ಬೆಟ್ಟದಾವರೆಯು ಭಾರತದ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದೆ.[೧] ಇದರ ಎಲೆಗಳು ಬಹಳ ಬಿಸಿಲನ್ನು ತಡೆದುಕೊಳ್ಳಬಲ್ಲವು. ಈ ಸಸ್ಯದಿಂದ "ಮಕರಂಗ ಅಂಟು" ಎಂದು ಕರೆಯಲಾಗುವ ಒಂದು ಕಡುಗೆಂಪು ಬಣ್ಣದ ರಾಳವನ್ನು ಪಡೆಯಲಾಗುತ್ತದೆ. ಎರಡೂ ದೇಶಗಳಲ್ಲಿ ಈ ಸಸ್ಯದ ಅನೇಕ ಭಾಗಗಳನ್ನು ಆಯುರ್ವೇದಿಕ ಔಷಧಿಗಾಗಿ ಬಳಸಲಾಗುತ್ತದೆ. ಇದು ರಾಳವನ್ನು ಒಸರುವ ಮರವಾಗಿದ್ದು, ೧೬ ಮೀಟರ್‌ಗಳಷ್ಟು ಎತ್ತರವಿರುತ್ತದೆ. ಬೂದು ಬಣ್ಣದ ತೊಗಟೆಯು ವಿನ್ಯಾಸದಲ್ಲಿ ನಯವಾಗಿರುತ್ತದೆ. ಎಲೆಗಳು ಸರಳ ಮತ್ತು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ, ಗುರಾಣಿಯಾಕಾರದ್ದಾಗಿದ್ದು, ಗೋಳಾಕಾರವಾಗಿರುತ್ತವೆ. ತುದಿಯು ತೀಕ್ಷ್ಣಾಗ್ರವಾಗಿರುತ್ತದೆ ಮತ್ತು ಎಲೆಗಳು ಅಂಗೈಯಾಕಾರವಾಗಿದ್ದು ೮ ರಿಂದ ೯ ನಾಳಗಳಿರುತ್ತವೆ. ಹೂವುಗಳು ಏಕಲಿಂಗಿಯಾಗಿರುತ್ತವೆ. ಒಂದೇ ಬೀಜವಿರುವ ಹಣ್ಣು ಗೋಳಾಕಾರದ ಕೋಶವಾಗಿರುತ್ತದೆ.

ಬೆಟ್ಟದಾವರೆ ಅಥವಾ ಉಪ್ಪಳಿಗೆ

ಕತ್ತರಿಸಿದ ಎಲೆ ಗೆಲ್ಲುಗಳಿಂದ ಒಸರುವ ಅಂಟುದ್ರವ, ಗುಹ್ಯರೋಗದ ವ್ರಣಗಳಿಗೆ ಲೇಪನವಾಗಿದೆ. ಎಲೆ ಹಾಗೂ ತೊಗಟೆಯ ಕಷಾಯ ಹುಣ್ಣುಗಳನ್ನು ತೊಳೆಯಲು ಉಪಯುಕ್ತವಾಗಿದೆ. ಕಿಡ್ನಿಯ ಕಲ್ಲುಗಳ ನಿವಾರಣೆಗಾಗಿ ತೊಗಟೆಯ ಕಷಾಯ ಸೇವನೆ ಒಳ್ಳೆಯದು. ತಾಜಾ ತೊಗಟೆಯ ಹಸಿ ದ್ರವ, ಕಬ್ಬಿಣದ ಕಡಿತದ ಗಾಯಕ್ಕೆ ಔಷಧವಾಗಿದೆ. ಜಜ್ಜಿದ ಎಳೆಯ ಕಾಯಿಗಳನ್ನು ತೆಂಗಿನೆಣ್ಣೆ ಬೆರೆಸಿಟ್ಟು, ಮೂಳೆಮುರಿತಕ್ಕೆ ಲೇಪಿಸಬಹುದು. ಆ್ಯಂಟಿ ಓಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಗುಣಧರ್ಮಗಳಿಂದ ಕೂಡಿದೆ ಈ ಮರ.[೨] ಇದನ್ನು ಮಕರಂದ ಮರ ಎಂದೂ ಕರೆಯುತ್ತಾರೆ.

ಉಲ್ಲೇಖಗಳು

ಬದಲಾಯಿಸಿ