ಬುವಟಿಯರ್ ಡೆ ಕೊಲ್ಟ

ಬುವಟಿಯರ್ ಡೆ ಕೊಲ್ಟ (ಹುಟ್ಟುಹೆಸರು ಜೊಸೆಫ್ ಬುಅಟಿಯರ್; ೧೮೪೫ - ಅಕ್ಟೋಬರ್ ೧೯೦೩) ಓರ್ವ ಫ್ರೆಂಚ್ ಜಾದೂಗಾರ. ೧೮೦೦ರ ಅಂತ್ಯದವರೆಗೂ ಯುರೋಪ್ ಹಾಗು ಅಮೇರಿಕಾದಲ್ಲಿ ತಮ್ಮ ಇಂದ್ರಜಾಲದಿಂದ ಸುಪ್ರಸಿದ್ಧರಾದವರು.

ಬುಅಟಿಯರ್ ಡೆ ಕೊಲ್ಟ

ಬುವಟಿಯರ್ ಫ್ರಾನ್ಸಿನ ರೋನ್ ಪ್ರಾಂತ್ಯದ ಕ್ಯಾಲುರಿ-ಎಟ್-ಕ್ಯೂರಿಯಲ್ಲಿ ಜನಿಸಿದರು. ಇವರು ಮತ್ತೋರ್ವ ಫ್ರೆಂಚ್ ಜಾದೂಗಾರ ಜೀನ್ ಯುಜೀನ್ ರಾಬರ್ಟ್ ಹೌಡಿನ್ನಿನ ಸಮಕಾಲೀನರಾಗಿದ್ದರು. ಚೆಂಡುಗಳ ಸಂಖ್ಯೆಯನ್ನು ಹೆಚ್ಚಿಸುವುದು, ಹರಡುವ ಬಣ್ಣದ ಬಟ್ಟೆ, ಮಾಯವಾಗುವ ದಪ್ಪ ಹೆಣ್ಣು, ಜಿಗಿಯುವ ಹೂವುಗಳು, ಮಾಯವಾಗುವ ಪಕ್ಷಿ ಪಂಜರ ಹೀಗೆ ಇವರ ಹಲವು ಕೈಚಳಕಗಳು ಇಂದಿಗೂ ಸಹ ಚಾಲ್ತಿಯಲ್ಲಿವೆ.

ಇವರ ಮಾಯವಾಗುವ ಹೆಣ್ಣು(Vanishing Lady), ಇಂದಿಗೂ ಸಹ ಜನಪ್ರಿಯವಾಗಿರುವ ಕೈಚಳಕ ಹಾಗು ಇದನ್ನು ಬಳಸುವ ಜಾದುಗಾರರು ಇದನ್ನು ಡಿ ಕೊಲ್ಟ ಚೇರ್ ಎಂದೇ ಕರೆಯುತ್ತಾರೆ. ಈ ಜಾದುವಿನಲ್ಲಿ, ಮಹಿಳೆಯನ್ನು ಒಂದು ಕುರ್ಚಿಯ ಮೇಲೆ ಕುಳ್ಳರಿಸಿ, ಅವಳನ್ನು ಒಂದು ದೊಡ್ಡ ಬಟ್ಟೆಯಿಂದ ಮೇಲಿನಿಂದ ಕೆಳಗಿನವರೆಗೂ ಮುಚ್ಚಿ ನಂತರ ಈ ಬಟ್ಟೆಯನ್ನು ಸರಿಸಿದಾಗ ಮಹಿಳೆಯು ಕಣ್ಮರೆಯಾಗಿರುತ್ತಾಳೆ. ಈ ಇಂದ್ರಜಾಲವು ಕಿರಿಯ ರಿಕಾರ್ಡಿಯ ಜನಪ್ರಿಯ ಆಟವಾಗಿತ್ತು. ಇದರಲ್ಲಿ ಮಾಯವಾದ ಮೆಹಿಳೆ ಸ್ವಲ್ಪ ಸಮಯದ ನಂತರ ವೇದಿಕೆಯ ಇನ್ನೊಂದು ಬದಿಯಲ್ಲಿರಿಸಿದ ಟ್ರಂಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದಳು.

ಡೆ ಕೊಲ್ಟನನ್ನು ಆಧರಿಸಿ ಪೀಟರ್ ವಾರ್ಲಾಕ್ ಬುವಟಿಯರ್ ಡೆ ಕೊಲ್ಟ : ಜೀನಿಯಸ್ ಆಫ್ ಇಲ್ಲ್ಯುಶನ್ ಪುಸ್ತಕವನ್ನು ಬರೆದಿದ್ದಾರೆ.

ಡೆ ಕೊಲ್ಟ ೧೯೦೩ರಲ್ಲಿ ನ್ಯು ಆರ್ಲಿಯನ್ಸಿನಲ್ಲಿ ಬ್ರೈಟ್ಸ್ ರೋಗಕ್ಕೆ ತುತ್ತಾಗಿ ಅಸುನೀಗಿದರು.

ಉಲ್ಲೇಖಗಳು

ಬದಲಾಯಿಸಿ

Hay, Harry. Cyclopedia of Magic. (1949) ISBN 0-486-21808-2

ಇವನ್ನು ನೋಡಿ

ಬದಲಾಯಿಸಿ

ಟೆಂಪ್ಲೇಟು:Magic-stub