ಬೀಸೇಕಲ್ಲು ಅಥವಾ ಬೀಸುವಕಲ್ಲು :


ಇದು, ಹಳ್ಳಿಗಳಲ್ಲಿ ಉಪಯೋಗದಲ್ಲಿದ್ದ ಹಿಟ್ಟು ಬೀಸುವ ಕಲ್ಲು. ಇಲ್ಲಿ ಎರಡು ಕಲ್ಲಿನ ವೄತ್ತಗಳಿರುತ್ತವೆ. ಅದಕ್ಕೆ ಮೇಲಿನ ಕಲ್ಲಿನ ವೃತ್ತಕ್ಕೆ ಒಂದು ಮರದ ಗೂಟವಿರುತ್ತದೆ. ಕೆಳಗಿನ ಕಲ್ಲಿನ ಮಧ್ಯೆ ಒಂದು ಕಬ್ಬಿಣದ ಚಿಕ್ಕ ಮೊಳೆಯಿರುತ್ತದೆ. ಇದರ ಮೇಲೆ ವೄತ್ತಾಕಾರದ ಮೇಲಿನಕಲ್ಲು ಅದರ ಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆ. ರಾಗಿ ಕಲ್ಲಿನಲ್ಲಿ ಬೀಸಲು ಇಬ್ಬರು ಇರುತ್ತಾರೆ. ಒಬ್ಬರೂ ಬೀಸಬಹುದು. ಮೊದಲು, ಈ ಬೀಸುವ ಕಲ್ಲನ್ನು ಒಂದು ಗೋಣಿತಟ್ಟಿನಮೇಲೆ ಹರಡಿದ ಬಿಳಿಯ ದಪ್ಪ-ಬಟ್ಟೆಯಮೇಲೆ ಇಡಬೇಕು. ಬೀಸುವಾಗ, ಬಲಕೈಯಲ್ಲೊ ಅಥವಾ ಎಡಕೈಯಲ್ಲೊ, ಒಂದು ಮುಷ್ಟಿ ಧಾನ್ಯವನ್ನು ಕಲ್ಲಿನ ಬಾಯಲ್ಲಿ ಹಾಕಬೇಕು. ನಿಧಾನವಾಗಿ ಕಲ್ಲನ್ನು ತಿರುಗಿಸಬೇಕು. ಕಾಳು ಚೆನ್ನಾಗಿ ಪುಡಿಯಾಗಿದೆಯೆಂಬುದನ್ನು ಖಾತ್ರಿಮಾಡಿಕೊಂಡಮೇಲೆ ಸ್ವಲ್ಪ ಜೋರಾಗಿ ಬೀಸಬಹುದು. ಬೀಸುವ ಕಲೆ ಬಹಳ ವರ್ಷಗಳಿಂದ ಬಳಕೆಯಲ್ಲಿದೆ. "ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ", ಎನ್ನುವ ಅತಿ ಸೊಗಸಾದ ರಾಗಿ ಬೀಸುವ ಹಾಡು, ಕೇಳದವರ್ಯಾರು. ಬೀಸುವ ಕಲ್ಲಿನಲ್ಲಿ ಬೀಸಿದ ಹಿಟ್ಟಿನ ಗುಣ , ಬಹಳ ಉತ್ಕೄಷ್ಟವಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಇದು ಒಳ್ಳೆಯ ವ್ಯಾಯಾಮವನ್ನು ಒದಗಿಸುತ್ತದೆ. ಅವರ ಸೌಂದರ್ಯವೄದ್ಧಿಸುತ್ತದೆ. ಮಿಶಿನ್ ನಲ್ಲಿ ಬೀಸಿದ ಹಿಟ್ಟು ಸಾಮಾನ್ಯವಾಗಿ ಕಲಬೆರಕೆ, ಯಾಗುವುದು, ಎಲ್ಲರಿಗೂ ತಿಳಿದ ಸಂಗತಿ. ಇಂದಿಗೂ ಮ್ಯಂತ್ಯಹಿಟ್ಟು, ಕಾಫಿಪುಡಿ, ಚಟ್ಣಿಪುಡಿ, ಹಾಗೂ ವಡ್ಡರಾಗಿ-ಹಿಟ್ಟಿನ ತಯಾರಿಕೆಗೆ ಅನೇಕರು, ತಮ್ಮ ಮನೆಗಳಲ್ಲಿ ಜೋಪಾನವಾಗಿಇಟ್ಟ, ಬೀಸೇಕಲ್ಲಿನ ಉಪಯೋಗ ಮಾಡಿಕೊಳ್ಳುತ್ತಾರೆ.