ಬೆಂಗಳೂರು Underworld (ಚಲನಚಿತ್ರ)
ಬೆಂಗಳೂರು Underworld ಎಂಬುದು ಪಿಎನ್ ಸತ್ಯ ನಿರ್ದೇಶಿಸಿದ 2017 ರ ಕನ್ನಡ ಅಪರಾಧ ಚಲನಚಿತ್ರವಾಗಿದೆ. ಇದರಲ್ಲಿ ಆದಿತ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪಾಯಲ್ ರಾಧಾಕೃಷ್ಣ ಮತ್ತು ಡೇನಿಯಲ್ ಬಾಲಾಜಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಥಾವಸ್ತು
ಬದಲಾಯಿಸಿಭೂಗತ ಪಾತಕಿ ರಾಮ್/ಮಾಲಿಕ್ ( ಆದಿತ್ಯ ) ಬೆಂಗಳೂರಿನಲ್ಲಿ ರಾಜನಾಗಲು ಬಯಸುತ್ತಾನೆ. ಆದರೆ ಇತರ ಗ್ಯಾಂಗ್‌ನಲ್ಲಿರುವ ಕೆಲವರು ಹಾಗೆ ಆಗುವುದನ್ನು ಬಯಸುವುದಿಲ್ಲ. ರಾಮ್ ಆ ಸ್ಥಾನ ಸಿಗುವವರೆಗೂ ಹೋರಾಟ ನಡೆಸುತ್ತಾನೆ. ಅವನು ಆ ಪ್ರದೇಶದಲ್ಲಿ ಹೇಗೆ ಹಿಡಿತ ಸಾಧಿಸಿದ ಎಂಬುದೇ ಚಿತ್ರದ ಕಥೆ.
ಪಾತ್ರವರ್ಗ
ಬದಲಾಯಿಸಿ- ರಾಮ್/ಮಾಲಿಕ್ ಆಗಿ ಆದಿತ್ಯ
- ಸಿರಿಶಾ ಪಾತ್ರದಲ್ಲಿ ಪಾಯಲ್ ರಾಧಾಕೃಷ್ಣ
- ಎಸಿಪಿ ಥಾಮಸ್ ಪಾತ್ರದಲ್ಲಿ ಡೇನಿಯಲ್ ಬಾಲಾಜಿ
ಹಿನ್ನೆಲೆಸಂಗೀತ
ಬದಲಾಯಿಸಿಚಿತ್ರದ ಧ್ವನಿಪಥಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಆಲ್ಬಮ್ ಎರಡು ಧ್ವನಿಮುದ್ರಿಕೆಗಳನ್ನು ಒಳಗೊಂಡಿದೆ.
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡುಗಾರರು | ಸಮಯ |
1. | "ಯೆಹ್ ಮಾಲಿಕ್" | ಕೃಷ್ಣ Beura, ಮೋಹನ್, ಶ್ರೀನಿವಾಸ್, ವಿಜಯ್ ಅರಸ್ | 3:51 |
2. | "ನಾನೇ ನೀನು" | ಇಂದು ನಾಗರಾಜ್ , ಸಿದ್ದಾರ್ಥ ಬೆಳ್ಮಣ್ಣು | 4:16 |