ಬ್ರಿಗೆಲ್
ಜಾನ್ ಜೇಮ್ಸ್ ಬ್ರಿಗೆಲ್ ಎಂಬವರು ಬಾಸೆಲ್ ಮಿಶನ್ ಸಂಸ್ಥೆಯ ಮಿಶನರಿಯಾಗಿದ್ದು. ದಕ್ಷಿಣ ಕನ್ನಡದ ಮಂಗಳೂರು, ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ದೇವಾಲಯ, ಹಾಗೂ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತುಳು ಭಾಷೆಯನ್ನು ಕಲಿತ ಇವರು ತುಳು ಭಾಷೆಯಲ್ಲಿ ಬೋಧನೆಗಳನ್ನು ನೀಡುವುದು ಮಾತ್ರವಲ್ಲದೆ ಹಲವಾರು ಸಂಗೀತಗಳನ್ನು ಜರ್ಮನ್ ಭಾಷೆಯಿಂದ ತುಳುವಿಗೆ ಅನುವಾದಿಸಿದ್ದಾರೆ. ೧೮೭೨ರಲ್ಲಿ ತುಳು ವ್ಯಾಕರಣವನ್ನು ಬರೆದು ಪ್ರಕಟಿಸಿದವರು ಇವರು. ಈ ಕೃತಿ ಬಾಸೆಲ್ ಮಿಶನ್ ಪ್ರೆಸ್ನಲ್ಲಿ ಮುದ್ರಣಗೊಂಡಿದೆ. ಇವರ ಬದುಕು ಬರಹದ ಬಗ್ಗೆ ಬೆನೆಟ್ ಜಿ. ಅಮ್ಮನ್ನ ಬರೆದ ಕೃತಿಯೊಂದು ಹಂಪಿ ಕನ್ನಡ ವಿ.ವಿ.ಯ ಮಂಟಪಮಾಲೆಯಲ್ಲಿ ಪ್ರಕಟಗೊಂಡಿದೆ.