ಬ್ರೀಚ್ ಕ್ಯಾಂಡಿ ಆಸ್ಪತ್ರೆ

ಆಗಿನ ಬೊಂಬಾಯಿನ (ಈಗಿನ|ಮುಂಬಯಿ) ಅತ್ಯಂತ ಹೆಸರುವಾಸಿಯಾದ ’ಬ್ರೀಚ್ ಕ್ಯಾಂಡಿ ಆಸ್ಪತ್ರೆ,’ ಪ್ರಾರಂಭವಾದದ್ದು ೧೯೫೮ ನೇ ಇಸವಿಯಲ್ಲಿ, ಅದೇ ಹೆಸರಿನ ದಕ್ಷಿಣ ಬೊಂಬಾಯಿನ ಉಪನಗರದಲ್ಲಿ. ಇದನ್ನು ರೂಪಿಸಿದವರು, ಪ್ರಖ್ಯಾತ ಇಂಗ್ಲೀಷ್ ಕಟ್ಟಡ-ತಜ್ಞ,ಕ್ಲಾಡ್ ಬೆಟ್ಲಿ,ಯೆಂಬುವರು. ಇದು ಮೊದಲಿನಿಂದಲೂ ಅತ್ಯಂತ ಹೆಸರುವಾಸಿಯಾದ ಆಸ್ಪತ್ರೆ. ಇಲ್ಲಿ ಬಾಲಿವುಡ್ ನ ಹಲವಾರು ಹೆಸರಾಂತ ನಟರ ಪತ್ನಿಯರು ಹಾಗೂ ನಟಿಯರು ತಮ್ಮ ಮಕ್ಕಳಿಗೆ ಜನ್ಮಕೊಟ್ಟಿದ್ದಾರೆ. ಉದಾಹರಣೆಗೆ, 'ಕರಿಶ್ಮಾ ಕಪೂರ್'ನ ಮಗ, 'ಕಿಯಾನ್ ರಾಜ್ ಕಪೂರ್' ಸನ್, ೨೦೧೦ ರಲ್ಲಿ ಜನ್ಮಿಸಿದ್ದು ಈ ಆಸ್ಪತ್ರೆಯಲ್ಲೇ. ಇನ್ನೊಬ್ಬ ಬಾಲಿವುಡ್ ನ ಬೇಡಿಕೆಯ-ನಟಿ 'ಸೋನಾಲಿ ಬೇಂದ್ರೆ'ಯ ಮಗ 'ರನ್ವೀರ್, ೨೦೦೫ ರಲ್ಲಿ ಇಲ್ಲಿ ಜನಿಸಿದ್ದಾನೆ.

ಚಿತ್ರ:Breach c h.jpg
'ಬ್ರೀಚ್ ಕ್ಯಾಂಡಿ ಆಸ್ಪತ್ರೆ'

'ಸುಸಜ್ಜಿತ ಹವಾನಿಯಂತ್ರಿತ ಆಸ್ಪತ್ರೆ'

ಬದಲಾಯಿಸಿ

೧೭೩ ಹಾಸಿಗೆಗಳ ಸುಸಜ್ಜಿತ 'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಯಲ್ಲಿ, 'ಅತ್ಯಾಧುನಿಕ ರೋಗ-ತಪಾಸಣೆಯ ಯಂತ್ರ ಸಾಮಗ್ರಿ'ಗಳಿವೆ. ಸಕ್ಷಮ ತರಪೇತಿತ ವೈದ್ಯರ, ದಾದಿಯರ, ಹಾಗೂ ಪ್ರಶಿಕ್ಷಿತ ಕೆಳವಲಯದ ಸಹಾಯಕ-ಸಿಬ್ಬಂದಿ ವರ್ಗವಿದೆ. ಈ ಆಸ್ಪತ್ರೆಯ ಹೆಸರು ಎಷ್ಟು ಪ್ರಸಿದ್ಧಿಯೆಂದರೆ ಮಾಜಿ ಪ್ರಧಾನಿ, 'ಶ್ರೀ. ಅತಲ್ ಬಿಹಾರಿ ವಜ್ಪಾಯಿ' ರವರ 'ಮೊಣಕಾಲ್ಚಿಪ್ಪಿನ ಶಸ್ತ್ರ-ಚಿಕಿತ್ಸೆ,' ನಡೆದದ್ದು ಈ ಚಿಕಿತ್ಸಾಲಯದಲ್ಲಿಯೇ.

'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಗೆ ತಲುಪಲು ವಾಹನ ಸಂಚಾರ-ವ್ಯವಸ್ಥೆಗಳು

ಬದಲಾಯಿಸಿ

'ಬ್ರೀಚ್ ಕ್ಯಾಂಡಿ ಆಸ್ಪತ್ರೆ' ದಕ್ಷಿಣ ಮುಂಬಯಿನ ಹೆಸರಾಂತ 'ಭುಲಾಭಾಯಿದೇಸಾಯ್ ಮಾರ್ಗ', ಮತ್ತು 'ಪೆದ್ದರ್ ರಸ್ತೆ'ಯ ಮಧ್ಯ ಪ್ರದೇಶದಲ್ಲಿರುವುದರಿಂದ ಬಸ್ಸು, ರೈಲು, ಮಾರ್ಗಗಳಲ್ಲಿ ಸುಲಭವಾಗಿ ಬಂದು ತಲುಪಬಹುದು. ಇಲ್ಲಿಗೆ ಹತ್ತಿರದಲ್ಲಿ 'ಪಶ್ಚಿಮರೈಲ್ವೆಯ ಗ್ರಾಂಟ್ ರೋಡ್ ರೈಲ್ವೆ ನಿಲ್ದಾಣ'ವಿದೆ. ಹುಡುಗಿಯರ ಸುಪ್ರಸಿದ್ಧ 'ಸೋಫಿಯಾ ಕಾಲೇಜ್' ಹತ್ತಿರದಲ್ಲಿದೆ.

  • 'ಭುಲಾಭಾಯ್ ದೇಸಾಯ್ ರಸ್ತೆಯ ಕಡೆಯಿಂದ ಮುಂಬಯಿನ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ನೇಮಿಸಿರುವ ಬಸ್ ಗಳು' :

೩೭, ೩೯,೬೩, ೮೧, ೧೩೩, ೧೫೧

  • 'ಪೆದ್ದರ್ ರಸ್ತೆಯ ಕಡೆಯಿಂದ ಮುಂಬಯಿನ ಹಲವು ಪ್ರದೇಶಗಳನ್ನು ತಲುಪಲು ಸಂಪರ್ಕಿಸಬೇಕಾದ ಬಸ್ ಮಾರ್ಗಗಳು' :

೨೮, ೩೨, ೩೩, ೫೭, ೮೩, ೮೪ ಲಿಮಿಟೆಡ್,೮೬, ೮೮, ೯೩

ಹೊರಸಂಪರ್ಕ

ಬದಲಾಯಿಸಿ

‍^ http://news.bbc.co.uk/1/low/world/south_asia/963811.stm