಿಲ್ವೇನಿಯಾ ದ ಒಂದು ಅಮೆರಿಕನ್ ರಾಕ್ ವಾದ್ಯ ವೃಂದ. ಈ ವಾದ್ಯ-ವೃಂದವು ಪ್ರಸಕ್ತಬೆಂಜಮಿನ್ ಬರ್ನ್‌ಲಿ, ಆರೋನ್ ಫಿನ್ಕ್, ಮಾರ್ಕ್ ಕ್ಲೇಪಸ್ಕಿ ಹಾಗು ಚಾಡ್ ಜೆ ಲಿಗಾ ರನ್ನು ಒಳಗೊಂಡಿದೆ. ವಾದ್ಯ ವೃಂದವು ಇಲ್ಲಿಯವರೆಗೆ ನಾಲ್ಕು ಆಲ್ಬಮ್ ಗಳನ್ನು ಬಿಡುಗಡೆಮಾಡಿದೆ. ಅವರ ಸಂಗೀತವನ್ನು ಪರ್ಯಾಯ ರಾಕ್[೧][೨][೩] ಅಥವಾ ಪೋಸ್ಟ್-ಗ್ರುಂಜ್ (1990ರ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಪರ್ಯಾಯ ರಾಕ್‌ನ ಉಪಪ್ರಕಾರ) ಎಂದು ಸಾಧಾರಣವಾಗಿ ವರ್ಗೀಕರಿಸಲಾಗುತ್ತದೆ.[೧][೪][೫]
Breaking Benjamin | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Wilkes-Barre, Pennsylvania, USA |
ಸಂಗೀತ ಶೈಲಿ | Alternative rock, post-grunge |
ಸಕ್ರಿಯ ವರ್ಷಗಳು | 1998-present |
Labels | Hollywood |
ಅಧೀಕೃತ ಜಾಲತಾಣ | www.shallowbay.com |
ಸಧ್ಯದ ಸದಸ್ಯರು | Benjamin Burnley Aaron Fink Mark Klepaski Chad Szeliga |
ಮಾಜಿ ಸದಸ್ಯರು | Jeremy Hummel Jonathan Price Kevin Soffera BC Vaught |
ಇತಿಹಾಸ
ಬದಲಾಯಿಸಿರಚನೆ
ಬದಲಾಯಿಸಿಇಸವಿ 1998ರಲ್ಲಿ ಗಾಯಕ ಬೆಂಜಮಿನ್ ಬರ್ನ್‌ಲಿ ಹಾಗು ಡ್ರಮ್ ವಾದಕ ಜೆರೇಮಿ ಹುಮ್ಮೆಲ್ರಿಂದ ರಚನೆಯಾದ ವಾದ್ಯವೃಂದ ಬ್ರೇಕಿಂಗ್ ಬೆಂಜಮಿನ್, ಬಹಳ ಬೇಗನೆ ತಮ್ಮ ತವರು ರಾಜ್ಯ ಪೆನ್ಸಿಲ್ವೇನಿಯಾದಲ್ಲಿ ಒಂದು ಅಧಿಕ ಸಂಖ್ಯೆಯ ಸ್ಥಳೀಯ ಅನುಯಾಯಿಗಳನ್ನು ಒಟ್ಟುಗೂಡಿಸಿತು. ಬರ್ನ್‌ಲೇ ಒಂದು ಕ್ಲಬ್ಬಿನಲ್ಲಿ ಓಪನ್ ಮಿಕ್ ರಾತ್ರಿಯಲ್ಲಿ ತಮ್ಮ ಹಾಡು ನಿರ್ವಾಣವನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆಯಿಂದ ಬ್ಯಾಂಡ್‌ಗೆ ಈ ಹೆಸರು ಹುಟ್ಟಿಕೊಂಡಿದೆ. ಅವನು ತನ್ನ ಸಮೀಪದಲ್ಲಿದ್ದ ಮೈಕ್ರೋಫೋನ್ ಸ್ಟಾಂಡ್ ಒದ್ದು, ಅದನ್ನು ಮುರಿಯುತ್ತಾನೆ. ಮೈಕ್ರೋಫೋನ್‌ನ ಒಡೆಯ ವೇದಿಕೆಯ ಮೇಲೆ ಬಂದು, "ನನ್ನ ಹಾಳಾದ ಮೈಕ್ರೋಫೋನ್‌ನನ್ನು ಮುರಿದ ಬೆಂಜಮಿನ್ ಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಹೇಳುತ್ತಾನೆ.[೬] ಕಳೆದ 1999ರಲ್ಲಿ ವಾದ್ಯ ವೃಂದವು ಸ್ವಲ್ಪ ಕಾಲ ತನ್ನ ಹೆಸರನ್ನು "ಪ್ಲಾನ್ 9" ಎಂದು ಬದಲಾಯಿಸಿಕೊಂಡಿತು. ನಂತರ 2001ರ ಕೊನೆಯಲ್ಲಿ ಹಲವಾರು ಸಾಲು-ಸಾಲು ಬದಲಾವಣೆಗಳ ನಂತರ, ವಾದ್ಯ ವೃಂದವು "ಬ್ರೇಕಿಂಗ್ ಬೆಂಜಮಿನ್" ಗೆ ತನ್ನ ಹೆಸರನ್ನು ಪುನಃ ಬದಲಾವಣೆ ಮಾಡಿಕೊಂಡಿತು. ಇದಲ್ಲದೆ ಬರ್ನ್‌ಲಿಯ ಇಬ್ಬರು ಸ್ನೇಹಿತರಾದ ಆರೋನ್ ಫಿನ್ಕ್ ಹಾಗು ಮಾರ್ಕ್ ಕ್ಲೇಪಸ್ಕಿ ತಮ್ಮ ಹಳೆ ವಾದ್ಯ ವೃಂದ, ಲೈಫರ್ ನ್ನು ತ್ಯಜಿಸಿ ಸಂಪೂರ್ಣವಾಗಿ ಬ್ರೇಕಿಂಗ್ ಬೆಂಜಮಿನ್ ವಾದ್ಯ ವೃಂದದಲ್ಲಿ ಕ್ರಮವಾಗಿ ಗಿಟಾರ್ ವಾದಕ ಹಾಗು ಬೇಸ್ ವಾದಕರಾಗಿ ಸೇರ್ಪಡೆಗೊಂಡರು. ವಾದ್ಯ ವೃಂದದ ಪ್ರಕಾರ, ಬ್ರೇಕಿಂಗ್ ಬೆಂಜಮಿನ್‌ನ ಲಾಂಛನವು, ನಾಲ್ಕು "B"ಗಳು ಪರಸ್ಪರ ಕೂಡಿಕೊಂಡ ಸೆಲ್ಟಿಕ್ ಗಂಟಿನ ಒಂದು ಪರಿವರ್ತನೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈ ಲಾಂಛನವನ್ನು ಬರ್ನ್‌ಲಿ, ಫಿನ್ಕ್, ಹಾಗು ಕ್ಲೆಪಸ್ಕಿ ತಮ್ಮ ಎಡಗೈನ ಮಣಿಕಟ್ಟಿನ ಮೇಲೆ ಹಾಗು ಜೆಲಿಗಾ ತನ್ನ ಬಲಗೈ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಸ್ಯಾಚರೇಟ್
ಬದಲಾಯಿಸಿಬ್ರೇಕಿಂಗ್ ಬೆಂಜಮಿನ್, 2002ರ ಪ್ರಾರಂಭದಲ್ಲಿ ಸ್ವತಂತ್ರವಾಗಿ-ಬಿಡುಗಡೆಯಾದ, ಸ್ವ-ಶೀರ್ಷಿಕೆಯ EPಯ ತಯಾರಾದ ಎಲ್ಲ 2,000 ಪ್ರತಿಗಳ ಮಾರಾಟದ ಯಶಸ್ಸಿನ ನಂತರ ಹಾಲಿವುಡ್ ರೆಕಾರ್ಡ್ಸ್ ಜೊತೆಗೆ ಲಿಖಿತ ಒಪ್ಪಂದಕ್ಕೆ ಸಹಿ ಮಾಡಿತು. ನಂತರ ವಾದ್ಯ ವೃಂದವು ತಮ್ಮ ಪೂರ್ಣ-ಪ್ರಮಾಣದ, ಪ್ರಮುಖ-ಧ್ವನಿ ಮುದ್ರಣಾ ಸಂಸ್ಥೆಯ ಪ್ರಥಮ ಆಲ್ಬಮ್, ಸ್ಯಾಚರೇಟ್ ನ್ನು, ಆಗಸ್ಟ್ 27, 2002ರಲ್ಲಿ ಬಿಡುಗಡೆ ಮಾಡಿತು. ಈ ಆಲ್ಬಮ್ ಬಿಲ್ಬೋರ್ಡ್ ಟಾಪ್ ಹೀಟ್ ಸೀಕರ್ಸ್ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಗಳಿಸುವುದರ ಜೊತೆಗೆ ಬಿಲ್ಬೋರ್ಡ್ ಟಾಪ್ 200ರಲ್ಲಿ 136ನೇ ಸ್ಥಾನ ಗಳಿಸಿತು.[೭]
ಆಲ್ಬಮ್ ನ ಮೊದಲ ಏಕಗೀತೆ, "ಪೊಲ್ಯಮೊರೌಸ್", ಸಾಕಷ್ಟು ಪ್ರಮಾಣದ ರೇಡಿಯೋ ಪ್ರಸಾರ ಪಡೆದರೂ, ಮುಖ್ಯವಾಹಿನಿಯ ಶ್ರೋತೃಗಳನ್ನು ಆಕರ್ಷಿಸುವಲ್ಲಿ ವಿಫಲವಾಯಿತು.
"ಪೊಲ್ಯಮೊರೌಸ್" ನ ಮೂರು ವಿವಿಧ ರೂಪಾಂತರಗಳ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು: ಎಲ್ಲ ನೇರ-ಪ್ರದರ್ಶನದ ಚಿತ್ರೀಕರಣವನ್ನು ಒಳಗೊಂಡ ಒಂದು ವಿಡಿಯೋ, ಹಾಗು ಇನ್ನೊಂದು ರನ್ ಲೈಕ್ ಹೆಲ್ ನ ವಿಡಿಯೊ ಆಟದ ಚಿತ್ರ. ಮೂರನೇಯದು ನೇರ-ಪ್ರದರ್ಶನವಲ್ಲದ ವಿಡಿಯೋನ ಒಂದು ಮಾರ್ಪಾಡು, ಆದರೆ ಇದರಲ್ಲಿ ರನ್ ಲೈಕ್ ಹೆಲ್‌ನ ದೃಶ್ಯಗಳಿಗೆ ಬದಲಾಗಿ, ಹುಸಿಪ್ರಣಯದ ಕೃತ್ಯಗಳಲ್ಲಿ ತೊಡಗಿದ ಜನರ ದೃಶ್ಯಗಳು ಚಿತ್ರಿತವಾಗಿದ್ದವು.
"ಸ್ಕಿನ್"ಸ್ಯಾಚರೇಟ್ ನ ಎರಡನೇ ಏಕಗೀತೆ. ಇದು "ಪೊಲ್ಯಮೊರೌಸ್" ಗಿಂತ ಹೆಚ್ಚಿನ ನಿರಾಶಾದಾಯಕ ಪ್ರತಿಕ್ರಿಯೆಯನ್ನು ಪಡೆಯಿತು. ಬರ್ನ್‌ಲಿ, ನೇರ ಪ್ರದರ್ಶನದ ಸಂದರ್ಭಗಳಲ್ಲಿ ತನ್ನ ಹಾಡಿನ ಬಗ್ಗೆ ಉಪೇಕ್ಷೆಯನ್ನು ವ್ಯಕ್ತಪಡಿಸುವುದಕ್ಕೆ ಹೆಸರಾಗಿದ್ದನು ಹಾಗು ವಾದ್ಯ ವೃಂದವು ನುಡಿಸುವಾಗ ಸಭಿಕರು ಪದಗಳನ್ನು ಹಾಡುವಂತೆ ಮಾಡುತ್ತಿದ್ದನು. ಇದು ವಾದ್ಯ ವೃಂದದ ಆಯ್ಕೆಯಾದ, "ಮೆಡಿಕೇಟ್" ನ ಬದಲಾಗಿ ಹಾಲಿವುಡ್ ರೆಕಾರ್ಡ್ಸ್ ಇದನ್ನು ಪ್ರಮುಖ ಏಕಗೀತೆಯಾಗಿ ಆಯ್ಕೆ ಮಾಡಿದ್ದರ ಪರಿಣಾಮವಾಗಿತ್ತು.
ಅವರು ತಮ್ಮ "ಎಂಜಾಯ್ ದಿ ಸೈಲೆನ್ಸ್"ನ ಜೊತೆಗೆ "ಲೇಡಿ ಬಗ್" ಎಂಬ ಪ್ರಥಮ ಧ್ವನಿಮುದ್ರಿಕೆಗಳ ಸ್ಟುಡಿಯೊ ರೂಪಾಂತರವನ್ನು ಸ್ಯಾಚುರೇಟ್ ನ ಯುರೋಪಿಯನ್ ರೂಪಾಂತರ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದರು. ಆದಾಗ್ಯೂ, ಯುರೋಪಿಯನ್ ರೂಪಾಂತರವು ಬಿಡುಗಡೆಗೊಳ್ಳಲಿಲ್ಲ. "ಲೇಡಿ ಬಗ್" ಅಂತಿಮವಾಗಿ "ಸೋ ಕೋಲ್ಡ್" EPಯ ಹಾಗು ವೀ ಆರ್ ನಾಟ್ ಅಲೋನ್‌ನ ಜಪಾನೀಸ್ ರೂಪಾಂತರದ ಬಿಡುಗಡೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ವೀ ಆರ್ ನಾಟ್ ಅಲೋನ್
ಬದಲಾಯಿಸಿಬ್ರೇಕಿಂಗ್ ಬೆಂಜಮಿನ್, ತಮ್ಮ ಎರಡನೇ ಆಲ್ಬಮ್, ವೀ ಆರ್ ನಾಟ್ ಅಲೋನ್ ನ್ನು, ಜೂನ್ 29, 2004ರಲ್ಲಿ ಬಿಡುಗಡೆ ಮಾಡಿತು. ಈ ಆಲ್ಬಮ್ ಪ್ರಾರಂಭಿಕ ಏಕಗೀತೆ "ಸೋ ಕೋಲ್ಡ್" ನ್ನು ಒಳಗೊಂಡಿತ್ತು. ಇದು ಯುನೈಟೆಡ್ ಸ್ಟೇಟ್ಸ್ ಬಿಲ್ಬೋರ್ಡ್ ಮೇನ್ ಸ್ಟ್ರೀಮ್ ರಾಕ್ ಪಟ್ಟಿ ಯಲ್ಲಿ ಎರಡನೇ ಸ್ಥಾನ ಗಳಿಸಿತು. ವಾದ್ಯ ವೃಂದವು "ಸೋ ಕೋಲ್ಡ್" ಗಾಗಿ ಎರಡು ಮ್ಯೂಸಿಕ್ ವಿಡಿಯೋಗಳನ್ನು ತಯಾರಿಸಿತು. ಇದರಲ್ಲಿ ಒಂದು ಹೆಲ್ ಬಾಯ್ ಚಲನಚಿತ್ರದ ಪ್ರಚಾರ ವಿಡಿಯೋ ಆಗಿತ್ತು. "ಸೋ ಕೋಲ್ಡ್" ಬಿಲ್ಬೋರ್ಡ್ ನ ಪಟ್ಟಿಯಲ್ಲಿ 37 ವಾರಗಳ ಕಾಲ ಅಗ್ರ 20ನೇ ಸ್ಥಾನದಲ್ಲಿತ್ತು (ಫೆಬ್ರವರಿ 3, 2005 ರ ತನಕ). "ಸೋ ಕೋಲ್ಡ್"ನ ವಾಣಿಜ್ಯ ಯಶಸ್ಸಿನಿಂದ, ವೀ ಆರ್ ನಾಟ್ ಅಲೋನ್ ಆಲ್ಬಮ್ ಬಿಲ್ಬೋರ್ಡ್ 200ರಲ್ಲಿ 20ನೇ ಸ್ಥಾನದೊಂದಿಗೆ ಚೊಚ್ಚಲ ಪ್ರವೇಶ ಮಾಡುವುದರ ಜೊತೆಗೆ ಬಿಡುಗಡೆಯಾದ ಮೊದಲ ವಾರದಲ್ಲಿ 48,000 ಪ್ರತಿಗಳ ಮಾರಾಟಕ್ಕೆ ಕಾರಣವಾಯಿತು. ಇದಲ್ಲದೆ 2005ರ ಕೊನೆಯಲ್ಲಿ ಪ್ಲಾಟಿನಂ ಸ್ಥಾನಮಾನವನ್ನು ಗಳಿಸಿತು.[ಸೂಕ್ತ ಉಲ್ಲೇಖನ ಬೇಕು]
ಆಲ್ಬಮ್ ನಿಂದ ಬಿಡುಗಡೆಯಾದ ಇತರ ಏಕಗೀತೆಗಳೆಂದರೆ "ಸೂನರ್ ಆರ್ ಲೇಟರ್" ಹಾಗು ಮರು ಧ್ವನಿ ಮುದ್ರಣಗೊಂಡ, "ರೈನ್" ನ ಸಂಪೂರ್ಣ ವಾದ್ಯ ವೃಂದದ ರೂಪಾಂತರ. ಇದು ಆಲ್ಬಂನ ನಂತರದ ಪ್ರೆಸಿಂಗ್‌ಗಳಲ್ಲಿ ಸೇರ್ಪಡೆಗೊಂಡಿತು. "ಸೂನರ್ ಆರ್ ಲೇಟರ್", ಮೇನ್ ಸ್ಟ್ರೀಮ್ ರಾಕ್ ಚಾರ್ಟ್ಸ್ ನಲ್ಲಿ ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಹೆಚ್ಚಿನ ಪ್ರಮಾಣದ ರೇಡಿಯೋ ಶ್ರೋತೃಗಳನ್ನು ಆಕರ್ಷಿಸಿದ್ದರ ಪರಿಣಾಮವಾಗಿ ಒಂದು ಮ್ಯೂಸಿಕ್ ವಿಡಿಯೋವನ್ನು ನಿರ್ಮಿಸಲಾಯಿತು. ಧ್ವನಿಸುರುಳಿಯು, TV ಕಾರ್ಯಕ್ರಮ "ಸಮ್ಮರ್ ಲ್ಯಾಂಡ್" ನ ಒಂದು ಸಂಚಿಕೆಯಲ್ಲಿ ಕಾಣಿಸಿಕೊಳ್ಳುವುದರ ಜತೆಗೆ "ದಿ ಟುನೈಟ್ ಶೋ ವಿಥ್ ಜೇ ಲೆನೋ" ಕಾರ್ಯಕ್ರಮದಲ್ಲಿ ನೇರ ಪ್ರದರ್ಶನವನ್ನು ನೀಡಿತು.[ಸೂಕ್ತ ಉಲ್ಲೇಖನ ಬೇಕು]
"ವೀ ಆರ್ ನಾಟ್ ಅಲೋನ್" ನ ಪ್ರಚಾರಕ್ಕಾಗಿ ಕೈಗೊಂಡ ಪ್ರವಾಸದಲ್ಲಿ, ಆರೋನ್ ಫಿನ್ಕ್ ರ ತಂದೆ ಗ್ಯಾರಿ ಫಿನ್ಕೆ, ಪ್ರವಾಸದ ಸಂದರ್ಭದಲ್ಲಿ ವಾದ್ಯ ವೃಂದವನ್ನು ಜೊತೆಗೂಡುತ್ತಾರೆ. ಅವರ ಧ್ವನಿಮುದ್ರಿಕೆಗಳ ಸಂಗ್ರಹವು, ಮೊದಲಿಗೆ ಆರೋನ್‌ಗೆ ಸಂಗೀತದಲ್ಲಿ ಆಸಕ್ತಿಯನ್ನು ಕೆರಳಿಸುವಂತೆ ಮಾಡಿತು.[ಸೂಕ್ತ ಉಲ್ಲೇಖನ ಬೇಕು]
ಸೆಪ್ಟೆಂಬರ್ 2004ರಲ್ಲಿ, ಡ್ರಮ್ ವಾದಕ, ಬ್ರೇಕಿಂಗ್ ಬೆಂಜಮಿನ್ ನ ಸ್ಥಾಪಕ ಸದಸ್ಯ, ಜೆರೇಮಿ ಹುಮ್ಮೆಲ್ ರನ್ನು ತಂಡದಿಂದ ವಜಾ ಮಾಡಲಾಯಿತು. ತರುವಾಯ, ಸೆಪ್ಟೆಂಬರ್ 28, 2005ರಲ್ಲಿ, ಹುಮ್ಮೆಲ್ ಬ್ರೇಕಿಂಗ್ ಬೆಂಜಮಿನ್ ನ ಉಳಿದ ಸದಸ್ಯರು ಹಾಗು ಅದರ ಆಡಳಿತದ ವಿರುದ್ಧ, ತಾವು ಹಾಡು ಬರೆಯಲು ಸಹಾಯ ಮಾಡಿದ್ದಕ್ಕಾಗಿ ತಮಗೆ ಸಂಭಾವನೆ ನೀಡಿಲ್ಲವೆಂದು ಒಂದು ಫೆಡೆರಲ್ ದಾವೆಯನ್ನು ಹೂಡುತ್ತಾರೆ. ಹುಮ್ಮೆಲ್ ರ ದಾವೆಯಲ್ಲಿ ಅವರಿಗಾದ ನಷ್ಟಕ್ಕೆ $8 ದಶಲಕ್ಷಕ್ಕೂ ಹೆಚ್ಚಿನ ಹಣವನ್ನು ಭರಿಸಿ ಕೊಡಬೇಕೆಂದು ಕೇಳಲಾಗಿತ್ತು. ಅಕ್ಟೋಬರ್ 25, 2006ರಲ್ಲಿ ಪ್ರಕಟಗೊಂಡ ಒಂದು ಲೇಖನದಲ್ಲಿ ಹುಮ್ಮೆಲ್,ಸಹ-ಬರಹಗಾರನಾಗಿ ವೀ ಆರ್ ನಾಟ್ ಅಲೋನ್ ನ ತಯಾರಿಕೆಯಲ್ಲಿ ಯಾವುದೇ ಹಣ ಪಡೆದಿಲ್ಲವೆಂದು ತಿಳಿಸಿತು. ಇವರ ಸ್ಥಾನವನ್ನು ಅಂತಿಮವಾಗಿ ಹಾಲಿ ಡ್ರಮ್ ವಾದಕ ಚಾಡ್ ಸ್ಜೆಲಿಗಾ ಆಕ್ರಮಿಸಿದರು.
"ಫೈರ್ ಫ್ಲೈ" ಎಂಬ ಹಾಡನ್ನು "ಸ್ಮಾಕ್ ಡೌನ್ Vs. ರಾ" ವಿಡಿಯೊ ಆಟವು ಒಳಗೊಂಡಿತ್ತು. ಇದನ್ನು ನವೆಂಬರ್ 2004ರಲ್ಲಿ ಬಿಡುಗಡೆ ಮಾಡಲಾಯಿತು.
"ರೈನ್", "ಫಾರ್ಗೆಟ್ ಇಟ್" ಹಾಗು "ಫಾಲೋ" ಹಾಡುಗಳನ್ನು ಗಿಟಾರ್ ವಾದಕ ಹಾಗು ದಿ ಸ್ಮಾಶಿಂಗ್ ಪಂಪ್ಕಿನ್ಸ್ ನ ಗಾಯಕ, ಬಿಲ್ಲಿ ಕಾರ್ಗನ್ ಸಹ-ಬರವಣಿಗೆ ಮಾಡಿದ್ದಾರೆ. ಬೆನ್ ಬರ್ನ್‌ಲಿ ಹಾಗು ಬಿಲ್ಲಿ ಕಾರ್ಗನ್ ರ ಸಹಯೋಗವು ಡಿಸೆಂಬರ್ ನಲ್ಲಿ ಆರು ದಿನಗಳ ಕಾಲ ನಡೆಯಿತು. ಬರ್ನ್‌ಲಿ, ಮೊದಲಿಗೆ ಕಾರ್ಗನ್ ರ ಜೊತೆ ಕೆಲಸ ಮಾಡಲು ಬಹಳ ಹೆದ್ದರಿದ್ದರೆಂದು, ಆದರೆ ನಂತರದಲ್ಲಿ ನಿಶ್ಚಿಂತ ಭಾವವನ್ನು ಹೊಂದಿದರೆಂದು ಹೇಳುತ್ತಾರೆ. ಇದಲ್ಲದೆ ಈ ಅನುಭವವನ್ನು ತಮ್ಮ ವೃತ್ತಿ ಜೀವನದ ಅತ್ಯಂತ ಗಮನಸೆಳೆದ ಅಂಶವೆಂದು ಕರೆಯುತ್ತಾರೆ.[೮] 2004ರ ಹೊತ್ತಿಗೆ, ವಾದ್ಯ ವೃಂದವು ಸೋ ಕೋಲ್ಡ್ EP ಯನ್ನು ಬಿಡುಗಡೆ ಮಾಡಿತು.
ಫೋಬಿಯ
ಬದಲಾಯಿಸಿಬ್ರೇಕಿಂಗ್ ಬೆಂಜಮಿನ್, ಆಗಸ್ಟ್ 8, 2006ರಲ್ಲಿ ಫೋಬಿಯ ವನ್ನು ಆಲ್ಬಮ್‌ನ ಪ್ರಾರಂಭಿಕ ಏಕಗೀತೆಯಾದ "ದಿ ಡೈರಿ ಆಫ್ ಜೇನ್"ನೊಂದಿಗೆ ಬಿಡುಗಡೆ ಮಾಡಿತು.ಅದು U.S. ಮಾಡರ್ನ್ ರಾಕ್ ಚಾರ್ಟ್ಸ್ ನಲ್ಲಿ #4ನೇ ಸ್ಥಾನವನ್ನು ಗಳಿಸಿತು.
ಫೆಬ್ರವರಿ 11, 2007ರಲ್ಲಿ, HDNet ಬೆತ್ಹ್ಲೆಹೆಮ್, ಪೆನ್ಸಿಲ್ವೇನಿಯಾ ದ ಸ್ಟಬ್ಲರ್ ಅರೇನಾ ದಲ್ಲಿ ಬ್ರೇಕಿಂಗ್ ಬೆಂಜಮಿನ್ ವಾದ್ಯ ತಂಡದ ಸಂಗೀತ ಗೋಷ್ಠಿಯ ಒಂದು-ಗಂಟೆಯ ಕಾರ್ಯಕ್ರಮವನ್ನು ಮೊದಲ ಬಾರಿಗೆ ಪ್ರದರ್ಶಿಸಿತು. ಏಪ್ರಿಲ್ 2007ರಲ್ಲಿ ನಡೆದ ಈ ಸಂಗೀತ ಗೋಷ್ಠಿಯು, ಫೋಬಿಯ ದ DVDಯ ಮರು ಬಿಡುಗಡೆಯಲ್ಲಿ ಒಳಗೊಂಡಿತ್ತು, ಇದನ್ನು "ದಿ ಹೋಂಕಮಿಂಗ್" ಎಂದು ಪ್ರಚಾರ ಮಾಡಲಾಯಿತು. ವಾದ್ಯ ವೃಂದವು, ತಮ್ಮ ಏಕಗೀತೆ "ಬ್ರೀತ್" ನ ಮೂಲಕ ಬಿಲ್ಬೋರ್ಡ್ ನಲ್ಲಿ 1ನೇ ಸ್ಥಾನವನ್ನು ಮೊದಲ ಬಾರಿಗೆ ಗಳಿಸಿತು. ವಾದ್ಯವೃಂದದಿಂದ "ಬ್ರೀತ್"ನ ನೇರ ಸ್ಟಬ್ಲೇರ್ ಅರೇನಾ ಪ್ರದರ್ಶನದ ದೃಶ್ಯಗಳು ಹಾಡಿನ ಮ್ಯೂಸಿಕ್ ವಿಡಿಯೋವನ್ನು ಒಳಗೊಂಡಿದೆ. ಏಪ್ರಿಲ್ 17, 2007ರಲ್ಲಿ, ಬ್ರೇಕಿಂಗ್ ಬೆಂಜಮಿನ್, ಫೋಬಿಯ ಆಲ್ಬಮ್ ನ್ನು ಮರು-ಬಿಡುಗಡೆ ಮಾಡಿತು. ಈ ಆಲ್ಬಮ್, ಅವರ ಸ್ಟೇಬ್ಲರ್ ಅರೇನಾ ಸಂಗೀತ ಗೋಷ್ಠಿಯ ಒಂದು ಗಂಟೆಯ ದೃಶ್ಯಗಳ DVD ಯನ್ನು ಒಳಗೊಂಡಿತ್ತು. ತಂಡವು, ತ್ರೀ ಡೇಸ್ ಗ್ರೇಸ್ ಜೊತೆಗೆ ಪ್ರಮುಖ ಸಹ-ಪ್ರವಾಸವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪೂರ್ಣಗೊಳಿಸುವುದರ ಜೊತೆಗೆ ರೆಡ್ ಹಾಗು ಪಡಲ್ ಆಫ್ ಮಡ್ ರ ಪ್ರಾರಂಭಿಕ ಪ್ರದರ್ಶನವನ್ನು ಒಳಗೊಂಡಿತ್ತು. ಆಲ್ಬಮ್ ಮೇ 5, 2007ರ ತನ್ನ ಮರುಸಂಚಿಕೆಯಲ್ಲಿ, ಬಿಲ್ಬೋರ್ಡ್ 100ರಲ್ಲಿ 38ನೇ ಸ್ಥಾನವನ್ನು ಗಳಿಸುವುದರ ಜೊತೆಗೆ ಮರು-ಪ್ರವೇಶವನ್ನು ಪಡೆಯಿತು.
ಜೂನ್ 29, 2007ರಲ್ಲಿ ವಾದ್ಯ ವೃಂದವು ಜೇ ಲೆನೋ ನಲ್ಲಿ ಭಾಗವಹಿಸುವುದರ ಜೊತೆಗೆ "ಬ್ರೀತ್" ನ ಪ್ರದರ್ಶನ ನೀಡಿತು. ಜುಲೈ 6, 2007ರಲ್ಲಿ ವಾದ್ಯ ವೃಂದವು "ಬ್ರೀತ್" ನ್ನು ಕ್ರೈಗ್ ಫೆರ್ಗುಸನ್ ರ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಪ್ರದರ್ಶನ ನೀಡಿತು. ಜುಲೈ 9, 2007ರಲ್ಲಿ ಅಟ್ಲಾಂಟ ದ ಟಬೆರ್ನಕೆಲ್ ನಲ್ಲಿ ನಿಗದಿಯಾಗಿದ್ದ ಪ್ರದರ್ಶನವನ್ನು ಬೆನ್ ಅಸ್ವಸ್ಥತೆಯ ಕಾರಣದಿಂದ ನೀಡಲಾಗಲಿಲ್ಲ. ಅವರ ಪ್ರವಾಸದ ಅವಧಿಯಲ್ಲಿ ನೀಡಬೇಕಿದ್ದ ಮತ್ತೆರಡು ಇತರ ಸಂಗೀತ ಕಚೇರಿಗಳನ್ನೂ ಸಹ ರದ್ದು ಮಾಡಲಾಯಿತು (ಮೈರ್ಟಲ್ ಬೀಚ್, SC ಯಲ್ಲಿ ಜುಲೈ 10 ಹಾಗು ಗ್ರೀನ್ಸ್‌ಬರೊನಲ್ಲಿ ಜುಲೈ 11 ರಂದು ನಿಗದಿಯಾಗಿತ್ತು). ತಮ್ಮ ಅಂತರ್ಜಾಲದಲ್ಲಿ, ಅವರು ಬರ್ನ್‌ಲಿ ಅಸ್ವಸ್ಥತೆಯ ಕಾರಣದಿಂದ ಅಟ್ಲಾಂಟ ಹಾಗು ಇತರ ಎರಡು ಪ್ರದರ್ಶನಗಳನ್ನು ನೀಡಲು ಸಾಧ್ಯವಿಲ್ಲವೆಂದು ಪ್ರಕಟಿಸುತ್ತಾರೆ. ವಾದ್ಯ ವೃಂದವು 2007ರ ಚಳಿಗಾಲದಲ್ಲಿ 36-ದಿನಾಂಕಗಳನ್ನು ಪ್ರಕಟಿಸಿ ತ್ರೀ ಡೇಸ್ ಗ್ರೇಸ್, ಸೀಥೆರ್, ಸ್ಕಿಲ್ಲೆಟ್ (ಪೂರ್ವಾರ್ಧ) ಹಾಗು ರೆಡ್ (ಉತ್ತಾರಾರ್ಧ) ಜೊತೆಗೆ ಪ್ರದರ್ಶನ ನೀಡುವುದಾಗಿ ಪ್ರಕಟಿಸಿದ ಮೇಲೆ ವಾದ್ಯ ವೃಂದದ ಒಡಕಿನ ಬಗ್ಗೆ ಹಬ್ಬಿದ ವದಂತಿಗಳು ಸುಳ್ಳೆಂದು ತಿಳಿಯಿತು.
ಮೇ 21, 2009ರಲ್ಲಿ ಫೋಬಿಯ, U.S.ನಲ್ಲಿ ಒಂದು ದಶಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾದ ಹಿನ್ನೆಲೆಯಲ್ಲಿ RIAA ಪ್ಲಾಟಿನಂ ಸ್ಥಾನಮಾನವನ್ನು ಗಳಿಸಿತು.[೯]
ಡಿಯರ್ ಆಗನಿ
ಬದಲಾಯಿಸಿವಾದ್ಯ ವೃಂದದ ಹಿಂದಿನ ಎರಡು ಸ್ಟುಡಿಯೋ ಪ್ರಯತ್ನಗಳಾದ ವೀ ಆರ್ ನಾಟ್ ಅಲೋನ್ ಹಾಗು ಫೋಬಿಯ ವನ್ನು ನಿರ್ಮಿಸಿದ ಡೇವಿಡ್ ಬೆನ್ಡೆತ್[೧೦], ಬ್ರೇಕಿಂಗ್ ಬೆಂಜಮಿನ್ ರ 4ನೇ ಸ್ಟುಡಿಯೋ ಆಲ್ಬಮ್ ಡಿಯರ್ ಆಗನಿ ಯನ್ನು ನಿರ್ಮಿಸಿದರು. ತಮ್ಮ ಮೈಸ್ಪೇಸ್ ಬ್ಲಾಗ್‌ನಲ್ಲಿ, ಬ್ರೇಕಿಂಗ್ ಬೆಂಜಮಿನ್, "ನಾವು ಹೊಸ ಹಾಡುಗಳನ್ನು ರೂಪಿಸುವ ಪ್ರಯತ್ನದಲ್ಲಿ ಕಾರ್ಯ-ಮಗ್ನರಾಗಿದ್ದೇವೆ ಜೊತೆಗೆ ಬೆನ್ಡೆತ್‌ನ ನಿರ್ಮಾಣ ನಿಭಾಯಿಸಲು ಹಲವಾರು ಹಾಡುಗಳು ಈಗಾಗಲೇ ತಯಾರಿವೆ." ಜಾಸೆನ್ ರೂಚ್, ರೆಡ್ ತಂಡದ ಗಿಟಾರ್ ವಾದಕ, ನಾಲ್ಕು ಹೊಸ ಹಾಡುಗಳಾದ "ಐ ವಿಲ್ ನಾಟ್ ಬೋ", "ಹೋಪ್ ಲೆಸ್", "ಲೈಟ್ಸ್ ಔಟ್" ಹಾಗು "ವಿದೌಟ್ ಯು" ಗೆ ಸಹ-ಲೇಖಕರಾಗಿದ್ದಾರೆ.[೧೧] ನವೆಂಬರ್ 20, 2008ರಲ್ಲಿ, ಬರ್ನ್‌ಲಿ ರನ್ನು ಕೇಜ್ ರಾಟಲ್ ನಲ್ಲಿ ಸಂದರ್ಶಿಸಲಾಯಿತು, ಇದರಂತೆ ಅವನು ಹೊಸ ಆಲ್ಬಮ್ ಗಾಗಿ ತುಂಬಾ ಬರವಣಿಗೆ ಮಾಡುತ್ತಿರುವುದಾಗಿ ಇದು ಅವನ ಜೀವನವನ್ನು ಸವೆಸುತ್ತಿರುವುದಾಗಿ ತಿಳಿಸಿದರು.[ಸೂಕ್ತ ಉಲ್ಲೇಖನ ಬೇಕು] ಈ ಆಲ್ಬಮ್ ನ ತಯಾರಿಕೆಯಲ್ಲಿ ಸಂಗೀತ ಸಂಸ್ಥೆಯು ಯಾವುದೇ ನಿಗದಿಯಾದ ಕಾಲ ಮಿತಿಯಾಗಲಿ ಅಥವಾ ಒತ್ತಡವಾಗಲಿ ಹೇರದಿರುವ ಕಾರಣ ಅವನು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆಯೂ ಪ್ರಕಟಪಡಿಸಿದರು.[೧೨]
ಜುಲೈ 14ರಂದು, ವಾದ್ಯ ವೃಂದದ ಸದಸ್ಯರು ಹೊಸ ಆಲ್ಬಮ್ ನಲ್ಲಿ 11 ಹಾಡುಗಳಿರುವ ಬಗ್ಗೆ ದೃಢಪಡಿಸಿದರು. ಆಲ್ಬಮ್ ನಲ್ಲಿ ಒಂದು ಹಾಡಿನ ಹೆಸರು "ವಾಟ್ ಲೈಸ್ ಬಿನೀತ್" ಎಂಬುದಾಗಿದೆ, ಜೊತೆಗೆ ಜುಲೈ 28ರಂದು, ಡೇವಿಡ್ ಬೆನ್ಡೆತ್, ದಿನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಬಗ್ಗೆ ದೃಢಪಡಿಸುತ್ತಾ, ಬ್ರೇಕಿಂಗ್ ಬೆಂಜಮಿನ್ ರ ಮೊದಲ ಏಕಗೀತೆ, "ಐ ವಿಲ್ ನಾಟ್ ಬೋ" ವನ್ನು ಆಗಸ್ಟ್ 17ರಂದು ಬಾನುಲಿ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ, ಹಾಗು ಸೆಪ್ಟೆಂಬರ್ 1ರಂದು ಐಟ್ಯುನ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವೇ ಕೆಲವು ದಿನಗಳ ನಂತರ, ಆಲ್ಬಮ್ ಡಿಯರ್ ಆಗನಿಯ ಜೊತೆಗೆ ಈ ಹಾಡು ಐಟ್ಯೂನ್ಸ್‌ನಲ್ಲಿ ಮಾರಾಟವಾದ ಅಗ್ರ ಹತ್ತು ಹಾಡುಗಳಲ್ಲಿ ಒಂದಾಯಿತು.
ಆಗಸ್ಟ್ 4ರಂದು, ಬ್ರೇಕಿಂಗ್ ಬೆಂಜಮಿನ್ ರ ಮೈಸ್ಪೇಸ್, 4ನೇ ಆಲ್ಬಮ್ ನ ಶೀರ್ಷಿಕೆಯು ಡಿಯರ್ ಆಗನಿ ಎಂದಾಗಿರುತ್ತದೆ ಹಾಗು ಇದು ಸೆಪ್ಟೆಂಬರ್ 29ರಂದು ಬಿಡುಗಡೆಗೊಳ್ಳಲಿದೆ ಎಂದು ಬಹಿರಂಗಮಾಡಿತು.[೧೩]
ಆಗಸ್ಟ್ 11ರಂದು, ಬ್ರೇಕಿಂಗ್ ಬೆಂಜಮಿನ್ ರ ತವರೂರಿನ ಬಾನುಲಿ ಕೇಂದ್ರ ವಿಲ್ಕೆಸ್-ಬರ್ರೆ, PA ದ WBSX (97.9X) "ಐ ವಿಲ್ ನಾಟ್ ಬೋ" ದ ಪ್ರಥಮ ಪ್ರಸಾರ ಮಾಡಿತು. ಏಕಗೀತೆಯು ಹೊರಬಿದ್ದ ಪರಿಣಾಮವಾಗಿ, "ಐ ವಿಲ್ ನಾಟ್ ಬೋ", ಅವರ ಮೈಸ್ಪೇಸ್‌ನಲ್ಲಿ 8PM ಪೂರ್ವ ಕಾಲಾವಧಿಯಲ್ಲಿ ಆಗಸ್ಟ್ 11 ರಂದು ಪ್ರವಹಿಸಲು ಪ್ರಾರಂಭವಾಯಿತು.[೧೪] "ಐ ವಿಲ್ ನಾಟ್ ಬೋ" ಹಾಡಿನ ಒಂದು ಮ್ಯೂಸಿಕ್ ವಿಡಿಯೋ, ಅವರ ಮೈಸ್ಪೇಸ್‌ನಲ್ಲಿ ಶುಕ್ರವಾರ, ಆಗಸ್ಟ್ 21ರಂದು ಪ್ರಥಮ ಪ್ರದರ್ಶನಕಂಡಿತು.[೧೫]
ಸೆಪ್ಟೆಂಬರ್ 28ರಂದು, ಆಲ್ಬಮ್ ಆಸ್ಟ್ರೇಲಿಯದಲ್ಲಿ ಅಧಿಕೃತವಾಗಿ ಬಿಡುಗಡೆಯಾಯಿತು. ಸೆಪ್ಟೆಂಬರ್ 29ರಂದು, ಆಲ್ಬಮ್ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧಿಕೃತವಾಗಿ ಬಿಡುಗಡೆಯಾಯಿತು. ಡಿಯರ್ ಆಗನಿ ಆಲ್ಬಮ್ ಬೆಸ್ಟ್ ಬೈನಿಂದ ಖರೀದಿ ಮಾಡಿದರೆ, ವಾದ್ಯ ವೃಂದದ ಆರು ಮ್ಯೂಸಿಕ್ ವಿಡಿಯೋಗಳನ್ನು ಒಳಗೊಂಡ ಒಂದು ಉಚಿತ DVD ದೊರಕುತ್ತಿತ್ತು. ಇದರಲ್ಲಿ "ಐ ವಿಲ್ ನಾಟ್ ಬೋ" ನ ಮುಂಚೆ-ಬಿಡುಗಡೆ ಹೊಂದದ ರೂಪಾಂತರದ ಮ್ಯೂಸಿಕ್ ವಿಡಿಯೋ ಸಹ ಒಳಗೊಂಡಿತ್ತು. DVDಯ ರೂಪಾಂತರದಲ್ಲಿ ಕೇವಲ ವಾದ್ಯವೃಂದದ ಪ್ರದರ್ಶನ ಮಾತ್ರ ಸೇರ್ಪಡೆಯಾಗಿತ್ತು. ಜೊತೆಗೆ ಅಂತರ್ಜಾಲದಲ್ಲಿ ಬಿಡುಗಡೆಯಾದ ರೂಪಾಂತರದ ರೀತಿಯಲ್ಲಿ ಸರಗೇಟ್ಸ್ ಚಿತ್ರದ ಯಾವುದೇ ದೃಶ್ಯಾವಳಿಗಳನ್ನು ಒಳಗೊಂಡಿರಲಿಲ್ಲ. ವಾದ್ಯ ವೃಂದವು ಶೈನ್‌ಡೌನ್ ಜತೆಗೆ ಡಾರ್ಕ್ ಹಾರ್ಸ್ ಪ್ರವಾಸದಲ್ಲಿ ನಿಕಲ್‌ಬ್ಯಾಕ್‌ಗೆ ಬೆಂಬಲಿಸುತ್ತಿದ್ದಾರೆ.
ವಾದ್ಯ ವೃಂದವು, ಜನವರಿ-ಫೆಬ್ರವರಿ 2010ರಲ್ಲಿ US ಸಹ-ಪ್ರವಾಸಕ್ಕೆ ತ್ರೀ ಡೇಸ್ ಗ್ರೇಸ್ ಹಾಗು ಫ್ಲೈ ಲೀಫ್ ತಂಡದ ಜೊತೆಗೂಡುತ್ತಿದೆ.[೧೬]
ಜನವರಿ 5, 2010ರಲ್ಲಿ, "ಗಿವ್ ಮೀ ಏ ಸೈನ್" ನ್ನು ಡಿಯರ್ ಆಗನಿಯ ಎರಡನೇ ಏಕಗೀತೆಯಾಗಿ ಬಿಡುಗಡೆ ಮಾಡಲಾಯಿತು. ತರುವಾಯ, "ಗಿವ್ ಮೀ ಏ ಸೈನ್" ನ ಮ್ಯೂಸಿಕ್ ವಿಡಿಯೋವನ್ನು ವಾದ್ಯ ವೃಂದದ ಮೈಸ್ಪೇಸ್ ಪುಟದಲ್ಲಿ ಮಾರ್ಚ್ 10, 2010ರಂದು ಬಿಡುಗಡೆಗೊಳಿಸಲಾಯಿತು. ಅಂದು ಬೆನ್ ಬರ್ನ್‌ಲಿ ರ 32ನೇ ಜನ್ಮದಿನವಾಗಿತ್ತು.
ಫೆಬ್ರವರಿ 16, 2010ರ ತನಕ, "ಡಿಯರ್ ಆಗನಿ" ಗೆ RIAA ಸುವರ್ಣ ದರ್ಜೆಯ ಪ್ರಮಾಣೀಕರಣ ಮಾಡಿದೆ.
ಸದಸ್ಯರು
ಬದಲಾಯಿಸಿ- ಹಾಲಿ ಸದಸ್ಯರು
- ಬೆಂಜಮಿನ್ ಬರ್ನ್‌ಲಿ - ಪ್ರಧಾನ ಗಾಯಕ, ರಿದಮ್ ಗಿಟಾರ್ (1998-ಇಂದಿನವರೆಗೆ)
- ಆರೋನ್ ಫಿನ್ಕ್ - ಪ್ರಧಾನ ಗಿಟಾರ ವಾದಕ (2001-ಇಂದಿನವರೆಗೆ)
- ಮಾರ್ಕ್ ಕ್ಲೆಪಸ್ಕಿ - ಬೇಸ್ ಗಿಟಾರ್ ವಾದಕ (2001-ಇಂದಿನವರೆಗೆ)
- ಚಾಡ್ ಸ್ಜೆಲಿಗಾ - ಡ್ರಮ್ಸ್, ಪರ್ಕಷನ್ (2005-ಇಂದಿನವರೆಗೆ)
- ಮಾಜಿ ಸದಸ್ಯರು
- ಜೆರೇಮಿ ಹುಮ್ಮೆಲ್ - ಡ್ರಮ್ಸ್, ಪರ್ಕಷನ್ (1998-2004)
- ಜೋನಾಥನ್ "ಬಗ್" ಪ್ರೈಸ್ - ಬೇಸ್ ಗಿಟಾರ್, ಸಹ ಗಾಯನ (1998-2001)
- BC ವಾಟ್ - ಡ್ರಮ್ಸ್, ಪರ್ಕಷನ್ (ನೇರ ಪ್ರದರ್ಶನ) (2005)
ಧ್ವನಿಮುದ್ರಿಕೆ ಪಟ್ಟಿ
ಬದಲಾಯಿಸಿ- ಸ್ಯಾಚರೇಟ್ (2002)
- ವೀ ಆರ್ ನಾಟ್ ಅಲೋನ್ (2004)
- ಫೋಬಿಯ (2006)
- ಡಿಯರ್ ಅಗೋನಿ (2009)
ಆಕರಗಳು
ಬದಲಾಯಿಸಿ- ↑ ೧.೦ ೧.೧ "ಬ್ರೇಕಿಂಗ್ ಬೆಂಜಮಿನ್ ಅಟ್ MTV". Archived from the original on 2010-04-24. Retrieved 2010-05-28.
- ↑ "ಬ್ರೇಕಿಂಗ್ ಬೆಂಜಮಿನ್ ಅಟ್ ಮ್ಯೂಸಿಕ್ ಮೈಟ್". Archived from the original on 2010-06-07. Retrieved 2010-05-28.
- ↑ "ಬ್ರೇಕಿಂಗ್ ಬೆಂಜಮಿನ್ ಅಟ್ IGN". Archived from the original on 2010-06-08. Retrieved 2010-05-28.
- ↑ ಆಲ್ ಮ್ಯೂಸಿಕ್ ((( ಬ್ರೇಕಿಂಗ್ ಬೆಂಜಮಿನ್ > ಓವರ್ ವ್ಯೂ)))
- ↑ "ಬ್ರೇಕಿಂಗ್ ಬೆಂಜಮಿನ್ ಅಟ್ ರೋಲಿಂಗ್ ಸ್ಟೋನ್ ಮ್ಯಾಗಜಿನ್". Archived from the original on 2010-03-29. Retrieved 2010-05-28.
- ↑ unknown, unknown (2008-08-20). "Breaking Benjamin AOL Sessions Interview". Retrieved 2010-03-03.
{{cite web}}
: Unknown parameter|coauthors=
ignored (|author=
suggested) (help) - ↑ 31 May 2006. "Breaking Benjamin (Sooner Or Later Live)". YouTube. Retrieved 2010-03-02.
{{cite web}}
: CS1 maint: numeric names: authors list (link) - ↑ "Breaking Benjamin Poised To Break Big". MTV. Archived from the original on 2010-04-25. Retrieved 2007-12-13.
- ↑ "Gold & Platinum - March 01, 2010". RIAA. Retrieved 2010-03-02.
- ↑ "ಡೇವಿಡ್ ಬೆನ್ಡೆತ್ - ಡಿಸ್ಕಾಗ್ರಫಿ". Archived from the original on 2009-01-11. Retrieved 2021-08-10.
- ↑ Read Michael Lello's Blog Here. "EXCLUSIVE: Ben Burnley interview transcript | The Weekender, Northeast PA". Theweekender.com. Archived from the original on 2011-07-17. Retrieved 2010-03-02.
- ↑ "Album #4 Update - MySpace-blog | breaking benjamin blog van BREAKING BENJAMIN". Blogs.myspace.com. Archived from the original on 2009-03-06. Retrieved 2010-03-02.
- ↑ "Album #4 Title Revealed - MySpace-blog | breaking benjamin blog van BREAKING BENJAMIN". Blogs.myspace.com. Archived from the original on 2009-08-09. Retrieved 2010-03-02.
- ↑ "Breaking Benjamins New Single "I Will Not Bow" Stream 8pm east... - MySpace-blog | breaking benjamin blog van BREAKING BENJAMIN". Blogs.myspace.com. Archived from the original on 2013-04-28. Retrieved 2010-03-02.
- ↑ "Premiere for I WILL NOT BOW music video THIS FRIDAY! - MySpace-blog | breaking benjamin blog van BREAKING BENJAMIN". Blogs.myspace.com. Archived from the original on 2013-04-28. Retrieved 2010-03-02.
- ↑ Smith, Jay (December 7, 2009). "Three Days Grace, Breaking Benjamin Slot Co-Headline Run". Pollstar. Archived from the original on ಜನವರಿ 31, 2010. Retrieved December 7, 2009.