ಬೀಡಿ
ಬೀಡಿಯು ತಂಬಾಕು ಚೂರುಗಳು ತುಂಬಿರುವ ಮತ್ತು ಸಾಮಾನ್ಯವಾಗಿ ಬೀಡಿ ಮರ ಅಥವಾ ಆಪ್ತಾ ಮರದ ಎಲೆಯಿಂದ ಸುತ್ತಲ್ಪಟ್ಟ, ಮತ್ತು ಒಂದು ತುದಿಯಲ್ಲಿ ದಾರದಿಂದ ಅಥವಾ ಅಂಟಿನಿಂದ ಕಟ್ಟಲ್ಪಟ್ಟಿರುವ ತೆಳ್ಳನೆಯ ಸಿಗರೇಟು ಅಥವಾ ಕಿರು ಸಿಗಾರ್[೧]. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿದೆ. ಈ ಹೆಸರು ಮಾರ್ವಾಡಿ ಶಬ್ದವಾದ ಬೀಡಾದಿಂದ (ಎಲೆಯಲ್ಲಿ ಸುತ್ತಲ್ಪಟ್ಟ ಅಡಿಕೆ, ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳ ಮಿಶ್ರಣ) ವ್ಯುತ್ಪನ್ನವಾಗಿದೆ.
ಬೀಡಿಗಳು ಹೆಚ್ಚು ನಿಕೋಟಿನ್, ಇಂಗಾಲದ ಮೊನಾಕ್ಸೈಡ್ ಮತ್ತು ಟಾರ್ ಅನ್ನು ಹೊಂದಿರುತ್ತವೆ ಮತ್ತು ಬಾಯಿ ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಧೂಮಪಾನದ ಇತರ ಪ್ರಕಾರಗಳಂತೆ, ಬೀಡಿಗಳು ಕೆಲವು ಬಗೆಗಳ ಕ್ಯಾನ್ಸರ್‌ಗಳು, ಹೃದಯರೋಗ, ಮತ್ತು ಪುಪ್ಫುಸದ ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಇವು ತಂಬಾಕು ಸೇವನೆಯ ಇತರ ರೂಪಗಳಿಗಿಂತ ಹೆಚ್ಚು ಹಾನಿಕಾರಕವೂ ಆಗಿರಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Gupta, Prakash C. (1992). Control of tobacco-related cancers and other diseases: proceedings of an international symposium, January 15–19, 1990, TIFR, Bombay. Prakash C. Gupta. p. 29. ISBN 978-0-19-562961-3.