ಬೊಂಬಾಯಿ ಮಿಠಾಯಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮುಂಬಯಿ ಮಿಠಾಯಿ ಮುಂಬಯಿ ಮಿಠಾಯಿ ತಿಂಡಿ ಅಂಗಡಿಗಳಲ್ಲಿ ಸಿಗುವುದಿಲ್ಲ. ಸಂತೆಯಲ್ಲಿಟ್ಟು ಅದನ್ನು ಮಾರುವುದಿಲ್ಲ. ಪಾಲಿಥಿನ್ ಚೀಲದೊಳಗೆ ಮುದುಡಿ ಇರಿಸಿದ ಹಗುರವಾದ ಹತ್ತಿಯಂತಹ ಗುಲಾಬಿ ಬಣ್ಣದ ಈ ಸಿಹಿ ತಿಂಡಿ ಬಾಯೊಳಗಿಟ್ಟರೆ ಮರು ಕ್ಷಣವೇ ಕರಗಿ ನೀರಾಗುತ್ತದೆ. ಮುಂಬಯಿ ಮಿಠಾಯಿಗೆ ಮಕ್ಕಳಿಗಷ್ಟೇ ಅಲ್ಲ ಹೆಂಗಸರು, ಯುವಕರು, ವೃದ್ಧರೂ ಅದಕ್ಕೆ ಮುಗಿ ಬಿಳುತ್ತಾರೆ. ಆದರೆ ಇದು ಮಕ್ಕಳ ಸಿಹಿ. ಹಳ್ಳಿಗಳಲ್ಲಿ ಮುಂಬಯಿ ಮಿಠಾಯಿ ಮಾಡುವವರು ಒಂದೆಡೆ ನಿಲ್ಲದೆ ಊರೂರು ಅಲೆಯುತ್ತಿರುತ್ತಾರೆ. ಕೆಲವೊಮ್ಮೆ ಮಳೆಗಾಲದಲ್ಲಿ ಅಥವಾ ಮಳೆಗಾಲ ಮುಗಿದ ನಂತರದ ದಿನಗಳಲ್ಲಿ ಅವರು ಹಳ್ಳಿ, ಸಣ್ಣ ಪುಟ್ಟ ಪಟ್ಟಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದನ್ನು ತಯಾರಿಸಲು ಸಣ್ಣ ಪೆಟ್ಟಿಗೆ ಯಂತಹ ಯಂತ್ರ ಬರುತ್ತದೆ. ಅದಕ್ಕೆ ಸೀಮೆಎಣ್ಣೆ ಸ್ಟೋವ್ ಜೋಡಿಸಿರುತ್ತಾರೆ. ಯಂತ್ರದ ಮೇಲು ಭಾಗದಲ್ಲಿ ಬೀಸುವ ಕಲ್ಲಿಗೆ ಇರುವಂತಹ ರಂಧ್ರವಿದೆ. ಸಕ್ಕರೆಗೆ ಗುಲಾಬಿ ಬಣ್ಣ ಬೆರೆಸಿ ಒಂದು ಹಿಡಿಯಷ್ಟನ್ನು ರಂಧ್ರದಲ್ಲಿ ಹಾಕಿ ಯಂತ್ರದ ಹಿಡಿಕೆಯನ್ನು ತಿರುಗಿಸಿದಾಗ ಯಂತ್ರವು ಬಿಸಿಯಾಗುತ್ತ ಸಕ್ಕರೆ ಕರಗಿ ಹಗುರವಾದ ಹತ್ತಿಯಂತಾಗಿ ಹೊರಬರುತ್ತದೆ.ಸುಮಾರು ಒಂದೆರಡು ಅಡಿ ಉದ್ದನೆಯ ಹತ್ತಿಯ ಹಾಳೆಯೇ ಮುಂಬಯಿ ಮಿಠಾಯಿ. ಒಂದು ಬೊಗಸೆಯಷ್ಟು ಮಿಠಾಯಿ ತಿಂದರೂ ಬಾಯಿಗೆ ಹೋದಾಗ ಕರಗಿರುತ್ತದೆ.ಗಾತ್ರ ನೋಡಿ ಅದರಲ್ಲಿನ ದ್ರವ್ಯವನ್ನು ನಿರ್ಧರಿಸಲಾಗುವುದಿಲ್ಲ. ಮುಂಬಯಿ ಮಿಠಾಯಿಯನ್ನು ಪಾಲಿಥಿನ್ ಚೀಲದಲ್ಲಿ ತುಂಬಿಸಿಟ್ಟು ಮಾರಲು ಒಯ್ಯುತ್ತಾರೆ. ಹತ್ತು ರೂಪಾಯಿಗೆ ಮೂರು ಮಿಠಾಯಿ. ಕಂಪೆನಿ ಬ್ರಾಂಡಿಲ್ಲ. ಬೆಲೆಯ ನಮೂದಿಲ್ಲ. ಮಕ್ಕಳೇ ಇದರ ಗ್ರಾಹಕರು. ಮಿಠಾಯಿ ಮಾಡುವ ಮಂದಿ ಹುಬ್ಬಳ್ಳಿ, ಲಕ್ಷ್ಮೇಶ್ವರ ಮುಂತಾದ ಉತ್ತರ ಕರ್ನಾಟಕದ ಕಡೆಯವರು. ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಈ ಸಿಹಿ ತಯಾರಾಗುತ್ತಿದ್ದುದು ಮುಂಬಯಿಯಲ್ಲಿ ಮಾತ್ರ ಮತ್ತು ಅದನ್ನು ತಯಾರು ಮಾಡುವ ಯಂತ್ರ ಹುಟ್ಟಿಕೊಂಡಿದ್ದು ಮುಂಬೈನಲ್ಲಿ ಇದರಿಂದಾಗಿ "ಮುಂಬಯಿ ಮಿಠಾಯಿ"ಎಂಬ ಹೆಸರು ಬಂತು.
ಮೂಲ | |
---|---|
ಪರ್ಯಾಯ ಹೆಸರು(ಗಳು) | Candy floss, fairy floss |
ಮೂಲ ಸ್ಥಳ | ಯುರೋಪ್ ನಂತರ ಯು.ಎಸ್.ಎ |
ನಿರ್ಮಾತೃ | William Morrison and John C. Wharton |
ವಿವರಗಳು | |
ನಮೂನೆ | ಸಿಹಿತಿಂಡಿ |
ಮುಖ್ಯ ಘಟಕಾಂಶ(ಗಳು) | ಸಕ್ಕರೆ, ಆಹಾರ ಬಣ್ಣ |
ಚಿತ್ರಗಳು
ಬದಲಾಯಿಸಿ-
ಮುಂಬಯಿ ಮಿಠಾಯಿ ೨)
-
Cotton candy making
-
Cotton candy making dish
-
Cotton candy vendor
-
Girl eating cotton candy
-
Cotton candy shop
-
Cotton candy shop in India
-
Spinning head of the cotton candy maker.
-
Cotton Candy at Prayagraj Kumbh Mela
-
Cotton Candy Machine