ಬೀರ್‌ಬಲ್ (ಚಲನಚಿತ್ರ)

ಬೀರ್‌ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ ಅಥವಾ ಸರಳವಾಗಿ ಬೀರ್‌ಬಲ್ [] 2019 ರ ಕನ್ನಡ ಭಾಷೆಯ ಅಪರಾಧ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ಎಂ. ಜಿ. ಶ್ರೀನಿವಾಸ್ ಅವರು ಬರೆದು,ನಿರ್ದೇಶಿಸಿದ್ದಾರೆ.[] ಈ ಚಿತ್ರವು ಬೀರ್‌ಬಲ್ ಟ್ರೈಲಜಿಯ ಮೊದಲ ಭಾಗವಾಗಿದೆ.ಈ ಚಲನಚಿತ್ರವು ಸಿಐಡಿ 999 ಮತ್ತು ಸಾಂಗ್ಲಿಯಾನ ನಂತರ ಕನ್ನಡದಲ್ಲಿ ಮೂರನೇ "ಪಾತ್ರ ಆಧಾರಿತ ಟ್ರೈಲಜಿ" ಎಂದು ಗುರುತಿಸಲಾಗಿದೆ.[]ಇದು ಒಂದು ಸಿನಿಮ್ಯಾಟಿಕ್ ಯೂನಿವರ್ಸ್‌ನ ಮೊದಲ ಚಿತ್ರವಾಗಿದ್ದು, ನಂತರದ ಘೋಸ್ಟ್ ಚಿತ್ರದಲ್ಲಿ ಎಂ. ಜಿ. ಶ್ರೀನಿವಾಸ್ ಅವರು ಮತ್ತೊಮ್ಮೆ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ನಾಯಕ ನಟಿಯಾಗಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.[] ಈ ಚಿತ್ರವು ಕನ್ನಡದಲ್ಲಿ ಮೊದಲ ಬಾರಿಗೆ 8D ಹಾಡನ್ನು ಪರಿಚಯಿಸಿತು. ಸ್ಕ್ರಿಬಲ್ ಎಫೆಕ್ಟ್ ಅನ್ನು ಬಳಸಿದ ಮೊದಲ ಕನ್ನಡ ಚಲನಚಿತ್ರ ಇದು. ಕನ್ನಡ ಚಿತ್ರವೊಂದಕ್ಕೆ ಕೆನಡಾದಲ್ಲಿ ವಿಎಫ್‌ಎಕ್ಸ್ ಮಾಡಿದ್ದು ಇದೇ ಮೊದಲು.[][][] ಇದರ ಮುಂದುವರಿದ ಭಾಗಗಳಿಗೆ ಬೀರ್‌ಬಲ್ ಟ್ರೈಲಜಿ ಕೇಸ್ ಸಂಖ್ಯೆ 2 ಅವ್ರ್ನ್ ಬಿಟ್ಟ್, ಇವ್ರ್ನ್ ಬಿಟ್ಟ್, ಅವ್ರ್ಯಾರು? ಮತ್ತು ಬೀರ್‌ಬಲ್ ಟ್ರೈಲಜಿ ಕೇಸ್ ಸಂಖ್ಯೆ. 3: ತುರೇಮಣೆ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಚಲನಚಿತ್ರವು ಅದರ ಕಥೆಯ ನಿರೂಪಣೆಯ ತಂತ್ರದಲ್ಲಿ "ರಾಶೊಮಾನ್ ಪರಿಣಾಮ" ವನ್ನು ಬಳಸಿಕೊಳ್ಳುವುದಕ್ಕಾಗಿ ಪ್ರಶಂಸಿಸಲ್ಪಟ್ಟಿದೆ.[] ಈ ಚಲನಚಿತ್ರವು 2017 ರ ಕೊರಿಯನ್ ಚಲನಚಿತ್ರ ನ್ಯೂ ಟ್ರಯಲ್ ಅನ್ನು ಹೋಲುತ್ತದೆ ಎನ್ನಲಾಗಿದೆ.[] ಚಿತ್ರದ ತೆಲುಗು ರಿಮೇಕ್ ತಿಮ್ಮರುಸು 30 ಜುಲೈ 2021 ರಂದು ಬಿಡುಗಡೆಯಾಯಿತು.[][೧೦] ಈ ಸಿನಿಮಾ ತಮಿಳಿಗೂ ರಿಮೇಕ್ ಆಗಲಿದೆ ಎಂದು ವರದಿಯಾಗಿದೆ.[೧೧][೧೨]

ಒಂದು ಮಳೆಗಾಲದ ಮಧ್ಯರಾತ್ರಿ ರಸ್ತೆಯಲ್ಲಿ ಒಬ್ಬ ಕ್ಯಾಬ್‌ಡ್ರೈವರ್‌ನ ಕೊಲೆಯಾಗುತ್ತದೆ, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾರ್ಟೆಂಡರ್ (ವಿಷ್ಣು) ಇದನ್ನು ನೋಡಿ ಪೊಲೀಸರಿಗೆ ತಿಳಿಸುತ್ತಾನೆ. ಆದರೆ ಪೊಲೀಸರು ವಿಷ್ಣುವನ್ನು ಅಪರಾಧಿ ಎಂದು ಬಂಧಿಸುತ್ತಾರೆ ಮತ್ತು ಅವನ ವಿರುದ್ಧ ಸಾಕ್ಷ್ಯವನ್ನು ಸೃಷ್ಟಿಸುತ್ತಾರೆ. ಕಪೋಲಕಲ್ಪಿತ ಸಾಕ್ಷ್ಯವನ್ನು ನೋಡಿದ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡುತ್ತದೆ.

ಕೆಲವು ವರ್ಷಗಳ ನಂತರ, ಯುವ ಬುದ್ಧಿವಂತ ವಕೀಲ (ಮಹೇಶ್ ದಾಸ್) ಸಮಾಜದ ದುರ್ಬಲ ವರ್ಗಕ್ಕೆ ನ್ಯಾಯ ಒದಗಿಸುವ ಉದ್ದೇಶವನ್ನು ಹೊಂದಿರುವ ಕಾನೂನು-ಸಂಸ್ಥೆಯನ್ನು ಸೇರುತ್ತಾರೆ.

ಮಹೇಶ್ ವಿಷ್ಣುವಿನ ಪ್ರಕರಣವನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾನೆ ಮತ್ತು ವಿಷ್ಣು ಪೆರೋಲ್‌ನಲ್ಲಿದ್ದಾಗ ಪ್ರಕರಣವನ್ನು ಪುನಃ ತೆರೆಯಲು ಬಯಸುತ್ತಾನೆ.

ಪಾತ್ರವರ್ಗ

ಬದಲಾಯಿಸಿ
  • ಮಹೇಶ್ ದಾಸ್ ಪಾತ್ರದಲ್ಲಿ ಎಂ. ಜಿ. ಶ್ರೀನಿವಾಸ್
  • ಜಾನ್ವಿಯಾಗಿ ರುಕ್ಮಿಣಿ ವಸಂತ್ []
  • ಮಧುಸೂಧನ್ ರಾವ್ ಇನ್ಸ್ ಪೆಕ್ಟರ್ ರಾಘವನ್ ಪಾತ್ರದಲ್ಲಿ
  • ಶಾಸ್ತ್ರಿಯಾಗಿ ಸುಜಯ್ ಶಾಸ್ತ್ರಿ
  • ವಿಷ್ಣು ಪಾತ್ರದಲ್ಲಿ ವಿನೀತ್ ಕುಮಾರ್
  • ಸುರೇಶ್ ಹೆಬ್ಳೀಕರ್ ಅವರು ಕಾನೂನು ಸಂಸ್ಥೆಯ ಮುಖ್ಯಸ್ಥ ಹೆಗ್ಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
  • ರಾಮ್ ದಾಸ್ ಪಾತ್ರದಲ್ಲಿ ರವಿ ಭಟ್
  • ಸುಮಿತ್ರಾ, ವಿಷ್ಣು ತಾಯಿಯಾಗಿ ಅರುಣಾ ಬಾಲರಾಜ್
  • ಇನ್ಸ್ ಪೆಕ್ಟರ್ ವಜ್ರಮುನಿ ಪಾತ್ರದಲ್ಲಿ ಕೀರ್ತಿ ಬಾನು
  • ಪಬ್ಲಿಕ್ ಪ್ರಾಸಿಕ್ಯೂಟರ್ ಪಾರ್ಥ ಸಾರಥಿ ಆಗಿ ಕೃಷ್ಣ ಹೆಬ್ಬಾಳೆ
  • ಕವಿತಾ ಗೌಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಸೌರಭ್ ವೈಭವ್ ಮತ್ತು ಕಾಳಾಚರಣ್ ಸಂಯೋಜಿಸಿದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಕ್ರಿಸ್ಟಲ್ ಮ್ಯೂಸಿಕ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ [೧೩]

ಹಾಡುಗಳ ಪಟ್ಟಿ

ಬದಲಾಯಿಸಿ

[೧೪]

ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ಬೀರ್‌ಬಲ್ ಶೀರ್ಷಿಕೆ ಗೀತೆ"ತ್ರಿಲೋಕ್ ತ್ರಿವಿಕ್ರಮ್ಸೌರಭ್ ವೈಭವ್ಸೌರಭ್ ಗುಪ್ತಾ2:44
2."ರಾಗಿಣಿ ಮೇಡಂ"ಅಜಿತ್ ಹೆಡ್ಗೆ ಬೊಪ್ಪನಳ್ಳಿ
ಎಂ.ಜಿ..ಶ್ರೀನಿವಾಸ್
ಕಲಾಚರಣ್ಸಂಜಿತ್ ಹೆಗ್ಡೆ4:06

ಬಿಡುಗಡೆ

ಬದಲಾಯಿಸಿ

ಚಲನಚಿತ್ರವು 18 ಜನವರಿ 2019 ರಂದು ಬಿಡುಗಡೆಯಾಯಿತು ಮತ್ತು ಪ್ರೇಕ್ಷಕರಿಂದ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ನಿರ್ದೇಶಕರ ಪ್ರಯತ್ನ, ಆಕರ್ಷಕ ಚಿತ್ರಕಥೆ, ಪಾತ್ರವರ್ಗದ ಅಭಿನಯ ಮತ್ತು ಹಿನ್ನಲೆ ಸಂಗೀತ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.[೧೫] ಹಿಂದಿ ಚಿತ್ರ ನಿರ್ಮಾಪಕರು ರಿಮೇಕ್ ಹಕ್ಕುಗಳಿಗಾಗಿ ನಿರ್ದೇಶಕ ಮತ್ತು ನಿರ್ಮಾಪಕರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.[೧೬] ಚಲನಚಿತ್ರವು ಆನ್‌ಲೈನ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ 20 ಏಪ್ರಿಲ್ 2020 ರಂದು ಬಿಡುಗಡೆಯಾಯಿತು.[೧೭]

ಉಲ್ಲೇಖಗಳು

ಬದಲಾಯಿಸಿ
  1. "'Birbal Trilogy Case 1: Finding Vajramuni' review: A watchable thriller". The News Minute. Retrieved 28 May 2020.
  2. "Birbal movie review: An investigation which kills two plus hours". Deccan Chronicle. Archived from the original on 9 ಮೇ 2019. Retrieved 28 May 2020.
  3. ೩.೦ ೩.೧ "Birbal Trilogy has a lot of firsts: MG Srinivas". Times Of India. Retrieved 28 May 2020.
  4. ೪.೦ ೪.೧ Anien, Tini Sara. "Rukmini worked for 17 hours straight for Birbal Trilogy". Deccan Herald. Retrieved 15 November 2020.
  5. "International names give Birbal Trilogy a Hollywood touch". Times Of India. Retrieved 28 May 2020.
  6. "'Birbal Trilogy is a Kannada film made like an English thriller'". Times Of India. Retrieved 28 May 2020.
  7. KARTHIK KERAMALU (18 January 2019). "Birbal Movie Review: A Fun Thriller That Holds Your Attention". filmcompanion. Retrieved 25 August 2020.
  8. "ಆರ್ಕೈವ್ ನಕಲು". Archived from the original on 2021-12-19. Retrieved 2021-12-19.
  9. "ಆರ್ಕೈವ್ ನಕಲು". Archived from the original on 2021-12-19. Retrieved 2021-12-19.
  10. "Birbal Trilogy Telugu remake titled Thimmarasu". The New Indian Express (in ಇಂಗ್ಲಿಷ್). Retrieved 2020-12-23.
  11. https://www.hindutamil.in/amp/news/cinema/tamil-cinema/678094-shantanu-bagyaraj-to-feature-in-birbal-vajramuni-remake.html
  12. https://m.timesofindia.com/entertainment/tamil/movies/news/shanthnu-in-tamil-remake-of-mg-srinivas-birbal-film/amp_articleshow/83197384.cms
  13. "Birbal Songs". Retrieved 28 May 2020.
  14. "Birbal Original Soundtrack". Retrieved 28 May 2020.
  15. "BIRBAL MOVIE REVIEW: A SLOW-MOVING WHODUNNIT". Bangalore Mirror. Retrieved 28 May 2020.
  16. "Birbal Trilogy to be remade in Hindi". Times Of India. Retrieved 28 May 2020.
  17. "After Dia and Love Mocktail another Kannada movie sets a trend on Amazon Prime". The Prime Time. Retrieved 30 May 2020.

ಬಾಹ್ಯ ಕೊಂಡಿಗಳು

ಬದಲಾಯಿಸಿ