ಬೇಝೋನ್ಜಿ ದಾದಾಭಾಯ್ ಮೆಹ್ತಾ

ಚಿತ್ರ:Bdmehta.jpg
'ಡಾ. ಬೇಝೋನ್ಜಿ ದಾದಾಭಾಯ್ ಮೆಹ್ತಾ'

'Bezonji Dadabhai Mehta ' ಬದಲಾಯಿಸಿ

'ಜಮ್ ಶೆಟ್ ಜಿ ನುಝರ್ವಾನ್ ಜಿ ಟಾಟ,' ರವರು ನಮ್ಮದೇಶದ ಔದ್ಯೋಗಿಕ ನಕ್ಷೆಯನ್ನು ಹೊಸದಾಗಿ ರೂಪಿಸಿ, ಒಂದು ಕಾಲದಲ್ಲಿ ಚಿಕ್ಕ ಗೃಹೋದ್ಯೋಗವಾಗಿದ್ದ ಹತ್ತಿ ಬಟ್ಟೆಯ ತಯಾರಿಕಾ ಘಟ್ಟಗಳನ್ನು 'ಯಂತ್ರೀಕರಣ' ಮಾಡಿ ನಮ್ಮ ದೇಶದ ಸಹಸ್ರಾರು ಕುಶಲ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನಿರ್ಮಿಸಿ ಒಂದು ವಿಕ್ರಮವನ್ನು ಸ್ಥಾಪಿಸಿದರು. ಭಾರತಕ್ಕೆ ಬೇಕಾಗಿದ್ದ ಮೂಲ ಸಂಪನ್ಮೂಲಗಳನ್ನು ಮೊಟ್ಟಮೊದಲು ಒದಗಿಸಿ, 'ಭಾರತದ ಔದ್ಯೋಗೀಕರಣ' ದ ಕಡೆಗೆ ಓಡಲು ಪ್ರೋತ್ಸಾಹಿಸಿದ 'ಶಿಲ್ಪಿ,' ಯೆಂಬ ಹೆಸರಿಗೆ ಅವರು ಅನ್ವರ್ಥನಾಮವಾದರು. ಸ್ಟೀಲ್, ಸಿಮೆಂಟ್, ಕಾಗದ, ಜಲ-ವಿದ್ಯುತ್-ಛಕ್ತಿ, ಮೋಟಾರ್ ಉದ್ಯಮ, ಉನ್ನತ ಶಿಕ್ಷಣ, ಕಂಪ್ಯೂಟರ್ ಉದ್ಯಮ ; ಒಂದೇ ಎರಡೇ, ಅವರ ಮುಡಿಯಲ್ಲಿ ಮೆರೆಯುತ್ತಿದ್ದ ಮಿಂಚಿನ ಗರಿಗಳು.

ಜೆ. ಎನ್. ಟಾಟರವರಿಗೆ, 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ಒಬ್ಬ ವಿಶೇಷವ್ಯಕ್ತಿಯಾಗಿ ಕಂಡರು ಬದಲಾಯಿಸಿ

ಜೆ. ಎನ್ ರವರು ಅರಸಿ ಬೆಳಕಿಗೆ ತಂದ ಪ್ರತಿಭೆಗಳೆಷ್ಟೋ ! ಅಂತಹವರಲ್ಲಿ ರವರೂ 'ಬೇಝೋನ್ಜಿ ದಾದಾಭಾಯ್ ಮೆಹ್ತಾ', ಪ್ರಥಮರು. ಮಿ. ಬೇಝೋನ್ಜಿ ದಾದಾಭಾಯ್ ಮೆಹ್ತಾ, ಜೆ. ಎನ್. ಟಾಟರವರಿಗೆ ಮೊದಲು ಪರಿಚಯವಿರಲಿಲ್ಲ. ಆದರೆ ಒಮ್ಮೆ ಅವರ ಸಂಪರ್ಕಕ್ಕೆ ಬಂದಮೇಲೆ, ಅವರ ಸಂಬಂದ ನಿರಂತರವಾಗಿ ಸಾಗಿತ್ತು. 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು ಜೆ. ಎನ್. ಟಾಟ ರವರ ಬಲಗೈನಂತೆ ಕೆಲಸಮಾಡುತ್ತಿದ್ದರು. 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು ಆಗಿನ 'ಗ್ರೇಟ್ ಇಂಡಿಯನ್ ಪೆನಿನ್ಸುಲ,' ರೈಲ್ವೆಯಲ್ಲಿ ಸ್ವಲ್ಪ ಸಮಯ, ' ಸೂಪರಿಂಟೆಂಡೆಂಟ್,' ಅಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ "ಎಂಪ್ರೆಸ್ ಮಿಲ್ಸ್ " ಗೆ ಸೇರಿಕೊಂಡರು.

ಜೆ. ಎನ್. ಟಾಟಾ ರವರು ನಿರಂತರವಾಗಿ, ಹೊಸ ತಂತ್ರಜ್ಞಾನಗಳು ಹಾಗೂ ಪ್ರತಿಭೆಗಳ ಹುಡುಕಾಟದಲ್ಲಿದ್ದರು ಬದಲಾಯಿಸಿ

ಜೆ. ಎನ್. ಟಾಟಾರವರು ನಾಗಪುರದಲ್ಲಿನ ಅವರ, 'ಎಂಪ್ರೆಸ್ ಮಿಲ್ಸ್,' ನ ಮೇಲ್ವಿಚಾರಣೆ ಮಾಡುತ್ತಿದ್ದಾಗ, ಅವರಕಣ್ಣಿಗೆ ಬಿದ್ದ ಒಬ್ಬ ಅತ್ಯಂತ ಪರಿಶ್ರಮೀ, ನಿಷ್ಠ, ಯಾವಾಗಲೂ ಕೆಲಸದಲ್ಲಿ ನಿರತನಾಡ ವಿಶ್ವಸನೀಯ , ಸಮರ್ಥ, ತನ್ನ ಕೆಲಸವನ್ನು ಪ್ರೀತಿಸುವ ವ್ಯಕ್ತಿ, ಅವರ ಸಂಪರ್ಕಕ್ಕೆ ಬಂದರು. ಜೆ. ಎನ್. ಹುಡುಕುತ್ತಿದ್ದದ್ದೂ, ಸಾಮಾನ್ಯ ಜ್ಞಾನಹೊಂದಿದ ಪ್ರಾಮಾಣಿಕ, ಸೂಕ್ಷ್ಮಗ್ರಾಹಿಯಾದ 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರಂತಹ ವ್ಯಕ್ತಿಯನ್ನೇ. ತಮಗೆ ಬೇಕಾದಹಾಗೆ ಪ್ರಶಿಕ್ಷಣ ನೀಡಿ, ಅವರಿಗೆ ಕೆಲಸದ ಜವಾಬ್ದಾರಿಯನ್ನು ಕೊಡುವ ಆಲೋಚನೆ, ಟಾಟಾರವರದಾಗಿತ್ತು. 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರಿಗೆ, ಹತ್ತಿ ಉದ್ಯಮದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ, ಅಲ್ಲಿನ ಗಿರಣಿಯೊಂದರಲ್ಲಿ ಕೆಲಸಮಾಡಿದ ಅನುಭವವಿತ್ತು. ಒಟ್ಟಿನಲ್ಲಿ ಟಾಟರವರಿಗೆ ಅವರ ಗುಣಗಳು ತುಂಬಾ ಹಿಡಿಸಿದವು.

'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರು, ನಾಗಪುರದ ಎಂಪ್ರೆಸ್ ಮಿಲ್ ನ 'ಮ್ಯಾನೇಜರ್,' ಆದರು ಬದಲಾಯಿಸಿ

೧೮೭೬ ರಲ್ಲಿ , ಜೆ. ಎನ್. ಟಾಟ ರವರು, 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರನ್ನು ತಮ್ಮ ಸಂಸ್ಥೆಗೆ ತೆಗೆದುಕೊಂಡರು. ೨ ವರ್ಷಗಳ ಟ್ರೇನಿಂಗ್ ಕೊಟ್ಟನಂತರ, 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು, ಎಂಪ್ರೆಸ್ ಮಿಲ್ಸ್ ನ 'ಮ್ಯಾನೇಜರ್,' ಆಗಿ ನೇಮಿಸಲ್ಪಟ್ಟರು. ಜೆ. ಎನ್. ಟಾಟ ರವರ ಮರಣದ ನಂತರವೂ ಅವರ 'ಎಂಪ್ರೆಸ್ ಹತ್ತಿ ಗಿರಣಿ ,' ಚೆನ್ನಾಗಿ ನಡೆಯುತ್ತಿತ್ತು. ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ, ಅಗಾಧ ಪ್ರಗತಿಯಿಂದಾಗಿ ಹೆಚ್ಚಿನ ಲಾಭವನ್ನು ಹಾಸಿಲ್ ಮಾಡಿತು. ಇಂತಹ ಕಾರ್ಯ ವೈಖರಿಗೆ, ಇಂಬುಕೊಟ್ಟು, ದಕ್ಷತೆಯಿಂದ ಕಾರ್ಯನಿರ್ವಹಿಸಿದ 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರಂತಹ ಪರಿಶ್ರಮ, ಶ್ರದ್ಧೆ, ಮತ್ತು ಪ್ರಾಮಾಣಿಕತೆಯೇ ಕಾರಣವಾಗಿತ್ತು. ಟಾಟ ಸಂಸ್ಥೆ ಮುಂದೆ ತಮ್ಮ ಹೊಸ ಮಿಲ್ಸ್ ಗಳಾದ, ' ಸ್ವದೇಶಿ ಮಿಲ್ಸ್,' 'ಅಡ್ವಾನ್ಸ್ ಮಿಲ್ಸ್,' ತೆರೆಯುವಾಗಲೂ 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು ಟಾಟ ರವರ ನೆರಳಿನಂತೆ ಇದ್ದು ಸಹಕರಿಸಿದರು.

ಹತ್ತಿ ಗಿರಣಿಯ ಮ್ಯಾನೇಜರ್ ಗೆ ಸಿಕ್ಕ ,' ಸರ್ ಪ್ರಶಸ್ತಿ' ಬದಲಾಯಿಸಿ

'ಜೆ. ಎನ್. ಟಾಟ,' ರವರು ನಿಧನರಾದಾಗ, 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು, 'ನಾಗ್ಪುರ್ ' ನಲ್ಲಿದ್ದರು. ' ಸರ್ ದೊರಾಬ್ ಟಾಟ,' ರವರು 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರಿಗೆ ಡೈರೆಕ್ಟರ್ ಹುದ್ದೆಯನ್ನು ಕೊಡಲು ಮುಂದೆಬಂದಾಗಲೂ 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರವರು, ವಿನಯದಿಂದ ದೂರಸರಿದರು. ೧೯೧೧ ರಲ್ಲಿ 'ಬೇಝೋನ್ಜಿ ದಾದಾಭಾಯ್ ಮೆಹ್ತಾ' ರಿಗೆ, ' ಸರ್ ಪದವಿ,' ದೊರೆಯಿತು. ನಾಗಪುರ ವಾಸಿಗಳಿಗೆಲ್ಲಾ , ಅದು ಮನೆಮಾತಾಗಿತ್ತು. ಅವರೆಲ್ಲಾ ಹೆಮ್ಮೆಯಿಂದ ಬೀಗಿದ್ದರು. ಆಗಿನ ಕಾಲದಲ್ಲಿ ಅದು ಅಂತಹ ಭಾರಿ ಸುದ್ದಿಯಾಗಿತ್ತು.