ಬೇಬಿ ಬಾಟಮ್ ಬಟರ್ ಎಂಬುದು ಇಂಗ್ಲಿಷ್ ಸೂಪ‌ರ್‌ಮಾರ್ಕೆಟ್ ಸರಪಳಿ ವೈಟ್ರೋಸ್‌ನಿಂದ ಮಾರಾಟವಾಗುವ ಮುಲಾಮು. ಇದನ್ನು ಶಿಶುಗಳ ನಿತಂಬದ ಮೇಲಿನ ಉರಿಯನ್ನು ತಡೆಯಲು ಬಳಸಲಾಗುತ್ತದೆ. ಇದು ಮಹಿಳೆಯರ ಜನಪ್ರಿಯ ಮುಖದ ಮುಲಾಮು ಕೂಡಾ ಹೌದು.

ಇತಿಹಾಸ

ಬದಲಾಯಿಸಿ

ಈಗ ಇದರಲ್ಲಿರುವ ನೈಸರ್ಗಿಕ ಪದಾರ್ಥಗಳಲ್ಲಿ ಆಲಿವ್ ಎಣ್ಣೆ, ಕ್ಯಾಮೊಮೈಲ್ ಎಣ್ಣೆ ಮತ್ತು ವೆನಿಲ್ಲಾ ಸೇರಿವೆ.[] ಸಂರಕ್ಷಕ ಪ್ಯಾರಾಬೆನ್ಗಳು ಮತ್ತು ಇತರ ಪೆಟ್ರೋಕೆಮಿಕಲ್ಗಳನ್ನು ತೆಗೆದುಹಾಕಲು ೨೦೦೮ ರಲ್ಲಿ ಇದನ್ನು ಮರುರೂಪಿಸಲಾಯಿತು. ನಂತರ ತಾಯಂದಿರು ದುಬಾರಿ ಫೇಸ್ ಕ್ರೀಮ್‌ನ ಬದಲಿಗೆ ಇದನ್ನೇ ಬಳಸಲು ಪ್ರಾರಂಭಿಸಿದರು.[] ಆಗ ಮಾರಾಟವು ಗಮನಾರ್ಹವಾಗಿ ಹೆಚ್ಚಾಯಿತು.[] ಅನೇಕ ಮಹಿಳೆಯರು ಅದರ ಮೃದುಗೊಳಿಸುವಿಕೆ ಮತ್ತು ದೃಢತೆಯ ಪರಿಣಾಮವನ್ನು ಶ್ಲಾಘಿಸಿದರು, ಈ ಉತ್ಪನ್ನವು ಅನೇಕ ಮಳಿಗೆಗಳಲ್ಲಿ ಮಾರಾಟವಾಯಿತು.[] [] ೨೦೦೮ ರಲ್ಲಿ, ಈ ಸಂಚಲನದ ನಂತರ ಕೇವಲ ನಾಲ್ಕು ತಿಂಗಳಲ್ಲಿ ಈ ಉತ್ಪನ್ನವು ಎಂಟು ವರ್ಷಗಳ ಮೌಲ್ಯದ ದಾಸ್ತಾನುಗಳಾನ್ನೂ ಮಾರಾಟ ಮಾಡಿತು. ೨೦೧೧ ರಲ್ಲಿ, ಇದು ವೈಟ್ರೋಸ್‌ನ ಅತ್ಯುತ್ತಮ ಮಾರಾಟವಾದ ಚರ್ಮದ ಆರೈಕೆ ಉತ್ಪನ್ನವೆಂದು ಘೋಷಿಸಲಾಯಿತು.[] ಇದನ್ನು ಹ್ಯಾಂಪ್ಶೈರ್‌ನಲ್ಲಿ ಉತ್ಪಾದಿಸಲಾಗುತ್ತದೆ.

ನ್ಯೂಜಿಲೆಂಡ್‌ನಲ್ಲಿ ವಾಸಿಸುವ ಜನರು ಅದನ್ನು ತಮಗೆ ರವಾನಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದರು.[] ೨೦೧೪ ರಲ್ಲಿ, ಐಷಾರಾಮಿ ಸೂಪರ್ಮಾರ್ಕೆಟ್ ಸರಪಳಿ, ನೋಶ್ ಅದನ್ನು ಸಂಗ್ರಹಿಸಲು ಪ್ರಾರಂಭಿಸಿತು. ೨೦೧೬ ರಲ್ಲಿ, ವೈಟ್ರೋಸ್ ಈ ಉತ್ಪನ್ನವನ್ನು ಚೀನಾಕ್ಕೆ ರಫ್ತು ಮಾಡಲು ಪ್ರಾರಂಭಿಸಿತು.

ಉಲ್ಲೇಖಗಳು

ಬದಲಾಯಿಸಿ
  1. Roya Nikkhah (26 July 2008), "The ugly truth about skin creams, by beauty boss Liz Earle", Daily Telegraph, archived from the original on 27 July 2008
  2. Charlotte Ross (2 September 2008), "Beauty: Time to face facts", The Scotsman, archived from the original on 10 September 2008
  3. "Supermarket stampede as women slap £2.49 baby 'bottom butter' on their faces", Evening Standard, 19 April 2008
  4. "The 2.49 cream wowing women", Marie Claire, 23 April 2008
  5. Carolyn Robertson (18 April 2016), "Waitrose begins exporting to China via e-commerce platform", The Grocer
  6. Max Benato (18 January 2011), "Let's face it, Baby Bottom Butter is better on your cheeks", The Guardian
  7. Morgan Tait (28 March 2014), "Top and bottom cult cream arrives in NZ", NZ Herald