ಬೆಳಗೆರೆ ಜಾನಕಮ್ಮ
ಬೆಳಗೆರೆ ಜಾನಕಮ್ಮನವರು ೧೯೧೨ ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಜನಿಸಿದರು.ಇವರ ತಾಯಿ ಅನ್ನಪೂರ್ಣಮ್ಮ;ತಂದೆ ಚಂದ್ರಶೇಖರ ಶಾಸ್ತ್ರಿ. ೬ನೆಯ ವಯಸ್ಸಿಗೆ ಶಾಲೆ ಸೇರಿದ ಇವರು ೨ನೆಯ ತರಗತಿಯನ್ನು ಪೂರೈಸುತ್ತಿದ್ದ ಹಾಗೆ ಅಜ್ಜಿಯ ಆಕ್ಷೇಪಣೆಯಿಂದಾಗಿ ವಿದ್ಯಾಭ್ಯಾಸವನ್ನು ಅಲ್ಲಿಗೆ ಮುಕ್ತಾಯಗೊಳಿಸಬೇಕಾಯಿತು.ಆ ವಯಸ್ಸಿನಲ್ಲೆ ಜಾನಕಮ್ಮನವರು ಮನೆಯಲ್ಲಿಯೆ ಇದ್ದುಕೊಂಡೆ ದೇವರ ನಾಮಗಳನ್ನು, ತೊಟ್ಟಿಲ ಹಾಡುಗಳನ್ನು,, ಬೀಗರ ಪದಗಳನ್ನು ರಚಿಸುತ್ತ, ಹಾರ್ಮೋನಿಯಂ ನುಡಿಸುತ್ತ ಹಾಡುತ್ತಿದ್ದರು. ತಮ್ಮ ತಂದೆಯ ಉತ್ತೇಜನ ಹಾಗು ಸೋದರಿ ಪಾರ್ವತಿಯ ಒತ್ತಾಸೆಯಿಂದಾಗಿ ಜಾನಕಮ್ಮನವರು ಕಾವ್ಯರಚನೆಯನ್ನು ಮುಂದುವರಿಸಿದರು.೧೯೪೮ರಲ್ಲಿ ತಮ್ಮ ಮೂರನೆಯ ಮಗುವಿನ ಪ್ರಸವದ ಸಮಯದಲ್ಲಿ ಮಗುವಿನೊಂದಿಗೇ ನಿಧನರಾದರು.
ಜಾನಕಮ್ಮನವರು ಜನಕಜೆ ಎಂಬ ಕಾವ್ಯನಾಮದಲ್ಲಿ ಸುಮಾರು ೯೦ ಪ್ರಕಟಿತ ಹಾಗು ಅಪ್ರಕಟಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಕವನಗಳು ಜೀವನ,ಜಯಕರ್ನಾಟಕ ಹಾಗು ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಪ್ರಥಮ ಕವನಸಂಕಲನ:ಕಲ್ಯಾಣ