ಪ್ರ

ಬೈಲಂಗಡಿಯು ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ೧೬೦೦ರಲ್ಲಿ ಆಳ್ವಿಕೆಯಲ್ಲಿದ್ದ ಮೂಲ ಅರಸರ ರಾಜಧಾನಿಯಾಗಿತ್ತು[].ಇಲ್ಲಿ ಒಂದು ಸಣ್ಣ ಬಸದಿ ಇದೆ. ಬೆಳ್ತಂಗಡಿಯಿಂದ ೨೨ ಕಿ.ಮೀ ದೂರದಲ್ಲಿರುವ ಇದು ಸುತ್ತ ಪಶ್ಚಿಮ ಘಟ್ಟಗಳ ಸಣ್ಣ ಪುಟ್ಟ ಬೆಟ್ಟಗಳಿಂದ ಆವೃತ್ತವಾಗಿದ್ದು ಸುಂದರವಾಗಿದೆ.

ಇತಿಹಾಸ

ಬದಲಾಯಿಸಿ

ಇದು ಕ್ರಿ.ಶ. ೧೬-೧೭ನೆಯ ಶತಮಾನದಲ್ಲಿ ಮೂಲ ಅರಸರ ರಾಜಧಾನಿಯಾಗಿತ್ತು. ಮೂಲ ಅರಸರು ಹಲವು ಮಾಗಣೆಗಳ ಒಡೆಯರಾಗಿದ್ದರು.ಕಥೆಯ ಪ್ರಕಾರ ಮೂಲ ಅರಸಿ ಸೋಮಲಾ ದೇವಿಗೂ ಅವಳ ಗಂಡ ಬಂಗಾಡಿಯ ಅರಸ ಬಂಗ ಅರಸನಿಗೂ ಅನಂತ ವೃತದ ವಿಷಯದಲ್ಲಿ ಜಗಳವಾಗಿ ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧದಲ್ಲಿ ಬಂಗ ಅರಸ ಅರಸ ಕೊಲ್ಲಲ್ಪಟ್ಟ (ಕ್ರಿ. ಶ. ೧೬೩೦). ಇದರಿಂದ ನೊಂದ ಸೋಮಲಾ ದೇವಿಯು ಪಶ್ಚಾತ್ತಾಪಪಟ್ಟು ಆತ್ಮಹತ್ಯೆ ಮಾಡಿಕೊಂಡಳು. ಇವರಿಬ್ಬರ ಗೋರಿಯು ಈಗಲೂ ಬಸದಿಯಿಂದ ಮೂರು ಕಿ.ಮೀ.ದೂರದಲ್ಲಿರುವ ಪಾಳು ಅರಮನೆಯ ಬಯಲಿನಲ್ಲಿದೆ.

ಜನಜೀವನ

ಬದಲಾಯಿಸಿ

ಮೂಲ ಅರಸರ ಕಾಲದಲ್ಲಿ ಈ ಪ್ರದೇಶವು ಸಮೃದ್ಧವಾಗಿತ್ತು. ಇಲ್ಲಿ ಹಿತ್ತಾಳೆಯ ಕರಕುಶಲ ವಸ್ತುಗಳ ತಯಾರಿಕೆಯಾಗುತ್ತಿತ್ತು. ಹಲವು ಮಾಗಣೆಗಳ ಈ ಸಂಸ್ಥಾನ ಕೃಷಿಯಲ್ಲಿಯೂ ಮುಂದಿತ್ತು.

ಉಲ್ಲೇಖಗಳು

ಬದಲಾಯಿಸಿ
  1. "ಕರ್ನಾಟಕ ಗೆಝೆಟಿಯರ್" (PDF). Retrieved 27 ಜುಲೈ 2014.
"https://kn.wikipedia.org/w/index.php?title=ಬೈಲಂಗಡಿ&oldid=1177844" ಇಂದ ಪಡೆಯಲ್ಪಟ್ಟಿದೆ