ಬುದ್ಬುದ
ಬುದ್ಬುದ ಎಂದರೆ ಒಂದು ವಸ್ತುವಿನಲ್ಲಿ ಮತ್ತೊಂದು ವಸ್ತುವಿನ ಗೋಳಕಣ, ಸಾಮಾನ್ಯವಾಗಿ ದ್ರವದಲ್ಲಿ ಅನಿಲದ ಕಣ.[೧] ಮಾರಾಂಗೋನಿ ಪರಿಣಾಮದ ಕಾರಣ, ಬುದ್ಬುದಗಳು ಮುಳುಗಿದ ಪದಾರ್ಥದ ಮೇಲ್ಮೈಯನ್ನು ತಲುಪಿದಾಗಲೂ ಅಖಂಡವಾಗಿ ಉಳಿದಿರಬಹುದು.
ಸಾಮಾನ್ಯ ಉದಾಹರಣೆಗಳು
ಬದಲಾಯಿಸಿದೈನಂದಿನ ಜೀವನದಲ್ಲಿ ಅನೇಕ ಸ್ಥಳಗಳಲ್ಲಿ ಬುದ್ಬುದಗಳು ಕಾಣುತ್ತವೆ, ಉದಾಹರಣೆಗೆ:
- ಅಮಾದಕ ಪಾನೀಯಗಳಲ್ಲಿ ಅಧಿಪರ್ಯಾಪ್ತವಾದ ಇಂಗಾಲದ ಡೈಆಕ್ಸೈಡ್‍ನ ಸಹಜ ಬೀಜೀಭವನವಾಗಿ
- ಕುದಿಯುತ್ತಿರುವ ನೀರಿನಲ್ಲಿ ಆವಿಯಾಗಿ
- ಕಲಕಿದ ನೀರಿನೊಳಗೆ ಮಿಶ್ರಣಗೊಂಡ ಗಾಳಿಯಾಗಿ, ಉದಾಹರಣೆಗೆ ಜಲಪಾತದ ಕೆಳಗೆ
- ಕಡಲನೊರೆಯಾಗಿ
- ಸಾಬೂನಿನ ಬುದ್ಬುದವಾಗಿ
- ರಾಸಾಯನಿಕ ಪ್ರಕ್ರಿಯೆಗಳಲ್ಲಿ ಉತ್ಸರ್ಜನವಾಗಿ, ಉದಾ. ಅಡುಗೆ ಸೋಡಾ + ವಿನಿಗರ್
- ಗಾಜಿನ ತಯಾರಿ ವೇಳೆಯಲ್ಲಿ ಸಿಲುಕಿಕೊಂಡ ಅನಿಲವಾಗಿ
- ಫ಼್ಲಾರೆಸೀನ್ ಹಾಗೂ ನೀರಿನ (ಅಥವಾ ಆಲ್ಕೊಹಾಲ್) ದ್ರಾವಣದಲ್ಲಿ ಅನಿಲದ ಬುದ್ಬುದವು ರಸಮಟ್ಟದ ಅತ್ಯಗತ್ಯ ಭಾಗವಾಗಿದೆ
ಉಲ್ಲೇಖಗಳು
ಬದಲಾಯಿಸಿ- ↑ Subramanian, R. Shankar; Balasubramaniam, R. (2001-04-09). The Motion of Bubbles and Drops in Reduced Gravity (in ಇಂಗ್ಲಿಷ್). Cambridge University Press. ISBN 9780521496056.