ಬ್ಯಾಂಕ್ ಖಾತೆಗಳು
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕೀಕರಣ ಆಗಬೇಕು. |
ಬ್ಯಾಂಕುಗಳು ಮುಖ್ಯವಾಗಿ ಜನರಿಂದ ಉಳಿತಾಯದ ಹಣವನ್ನು ಸಂಗ್ರಹಿಸಿ,ಅವಶ್ಯ ವಿರುವವರಿಗೆ ಸಾಲಗಳನ್ನು ನೀಡುತ್ತವೆ.ಠೇವಣೆದಾರರಿಗೆ ಬ್ಯಾಂಕುಗಳು ಬಡ್ದಿಯನ್ನು ಬೇಕಾಗಿರುವುದರಿಂದ ಅವರು ಸಾಲ ಕೊಟ್ಟು ಲಾಭವನ್ನು ಗಲಿಸಬೇಕು. ಠೇವಣಿಗಳನ್ನು ಚಾಲ್ತಿ ಠೇವಣಿ, ಉಳಿತಾಯ ಬ್ಯಾಂಕು ಖಾತೆ ಠೇವಣಿ ಮತ್ತು ಸ್ಥಿರ ಠೇವಣಿ ಎಂದು ಮೂರು ವಿಧವಾಗಿ ವರ್ಗೀಕರಿಸಲಾಗುತ್ತದೆ. ಸಾಮಾನ್ಯವಾಗಿ ಮಾಧ್ಯಮವರ್ಗದ ಜನರು ಬಡ್ದಿಯ ನಿರೀಕ್ಶೆಯಿಂದ ತಮ್ಮ ಹಣವನ್ನು ಉಳಿತಾಯ ಬ್ಯಾಂಕು ಖಾತೆ ಅಥವ ಸ್ಥಿರ ಠೇವಣಿಗಳಲ್ಲಿ ತೊಡಗಿಸುತ್ತಾರೆ.ಹೆಚ್ಹಿನ ಹಣಕಾಸು ವ್ಯವಹಾರವಿರುವ ಗ್ರಾಹಕರು ಅಥವಾ ಸಂಸ್ಥೆಗಳು ಚಾಲ್ತಿ ಖಾತೆಯನ್ನು ತೆರೆಯುತ್ತಾರೆ. ಚಾಲ್ತಿ ಖಾತೆಯಿದ್ದರೆ ಖಾತೆದಾರರು ಬೇಕಾದಷ್ಟು ಸಲ ಹಣವಿಡುವುದನ್ನು ಅಥವಾ ತೆಗೆಯುವುದನ್ನು ಮಾಡಬಹುದು. ಆದರೆ ಈ ಸೌಲಭ್ಯ ಅವರಿಗೆ ಉಳಿತಾಯ ಬ್ಯಾಂಕ್ ಖಾತೆಯ ಮೇಲಾಗಲಿ ಅಥವಾ ಸ್ಥಿರ ಠೇವಣಿಗಳ ಮೇಲಾಗಲಿ ದೊರೆಯುವುದಿಲ್ಲ. ಒಂದೊಂದೇ ಖಾತೆಗಳ ಪರಿಚಯ ಮಾಡಿಕೊಳ್ಳೋಣ.
- ಚಾಲ್ತಿ ಖಾತೆ(CURRENT ACCOUNT)
ಚಾಲ್ತಿ ಖಾತೆ ಅಂದರೆ ನಿರಂತರವಾಗಿ ನಡೆಯುವ ಖಾತೆ. ಈ ಖಾತೆಯಲ್ಲಿ ಎಷ್ಟೇ ಸಲ ಹಣವಿದಬೇಕು ಅಥವಾ ತೆಗೆಯಬೇಕು ಅನ್ನುವ ನಿರ್ಭಂದಗಳಿಲ್ಲ.ಈ ಖಾತೆಗೆ ಬ್ಯಾಂಕ್ ನವರು ಯಾವ ಬಡ್ಡಿಯನ್ನೂ ನೀಡುವುದಿಲ್ಲ. ಚಾಲ್ತಿ ಖಾತೆಯಿಂದ ಗ್ರಾಹಕರಿಗೂ ಮತ್ತು ಬ್ಯಾಂಕ್ ನವರಿಗೂ ಹಲವಾರು ಪ್ರಯೋಜನಗಳಿವೆ.
- ಈ ಖಾತೆಯನ್ನು ಪ್ರಾರಂಭಿಸಲು ಮತ್ತು ಪ್ರಾರಂಭಿಸಿದ ಮೇಲೆ ಎಷ್ಟು ಕನಿಷ್ಠ ಹಣವನ್ನಿಡಬೇಕೆಂದು,ಆಯಾ ಸ್ಥಳಗಳ ಜನಸಂಕ್ಯೆ ಮೇಲೆ ನಿರ್ಧರಿಸಲಾಗುತ್ತದೆ.
- ಗ್ರಾಹಕರು ಖಾತೆ ತೆರೆಯಲು ಬ್ಯಾಂಕಿನವರು ಕೊಡುವ ಮುದ್ರಿತ ಖಾತೆ ತೆರೆಯುವ ಫಾರ್ಮವನ್ನು ತುಂಬಿ,ಸಹಿ ಮಾಡಿಕೊಡಬೇಕು. ಬ್ಯಾಂಕಿನ ವಿಧಿವಿಧಾನಗಳಿಗೆ ದಾರರು ಒಪ್ಪಿ ಸಹಿ ಮಾಡುವುದರಿಂದ ಗ್ರಾಹಕ ಮತ್ತು ಬ್ಯಾಂಕಿನ ಮಧ್ಯೆ ಕರಾರು ಮಾಡಿಕೊಂಡಂತಲಾಗುತ್ತದೆ.
- ಗ್ರಾಹಕರು,ತಮ್ಮ ಖಾತೆಯಿಂದ ಹಣ ಪಡೆಯಲು ಬ್ಯಾಂಕಿನವರು ಶುಲ್ಕವಿಲ್ಲದೆ ಕೊಡುವ ಚೆಕ್ ಹಾಳೆಗಳನ್ನೇ ಬಳಸಬೇಕು. ಸಾಮಾನ್ಯವಾಗಿ ಒಂದು ಲಾಗುವುದು ಖಾತೆಗೆ ಒಂದೇ ಚೆಕ್ ಪುಸ್ತಕವನ್ನು ನೀಡಲಾಗುವುದು. ಬ್ಯಾಂಕ್ ನೀಡುವ ಎ.ಟಿ.ಎಂ . ಕಾರ್ಡುಗಳ ನೆರವಿನಿಂದ ಎ.ಟಿ.ಎಂ.ಗಳ ಮೂಲಕ ಹಣ ಪಡೆಯಬಹುದು.ಇಂಟರ್ನೆಟ್ ಮೂಲಕವೂ ಹಣ ವರ್ಗಾವಣಿ ಮುಂತಾದ ವಹಿವಾಟುಗಳನ್ನು ನಡೆಸಬಹುದು.
- ಚಾಲ್ತಿ ಖಾತೆಯನ್ನು ತೆರೆಯುವ ಮುನ್ನ ಗ್ರಾಹಕನ್ನು ಬ್ಯಾಂಕಿಗೆ ಇನ್ನೊಬ್ಬರ ಮೂಲಕ ಪರಿಚಯಿಸಿಕೊಲ್ಲಬೇಕಾಗಿದೆ.ಈ ಪರಿಚಯವನ್ನು, ಬ್ಯಾಂಕಿಗೆ ಪರಿಚಯವಿರುವ ಅಥವಾ ಆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಯಾವುದೇ ವ್ಯಕ್ತಿ ಮಾಡಬಹುದು. ಬ್ಯಾಂಕು ಕೂಡ, ಖಾತೆ ತೆರೆಯ ಬಯಸುವ ವ್ಯಕ್ತಿಯ ಆರ್ಥಿಕ ಸ್ಥಿತಿಮ್, ಸಮಾಜದಲ್ಲಿರುವ ಆ ವ್ಯಕ್ತಿಯ ಗೌರವ, ಸ್ತನಮಾನಗಳು ವಿಚಾರಿಸಿ ಖಾತೆದಾರನು ಖಾತೆತೆರೆಯಲು ಅರ್ಹನೆ ಎಂದು ನಿರ್ಧರಿಸುತ್ತದೆ. ಪರಿಚಯವಿಲ್ಲದೆ ಖಾತೆಯನ್ನು ತೆರೆದರೆ ಬ್ಯಾಂಕಿಗೆ, ಬ್ಯಾಂಕಿಂಗ್ ಕಾನೂನುಗಳ ರಕ್ಷಣೆ ದೊರೆಯುವುದಿಲ್ಲ. ಬ್ಯಾಂಕಿಗೆ ಪರಿಚಯಿಸಿದ ವ್ಯಕ್ತಿಯ ಮೇಲೆ ಯಾವ ಹೊಣೆಗಾರಿಕೆ ಇರದಿದ್ದರೂ ಅವನು ಸಾಕಷ್ಟು ಜಾಗ್ರತೆ ವಹಿಸಿ ಪರಿಚಯಿಸಬೇಕಾಗುತ್ತದೆ. ಬ್ಯಾಂಕುಗಳು ತಮ್ಮ ಖಾತೆದಾರರ ಬಗ್ಗೆಗೆ ಪೂರ್ಣ ತಿಳುವಳಿಕೆ ಹೊಂದಿರಬೇಕೆಂಬುದು ರಿಸೆರ್ವ್ ಬ್ಯಾಂಕಿನ ಆಶಯ. ಈ ಕುರಿತು 'ನಿಮ್ಮ ಗ್ರಾಹಕನನ್ನು ತಿಳಿಯಿರಿ' (KNOW YOUR CUSTOMER) ಎಂದು ಬ್ಯಾಂಕುಗಳಿಗೆ ರಿಸೆರ್ವ್ ಬ್ಯಾಂಕ್ ವಿವರವಾದ ಆದೇಶಗಳನ್ನು ನೀಡಿದೆ.
- ಚಾಲ್ತಿ ಖಾತೆಗಳ ಮೇಲೆ ಬ್ಯಾಂಕು ಸ್ಥಾಯೀ ಆದೇಶಗಳನ್ನು ಸ್ವೀಕರಿಸುತ್ತದೆ. ಅಂದರೆ, ಗ್ರಾಹಕನ್ನು ಕಾಲಕಾಲಕ್ಕೆ ವಿಮಾ ಕಂತುಗಳನ್ನು ತುಂಬಬೇಕಾಗಿದ್ದರೆ ಅಥವಾ ಬೇರೆ ಕಡೆ ಹಣವನ್ನು ಕಳುಸುವದಿದ್ದರೆ ಬ್ಯಾಂಕು ಗ್ರಾಹಕನ ಲಿಖಿತ ಅಪ್ಪಣೆ ಪಡೆದು ಈ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ಅಲ್ಪ ಶೋಲ್ಕವನ್ನೂ ವಿಧಿಸುತ್ತದೆ. ಈ ರೀತಿ ಸ್ಥಾಯೀ ಆದೇಶಗಳನ್ನು ನೀಡುವ ವ್ಯಕ್ತಿ ತನ್ನ ಖಾತೆಯಲ್ಲಿ ಅವಶ್ಯವಿರುವಷ್ಟು ಶಿಲ್ಕನ್ನು ಇಡಬೇಕಾಗುವದು. ಈ ಷರತ್ತಿನ ಮೇಲೆ ಸ್ಥಾಯಿ ಆದೇಶಗಳನ್ನು ಪಾಲಿಸಲಾಗುವದು.
- ಬ್ಯಾಂಕು ತಿಂಗಳಿಗೊಮ್ಮೆ ಅಥವಾ ಖಾತೆದಾರನು ಬಯಸಿದ್ದಾಗ ಅವನ ಖಾತೆಯ ವ್ಯವಹಾರಗಳನ್ನೋಳಗೊಂಡ ವಿದ್ಯಮಾನ ವಿವರಗಳ ತಃಖ್ತೆಯನ್ನು ಒದಗಿಸುತ್ತದೆ.
- ಖಾತೆದಾರರು ಚೆಕ್ಕುಗಳನ್ನು ನೀಡಿದಾಗ ಬ್ಯಾಂಕಿನವರು ಅವುಗಳನು ಪಾವತಿ ಮಾಡಲೇಬೇಕು.ತಪ್ಪುಗ್ರಹಿಕೆಯಿಂದ ಬ್ಯಾಂಕಿನವರು ಪಾವತಿ ಮಾಡದೆ ಹೋದರೆ, ಗ್ರಾಹಕನಿಗಾಗುವ ನಷ್ಟದಲ್ಲಿ ಬ್ಯಾಂಕು ಭಾಗಿಯಾಗಬೇಕಾಗುತ್ತದೆ.ಗ್ರಾಹಕನ ಮೇಲೆ ಕೂಡ ಹೊಣೆಗಾರಿಕೆ ಇರುತ್ತದೆ. ಒಂದು ಚೆಕ್ಕಿಗೆ ಹಣ ನೀಡಬೇಕಾದರೆ ಅದು ತಾಂತ್ರಿಕವಾಗಿ,ಅಂದರೆ ದಿನಾಂಕ,ಹಣದ ಮೊತ್ತ ಮತ್ತು ಪ್ರಾಪ್ತಿಕರ್ತರ ಹೆಸರು, ಗ್ರಾಹಕನ ಸಹಿ ಮೊದಲಾದ ವಿವರಗಳು ಸರಿಯಾಗಿದ್ಧರೆ ಬ್ಯಾಂಕು ಹಣವನ್ನು ಪಾವತಿ ಮಾಡಲೇಬೇಕು. ಚೆಕ್ಕು ಅದನ್ನು ಬರೆದ ದಿನಾಂಕದಿಂದ ೩ ತಿಂಗಳೊಳಗೆ ಪಾವತಿ ಆಗಬೇಕು. ಹಾಗಾಗದಿದ್ಧರೆ, ಅಂತಹ ಅವಧಿ ಮೀರಿದ ಚೆಕ್ಕುಗಳನ್ನು ಹಳಸಿದ ಚೆಕ್ ಎಂದು ಪರಿಗಣಿಸಿ, ಪಾವತಿಯನ್ನು ನಿರಾಕರಿಸಲಾಗುತ್ತದೆ. ಅಂತಹ ಚೆಕ್ಕುಗಳನ್ನು, ಸಹಿಮಾಡಿದ ವ್ಯಕ್ತಿ ಮತ್ತೊಂದು ದಿನಾಂಕವನ್ನು ಬರೆದು ಬದಲಾವಣೆಯ ದ್ರುಡ್ದೀಕರಣಕ್ಕಾಗಿ ಇನ್ನೊಂದು ಸಹಿಮಾಡಿ, ಪುನರ್ನವೀಕರಣ ಮಾಡಬೇಕಾಗುತ್ತದೆ.
- ಚಾಲ್ತಿ ಖಾತೆಗಳಲ್ಲಿ ಮೀರೆಳೆತದ ಸೌಲಭ್ಯವನ್ನು ಗ್ರಾಹಕನು ಪಡೆಯಬಹುದು. ಚೆಕುಗಳನ್ನು ಬರೆಯುವಾಗ ಗ್ರಾಹಕನು ಖಾತೆಯಲ್ಲಿರುವ ಶಿಲ್ಕನ್ನು ಅಥವಾ ಮೀರೆಳೆತದ ಮಿತಿಯನ್ನು ಗಮನಿಸಬೇಕು. ಚೆಕ್ ಪಾವತಿಸಲು ಅಗತ್ಯವಾದಷ್ಟು ಶಿಲ್ಕು ಇರದಿದ್ದರೆ ಅಂತ ಚೆಕ್ ಅನಾದರಿತವಾಗುವುದಲ್ಲದೆ ಹಾಗೆ ಚೆಕ್ಡು ನೀಡುವುದು ಕಾನೂನಿನ ಪ್ರಕಾರ ಅಪರಾದವೆನ್ನಿಸುತ್ತದೆ. ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ೧೩೮ ರಿಂದ ೧೪೨ ನೇ ಪ್ರಕಾರಣಗಳಲ್ಲಿ ಇದಕ್ಕೆ ಸಂಭಂದಿಸಿದ ವಿವರಗಳಿವೆ.
- ಗ್ರಾಹಕನ್ನು ಬ್ಯಾಂಕು ತನಗಿತ್ತ ಚೆಕ್ಕುಗಳನ್ನು ಬೇರೆಯವರು ದುರುಪಯೋಗಪಡಿಸಿ ಕೊಲ್ಲದಂತೆ ಭದ್ರವಾಗಿ ಇಡಬೇಕು.
- ಒಂದು ಸಲ ಗ್ರಾಹಕನ್ನು ಚೆಕ್ ಬರೆದು ಇನ್ನೊಬ್ಬ ವ್ಯಕ್ತಿಗೆ ಕೊಟ್ಟ ಮೇಲೆ, ಅದರ ಪಾವತಿಯನ್ನು ತಡೆಹಿಡಿಯಬೇಕೆಂದು ಇಚ್ಚಿಸಿದ್ದಾರೆ, ಗ್ರಾಹಕನ್ನು ಆ ಚೆಕ್ ಹಣವು ಪಾವತಿಯಾಗುವ ಮೊದಲೇ, ಬ್ಯಾಂಕಿಂಗ್ ಚೆಕ್ಕಿನ ಪೂರ್ಣ ವಿವರಗಳನ್ನು ತಿಳಿಸಿ ಅದರ ಪಾವತಿಯನ್ನು ತಡೆಹಿಡಿಯಬೇಕೆಂದು ಲಿಖಿತ ಆದೇಶ ನೀಡಿದರೆ, ಬ್ಯಾಂಕು ಅಂತಹ ಚೆಕಿನ ಪಾವತಿ ಮಾಡುವುದಿಲ್ಲ.
- ಗ್ರಾಹಕನ್ನು ಬ್ಯಾಂಕುಗಳಿಗೆ ಲಿಖಿತ ರೂಪದಲ್ಲಿ ಖಾತೆಯನ್ನು ಮುಚ್ಚಕೆಂದು ಹೇಳಿದ್ಧರೆ ಬ್ಯಾಂಕು ಅಂತಹ ಖಾತೆಗಳನ್ನು ಬಂಧು ಮಾಡುತ್ತದೆ. ಇಲ್ಲವೆ ಗ್ರಾಹಕನ ವ್ಯವಹಾರವು ಅತ್ಹೃಪ್ತಿಕರವೆಂದು ಕಂಡು ಬಂದಾಗ ಅಂತಹ ಖಾತೆಗಳನ್ನು ನಿಲ್ಲಿಸಿ ಗ್ರಾಹಕನಿಗೆ ತಿಳಿಸಲಾಗುತ್ತದೆ.
- ಉಳಿತಾಯ ಬ್ಯಾಂಕ್ ಖಾತೆಗಳು (SAVINGS BANK ACCOUNT)
ಜನಸಾಮಾನ್ಯರಲ್ಲಿ ಉಳಿತಾಯ ಮತ್ತು ಮಿತವ್ಯಯವನ್ನು ಪ್ರೋತ್ಸಾಹಿಸಲು ಉಳಿತಾಯ ಖಾತೆಗಳನ್ನು ತೆರೆಯಲಾಗುತ್ತದೆ. ಎಲ್ಲ ವರ್ಗದ ಜನರೂ ಈ ಖಾತೆಗಳನ್ನು ತೆರೆಯಬಹುದು. ಈ ಸೌಲಬ್ಯವನ್ನು ಅಂಚೆ ಕಚೆರಿಗಳು ಹಾಗೂ ಸಹಕಾರ ಬ್ಯಾಂಕುಗಳು ಸಹ ಜನರಿಗೆ ಒದಗಿಸುತ್ತಿವೆ. ಉಳಿತಾಯ ಖಾತೆಯನ್ನು ಸಾಮಾನ್ಯವಾಗಿ ವ್ಯಕ್ಥಿಗಳೇ ತೆರಯಬೇಕು. ಉಳಿತಾಯ ಮಾಡುವವರು ಕೇವಲ ವ್ಯಕ್ತಿಗಳೆಂದೂ, ಸರಕಾರಿ ಇಲಾಖೆಗಳು, ಸರಕಾರದ ಅನುದಾನ ಪಡೆದ ಸಂಸ್ಥೆಗಳು, ನಗರಸಭೆಗಳು, ರಾಜ್ಯ ಗೃಹ ನಿರ್ಮಾಣ ಮಂಡಳಿಗಳು ಅಥವಾ ಸರಕಾರದ ಇತರ ಸಂಸ್ಥೆಗಳು ಉಳಿತಾಯ ಖಾತೆಗಳನ್ನು ತೆರೆಯಬಾರದೆಂದೂ ನಿರ್ಭಂದವನ್ನು ರೆಸೆರ್ವ್ ಬ್ಯಾಂಕ್ ಹೇರಿದೆ. ಆದರೆ ಟ್ರುಷ್ಟುಗಳು, ಶಿಕ್ಷಣ ಸಂಸ್ಥೆಗಳು, ಕ್ಲಬ್ಬುಗಳು, ಸಹಕಾರಿ ಸಂಘಗಳು ಮೊದಲಾದ ಸಂಘ ಸಂಸ್ಥೆಗಳ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಉಳಿತಾಯ ಖಾತೆಯ ಮುಖ್ಯ ಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.
- ಉಳಿತಾಯ ಖಾತೆಗಳು ಎರಡು ವಿಧ : ಚೆಕ್ ಸೌಲಬ್ಯ ಇರುವ ಖಾತೆ ಹಾಗೂ ಚೆಕ್ ಸೌಲಬ್ಯ ಇಲ್ಲದಿರುವ ಖಾತೆ. ಚೆಕ್ ಸೌಲಭ್ಯ ಇಲ್ಲದ ಖಾತೆಗಳಲ್ಲಿ ಠೇವಣೆದಾರರು ಬ್ಯಾಂಕು ವಿಧಿಸಿರುವ ಕನಿಷ್ಠ ಮೊತ್ತದ ಹಣವು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಚೆಕ್ ಸೌಲಭ್ಯ ಖಾತೆಗಳಿಗೆ ೫೦೦/- ರಿಂದ ೧೦೦೦/- ರೂ. ವರೆಗೆ ಕನಿಷ್ಠ ಶಿಲ್ಕನ್ನು ನಿಗದಿಪಡಿಸುತ್ತವೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ವಿದೇಶೀ ಬ್ಯಾಂಕುಗಳು ಈ ಕನಿಷ್ಠ ಮೊತ್ತವನ್ನು ರೂ. ೨೫೦೦೦/- ಎಂದು ನಿಗದಿ ಮಾಡಿವೆ. ಕಾಲಕಾಲಕ್ಕೆ ಈ ಕನಿಷ್ಠ ಶಿಲ್ಕಿನ ಮೊತ್ತದಲ್ಲಿ ಬದಲಾವಣೆಗಳಾಗುತ್ತವೆ. ಈಚೆಗೆ ಭಾರತೀಯ ಸ್ಟೇಟ್ ಬ್ಯಾಂಕು ಉಳಿತಾಯ ಖಾತೆಗಳಿಗೆ ಕನಿಷ್ಠ ನಿಯಮವನ್ನು ತೆಗೆದು ಹಾಕಿದೆ.
- ಉಳಿತಾಯ ಖಾತೆಗಳ ಶಿಲ್ಕುಗಳಿಗೆ ಬ್ಯಾಂಕುಗಳು ಈಗ ಶೇ. ೪ ರಷ್ಟು ಬಡ್ಡಿ ನೀಡುತ್ತಿವೆ. ಇದು ಕಾಲಕಾಲಕ್ಕೆ ಬದಲಾವಣೆ ಆಗಬಹುದು. ಉಳಿತಾಯ ಖಾತೆಗಳ ದೈನಂದಿನ ಶಿಲ್ಕುಗಳ ಮೇಲೆ ಲೆಕ್ಕ ಹಾಕಲಾಗುವ ಈ ಬಡ್ಡಿಯನ್ನು ಆರು ತಿಂಗಳಿಗೊಮ್ಮೆ ಖಾತೆಗೆ ಜಮಾ ಮಾಡಲಾಗುವುದು.
- ಚೆಕ್ ಪುಸ್ತಕವನ್ನು ಬ್ಯಾಂಕಿನವರಿಂದ ಕೇಳಿ ಪಡೆಯಬೇಕು. ಈ ಚೆಕ್ಕುಗಳ ಮೂಲಕ ಖಾತೆಯಿಂದ ಹಣ ಪಡೆಯಬಹುದು ಅಥವಾ ಇತರರಿಗೆ ಹಣ ಪಾವತಿ ಮಾಡಬಹುದು.
- ಚೆಕ್ ಪುಸ್ತಕವನ್ನು ನೀಡಲು ಶುಲ್ಕ ವಿಧಿಸಲಾಗುವುದು.
- ಉಳಿತಾಯ ಖಾತೆಯಲ್ಲಿ ಮೀರೆಳೆತದ ಸೌಲಭ್ಯ ಇರುವುದಿಲ್ಲ.
- ಬಹುತೇಕ ಎಲ್ಲ ಬ್ಯಾಂಕುಗಳೂ ಈಗ ಎ.ಟಿ.ಎಂ .ಗಳನ್ನು ಹೊಂದಿವೆ. ಗ್ರಾಹಕರು ಈ ಯಂತ್ರಗಳ ಮೂಲಕ ಹಣ ಪಡೆಯಲು ಎ.ಟಿ.ಎಂ . ಕಾರ್ಡ್ ಗಳನ್ನು ನೀಡಲಾಗುವುದು. ಎ.ಟಿ.ಎಂ . ಕಾರ್ಡ್ಗಳಿಂದ ಇತರ ಅನುಕೂಲಗಳೂ ಇರುತ್ತವೆ.
- ವಾಣಿಜ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಅಂತರಜಾಲ ಬ್ಯಾಂಕಿಂಗ್ ಸೌಲಬ್ಯಾವೂ ಉಂಟು. ಖ್ಹಾತೆಗಳಲ್ಲಿನ ಶಿಲ್ಕನ್ನು / ವಹಿವಾಟುಗಳನ್ನು ತಿಳಿದುಕೊಳ್ಳಲು, ವಹಿವಾಟುಗಳ ತಃಕ್ತಗಳನ್ನು ಮುದ್ರಿಸಿಹೊಳ್ಳಲು, ಚೆಕ್ ಪುಸ್ತಕ ಅಥವಾ ಡ್ರಾಫ್ಟ್ ಗೆ ಕೋರಿಕೆ ಸಲ್ಲಿಸಲು ಮತ್ತು ಅದೇ ಬ್ಯಾಂಕಿನಲ್ಲಿ ಅಥವಾ ಬೇರೆ ಬ್ಯಾಂಕುಗಳಲ್ಲಿರುವ ತನ್ನ ಅಥವಾ ಇತರರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವುದು, ವಿದ್ಯುತ್, ಫೋನು ಹಾಗೂ ನೀರಿನ ಬಿಲ್ಲುಗಳ ಪಾವತಿ ಮುಂತಾದ ಸೌಲಬ್ಯಗಳು ಅಂತರಜಾಲ ಬ್ಯಾಂಕಿಂಗ್ ಮೂಲಕ ದೊರೆಯುತ್ತದೆ. ಗ್ರಾಹಕರು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲದ ತಮ್ಮ ಮನೆ ಅಥವಾ ಕಚೇರಿಯಲ್ಲಿ ಕುಳಿತು ಗಣಕದ ನೆರವಿನಿಂದ ಅಂತರಜಾಲದ ಮೂಲಕ ಈ ಕೆಲಸಗಳನ್ನು ತಾವೇ ಮಾಡಿಕೊಳ್ಳಬಹುದು.
ಚಾಲ್ತಿ ಖಾತೆಗೆ ಅನ್ವಯವಾಗುವ ಉಳಿದ ನಿಯಮಗಳು ಈ ಉಳಿತಾಯ ಖ್ಹಾತೆಗಳಿಗೂ ಅನ್ವಯವಾಗುತ್ತವೆ. ಚೆಕ್ಕುಗಳಿಲ್ಲದ ಉಳಿತಾಯ ಖಾತೆಯಿಂದ ಗ್ರಾಹಕನು ಬ್ಯಾಂಕಿಗೇ ಬಂದು ಹಣವನ್ನು ತೆಗೆಯಬೇಕಾಗಿರುವುದರಿಂದ ಅವನು ಪಾಸ್ ಬುಕ್ಕನ್ನು ತರಲೇಬೇಕು.
ಈ ಉಳಿತಾಯ ಖಾತೆಗಳನ್ನು ತೆರೆಯುವಾಗ ಗ್ರಾಹಕನು ಬ್ಯಾಂಕಿಗೆ ಸಮಾದಾನಕರ ಪರಿಚಯವನ್ನು ಮಾಡಿಕೊಡಬೇಕಾಗುವುದು. ಖಾತೆ ತೆರೆಯುವಾಗ ಖಾತೆದರನ ಎರಡು ಭಾವಚಿತ್ರಗಳನ್ನು ಬ್ಯಾಂಕಿಗೆ ಕೊಡಬೇಕಾಗಿರುವುದು. ಬ್ಯಾಂಕುಗಳ ಎಲ್ಲ ಖಾತೆಗಳ ಹಾಗೆ ಈ ಖ್ಹಾತೆಗಳೂ ರಿಸೆರ್ವ್ ಬ್ಯಾಂಕಿನ 'ನಿಮ್ಮ ಗ್ರಾಹಕನ್ನು ತಿಳಿಯಿರಿ' ಆದೇಶಗಳು ಅನ್ವಯಿಸುತ್ತವೆ. ಉಳಿತಾಯ ಖಾತೆ ಇರಲಿ ಅಥವಾ ಚಾಲ್ತಿ ಖಾತೆ ಇರಲಿ, ಗ್ರಾಹಕನ ಮಾದರಿ ಸಹಿಯನ್ನು ಖಾತೆ ತೆರೆಯುವ ಫಾರ್ಮಿನ ಮೇಲೆ ಬ್ಯಾಂಕ್ ಅಧಿಕಾರಿಯ ಮುಂದೆ ನೀಡಬೇಕಾಗುವುದು. ಪ್ರತಿ ಸಲ ಹಣವನ್ನು ತೆಗೆಯುವಾಗ ಬ್ಯಾಂಕಿನವರು ಈ ಮಾದರಿ ಸಹಿಯೊಂದಿಗೆ ಪರೀಕ್ಷಿಸಿ ನೋಡುತಾರೆ. ಒಮ್ಮೆ ಮಾದರಿ ಸಹಿ ಕೊಟ್ಟ ಮೇಲೆ, ಯಾವುದಾದರೂ ಕಾರಣದಿಂದ ಬದಲಾಗಬಹುದು. ಆಗ ಗ್ರಾಹಕನು ಹೊಸ ಮಾದರಿ ಸಹಿಯನ್ನು ನೀಡಬೇಕಾಗುವುದು. ಒಂದೊಂದು ಸಲ ಖಾತೆದರನು ಬೇರೆ ವ್ಯಕ್ತಿಯ ಮೂಲಕ ನಿರ್ವಹಣೆ ಪತ್ರವನ್ನು ಕೊಟ್ಟು ಖಾತೆಯಿಂದ ಹಣವನ್ನು ಪಡಯಬಹುದು.
- ಸ್ಥಿರ ಠೇವಣೆಗಳು ಅಥವಾ ಸಾವಧಿ ಠೇವಣೆಗಳು (TERM DEPOSITS)
ಒಂದು ನಿಶ್ಚಿತವಾದ ಮೊತ್ತವನ್ನು ಒಂದು ಅವಧಿಯವರೆಗೆ ಬ್ಯಾಂಕ್ ನಲ್ಲಿಟ್ಟು ಆ ಅವಧಿಯ ನಂತರ ಬಡ್ಡಿ ಸಹಿತವಾಗಿ ಮರಳಿ ಪಡೆಯುವ ಠೇವಣೆಗಳನ್ನು ಮುದ್ಧತಿ ಠೇವಣೆ, ಸ್ಥಿರ ಠೇವಣೆ ಅಥವಾ ಸಾವಧಿ ಠೇವಣೆಗಳೆಂದು ಕರೆಯುತ್ತಾರೆ. ಈ ಠೇವಣೆಗಳನ್ನು ಕನಿಷ್ಠ ೭ ದಿನಗಳಿಂದ ಗರಿಷ್ಠ ೧೦ ವರುಷಗಳ ಅವಧಿಗೆ ಬ್ಯಾಂಕುಗಳಲ್ಲಿ ಇಡಬಹುದು. ರಿಸರ್ವ್ ಬ್ಯಾಂಕ್ ನ 'ನಿಮ್ಮ ಗ್ರಾಹಕರನ್ನು ತಿಳಿಯಿರಿ" ಆದೇಶಗಳು ಈ ಖಾತೆಗಳಿಗೂ ಅನ್ವಯವಾಗುತ್ತದೆ. ಇದರ ಕೆಲ ವೈಶಿಷ್ಟ್ಯಗಳು ಹೀಗಿವೆ.
- ಒಂದು ಅವಧಿಗಾಗಿ ಇಟ್ಟ ಠೇವಣೆಗಳನ್ನು ಸಾಮಾನ್ಯವಾಗಿ ಆ ಅವಧಿ ಮುಗಿಯುವ ವರೆಗೆ ಬ್ಯಾಂಕ್ ನಲ್ಲಿ ಇಡಲೇಬೇಕಾಗುತ್ತದೆ.
- ಈ ಸಾವಧಿ ಠೇವಣೆಗಳಿಗೆ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ನೀಡಲಾಗುತ್ತದೆ. ಠೇವಣೆದಾರರು ಬ್ಯಾಂಕಿಗೆ ಬಂದು ಈ ಬಡ್ಡಿಯನ್ನು ಪಡೆಯಬೇಕಾಗುವುದು. ಇಲ್ಲವೇ ಅವರ ಉಳಿತಾಯ ಬ್ಯಾಂಕ್ ಖಾತೆ ಇದ್ಧರೆ, ಆ ಲೆಕ್ಕಕ್ಕೆ ಸೇರಿಸಬಹುದು. ಈ ಠೇವಣೆಯಲ್ಲಿ ವಿಶೇಷ ಸಾವಧಿ ಠೇವಣೆಗಳು ಅಥವಾ ಪುನರ್ವಿನಿಯೋಗ ಠೇವಣೆಗಳು ಎಂಬ ಇನ್ನೊಂದು ವಿಧದ ಠೇವಣೆ ಇದೆ. ಇದರಲ್ಲಿ ಗ್ರಾಹಕನಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೊಡುವ ಬಡ್ಡಿಯನ್ನು ಠೇವಣೆಯ ರೂಪದಲ್ಲಿ ಪುನರ್ವಿನಿಯೋಗಿಸಿ ಬಡ್ಡಿಯ ಮೇಲೆ ಬಡ್ಡಿಯನ್ನು ಕೊಟ್ಟು ಆ ಠೇವಣೆಯ ಅವಧಿ ಮುಗಿದೊಡನೆ ಎಲ್ಲ ಮೊತ್ತವನ್ನು ಗ್ರಾಹಕನಿಗೆ ನೀಡುತ್ತಾರೆ.
- ಸ್ಥಿರ ಠೇವಣೆಗಳನ್ನು ಸ್ವೀಕರಿಸಿದ್ಧಾಗ ಗ್ರಾಹಕನಿಗೆ ಬ್ಯಾಂಕಿನವರು ಠೇವಣೆ ರಸೀತಿಯನ್ನು ಕೊಡುತ್ತಾರೆ. ಇದರಲ್ಲಿ ಗ್ರಾಹಕನ ಹೆಸರು, ಅದರ ಅವಧಿ ಎಂದು ಮುಗಿಯುತ್ತದೆ. ಮುಗಿದ ಮೇಲೆ ಹಣವು ಎಷ್ಟು ಸಂದಾಯ ವಾಗುತ್ತದೆ ಅನ್ನುವ ವಿವರಗಳು ಇರುತ್ತವೆ. ಈ ರಸೀತಿಯನ್ನು, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಚೆಕ್ಕಿನಿಂದ ವರ್ಗಾಯಿಸಲು ಬರುವುದಿಲ್ಲ. ಅವಧಿ ಮುಗಿದ ಮೇಲೆ ಇದನ್ನು ತಾನೇ ಬ್ಯಾಂಕಿಗೆ ನೀಡಿ ಹಣವನ್ನು ಮರಳಿ ಪಡೆಯಬೇಕು.
- ಬಡ್ಡಿ ದರವನ್ನು ನಿರ್ಧರಿಸುವ ಸ್ವಾತ್ರಂತ್ಯವನ್ನು ಈಚೆಗೆ ಬ್ಯಾಂಕುಗಳಿಗೆ ನೀಡಲಾಗಿದೆ. ಮೊದಲ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತಿತ್ತು. ವಾಣಿಜ್ಯ ಬ್ಯಾಂಕುಗಳು ನೀಡುವುದಕ್ಕಿಂತ ಸ್ವಲ್ಪ ಹೆಚ್ಚಿನ ಬಡ್ಡಿಯನ್ನು ಕೊಡಲು ಸಹಕಾರಿ ಬ್ಯಾಂಕುಗಳಿಗೆ ಅವಕಾಶವಿದೆ.
- ಕೆಲವೊಮ್ಮೆ ಸಾವಧಿ ಠೇವಣೆಗಳು ಪಕ್ವವಾದರೆ, ಗ್ರಾಹಕನು ಅದನ್ನು ನವೀಕರಿಸದೆ ಬ್ಯಾಂಕಿನಲ್ಲಿ ಹಾಗೆಯೇ ಬಿಟ್ಟಿರುತ್ತಾನೆ. ನಂತರ ಗ್ರಾಹಕನು ಬ್ಯಾಂಕಿಗೆ ಬಂದು ಅದನ್ನು ನವೀಕರಿಸಿದ್ದರೆ, ಪಕ್ವವಾದ ದಿವಸದಿಂದಲೇ ಬ್ಯಾಂಕು ಬಡ್ಡಿಯನ್ನು ನೀಡುತ್ತದೆ. ನವೀಕರಿಸಲು ೧೫ ದಿನಗಳಿಂತ ಹೆಚ್ಚು ವಿಳಂಬವಾದರೆ, ವಿಳಂಬದ ಅವಧಿಗೆ ಬಡ್ಡಿ ದೊರೆಯುವುದಿಲ್ಲ.
- ಪಕ್ವವಾದ ಠೇವಣೆಯ ಒಂದು ಭಾಗವನ್ನು ಮಾತ್ರ ಗ್ರಾಹಕನು ನವೀಕರಿಸಬಹುದು. ಆಗ ಬ್ಯಾಂಕು ನವೀಕರಿಸಿದ ಠೇವಣೆ ಹಣಕಷ್ಟೆ ಬಡ್ಡಿಯನ್ನೇ ಯುತ್ತಾರೆ.
- ಆಕಸ್ಮಿಕವಾಗಿ, ಗ್ರಾಹಕನು ಠೇವಣೆ ಪಕ್ವವಾಗುವ ಪೂರ್ವದಲ್ಲಿಯೇ ಮೃತನಾದರೆ ವಾರಸುದಾರರು ತಮ್ಮ ಹಕ್ಕನ್ನು ಸ್ತಾಪಿಸಿ ಹಣವನ್ನು ಮರಳಿ ತೆಗೆದುಕೊಂಡು ಹೋಗುವವರೆಗೂ ವಾರಸುದಾರರಿಗೆ ಬ್ಯಾಂಕು ಬಡ್ಡಿಯನ್ನು ಕೊಡುತ್ತದೆ.ಅಸಲಿ ನೊಂದಿಗೆ ಅಲ್ಲಿಯವರೆಗೂ ಬಡ್ಡಿ ಹಣ ಬ್ಯಾಂಕಿನಲ್ಲಿ ಉಳಿಯುತ್ತದೆ.
- ಈ ಹಿಂದೆ, ಠೇವಣೆದಾರನು ಸತ್ತುಹೋದರೆ ಅವನ ಸಂಭಂದಿಕರು ಆ ಠೇವಣೆ ಹಣವನ್ನು ಪಡೆಯಲು ಮೃತನ ವಾರಸುದಾರರಿಗೆ ತಮ್ಮ ಹಕ್ಕನ್ನು ಸ್ತಾಪಿಸಿ ಹಣ ಪಡೆಯಲು ವಿಳಂಬವಾಗುತ್ತಿತು. ಈ ತೊಂದರೆಯನ್ನು ತಪ್ಪಿಸಲು, ಠೇವಣೆದಾರರು ಠೇವಣೆ ಇಡುವಾಗ ತನ್ನ ನಂತರ ಆ ಹಣವು ಯಾರಿಗೆ ಮುಟ್ಟಬೇಕೆಂದು ನಾಮ ನಿರ್ದೇಶ ಮಾಡುವ ಸೌಲಭ್ಯವನ್ನು ಸರ್ಕಾರವು ಒದಗಿಸಿದೆ. ಹೀಗೆ ನಾಮನಿರ್ದೇಶನಗೊಳ್ಳುವವರು ವ್ಯಕ್ತಿ ಇರಬೇಕೆ ವಿನಾ ಸಂಘ-ಸಂಸ್ತೆಗಳು ಇರಬಾರದು. ನಾಮ ನಿರ್ದೆಶಣಗೊಂಡ ವ್ಯಕ್ತಿ ಸುಲಭವಾಗಿ ಬ್ಯಾನ್ನ್ಕಿನಿಂದ ಹಣ ಪಡೆಯಬಹುದು.
- ಠೇವಣೆದಾರರು ಒಮ್ಮೆ ಮಾಡಿದ ನಾಮನಿರ್ದೇಶವನ್ನು ವಜಾಮಾದಳು ಅಥವಾ ಬದಲಾಯಿಸಲು ಅವಕಾಶವುಂಟು.
- ಅಪ್ರಾಪ್ತವಯಸ್ಕ ಕೂಡ ನಾಮಾನಿರ್ದೇಶಕ್ಕೆ ಅರ್ಹನಿರುವನು. ಆದರೆ ಈ ಅಪ್ರಾಪ್ತವಯಸ್ಕನು ವಯಸ್ಕನಾಗುವ ಪೂರ್ವದಲ್ಲಿಯೇ ಠೇವಣೆಯು ಪಕ್ವವಾದರೆ, ಆ ಹಣವನ್ನು ಅಪ್ರಾಪ್ತವಯಸ್ಕನ ಪಾಲಕನು-ಅಂದರೆ ತಂದೆ, ತಾಯಿ ಅಥವಾ ನ್ಯಾಲಯ ನಿಯಮಿಸುವ ವ್ಯಕ್ತಿಯು-ಅಪ್ರಾಪ್ತವಯಸ್ಕನ ಪರವಾಗಿ ಪಡೆಯಬಹುದು.
- ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ, ಠೇವಣೆದಾರನು ಮ್ರುತನಾಗುವವರೆಗೂ ನಾಮನಿರ್ದೇಶನಗೊಂಡ ವ್ಯಕ್ತಿಗೆ ಆ ಹಣದ ಮೇಲೆ ಯಾವ ಅಧಿಕಾರವು ಇರುವುದಿಲ್ಲ.
- ಒಂದು ಪಕ್ಷ ಠೇವಣೆ ರಸೀದಿ ಕಳೆದುಹೋದರೆ, ಠೇವಣೆದಾರನಿಂದ ನಷ್ಟಕ್ಕೆ ಭದ್ರತಾ ಪತ್ರವನ್ನು ಪಡೆದು ಎರಡನೇ ರಸೀದಿಯನ್ನು ಕೊಡುತ್ತಾರೆ. ಈಗ ಬ್ಯಾಂಕಿನವರು ಠೇವಣೆ ರಸೀದಿಗಳನ್ನು ಶೂಲ್ಕವಿಲ್ಲದೆ ತಮ್ಮಲ್ಲಿ ಭದ್ರವಾಗಿರಿಸಿಕೊಂಡು, ರಸೀದಿ ಇದ್ದ ಬಕ್ಕೆ ಒಂದು ಸಾದಾ ಪತ್ರವನ್ನು ಕೊಡುತ್ತಾರೆ. ಈ ಪತ್ರ ಕಳೆದರು ರಸೀದಿಯ ಆಧಾರದ ಮೇಲೆ ಪಕ್ವವಾದಾಗ ಹಣವು ದೊರೆಯುತ್ತದೆ.
- ಒಂದೊಂದು ಸಲ ಗ್ರಾಹಕರಿಗೆ ಠೇವಣೆಗಳ ಅವಧಿ ಮುಗಿಯುವ ಮುನ್ನವೇ ಠೇವಣೆಯ ಹಣವು ಬೇಕಾಗುತ್ತದೆ. ಆಗ ರಿಸರ್ವ್ ಯಾನಕ್ ನಿಯಮದಂತೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳು ಹಣವನ್ನು ಮರಳಿಸುತ್ತದೆ.
- ಗ್ರಾಹಕರಿಗೆ ತಮ್ಮ ಠೇವಣೆ ಹಣದ ಮೇಲೆ ಮುಂಗಡ ಬೇಕೆನಿಸಿದರೆ, ರಿಸರ್ವ್ ಬ್ಯಾಂಕ್ ನಿಯಮದಂತೆ ಸಾಲಗಳನ್ನಿತ್ತು ಠೇವಣೆ ಪಕ್ವವಾದಾಗ ಬ್ಯಾಂಕು ಸಾಲದ ಹಣವನ್ನು ಮುರಿದುಕೊಳುತ್ತವೆ. ಈ ರೀತಿ ಮುಂಗಡವಿತ್ತ ಹಣಕ್ಕೆ ಬ್ಯಾಂಕು ತಾನು ಕೊಡುವ ಬಡ್ಡಿಗಿಂತ ರಿಸರ್ವೇ ಬ್ಯಾಂಕ್ ವಿಧಿಸಿದಂತೆ ಸ್ವಲ್ಪ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತದೆ.
- ಸಾವಧಿ ಠೇವಣೆಯೊಂದಿಗೆ 'ಆವರ್ತ ಠೇವಣೆ' ಎಂಬ ಯೋಜನೆಯೂ ಇದೆ. ಈ ಠೇವಣೆಯಲ್ಲಿ ಪ್ರತಿ ತಿಂಗಳು ೧೦೦ ರಿಂದ ೧೦೦೦೦ ರೂಪಾಯಿಗಳಂತೆ ಒಂದರಿಂದ ಹತ್ತು ವರುಷಗಳ ಕಾಲ ಹಣವನ್ನು ಬ್ಯಾಂಕಿಗೆ ಕೊಡುತ್ತ ಹೋದರೆ, ಅವಧಿ ಮುಗಿದ ನಂತರ ಒಟ್ಟು ಹಣವನ್ನು ಬಡ್ಡಿ ಸಹಿತ ಕೊಡುತ್ತಾರೆ.
- ಗ್ರಾಹಕನೋಬ್ಬನ ಉಳಿತಾಯ ಖಾತೆ ಮತ್ತು ಸಾವಧಿ ಠೇವಣೆಖಾತೆ-ಇವುಗಳ ನದುವೆ ಸಂಪರ್ಕ ಕಲ್ಪಿಸಿ ಹೊಸ ರೀತಿಯ ಠೇವಣೆ ಯೊಜನೆಗಳನ್ನು ಹಲವು ವಾಣಿಜ್ಯ ಬ್ಯಾಂಕುಗಳನ್ನು ರೂಪಿಸಿದೆ. ಉಳಿತಾಯಖಾತೆಯಲ್ಲಿ ಚೆಕ್ ಪಾವತಿ ಮಾಡಲು ಹಣ ಸಾಲದಿದ್ಧಾಗ ಸಾವಧಿ ಠೇವಣೆಯಿಂದ, ತನ್ನಷ್ಟಕ್ಕೆ ತಾನೇ,ಅಗತ್ಯವಾದಷ್ಟು ಹಣ ವರ್ಗಾವಣೆಯಾಗುವ ಹಾಗೆ ಮಾಡಲಾಗುತ್ತದೆ. ಇಂಥ ಖಾತೆಗಳಿದ್ಧರೆ ಉಳಿತಾಯ ಖಾತೆಯಲ್ಲಿ ಶಿಲ್ಕು ಕಡಿಮೆಯಾಗಿದ್ಧು ಚೆಕ್ಕುಗಳು ಅನಾದರಿತವಾಗುವ ಸಂದರ್ಭಗಳನ್ನು ತಪ್ಪಿಸಬಹುದು ಹಾಗೆಯೇ, ಉಳಿತಾಯ ಖಾತೆಯಲ್ಲಿ ಶಿಲ್ಕು ಹೆಚ್ಚಿದ್ಧಾಗ, ಒಂದು ನಿಶ್ಚಿತ ಮಿತಿಗಿಂತ ಹೆಚ್ಚಾದ ಮೊತ್ತವನ್ನು, ಸಾವಧಿ ಠೇವಣೆಗೆ ತಂತಾನೆ ವರ್ಗ ವಾಗುವ (auto-sweep) ಹಾಗೆ ಕೂಡ ಮಾಡಬಹುದು. ಉಳಿತಾಯ ಠೇವಣೆಗಿಂತ ಸಾವಧಿ ಠೇವಣಯ ಬಡ್ಡಿದರ ಹೆಚ್ಚಾಗಿರುವುದರಿಂದ ಹೀಗೆ ಮಾಡಿ ಗ್ರಾಹಕನು ಹೆಚ್ಚಿನ ಬಡ್ಡಿ ಗಳಿಸಬಹುದು.
ಇಂಥ ಖಾತೆಗಳನ್ನು 'ಠೇವಣೆ ಸಂಪರ್ಕಿತ ಉಳಿತಾಯ ಖಾತೆ' ಎನ್ನುವರು. ಇದೆ ರೀತಿ ಚಾಲ್ತಿ ಖಾತೆಗಳಿಗೂ ಸಾವಧಿ ಠೇವಣೆಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಬ್ಯಾಂಕುಗಳಲ್ಲಿ ಉನ್ನತ ತಂತ್ರನ್ಯಾನದ ಬಲಿಕೆಯಿಂದ ಈಗ ಇದು ಸಾಧ್ಯವಾಗಿದೆ. ಮೊದಲು ಇಂಥ ಸೌಲಭ್ಯಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.