ಬೊಮನ್ ಇರಾನಿ

ಬಾಲಿವುಡ್ ನಟ

(೧, ಅಕ್ಟೋಬರ್, ೧೯೫೭,) ಒಬ್ಬ ಫೋಟೋಗ್ರಾಫರ್ ಮತ್ತು ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಪೋಷಕ-ನಟರಾಗಿ ತಮ್ಮ ಅನುಪಮ ಕೊಡುಗೆಯನ್ನು ನೀಡುತ್ತಿದ್ದಾರ‍ೆ. ಬೊಂಬಾಯಿನಲ್ಲಿ ಜನಿಸಿದ ಬೊಮನ್ ಇರಾನಿಯವರು, ಮೊದಲು ಪಾದಾರ್ಪಣೆಮಾಡಿದ್ದು ರಂಗಭೂಮಿಯಲ್ಲಿ. ಸನ್ ೨೦೦೦ ದಲ್ಲಿ ತಮ್ಮ ೪೪ ನೆ ವಯಸ್ಸಿನಲ್ಲಿ ಚಲನಚಿತ್ರರಂಗಕ್ಕೆ ’ಜೋಶ್’ ಎಂಬ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು. ಗಾಯಕರಾಗುವ ಕನಸು ಅವರಿಗೆ ಬಹಳ ವರ್ಷಗಳಿಂದ ಇತ್ತು. ಅವರ ಹಾಡುಗಾರಿಕೆಯಲ್ಲಿ ಪ್ರಾವೀಣ್ಯತೆಯನ್ನು ಅರಿಯಲು, ಬಹಳ ವರ್ಷಗಳೇ ಬೇಕಾಯಿತು. ಒಂದು ಪ್ರಶಸ್ತಿಪ್ರದಾನ ಸಮಾರಂಭವೊಂದರಲ್ಲಿ 'ಬೊಮನ್ ಇರಾನಿಯವರು', ೩ ಈಡಿಯೆಟ್ಸ್ ಚಿತ್ರದ ಗೀತೆ,'ಗೀವ್ ಮಿ ಸಮ್ ಸನ್ ಶೈನ್' ಎಂಬಹಾಡನ್ನು ಹಾಡಿದ್ದರು. ಅದಕ್ಕಾಗಿ ರಾಗಸಂಯೋಜಕ ರಾಜು ಸಿಂಗ್ ರಿಂದ ಗಿಟಾರ್ ನುಡಿಸಲು ಮತ್ತು ಸ್ವರ ಬದಲಾವಣೆಯ ತರಬೇತಿಯನ್ನೂ ಪಡೆದಿದ್ದರು.

ಬೊಮನ್ ಇರಾನಿ

'ಮುನ್ನಾಭಾಯಿ ಎಮ್.ಬಿ.ಬಿ.ಎಸ್' ಚಿತ್ರದ ನಟನೆ, ಇರಾನಿಯವರ ಪ್ರತಿಭೆಗೆ ಒಂದು ನಿದರ್ಶನ

ಬದಲಾಯಿಸಿ

ಸನ್, ೨೦೦೩ ರಲ್ಲಿ 'ಮುನ್ನಭಾಯಿ ಎಮ್.ಬಿ.ಬಿ.ಎಸ್' ಎಂಬ ಚಿತ್ರದಲ್ಲಿ ಅವರ ನಟನೆಗೆ ಮಹತ್ವ ದೊರೆಯಿತು. ಹಾಗೆಯೇ ಲಗೆ ರಹೊ ಮುನ್ನಾ ಭಾಯಿ ಚಿತ್ರದಲ್ಲಿ ಅವರಿಗೆ ಪ್ರಶಸ್ತಿಗೆ ಹೆಸರನ್ನು ಸೂಚಿಸಲಾಯಿತು. '(IIFA award nominations') ಅಮೀರ್ ಖಾನ್ ನಿರ್ಮಿಸಿದ, '೩ ಈಡಿಯೆಟ್ಸ್' ಚಿತ್ರದಲ್ಲಿ 'ಫಿಲ್ಮ್ ಫೇರ್ ಅವಾರ್ಡ್', ಹಾಗೂ 'ಸ್ಟಾರ್ ಸ್ಕ್ರೀನ್ ಅವಾರ್ಡ್' ಬಂತು.