ಬೆಟ್ಟದ ಭೈರವೇಶ್ವರ

ಬೆಟ್ಟದ ಭೈರವೇಶ್ವರ ದೇವಾಲಯ ಹಾಸನ ಜಿಲ್ಲೆಯಲ್ಲಿ ಇದೆ.[೧] ಸಕಲೇಶಪುರದಿಂದ ಸುಮಾರು ೩೫ಕಿಲೋ. ಮೀಟರ್‌ ದೂರದಲ್ಲಿ ಪಾಂಡವರ ಗುಡ್ಡ ಎಂಬ ಬೆಟ್ಟದ ಮೇಲೆ ಇದೆ. ಈ ದೇವಸ್ಥಾನವನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಈ ದೇವಾಲಯವು ಸುಮಾರು ೭೦೦ ವರ್ಷಗಳಷ್ಟು ಪುರಾತನವಾಗಿದ್ದು ಸಂಪೂರ್ಣವಾಗಿ ಕರಿಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಪಾಂಡವರು ನಿರ್ಮಿಸಿದ ಈ ಮೂಲ ದೇವಾಲಯವನ್ನು ಸುಮಾರು ೭೦೦ ವರ್ಷಗಳ ಹಿಂದೆ ಹೊಯ್ಸಳರು ಮರುನಿರ್ಮಾಣ ಮಾಡಿದ್ದಾರೆ. ಸ್ಥಳಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದೇಶದಾದ್ಯಂತ ಸಂಚರಿಸುತ್ತಾ ಹಲವು ಶಿವದೇವಾಲಯಗಳನ್ನು ನಿರ್ಮಿಸಿದ್ದಾರೆ. ಆ ದೇವಾಲಯಗಳ ಸಾಲಿನಲ್ಲಿ ಈ ಬೆಟ್ಟದ ಭೈರವೇಶ್ವರ ದೇವಾಲಯವು ಮುಂಚೂಣಿಯಲ್ಲಿ ಬರುತ್ತದೆ.

ಹಿನ್ನಲೆ ಬದಲಾಯಿಸಿ

ಕರ್ನಾಟಕದ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿದೆ. ಸಕಲೇಶಪುರದಲ್ಲಿ ಬೆಟ್ಟ ಗುಡ್ಡಗಳು ಘಟ್ಟಗಳು ಹಾಗೂ ಅನೇಕ ಪ್ರವಾಸಿ ತಾಣಗಳು ಇವೆ. ಸಕಲೇಶಪುರದ ಪುರಾಣ ಕಾಲಕ್ಕೆ ಸಂಬಂಧ ಹೊಂದಿರುವ ಬೆಟ್ಟಗಳ ಮೇಲೆ ನೆಲೆಸಿರುವ ದೇವಾಲಯ.

ಇತಿಹಾಸ ಬದಲಾಯಿಸಿ

ಈ ದೇವಸ್ಥಾನವನ್ನು ಸಕಲೇಶಪುರದ ಗುಪ್ತರತ್ನ ಎಂದೇ ಕರೆಯಬಹುದು. ಏಕೆಂದರೆ ಹಲವಾರು ಮಂದಿ ಪ್ರವಾಸಿಗರಿಗೆ ಸಕಲೇಶಪುರದಲ್ಲಿ ಇಂತಹ ಒಂದು ದೇವಾಸ್ಥಾನ ನೆಲೆಸಿರುವುದೇ ತಿಳಿದಿರುವುದಿಲ್ಲ ಈ ದೇವಸ್ಥಾನವೇ ಸಕಲೇಶಪುರ ತಾಲೂಕಿನ ಮೆಕ್ಕನ ಗದ್ದೆ ಬಳಿ ಇರುವ ಬೆಟ್ಟದ ಬೈರವೇಶ್ವರ ದೇವಸ್ಥಾನ. ಬೆಟ್ಟದ ಭೈರವೇಶ್ವರ ದೇವಸ್ಥಾನವು ಸಕಲೇಶಪುರದಿಂದ ಸುಮಾರು ೩೫ಕಿಲೋ. ಮೀಟರ್‌ ದೂರದಲ್ಲಿ[೨] ಪಾಂಡವರ ಗುಡ್ಡ ಎಂಬ ಬೆಟ್ಟದ ಮೇಲೆ ಇದೆ. ಈ ಆಲಯವು ಸುಮಾರು ೭೦೦ ವರ್ಷಗಳಷ್ಟು ಪುರಾತನವಾಗಿದ್ದು ಸಂಪೂರ್ಣವಾಗಿ ಕರಿಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಈ ದೇವಸ್ಥಾನವನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಬೆಟ್ಟದ ಭೈರಾವೇಶ್ವರ ದೇವಸ್ಥಾನವು ಶಿವ ಪರಮಾತ್ಮನಿಗೆ ಅರ್ಪಿತವಾಗಿದ್ದು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಈ ದೇವಸ್ಥಾನದ ಸುತ್ತ ಜೇನುಕಲ್ಲು ಗುಡ್ಡ, ದೀಪದಕಲ್ಲು, ಎತ್ತಿನಭುಜ ಮುಂತಾದ ಬೆಟ್ಟಗಳ ಸಾಲುಗಳನ್ನೇ ಕಾಣಬಹುದು. ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಈ ಬೆಟ್ಟದ ಮೇಲೆ ನಿಂತು ಭೂ ದ್ರಶ್ಯವನ್ನು ನೋಡಬಹುದು. ಮಲಆವೃತವಾಗಿರುತ್ತದ ಮಳೆಗಾಲದಲ್ಲಿ ಬೆಟ್ಟವು ದಪ್ಪ ಮಂಜಿನಿಂದ ಆವೃತವಾಗಿರುತ್ತದೆ.

ಸ್ಥಳಪುರಾಣ ಬದಲಾಯಿಸಿ

ಸ್ಥಳಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದೇಶದಾದ್ಯಂತ ಸಂಚರಿಸುತ್ತಾ ಹಲವು ಶಿವದೇವಾಲಯಗಳನ್ನು ನಿರ್ಮಿಸಿದ್ದಾರೆ ಆ ದೇವಾಲಯಗಳ ಸಾಲಿನಲ್ಲಿ https://www.mekanagadde.com/places-to-visit/pandavar-gudda/ ಈ ಬೆಟ್ಟದ ಭೈರವೇಶ್ವರ ದೇವಾಲಯವು ಮುಂಚೂಣಿಯಲ್ಲಿ ಬರುತ್ತದೆ. ಪಾಂಡವರು ನಿರ್ಮಿಸಿದ ಈ ಮೂಲ ದೇವಾಲಯವನ್ನು ಸುಮಾರು ೭೦೦ ವರ್ಷಗಳ ಹಿಂದೆ ಹೊಯ್ಸಳರು ಮರುನಿರ್ಮಾಣ ಮಾಡಿದ್ದಾರೆ. ಪಾಂಡವರು ಈ ಬೆಟ್ಟದ ಮೇಲೆ ವಾಸಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಈ ದೇವಾಲಯದಲ್ಲಿ ದೊಡ್ಡ ದೊಡ್ಡ ರುಬ್ಬುವ ಕಲ್ಲುಗಳನ್ನು ನಾವು ನೋಡಬಹುದು. ಈ ದೇವಾಲಯದ ಸುತ್ತ ವೇದಿಕೆಯನ್ನೇ ನಿರ್ಮಿಸಲಾಗಿದೆ. ಇಲ್ಲಿಂದ ನಿತ್ತು ನಾವು ಬೆಟ್ಟದ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳನ್ನು ನೋಡಬಹುದು. ಪ್ರತೀವರ್ಷ ಜನವರಿಯಲ್ಲಿ ಈ ಭೈರವೇಶ್ವರನಿಗೆ ವಾರ್ಷಿಕ ಅಭಿಷೇಕವು ಜರಗುತ್ತದೆ ಆಗ ಭಗವಂತನ ಆರ್ಶೀವಾದವನ್ನು ಪಡೆಯಲು ಸುತ್ತ ಮುತ್ತಲಿನ ಸ್ಥಳಗಳಿಂದ ಹಾಗೂ ನಮ್ಮ ಕರ್ನಾಟಕದ ಇತರ ಜಿಲ್ಲೆಗಳಿಂದ ಅಪಾರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದಕ್ಕೆ ಹೋಗುವ ರಸ್ತೆ ಮಾರ್ಗವು ಇದೆ.

ಉಲ್ಲೇಖಗಳು ಬದಲಾಯಿಸಿ

  1. "Betta Byraveshwara Temple, Sakleshpur - Timings, History, Pooja & Aarti schedule,ಬ". Trawell.in. Retrieved 17 December 2022.
  2. "Betta Byraveshwara Temple, Sakleshpur - Timings, History, Pooja & Aarti schedule,". Trawell.in. Retrieved 17 December 2022.